Bigg Boss: ಬಿಗ್‌ಬಾಸ್ ಮಾಜಿ ಸ್ಪರ್ಧಿಗೆ ಜೈಲು ಶಿಕ್ಷೆ, ಕೋರ್ಟ್ ಮಹತ್ವದ ಆದೇಶ....
ಬಿಗ್‌ಬಾಸ್ ಮಾಜಿ ಸ್ಪರ್ಧಿಗಳು ಜೈಲಿಗೆ ಹೋಗುವ ಸುದ್ದಿಗಳು ಹೆಚ್ಚಾಗುತ್ತಿವೆ. ಅದರಲ್ಲೂ ಈ ರೀತಿ ಬಿಗ್‌ಬಾಸ್ ಕನ್ನಡ ಸ್ಪರ್ಧೆಯಲ್ಲಿ ಭಾಗವಹಿಸಿ ಸದ್ದು ಮಾಡಿದ್ದ ಹಲವು ಮಾಜಿ ಸ್ಪರ್ಧಿಗಳು ಜೈಲು ಕಂಬಿ ಎಣಿಸಿ ಬಂದಿದ್ದಾರೆ ಎಂಬ ಆರೋಪಗಳ ನಡುವೆ ಇದೀಗ, ಮತ್ತೊಬ್ಬ ಬಿಗ್‌ಬಾಸ್ ಸ್ಪರ್ಧಿಗೆ 10 ದಿನ ಜೈಲು ಊಟ ಗ್ಯಾರಂಟಿ ಆಗಿದೆ!
ಹೌದು, 'ಬಿಗ್‌ಬಾಸ್' ಸ್ಪರ್ಧೆ ಅನ್ನೋ ಹೆಸರಲ್ಲೇ ಒಂದು ಗತ್ತು ಇದೆ. ಅದರಲ್ಲೂ, ಇದೇ 'ಬಿಗ್‌ಬಾಸ್' ಸ್ಪರ್ಧೆಗೆ ಹೋಗಿ ಬಂದ ಅದೆಷ್ಟೋ ಪ್ರತಿಭೆಗಳು ಜೀವನದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಸಿನಿಮಾ ರಂಗ & ಧಾರಾವಾಹಿ ಸೇರಿದಂತೆ ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡ, ಹೀಗೆ 'ಬಿಗ್‌ಬಾಸ್' ಸ್ಪರ್ಧೆಗೆ ಹೋಗಿ ಬಂದ ಸ್ಪರ್ಧಿಗಳು ಹೆಸರು ಮಾಡಿದ್ದಾರೆ. ಹೀಗಿದ್ದಾಗಲೇ, ಇಂದು ಬಿಗ್‌ಬಾಸ್ ಮಾಜಿ ಸ್ಪರ್ಧಿಗೆ ಜೈಲು ಶಿಕ್ಷೆ, ಕೋರ್ಟ್ ಮಹತ್ವದ ಆದೇಶ....

ಬಿಗ್‌ಬಾಸ್ ಮಾಜಿ ಸ್ಪರ್ಧಿಗೆ ಜೈಲು ಶಿಕ್ಷೆ....
ಅಂದಹಾಗೆ ಸುಮ್ಮನೆ ಇರದೆ ಇರುವೆ ಬಿಟ್ಟುಕೊಳ್ಳಲು ಹೆಸರುವಾಸಿ ಆಗಿರುವ ಸೋಡಿಯಂ ಪ್ರತಾಪ ಅಲಿಯಾಸ್ ಡ್ರೋನ್ ಪ್ರತಾಪ್ ಇದೀಗ ಜೈಲುಪಾಲು ಆಗಿದ್ದಾರೆ. ಈ ಹಿಂದೆ ಕೂಡ ಹಲವು ರೀತಿಯ ಸಮಸ್ಯೆ ಎದುರಿಸಿದ್ದ ಸೋಡಿಯಂ ಪ್ರತಾಪ ಅಲಿಯಾಸ್ ಡ್ರೋನ್ ಪ್ರತಾಪ್, ಜೀವನದಲ್ಲಿ ಬದಲಾಗಿದ್ದಾನೆ ಬಿಡು ಅಂತಾನೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಈಗ ಮತ್ತೆ ಡ್ರೋನ್ ಪ್ರತಾಪ್ ಜೈಲು ಕಂಬಿ ಎಣಿಸುವ ಪರಿಸ್ಥಿತಿ ಬಂದಿದೆ.
ಬ್ಲಾಸ್ಟ್ ಮಾಡಿದ್ದಕ್ಕೆ ಡ್ರೋನ್ ಪ್ರತಾಪ್ ಲಾಕ್!
ಸೋಡಿಯಂ ಎಂಬ ರಾಸಾಯನಿಕ ಅರ್ಥಾತ್ ಕೆಮಿಕಲ್ ಬಳಸಿ, ಅದನ್ನ ನೀರಿಗೆ ಎಸೆದು ಬ್ಲಾಸ್ಟ್ ಮಾಡಿದ್ದ ಆರೋಪ ಡ್ರೋನ್ ಪ್ರತಾಪ್ ವಿರುದ್ಧ ಕೇಳಿ ಬಂದಿತ್ತು. ಇದನ್ನು ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದ ಡ್ರೋನ್ ಪ್ರತಾಪ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಹೀಗೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಘಟನೆ ಬಗ್ಗೆ ಡ್ರೋನ್ ಪ್ರತಾಪ್‌ನ ಅರೆಸ್ಟ್ ಮಾಡಿದ್ದರು. ಅಲ್ಲದೆ ವಿಚಾರಣೆ ನಡೆಸಿ, ಇಂದು ಪೊಲೀಸ್ ಕಸ್ಟಡಿ ಕೊನೆಯಾದ ಕಾರಣ ನ್ಯಾಯಾಂಗ ಬಂಧನಕ್ಕೆ ಡ್ರೋನ್ ಪ್ರತಾಪ್‌ನ ಒಪ್ಪಿಸಲಾಗಿದೆ.
ತುಮಕೂರಿನ ಮಧುಗಿರಿ ಜೆಎಂಎಫ್‌ಸಿ ಕೋರ್ಟ್ ಇದೀಗ ಮಹತ್ವದ ಆದೇಶ ನೀಡಿದ್ದು, ಈ ಆದೇಶದ ಪ್ರಕಾರ 10 ದಿನ ಡ್ರೋನ್ ಪ್ರತಾಪ್ ಇದೀಗ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ. ಮಧುಗಿರಿಯ ಸಬ್ ಜೈಲು ಪಾಲಾಗಿರುವ ಡ್ರೋನ್ ಪ್ರತಾಪ್‌ನ ವಿಚಾರ ವೈರಲ್ ಆಗ್ತಿದ್ದು, ಡಿಸೆಂಬರ್ 26ಕ್ಕೆ ಮತ್ತೆ ವಿಚಾರಣೆಯು ನಡೆಯಲಿದೆ.












Click it and Unblock the Notifications