Vishal: ನಟ ವಿಶಾಲ್‌ಗೆ ಆರೋಗ್ಯ ಸಮಸ್ಯೆ, ಸ್ಟೇಜ್ ಮೇಲೆ ನಡುಗಿದ ನಟ!
ತಮಿಳುನಟ ವಿಶಾಲ್ ಅವರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆಯೇ ಎನ್ನುವ ಬಗ್ಗೆ ಗಂಭೀರ ಚರ್ಚೆ ಶುರುವಾಗಿದೆ. ತಮಿಳು ಚಿತ್ರರಂಗದಲ್ಲಿ ವಿಶಾಲ್ ಫೇಮಸ್ ಆಗಿದ್ದಾರೆ. ಅಲ್ಲದೆ ಅವರ ಸಿನಿಮಾಗಳು ಫ್ಯಾಮಿಲಿ ಸೇರಿ ನೋಡುವಂತಹದ್ದೇ ಆಗಿದೆ. ನಟ ವಿಶಾಲ್ ಅವರು ಇತ್ತೀಚೆಗೆ ಮದಗಜ ಚಿತ್ರದ ಪ್ರೀ -ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಿನಿಮಾ 12 ವರ್ಷಗಳ ಹಿಂದೆ ಚಿತ್ರೀಕರಣವಾಗಿತ್ತು.
ಇದೀಗ ಜನವರಿ 12ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ವಿಶಾಲ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ, ಅವರು ಆ ಕಾರ್ಯಕ್ರಮದಲ್ಲಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದೀಗ ಅವರ ಆರೋಗ್ಯ ಸಮಸ್ಯೆಯ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ.

ನಟ ವಿಶಾಲ್ ಅವರು ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಅವರ ಫೈಟಿಂಗ್ ಹಾಗೂ ಡ್ಯಾನ್ಸ್ ಮತ್ತೆ ಯಾವುದೇ ಪಾತ್ರವನ್ನು ಕೊಟ್ಟರೂ ಅದಕ್ಕೆ 100ರಷ್ಟು ನ್ಯಾಯ ಕೊಡುತ್ತಾರೆ. ಅವರ ಡೆಡಿಕೇಷನ್‌ಗೆ ಫಿದಾ ಆಗಿರುವುದಿದೆ. ಆದರೆ, ಇತ್ತೀಚೆಗೆ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡದೆ ಕಷ್ಟಪಟ್ಟಿರುವ ವಿಡಿಯೋ ವೈರಲ್ ಆಗಿದೆ. ಮದಗಜ ಸಿನಿಮಾದ ಕಾರ್ಯಕ್ರಮಕ್ಕೆ ಬರುವಾಗಲೇ ವಿಶಾಲ್ ಅವರು ಸಹಾಯಕ ಸಿಬ್ಬಂದಿಯ ಕೈಹಿಡಿದುಕೊಂಡು ಸಭಾಂಗಣಕ್ಕೆ ಬಂದಿರುವುದು ವಿಡಿಯೋದಲ್ಲಿ ಇದೆ.
ಸಿನಿಮಾದ ಬಗ್ಗೆ ಮಾತನಾಡುವಾಗ ಅವರ ಕೈಗಳು ನಡಗುತ್ತಿರುವುದು ಹಾಗೂ ಮಾತನಾಡಲು ತೊದಲಿದ್ದಾರೆ. ಅಲ್ಲದೆ ತೀವ್ರವಾಗಿ ಆಯಾಸ ಹಾಗೂ ನಿಶಕ್ತರಾಗಿರುವಂತೆ ವಿಡಿಯೋದಲ್ಲಿ ಇದೆ. ಅವರು ಸ್ಟೇಜ್ ಮೇಲೆ ಮಾತನಾಡುವುದಕ್ಕೆ ಕಷ್ಟಪಡುತ್ತಿರುವುದನ್ನು ನೋಡಿರುವ ನಿರೂಪಕರು ಸ್ಟೇಜ್ ಮೇಲೆ ಸಂವಾದವನ್ನು ಮಾಡುವಂತೆ ಕಾರ್ಯಕ್ರಮವನ್ನು ತುಸು ಬದಲಾಯಿಸಿದ್ದಾರೆ. ಅವರು ಕುಳಿತುಕೊಳ್ಳುವಾಗಲೂ ತಮಿಳಿನ ಇನ್ನೊಬ್ಬ ನಟರು ಸಹಾಯ ಮಾಡಿರುವುದು ವಿಡಿಯೋದಲ್ಲಿ ಇದೆ. ಇನ್ನು ಈ ಸಿನಿಮಾವನ್ನು ಸುಂದರ್ ಸಿ ಅವರು ನಿರ್ದೇಶಿಸಿದ್ದು. ವಿಶಾಲ್, ಅಂಜಲಿ ಮತ್ತು ವರಲಕ್ಷ್ಮಿ ಶರತ್‌ಕುಮಾರ್ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ನಟ ವಿಶಾಲ್ ಕಣ್ಣೀರು: ಇನ್ನು ನಟ ವಿಶಾಲ್ ಅವರು ಕಾರ್ಯಕ್ರಮದಲ್ಲಿ ಮಾತನಾಡಲು ಆಗದೆ ಸಂಕಷ್ಟ ಅನುಭವಿಸಿರುವುದು ಅವರ ಅಭಿಮಾನಿಗಳಲ್ಲೂ ಸಂಕಷ್ಟವನ್ನುಂಟು ಮಾಡಿದೆ. ನಟ ವಿಶಾಲ್ ಅವರಿಗೆ ಮಾತನಾಡುವಾಗ ಕಣ್ಣಂಚಿನಲ್ಲಿ ನೀರು ಬಂದಿರುವ ವಿಡಿಯೋ ಸಹ ವೈರಲ್ ಆಗಿದ್ದು. ಬೇಗ ಹುಷಾರ್ ಆಗಿ ಸರ್ ಅಂತ ಅವರ ಅಭಿಮಾನಿಗಳು ಹಾರೈಸಿದ್ದಾರೆ.
ತೀವ್ರ ಜ್ವರ ಕಾರಣ ?: ಇನ್ನು ವಿಶಾಲ್ ಅವರು ಈ ರೀತಿ ತೊಂದರೆ ಎದುರಿಸಿರುವುದಕ್ಕೆ ಅವರಿಗೆ ತೀವ್ರವಾದ ಜ್ವರ ಇದದ್ದೇ ಕಾರಣ ಅಂತ ಹೇಳಲಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಪ್ರಕಟಣೆ ಬಂದಿಲ್ಲ. ಆರೋಗ್ಯ ಸಮಸ್ಯೆಯ ನಡುವೆಯೂ ಅವರು ಕಾರ್ಯಕ್ರಮಕ್ಕೆ ಬಂದಿರುವ ಬಗ್ಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಇದೇ ಸಂದರ್ಭದಲ್ಲಿ ಇಷ್ಟೊಂದು ಆರೋಗ್ಯ ಸಮಸ್ಯೆ ಇರುವಾಗ ಅವರು ಬರಬಾರದಿತ್ತು. ಆರೋಗ್ಯ ಕಾಳಜಿ ಮಾಡಬೇಕು ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದೊಂದಿಗೆ ಸಂಬಂಧ: ನಟ ವಿಶಾಲ್ ಅವರಿಗೆ ಅವಿನಾಭಾವ ಸಂಬಂಧವಿದೆ. ಅವರ ತಂದೆ ಕರ್ನಾಟಕ ಮೂಲದವರು. ಸ್ಯಾಂಡಲ್‌ವುಡ್‌ನ ಮೂಲಕವೇ ಅವರು ಚಿತ್ರರಂಗ ಪ್ರವೇಶ ಮಾಡಬೇಕು ಎಂದು ಇಚ್ಛಿಸಿರುವುದಾಗಿ ಈ ಹಿಂದೆ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಇನ್ನು ನಾನು ಕನ್ನಡದಲ್ಲಿ ಒಂದಾದರೂ ಸಿನಿಮಾ ಮಾಡಬೇಕು ಎಂದು ತಂದೆಗೆ ಆಸೆ ಇದೆ. ಅವಕಾಶ ಸಿಕ್ಕರೆ ಕನ್ನಡದಲ್ಲಿ ನಟಿಸುತ್ತೇನೆ ಎಂದು ಈ ಹಿಂದೊಮ್ಮೆ ವಿಶಾಲ್ ಅವರು ಹೇಳಿದ್ದರು.
ಸೊರಗಿರುವ ವಿಶಾಲ್: ವಿಶಾಲ್ ಅವರು ಸೊರಗಿರುವಂತೆ ವಿಡಿಯೋ ಹಾಗೂ ಚಿತ್ರಗಳಲ್ಲಿ ಕಾಣಿಸುತ್ತಿದೆ. ಮೇಲ್ನೋಟಕ್ಕೆ ಅವರ ತೂಕವೂ ಇಳಿಕೆಯಾಗಿರುವಂತೆ ಇದೆ. ಆದರೆ, ಅವರಿಗೆ ಸಾಮಾನ್ಯ ಜ್ವರವಿತ್ತೇ ಅಥವಾ ಏನಾದರೂ ಆರೋಗ್ಯ ಸಮಸ್ಯೆ ಇದೆಯೇ ಎನ್ನುವ ಬಗ್ಗೆ ಈ ವರೆಗೂ ವಿಶಾಲ್ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ವಿಶಾಲ್ ಅವರನ್ನು ಈ ರೀತಿ ನೋಡಿ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ.












Click it and Unblock the Notifications