Shreyanka Patil: ಗೌರಿ ಸಿನಿಮಾ ನೋಡಿ ಸಮರ್ಜಿತ್‌ ಬಗ್ಗೆ ಶ್ರೇಯಾಂಕ ಪಾಟೀಲ್‌ ಹೇಳಿದ್ದೇನು ಗೊತ್ತಾ?, ಇಲ್ಲಿದೆ ವಿಡಿಯೋ

Shreyanka Patil: ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಿರುವವರು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಅದರಲ್ಲೂ ಕೆಲವರು ಹೊಸದಾಗಿ ಕ್ರಿಕೆಟ್, ಸಿನಿಮಾಗಳಲ್ಲಿ ಹವಾ ಕ್ರಿಯೆಟ್‌ ಮಾಡಿ ಫುಲ್‌ ಟ್ರೆಂಡ್‌ ಆಗಿಬಿಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಂತೂ ಅಂತಹವರದ್ದೇ ಚರ್ಚೆಗಳು ಜೋರಾಗಿ ನಡೆಯುತ್ತಿರುತ್ತಿರುತ್ತವೆ. ಇನ್ನೂ ಆರ್‌ಸಿಬಿ ಮಹಿಳಾ ಕ್ರಿಕೆಟ್‌ ತಂಡದ ಕನ್ನಡತಿಯೊಬ್ಬರು ಸುದ್ದಿಯಾಗುತ್ತಲೇ ಇದ್ದಾರೆ.

ಈ ಬಾರಿ ಅಂದರೆ 2024ರ ಐಪಿಎಲ್‌ನಲ್ಲಿ ಆರ್‌ಸಿಬಿ ಮಹಿಳಾ ಕ್ರಿಕೆಟ್‌ ಟೀಂ ಫೈನಲ್‌ನಲ್ಲಿ ಭರ್ಜರಿಯಾಗಿ ಗೆದ್ದು ಕಪ್‌ ತಮ್ಮದಾಗಿಸಿಕೊಂಡು ಕರುನಾಡಿನ ಹೆಮ್ಮೆಯನ್ನು ಎತ್ತಿಹಿಯಿತು. ಅದರಲ್ಲೂ ಈ ಟೀಂನಲ್ಲಿದ್ದ ಕನ್ನಡತಿ ಶ್ರೇಯಾಂಕ ಪಾಟೀಲ್‌ ಅವರು ಉತ್ತಮ ಪ್ರದರ್ಶನ ತೋರಿ ಕರುನಾಡಿನ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸಿದ್ದರು.

Do you know what Did Shreyanka Patil said about samarjit lankesh after watching gowri movie

ಆರ್‌ಸಿಬಿ ಕಪ್‌ ಗೆದ್ದಾಗಿನಿಂದ ಶ್ರೇಯಾಂಕ ಪಾಟೀಲ್‌ಗೆ ಶ್ರೇಯಸ್ಸು ಹೆಚ್ಚಾಗುತ್ತಾ ಹೋಯಿತು. ಅಲ್ಲದೆ, ಇವರಿಗೆ ಟಗರು ಪುಟ್ಟಿ ಅಂತಲೂ ನೆಟ್ಟಿಗರು ಹೆಸರಿಟ್ಟಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಈಗಲೂ ಟ್ರೆಂಡಿಂಗ್‌ನಲ್ಲಿದೆ. ಇನ್ನೂ ಎಲ್ಲೇ ಹೋಗಲಿ ಮೊದಲು ಮುಖದಲ್ಲಿ ಸ್ಮೈಲ್‌ ಮಾಡುತ್ತಾರೆ. ಅವರ ಆ ನಗುವಿಗೆ ಅಪಾರ ಅಭಿಮಾನಿ ಬಳಗವಿದೆ.

ಇತ್ತೀಚೆಗಷ್ಟೇ ವೇದಿಕೆಯೊಂದರ ಮೇಲೆ ಗೌರಿ ಸಿನಿಮಾದ "ಟೈಂ ಬರುತ್ತೆ.. ನಮ್ಗೆ ಟೈಂ ಬರುತ್ತೆ" ಎಂಬ ಚಂದನ್‌ ಶೆಟ್ಟಿ ಹಾಡಿರುವ ಹಾಡಿಗೆ ಸಮರ್ಜಿತ್‌ ಲಂಕೇಶ್‌ ಪಕ್ಕದಲ್ಲೇ ನಿಂತು ಶ್ರೇಯಾಂಕ ಪಾಟೀಲ್‌ ಸ್ಟೆಪ್‌ ಹಾಕಿದ್ದು, ಈ ವಿಡಿಯೋ ಕೂಡ ಭಾರೀ ವೈರಲ್‌ ಆಗಿತ್ತು. ಇದೀಗ ಈ ಸಿನಿಮಾ ನೋಡಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

"ಗೌರಿ ಸಿನಿಮಾನ ನೋಡಿ ನಂಗೆ ತುಂಬಾ ಖಷಿಯಾಯ್ತು. ಸಮರ್ಜಿತ್‌, ಇಂದ್ರಜಿ ಲಂಕೇಶ್ ಇವರನೆಲ್ಲ ನೋಡಿ ತುಂಬಾ ಸಂತೋಷವಾಯ್ತು. ಸಾನ್ಯ ಅಯ್ಯುರ್ ಅವರು ಕೂಡ ತುಂಬಾ ಚೆನ್ನಾಗಿ ನಟನೆ ಮಾಡಿದ್ದಾರೆ. ಮೂವಿಯಲ್ಲಿ ಕೊನೆಯವರೆಗೂ ತುಂಬಾ ಇಂಟರೆಸ್ಟಿಂಗ್‌ ವಿಚಾರಗಳಿವೆ. ಈ ಬಗ್ಗೆ ನಾನು ಹೇಳುವುದಿಲ್ಲ, ನೀವು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಬೇಕು. ಗೌರಿ ಸಿನಿಮಾದ ಇಡೀ ತಂಡಕ್ಕೆ ಬೆಸ್ಟ್‌ ವಿಶ್ ಹೇಳಲು ಬಯಸುತ್ತೇನೆ," ಎಂದರು.

"ಇದೇ ರೀತಿ ಉತ್ತಮ ಸಿನಿಮಾಗಳನ್ನು ಮಾಡಿ, ಈ ಮೂಲಕ ಕನ್ನಡ ಇಂಡಸ್ಟ್ರಿಯನ್ನು ಬೆಳೆಸುತ್ತಾ ಹೋಗಿ. ಈ ಸಿನಿಮಾದಲ್ಲಿ ಸಮರ್ಜಿತ್‌ ಲಂಕೇಶ್‌ ಅವರ ನಟನೆ ತುಂಬಾ ಇಷ್ಟವಾಯಿತು. ನಾನು ಈ ಸಿನಿಮಾ ನೋಡಿ ಫಿಧಾ ಆಗಿದ್ದೇನೆ. ತುಂಬಾ ಇಷ್ಟವಾಯಿತು, ತುಂಬಾ ಎಂಜಾಯ್‌ ಮಾಡಿದೆ," ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+