Yash 19: ಯಶ್ ಗನ್ ಹಿಡಿದಿದ್ದು ಯಾಕೆ ಅಂತಾ ಈಗ ಗೊತ್ತಾಯ್ತಾ?

ನಟ ಯಶ್ ಏನೇ ಮಾಡಿದ್ರು ಅದಕ್ಕೆ ವರ್ಷಗಟ್ಟಲೆ ಪ್ರಿಪೇರ್ ಆಗುತ್ತಾರೆ, ತಾನು ಅದರಲ್ಲಿ ಪರ್ಫೆಕ್ಟ್ ಅನ್ನೋದನ್ನು ತಿಳಿದೇ ಮುನ್ನುಗ್ಗುತ್ತಾರೆ. ಇಂದು ನಟ ಯಶ್ ಅವರು ತಮ್ಮ 19ನೇ ಸಿನಿಮಾ ಕುರಿತು ಅಧಿಕೃತ ಘೋಷಣೆ ಹೊರಡಿಸಿದ ಸಮಯದಲ್ಲೇ ಹಳೇ ವಿಡಿಯೋ, ಫುಲ್ ವೈರಲ್ ಆಗುತ್ತಿದೆ. ಹಾಗಾದರೆ ಯಶ್ ಅವರ ಆ ಹಳೆಯ ವಿಡಿಯೋದಲ್ಲಿ ಏನಿದೆ? ಬನ್ನಿ ತಿಳಿಯೋಣ.

'ಕೆಜಿಎಫ್-1' ಮತ್ತು 'ಕೆಜಿಎಫ್-2' ಸಿನಿಮಾಗಳು ದೊಡ್ಡ ಮಟ್ಟಿಗೆ ಸಕ್ಸಸ್ ಆಗುತ್ತೆ ಅಂತಾನೆ ಯಶ್ ಅವರು ಪ್ರಶಾಂತ್ ನೀಲ್ ಜೊತೆಗೆ ಪರ್ಫೆಕ್ಟ್ ಪ್ಲ್ಯಾನ್ ಮಾಡಿದ್ದರು. ಹೀಗೆ ನೀಲ್ & ಯಶ್ ಅವರ ಕಾಂಬೋದಲ್ಲಿ 'ಕೆಜಿಎಫ್-1' & 'ಕೆಜಿಎಫ್-2' ಹಳೆಯ ದಾಖಲೆ ಧೂಳ್.. ಧೂಳ್.. ಮಾಡಿ ಮುಂದೆ ನುಗ್ಗಿತ್ತು. ಆದ್ರೆ 'ಕೆಜಿಎಫ್-2' ನಂತರ, ಯಶ್ ಅವರ ಮೇಲೆ ಅನಗತ್ಯ ಒತ್ತಡ ಹಾಕಲಾಗುತ್ತಿದೆ ಎಂಬ ಆರೋಪ ಇತ್ತು. ಅಲ್ಲದೆ ಪ್ರಭಾಸ್‌ರ ರೀತಿಯಲ್ಲೇ ನಟ ಯಶ್ ಅವರ ಸಿನಿಮಾ ಕರಿಯರ್‌ಗೆ ಕಂಟಕ ಎದುರಾಗುತ್ತಿದೆ ಎಂಬ ಆರೋಪ ಕೂಡ ಕೇಳಿಬಂದಿತ್ತು. ಆದರೆ ರಾಕಿಭಾಯ್ ಯಶ್ ಮಾತ್ರ, ಅದನ್ನೆಲ್ಲಾ ನೀಟಾಗಿ ಫೈರ್ ಮಾಡಿ ಬಿಸಾಕಿದ್ದಾರೆ!

Discover Why Yash Old Video Getting Viral

ಮೊದಲೇ ಪ್ರಿಪೇರ್ ಆಗಿದ್ದರಾ ರಾಕಿಭಾಯ್?

'ಕೆಜಿಎಫ್-1' ಸಿನಿಮಾದ ಕ್ಲೈಮ್ಯಾಕ್ಸ್ ಅಲ್ಲಿ ಒಂದು ಸೀನ್ ಇದೆ, ಗರುಡಾನ ಕೊಲೆ ಬಳಿಕ ಯಶ್ ಅವರು ಗಾರ್ಡ್ಸ್ ಗ್ಯಾಂಗ್‌ಗೆ ಬೆಂಕಿ ಹಚ್ಚಿ ದೊಡ್ಡದಾಗಿ ಸಿಗ್ನಲ್ ಕೊಡುತ್ತಾರೆ. ಹೀಗೆ, ದೊಡ್ಡ ಸಿಗ್ನಲ್ ಕೊಟ್ಟು ತಾನು ವಿಲನ್ ಗರುಡಾನ ಹೊಡೆಯೋದಕ್ಕೆ ಸಿದ್ಧ ಅನ್ನೋದನ್ನ ರಾಕಿಭಾಯ್ ಹೊರಗಡೆ ತಿಳಿಸಿರುತ್ತಾರೆ. ಕೊನೆಗೆ ಕೆಜಿಎಫ್ ಹೊರಗಿದ್ದ ಇನ್ನೊಂದು ಟೀಂ, ರಾಕಿಭಾಯ್‌ಗೆ ಸಪೋರ್ಟ್ ಕೊಡಲು ಸಜ್ಜಾಗಿರುತ್ತೆ. ಇದೇ ಸೀನ್ ಥರಾನೆ, ಮುಂದೆ ತಾವು ಏನ್ ಮಾಡ್ತಾರೆ ಅನ್ನೋ ಬಗ್ಗೆ ಯಶ್ ದೊಡ್ಡದಾಗಿ ಸಿಗ್ನಲ್ ಕೊಟ್ಟಿದ್ದಂತೆ ಕಾಣ್ತಿದೆ. ಅದು ಹೇಗೆ ಗೊತ್ತಾ? ಮುಂದೆ ವಿಡಿಯೋ ಇದೆ ನೀವೆ ನೋಡಿ.

ಗನ್ ಹಿಡಿದು ಉಡೀಸ್ ಮಾಡಿದ ರಾಕಿಭಾಯ್!

ನೋಡಿದ್ರಲ್ಲ, ಈ ವಿಡಿಯೋದಲ್ಲಿ ರಾಕಿಭಾಯ್ ನಟ ಯಶ್ ಅವರು ಅದೆಷ್ಟು ಪರ್ಫೆಕ್ಟ್ ಮತ್ತು ಸುಲಭವಾಗಿ ಗನ್ ಫೈರ್ ಮಾಡ್ತಾರೆ ಅಂತಾ. ತಮ್ಮ ಗುರಿಯ ಮೇಲೆ ಗುಂಡು ಹಾರಿಸುವ, ತಮ್ಮ ಖದರ್ ತೋರಿಸಿದ್ದ ಯಶ್ ಒಂದು ಕ್ಷಣ ತಮ್ಮ ಫ್ಯಾನ್ಸ್‌ಗೆ ಸರ್ಪ್ರೈಸ್ ಕೊಟ್ಟಿದ್ದರು. 2022ರ ಸೆಪ್ಟೆಂಬರ್ 29ರಂದು ಈ ವಿಡಿಯೋವನ್ನು ನಟ ಯಶ್ ಅವರು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದರು. ಯಾವುದೇ ವೃತ್ತಿಪರ ಶೂಟಿಂಗ್ ಪಟುಗೆ ಕಡಿಮೆ ಇಲ್ಲದ ರೀತಿಯಲ್ಲಿ ಯಶ್ ಅಬ್ಬರಿಸಿದ್ದರು. ಆದರೆ ಈ ವಿಡಿಯೋ ಹಿಂದಿನ ಕಹಾನಿ ಈಗ ರಿವೀಲ್ ಆಗಿದೆ. ಅಂದು ಯಶ್ ಹೀಗೆ ಗನ್ ಹಿಡಿದು ತಮ್ಮ ಗುರಿಯ ಪವರ್ ತೋರಿಸಿದ್ದು, ಅವರ ಮುಂದಿನ ಸಿನಿಮಾದ ಮುನ್ಸೂಚನೆ ಆಗಿತ್ತು ಅಂತಾ ಅಭಿಮಾನಿಗಳು ಮಾತನಾಡ್ತಿದ್ದಾರೆ.

ಹಾಲಿವುಡ್ ಲೆವೆಲ್ ಸಿನಿಮಾ ಅಂತಿದ್ದಾರೆ

ಯಶ್-19 'ಟಾಕ್ಸಿಕ್' ಫಸ್ಟ್ ಲುಕ್‌ನ ನೋಡುತ್ತಿದ್ದರೆ, ನಟ ಯಶ್ ಬೇರೆ ಏನೋ ದೊಡ್ಡದಾಗಿ ಮಾಡುತ್ತಿರುವಂತೆ ಕಾಣುತ್ತಿದೆ. ಈಗಾಗಲೇ ಭಾರತ ಸಿನಿಮಾ ರಂಗವನ್ನು ಶೇಕ್ ಮಾಡಿರುವ ಈ ನಟ ಹಾಲಿವುಡ್ ರಣರಂಗದಲ್ಲಿ ಖದರ್ ತೋರಿಸೋದಕ್ಕೆ ಸಜ್ಜಾಗಿದ್ದಾರೆ. ಹೀಗೆ ಕನ್ನಡ ನೆಲದ ನಟ ಜಾಗತಿಕವಾಗಿ ಖ್ಯಾತಿ ಪಡೆಯುತ್ತಿರುವುದು ಕನ್ನಡಿಗರಿಗೂ ಖುಷಿ ತಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಯಶ್ ಅವರ ಅಭಿಮಾನಿಗಳ ಸಹಿತ, ಭಾರತದ ಸಿನಿಮಾ ಫ್ಯಾನ್ಸ್ 'ಟಾಕ್ಸಿಕ್' ಫಸ್ಟ್‌ಲುಕ್‌ಗೆ ಫಿದಾ ಆಗಿದ್ದಾರೆ.

Discover Why Yash Old Video Getting Viral

ಒಟ್ನಲ್ಲಿ ನಟ ಯಶ್ ಅವರ ಅಬ್ಬರ ಮತ್ತೆ ಶುರುವಾಗಿದೆ, ತಮ್ಮ ಸಿನಿಮಾ ಕರಿಯರ್‌ನಲ್ಲಿ ವರ್ಷದಿಂದ ವರ್ಷಕ್ಕೆ ಈ ನಟ ಕೊಡುತ್ತಿರುವುದು ಬರೀ ಸರ್ಪ್ರೈಸ್‌ಗಳನ್ನ. ಇದೇ ಕಾರಣಕ್ಕೆ ನಟ ಯಶ್ ಅವರು ಕೇವಲ 18 ಸಿನಿಮಾಗಳಲ್ಲಿ ಇಡೀ ಜಗತ್ತು ತಿರುಗಿ ನೋಡುವ ರೀತಿಯ ಯಶಸ್ಸು ಪಡೆದಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ, ಅವರ ಈ ಖ್ಯಾತಿ ಇನ್ನಷ್ಟು ಜಾಸ್ತಿ ಆಗಿಲಿ. ಕನ್ನಡ ಸಿನಿಮಾ ರಂಗವನ್ನೂ, ಇನ್ನಷ್ಟು ಉತ್ತುಂಗಕ್ಕೆ ತೆಗೆದುಕೊಂಡು ಹೋಗಲಿ ಅಂತಿದ್ದಾರೆ ರಾಕಿಭಾಯ್ ಯಶ್ ಅವರ ಫ್ಯಾನ್ಸ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+