Bigg Boss Kannada: ಬಿಗ್‌ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಕಣ್ಣೀರು...
ಕಿಚ್ಚ ಸುದೀಪ್... ಈ ಹೆಸರು ಕನ್ನಡಿಗರಿಗೆ ಮಾತ್ರವಲ್ಲ ಇಡೀ ದೇಶದಲ್ಲೇ ಚಿರ ಪರಿಚಿತವಾಗಿದೆ ಎನ್ನಬಹುದು. ಯಾಕಂದ್ರೆ ಕನ್ನಡಿಗ ಕಿಚ್ಚ ಸುದೀಪ್ ಅವರು ಭಾರತದ ಮೂಲೆ ಮೂಲೆಯಲ್ಲಿ ಕೂಡ ಹೆಸರು ಮಾಡಿದ್ದಾರೆ. ಬಾಲಿವುಡ್ ಅಂದ್ರೆ ಹಿಂದಿ ಸಿನಿಮಾಗಳು ಸೇರಿದಂತೆ ತೆಲುಗು ಸಿನಿಮಾದಲ್ಲೂ ಮಿಂಚಿದ್ದಾರೆ ಕನ್ನಡಿಗ ಕಿಚ್ಚ ಸುದೀಪ್ ಅವರು. ಹೀಗಿದ್ದಾಗ, ದಿಢೀರ್ ಕಿಚ್ಚ ಸುದೀಪ್ ಅವರು ಕನ್ನಡ ಬಿಗ್‌ಬಾಸ್ ವೇದಿಕೆಯ ಮೇಲೆ ಕಣ್ಣೀರು ಹಾಕಿ...
ಕಿಚ್ಚ ಸುದೀಪ್ ಅವರ ನೇತೃತ್ವದಲ್ಲಿ ಬಿಗ್‌ಬಾಸ್ ಕನ್ನಡ ಅತ್ಯುತ್ತಮವಾಗಿ ನಡೆದುಕೊಂಡು ಹೋಗುತ್ತಿದೆ. ಅದರಲ್ಲೂ ಕಿಚ್ಚ ಸುದೀಪ್ ಅವರೇ ಖುದ್ದು ವಾರಕ್ಕೆ ಒಂದು ಬಾರಿ ಬಂದು ಕಾರ್ಯಕ್ರಮ ನಡೆಸಿ ಕೊಡುತ್ತಾರೆ. ವಾರದ ಕಥೆ, ಕಿಚ್ಚನ ಜೊತೆ ಕಾರ್ಯಕ್ರಮ ಬಿಗ್‌ಬಾಸ್ ಕಾರ್ಯಕ್ರಮದ ಅತಿ ಮುಖ್ಯ ಆಕರ್ಷಣೆ. ಹೀಗಿದ್ದಾಗಲೇ ಕಿಚ್ಚ ಸುದೀಪ್ ಅವರು ವೇದಿಕೆಯ ಮೇಲೆ ಕಣ್ಣೀರು ಹಾಕಿದ್ದಾರೆ... ಯಾಕೆ ಗೊತ್ತಾ? ಮುಂದೆ ಓದಿ.

ಕಿಚ್ಚ ಸುದೀಪ್ ಅಳುತ್ತಿದ್ದಂತೆ ಆಘಾತ...
ಬಿಗ್‌ಬಾಸ್ ಮನೆಯ ಒಳಗೆ ಇರುವವರಿಗೆ ಯಾವುದೇ ರೀತಿಯ ಹೊರ ಜಗತ್ತಿನ ಮಾಹಿತಿಗಳು ಇರಲ್ಲ ಎಂಬ ಮಾಹಿತಿ ಇದೆ. ಹೀಗಾಗಿ ಬಿಗ್‌ಬಾಸ್ ಮನೆಯ ಒಳಗೆ ಇರುವ ಸ್ಪರ್ಧಿಗಳಿಗೂ & ಬಿಗ್‌ಬಾಸ್ ಮನೆ ಹೊರಗೆ ನಡೆಯುವ ಘಟನೆಗಳಿಗೂ, ನಟ ಕಿಚ್ಚ ಸುದೀಪ್ ಅವರೇ ಕೊಂಡಿ.
ಹೀಗಿದ್ದಾಗ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಶನಿವಾರ ದಿಢೀರ್ ಕಿಚ್ಚ ಸುದೀಪ್ ಅವರು ಕಣ್ಣು ತುಂಬಿಕೊಂಡಿದ್ದಾರೆ. ಇದನ್ನು ನೋಡುತ್ತಿದ್ದಂತೆ ಬಿಗ್‌ಬಾಸ್ ಮನೆ ಸ್ಪರ್ಧಿಗಳ ಕಣ್ಣು ಕೂಡ ಒದ್ದೆಯಾಗಿಬಿಟ್ಟಿದೆ. ಹಾಗಾದ್ರೆ ಕಿಚ್ಚ ಸುದೀಪ್ ಅವರು ದಿಢೀರ್ ಕಣ್ಣಲ್ಲಿ ನೀರು ತುಂಬಿಕೊಂಡಿದ್ದು ಯಾಕೆ? ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಭಾವನಾತ್ಮಕ ಕ್ಷಣ ಎದುರಾಗಿದ್ದು ಹೇಗೆ? ಮುಂದೆ ಓದಿ.
ತಾಯಿ ನೆನಪು.. ಕಿಚ್ಚನ ಕಣ್ಣೀರು...
ಅಂದಹಾಗೆ ಈ ರೀತಿಯಾಗಿ ಕಿಚ್ಚ ಸುದೀಪ್ ಅವರು ಕಣ್ಣೀರು ಹಾಕಲು ಕಾರಣವಾಗಿದ್ದು ಅವರ ತಾಯಿಯ ಫೋಟೋ. ಇತ್ತೀಚೆಗೆಷ್ಟೇ, ಕಿಚ್ಚ ಸುದೀಪ್ ಅವರ ತಾಯಿಯವರು ಇಹಲೋಕ ತ್ಯಜಿಸಿದ್ದರು, ಅದೇ ನೋವಿನಲ್ಲಿ ನಟ ಕಿಚ್ಚ ಸುದೀಪ್ ಅವರು ಇನ್ನೂ ಇದ್ದಾರೆ. ಹೀಗಿದ್ದಾಗ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಶನಿವಾರ ಕಿಚ್ಚ ಸುದೀಪ್ ಭಾಗವಹಿಸಿದ್ದರು. ಈ ಸಮಯದಲ್ಲಿ ಕಿಚ್ಚ ಸುದೀಪ್ ಅವರ ತಾಯಿಯವರ ಫೋಟೋ ಸ್ಕ್ರೀನ್ ಮೇಲೆ ಬಂದಿತು...
ಹೀಗೆ ಅಮ್ಮನ ಫೋಟೋ ಸ್ಕ್ರೀನ್ ಮೇಲೆ ಬಂದ ತಕ್ಷಣ ಮತ್ತೊಮ್ಮೆ ಕಿಚ್ಚ ಸುದೀಪ್ ಅವರು ಭಾವುಕರಾದರು... ಅಲ್ಲದೆ ತಮ್ಮ ತಾಯಿಯವರ ಅಗಲಿಕೆಯ ನೋವನ್ನು ತಡೆಯಲಾಗದೆ ಮತ್ತೆ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದರು. ಈ ವೇಳೆ ವಾಸುಕಿ ವೈಭವ್, ಕಿಚ್ಚ ಸುದೀಪ್ ಅವರ ತಾಯಿಯವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಗೀತೆಯನ್ನ ಹಾಡಿದರು... ಆಗ ಎಲ್ಲರಿಗೂ ಕಣ್ಣು ಒದ್ದೆಯಾಗಿತ್ತು...












Click it and Unblock the Notifications