ದರ್ಶನ್ ಪ್ರಿಯತಮೆ ಪವಿತ್ರಾ ಗೌಡಗೆ 2 ಕೋಟಿ ರೂಪಾಯಿ ಕೊಟ್ಟಿದ್ದು ಯಾರು?
ದರ್ಶನ್ ಪ್ರಿಯತಮೆ ಪವಿತ್ರಾ ಗೌಡ ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿದು ಸಪ್ಪೆ ಸಾರು & ಅನ್ನ ತಿಂದು ನರಳುತ್ತಿದ್ದಾರೆ. ಸೊಳ್ಳೆಗಳ ಕಾಟ ತಾಳಲಾರದೆ ಪವಿತ್ರಾ ಪರದಾಡುತ್ತಿದ್ದಾರೆ ಎಂಬ ಮಾಹಿತಿ ಸಿಗುತ್ತಿದ್ದು, ದರ್ಶನ್ & ಗ್ಯಾಂಗ್ ವಿರುದ್ಧದ ಕೊಲೆ ಆರೋಪದಲ್ಲಿ A1 ಆರೋಪಿ ಆಗಿರುವ ಪವಿತ್ರಾ ಗೌಡಗೆ ಈಗ ಮತ್ತೊಂದು ಕಂಟಕವೂ ಎದುರಾಗಿದೆ! ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.
ಪವಿತ್ರ ಗೌಡ ಈಗ ದರ್ಶನ್ & ಗ್ಯಾಂಗ್‌ಗೆ ದೊಡ್ಡ ಕಂಟಕ ತಂದಿದ್ದಾರೆ ಎಂಬ ಆರೋಪ ಇದೆ. ಅದರಲ್ಲೂ, ದರ್ಶನ್ & ಗ್ಯಾಂಗ್ ಸೇರಿ ರೇಣುಕಾಸ್ವಾಮಿ ಹತ್ಯೆ ಮಾಡಲು ಇದೇ ಪವಿತ್ರಾ ಗೌಡ ಕಾರಣ ಎಂಬ ಆರೋಪದ ನಡುವೆ ಇದೀಗ ಮತ್ತೊಂದು ಶಾಕ್ ಸಿಕ್ಕಿದೆ. ದರ್ಶನ್ ಪ್ರಿಯತಮೆ ಎಂದೇ ಗುರುತಿಸಿಕೊಂಡಿರುವ ಪವಿತ್ರಾ ಗೌಡಗೆ ಬರೋಬ್ಬರಿ 2 ಕೊಟಿ ರೂಪಾಯಿ ಹಣವನ್ನ ಕನ್ನಡದ ನಿರ್ಮಾಪಕ ಒಬ್ಬರು ಕೊಟ್ಟಿರುವುದು ಗೊತ್ತಾಗಿದೆ. ಈ ಬಗ್ಗೆ ಬ್ಯಾಂಕ್ ದಾಖಲೆ ಸಿಕ್ಕಿದ್ದು, ಹಾಗಾದ್ರೆ 2 ಕೊಟಿ ರೂಪಾಯಿ ಹಣ ಕೊಟ್ಟ ಕನ್ನಡ ಸಿನಿಮಾ ರಂಗದ ಆ ನಿರ್ಮಾಪಕ ಯಾರು ಗೊತ್ತೆ? ಬನ್ನಿ ತಿಳಿಯೋಣ.

ದರ್ಶನ್ ಪ್ರಿಯತಮೆಗೆ 2 ಕೊಟಿ?
ಹೌದು, ನಟ ದರ್ಶನ್ ಆಪ್ತೆ ಎಂದೇ ಗುರುತಿಸಿಕೊಂಡು ಭರ್ಜರಿ ಹೆಸರು & ಆಸ್ತಿಯನ್ನ ಕೂಡ ಗಳಿಸಿದ ಪವಿತ್ರಾ ಗೌಡಗೆ ಇನ್ನೂ ಅಧಿಕೃತವಾಗಿ ದರ್ಶನ್ ಹೆಂಡತಿಯ ಸ್ಥಾನವು ಸಿಕ್ಕಿಲ್ಲ. ಹೀಗಿದ್ದಾಗ ಪವಿತ್ರಾ ಗೌಡ ಸಣ್ಣ ವಿಚಾರವನ್ನ ದೊಡ್ಡದು ಮಾಡಿ, ದರ್ಶನ್‌ಗೆ ಕೆಣಕುವ ರೀತಿ ಮಾತನಾಡಿ ರೇಣುಕಾಸ್ವಾಮಿ ಕೊಲೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಗಂಭೀರ ಆರೋಪ ಇದೆ. ಹೀಗಿದ್ದಾಗಲೇ ದರ್ಶನ್ ಪ್ರಿಯತಮೆ ಪವಿತ್ರಾ ಗೌಡಗೆ 2 ಕೋಟಿ ರೂಪಾಯಿ ಹಣವನ್ನು ಕನ್ನಡ ನಿರ್ಮಾಪಕ ಸೌಂದರ್ಯ ಜಗದೀಶ್ ನೀಡಿದ್ರು ಎಂಬ ಆರೋಪ ಕೇಳಿಬಂದಿದೆ.
ಪವಿತ್ರಾ ಗೌಡಗೆ ನಿರ್ಮಾಪಕ ಸೌಂದರ್ಯ ಜಗದೀಶ್ 2 ಕೋಟಿ ರೂಪಾಯಿ ಹಣ ಕಳಿಸಿದ ಬ್ಯಾಂಕ್ ದಾಖಲೆ ತೋರಿಸಿ ಕನ್ನಡದ ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ ಮತ್ತೆ ಪವಿತ್ರಾ ಗೌಡ ಹೊಸ ಸಂಕಷ್ಟಕ್ಕೆ ಸಿಲುಕಿದ್ದಾರಾ? ಎಂಬ ಪ್ರಶ್ನೆ ಮೂಡಿದೆ. ಈ ಕುರಿತು ಐಟಿ ಅದ್ರೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಾರಾ? ಎಂಬ ಪ್ರಶ್ನೆ ಈಗ ಮೂಡಿದೆ ಮತ್ತೊಂದ್ಕಡೆ ನಿರ್ಮಾಪಕ ಸೌಂದರ್ಯ ಜಗದೀಶ್ ತಮಗೆ ವ್ಯಾಪಾರದಲ್ಲಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ದರ್ಶನ್ ವಿರುದ್ಧ ರೌಡಿ ಶೀಟ್?
2011ರಲ್ಲಿ ಹೆಂಡತಿ ಮೇಲೆಯೇ ದರ್ಶನ್ ರಾಕ್ಷಸನ ರೀತಿ ಹಲ್ಲೆ ಮಾಡಿರುವುದು ಸೇರಿದಂತೆ, ಪದೇ ಪದೇ ದರ್ಶನ್ & ಗ್ಯಾಂಗ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ. ಹೀಗೆ ಕನ್ನಡ ನಾಡಲ್ಲಿ ಪಟಾಲಂ ಕಟ್ಟಿಕೊಂಡು ದರ್ಶನ್ & ಗ್ಯಾಂಗ್ ಜನರಿಗೆ ಮತ್ತು ಹಲವು ನಿರ್ಮಾಪಕ ನಿರ್ದೇಶಕರಿಗೆ ಟಾರ್ಚರ್ ಮಾಡಿದೆ ಎಂಬ ಆರೋಪ ಇದೆ. ಹೀಗಾಗಿಯೇ ಇದೀಗ ದರ್ಶನ್ ಮತ್ತು ಆತನ ಸಹಚರರ ವಿರುದ್ಧ ರೌಡಿಶೀಟ್ ತೆರೆಯಲು ಪೊಲೀಸರು ಅಂತಿಮ ಸಿದ್ಧತೆಗಳ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ದರ್ಶನ್‌ಗೆ ಮತ್ತೊಂದು ಕಂಟಕ ಎದುರಾಗುವ ಬಗ್ಗೆ ಚರ್ಚೆ ನಡೆಯುತ್ತಿದೆ.












Click it and Unblock the Notifications