Pushpa 2: ಪುಷ್ಪ-2 ರಿಲೀಸ್ ಡೇಟ್ ಫಿಕ್ಸ್, ಅಲ್ಲು ಎಂಟ್ರಿ ಯಾವಾಗ?
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಂದ್ರೆ ಇಂಡಿಯಾದಲ್ಲಿ ಒಂದು ಕ್ರೇಜ್ ಇದೆ. ಭಾರತದ ಸಿನಿಮಾ ಪ್ರೇಮಿಗಳಿಗೆ ಮಾತ್ರವಲ್ಲ, ಜಗತ್ತಿನಾದ್ಯಂತ ಅಲ್ಲು ಅರ್ಜುನ್ ಅಭಿಮಾನಿ ದೇವರ ಸಂಪಾದಿಸಿದ್ದಾರೆ. ಇಂತಿಪ್ಪ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ 'ಪುಷ್ಪ-2' ರಿಲೀಸ್ ಆಗೋದು ಯಾವಾಗ ಅಂತಾ ಅಭಿಮಾನಿಗಳು ಕಾಯುತ್ತಿದ್ದರು. ಇದೀಗ ಅಲ್ಲು ಅರ್ಜುನ್ ಅಭಿಮಾನಿ ಬಳಗಕ್ಕೆ ಸರ್ಪ್ರೈಸ್ ಸುದ್ದಿ ಸಿಕ್ಕಿದೆ.
ಹೌದು, ಟಾಲಿವುಡ್ ಡೈರೆಕ್ಟರ್ ಸುಕುಮಾರ್ & ಅಲ್ಲು ಅರ್ಜುನ್ ಮತ್ತೆ ಬಾಕ್ಸಾಫೀಸ್ ಉಡೀಸ್ ಮಾಡಲು ಸಜ್ಜಾಗಿದ್ದಾರೆ. ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಪುಷ್ಪ-2 ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಅದರಲ್ಲೂ 'ಪುಷ್ಪ-1' ಮೂಲಕ ಅಭಿಮಾನಿಗಳ ಎದೆಯಲ್ಲಿ ಹಲ್‌ಚಲ್ ಎಬ್ಬಿಸಿದ್ದ ಪುಷ್ಪರಾಜ್‌ಗಾಗಿ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೇ ಹೊತ್ತಲ್ಲಿ ಅಲ್ಲು ಅರ್ಜುನ್ ಫ್ಯಾನ್ಸ್ ಖುಷಿಪಡುವ ಸುದ್ದಿಯೊಂದು ಸಿಕ್ಕಿದ್ದು, ಪುಷ್ಪ-2 ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ.

'ಪುಷ್ಪ-2' ರಿಲೀಸ್ ಆಗೋದು ಯಾವಾಗ?
ಈಗಾಗಲೇ ಪುಷ್ಪ-2 ಸಿನಿಮಾ ಟೀಸರ್ ಮೂಲಕ ಹವಾ ಎಬ್ಬಿಸಿದೆ. ಕಾಣೆಯಾಗಿದ್ದ ಪುಷ್ಪ ಹೊಸ ಅವತಾರದಲ್ಲಿ ಪ್ರತ್ಯಕ್ಷನಾಗುವ ಮೂಲಕ ಇನ್ಮುಂದೆ ನಂದೇ ರೂಲ್ಸ್ ಅನ್ನೋ ಮೆಸೇಜ್ ಕೊಟ್ಟಿದ್ದಾನೆ. ಪುಷ್ಪ ಸೀಕ್ವೆಲ್ ಎಂಟ್ರಿ ಯಾವಾಗ ಅಂತಾ ಕಾಯುತ್ತಿದ್ದ ಫ್ಯಾನ್ಸ್‌ಗೆ ಸಿಹಿ ಸುದ್ದಿ ಸಿಕ್ಕಿದ್ದು, ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಗೆ ಭರ್ಜರಿಯಾಗಿ ಬೆಳ್ಳಿತೆರೆಗೆ ಅಪ್ಪಳಿಸಲಿದೆ. ಈ ಮೂಲಕ ಇಷ್ಟುದಿನ ಅಭಿಮಾನಿಗಳು ಕಾಯುತ್ತಿದ್ದ ಆ ಸಮಯವೂ ಫೈನಲ್ ಆಗಿದೆ. ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಜತೆ ಅಲ್ಲು ಅರ್ಜುನ್ ಫ್ಯಾನ್ಸ್‌ಗೆ ಮತ್ತೊಂದು ಖುಷಿ ವಿಚಾರ ಕೂಡ ಕನ್ಫರ್ಮ್ ಆಗಿದೆ.
350 ಕೋಟಿ ರೂಪಾಯಿಗೂ ಹೆಚ್ಚು...
2024ರ ಆಗಸ್ಟ್ 15ಕ್ಕೆ 'ಪುಷ್ಪ-2' ಸಿನಿಮಾ ತೆರೆಗೆ ಅಪ್ಪಳಿಸಲಿದ್ದು, ಈ ಬಾರಿಯೂ ಸಖತ್ ಸದ್ದು ಮಾಡುವ ನಿರೀಕ್ಷೆ ಹುಟ್ಟುಹಾಕಿದೆ. ಸುಮಾರು 200 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿದ್ದ 'ಪುಷ್ಪ-1' 350 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಪುಷ್ಪ 1 ಯಶಸ್ಸಿನ ಬಳಿಕ ಪುಷ್ಪ-2 ಕಣ್ತುಂಬಿಕೊಳ್ಳಲು ಅಲ್ಲು ಅರ್ಜುನ್ ಫ್ಯಾನ್ಸ್ ಕಾಯುತ್ತಿದ್ದಾರೆ. ಹೀಗಾಗಿ ಅಂತೂ 'ಪುಷ್ಪ-2' ರಿಲೀಸ್ ಡೇಟ್ ಘೋಷಣೆ ಮಾಡಲಾಗಿದೆ. ಈಗಾಗಲೇ ಈ ಚಿತ್ರದ ಹಿಂದಿ ರೈಟ್ಸ್ ಭಾರಿ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ ಅನ್ನೋ ಮಾತು ಓಡಾಡ್ತಿದೆ.
₹200 ಕೋಟಿ ಮೊತ್ತಕ್ಕೆ ಹಿಂದಿ ರೈಟ್ಸ್?
ಅಷ್ಟಕ್ಕೂ ಅಲ್ಲು ಅರ್ಜುನ್ ಅವರ ಆಕ್ಟಿಂಗ್ ಹಾಗೂ ಸುಕುಮಾರ್ ಟೇಕಿಂಗ್‌ಗೆ ಬಾಲಿವುಡ್ ಫ್ಯಾನ್ಸ್ ಕೂಡ ಆಗಿದ್ದರು. ಬಾಲಿವುಡ್ ಚಿತ್ರಗಳಿಗೆ ಟಕ್ಕರ್ ಕೊಟ್ಟಿದ್ದ ಪುಷ್ಪ 2ಗೆ ಸಖತ್ ಬೇಡಿಕೆ ಬಂದಿದೆ. ₹200 ಕೋಟಿ ಮೊತ್ತಕ್ಕೆ ಹಿಂದಿ ರೈಟ್ಸ್ ಮಾರಾಟವಾಗಿದ್ದು 75 ಕೋಟಿಗೆ ಆಡಿಯೋ ರೈಟ್ಸ್ ಸೇಲ್ ಆಗಿರುವ ಬಗ್ಗೆ ಮಾತುಗಳು ಓಡಾಡುತ್ತಿವೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿರುವ ಪುಷ್ಪ-2 ಸಿನಿಮಾಗೆ ದೇವಿಶ್ರೀ ಪ್ರಸಾದ್ ಅವರು ಮ್ಯೂಸಿಕ್ ನೀಡಿದ್ದಾರೆ. ಹಾಗೇ ದೊಡ್ಡ ತಾರಾಬಳಗ ಅಲ್ಲು ಅರ್ಜುನ್ ಅವರ ಸಿನಿಮಾಗೆ ಸಾಥ್ ನೀಡಿದೆ.

ಒಟ್ನಲ್ಲಿ ಭಾರತದ ಮೂಲೆ ಮೂಲೆಯಲ್ಲೂ ಅಲ್ಲು ಅರ್ಜುನ್‌ಗೆ ಫ್ಯಾನ್ಸ್ ಇದ್ದಾರೆ. ಇವರೆಲ್ಲರು 'ಪುಷ್ಪ-2' ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಕೊಂಡಿದ್ದಾರೆ. ಹತ್ತಿರ ಹತ್ತಿರ 2 ವರ್ಷದಿಂದ ಪುಷ್ಪ-2 ಸಿನಿಮಾಗೆ ಕಾಯುತ್ತಿದ್ದಾರೆ. ಹೀಗಾಗಿಯೇ ಅವರಿಗೆ ಸಿಹಿಸುದ್ದಿ ನೀಡಲು ನಟ ಅಲ್ಲು ಅರ್ಜುನ್ ಹಗಲು-ರಾತ್ರಿ ಲೆಕ್ಕಿಸದೆ ಶೂಟಿಂಗ್ ನಡೆಸುತ್ತಿದ್ದಾರೆ. ಈಗ 'ಪುಷ್ಪ-2' ಚಿತ್ರದ ರಿಲೀಸ್ ಡೇಟ್ ಕೂಡ ಫೈನಲ್ ಆಗಿದ್ದು, ಫ್ಯಾನ್ಸ್ ಬೆಳ್ಳಿತೆರೆ ಮೇಲೆ ಸಿನಿಮಾ ಕಣ್ತುಂಬಿಕೊಳ್ಳಬಹುದು. ಈ ಮೂಲಕ ಮುಂದಿನ ಸ್ವಾತಂತ್ರ್ಯ ದಿನಾಚರಣೆ ವೇಳೆ ಅಲ್ಲು ಅರ್ಜುನ್ ಫ್ಯಾನ್ಸ್‌ಗೆ ಡಬಲ್ ಸಂಭ್ರಮ ಸಿಗಲಿದೆ.












Click it and Unblock the Notifications