ಡಿ-ಬಾಸ್ vs ಕಿಂಗ್ ಖಾನ್ vs ಪ್ರಭಾಸ್? ಇದಪ್ಪಾ ರಿಯಲ್ ಫೈಟ್ ಅಂದ್ರೆ!

ಕನ್ನಡಿಗರ ಎದುರು ಈ ವಾರ ಮತ್ತು ಮುಂದಿನ ವಾರ ಸಾಲು ಸಾಲು ಸಿನಿಮಾಗಳು ಕಣ್ಣೆದುರು ಅಪ್ಪಳಿಸಲಿವೆ. ಅದರಲ್ಲೂ ನಟ ದರ್ಶನ್ ಅವರ ಫ್ಯಾನ್ಸ್‌ಗೆ 'ಕಾಟೇರ' ಸಿನಿಮಾ ಸಂಭ್ರಮವನ್ನ ತಂದಿದ್ದರೆ, ಮತ್ತೊಂದು ಕಡೆ ಕನ್ನಡಿಗರೇ ಸೇರಿ ನಿರ್ಮಾಣ ಮಾಡುತ್ತಿರುವ 'ಸಲಾರ್' ಸಿನಿಮಾ ಕೂಡ ಕಿಕ್ ಕೊಡುತ್ತಿದೆ. ಇಷ್ಟೆಲ್ಲದರ ಜೊತೆಗೆ ಬಾಲಿವುಡ್ ಬಾದ್ ಶಾ & ಕಿಂಗ್ ಖಾನ್ ಅಂತಾ ಹೆಸರು ಪಡೆದಿರುವ ಶಾರುಖ್ ಖಾನ್ ಅಭಿನಯದ ಸಿನಿಮಾ 'ಡಂಕಿ' ಕೂಡ ರಿಲೀಸ್ ಆಗ್ತಿದೆ.

ಹೀಗೆ ಕೆಲವೇ ದಿನಗಳ ಅಂತರದಲ್ಲಿ ಸಾಲು ಸಾಲು ಸಿನಿಮಾಗಳು ಕರ್ನಾಟಕದಲ್ಲಿ ರಿಲೀಸ್ ಆಗಿ ಅಬ್ಬರಿಸಲು ಸಜ್ಜಾದ ಸಮಯದಲ್ಲಿ, ಡಿ-ಬಾಸ್ vs ಕಿಂಗ್ ಖಾನ್ vs ಪ್ರಭಾಸ್? ಅನ್ನೋ ಪ್ರಶ್ನೆ ಇದೀಗ ಫ್ಯಾನ್ಸ್ ಕಡೆಯಿಂದ ಕೇಳಿಬಂದಿದೆ. ಅದರಲ್ಲೂ ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ, 'ಕಾಟೇರ' ಸಿನಿಮಾ ಡಿಸೆಂಬರ್ 29ಕ್ಕೆ ರಿಲೀಸ್ ಆಗಲಿದೆ. ಅದಕ್ಕೂ ಕೆಲವೇ ದಿನಗಳ ಹಿಂದಷ್ಟೇ ಅಂದ್ರೆ ಡಿಸೆಂಬರ್ 22ಕ್ಕೆ 'ಸಲಾರ್' ಮತ್ತು 21ಕ್ಕೆ 'ಡಂಕಿ' ಕೂಡ ಬಿಡುಗಡೆ ಆಗಲಿದೆ. ಹೀಗೆ, ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿಯಾದ ಸಮಯದಲ್ಲೇ ಕನ್ನಡ ಚಿತ್ರಗಳ ಅಭಿಮಾನಿ ಬಳಗ ಹೇಳುತ್ತಿರುವುದು ಏನು ಗೊತ್ತಾ?

Discover The Possible Box Office Clash Between These Movies

ಬಾಕ್ಸ್ ಆಫಿಸ್ ಅಖಾಡದಲ್ಲಿ ಫೈಟಿಂಗ್?

ಹೌದು, ಇದೀಗ ಕೆಲವೇ ದಿನಗಳ ಅಂತರದಲ್ಲಿ ಕನ್ನಡಿಗರ 'ಕಾಟೇರ' & ಪ್ರಭಾಸ್ ಅಭಿನಯದ 'ಸಲಾರ್' ಮತ್ತು ಶಾರುಖ್ ಖಾನ್ ಅಭಿನಯದ 'ಡಂಕಿ' ರಿಲೀಸ್ ಆಗುತ್ತಿದೆ. ಹೀಗಾಗಿ ಬಾಕ್ಸ್ ಆಫಿಸ್ ಅಂದ್ರೆ ಗಲ್ಲಾ ಪೆಟ್ಟಿಗೆ ಫೈಟಿಂಗ್‌ಗೆ ಅಖಾಡ ಸಿದ್ಧವಾಗಿದೆ. ಒಂದು ಕಡೆ ಸಲಾರ್ ಮತ್ತು ಡಂಕಿ ಬಿಡುಗಡೆ ನಂತರ 'ಕಾಟೇರ' ಸಿನಿಮಾ ಭರ್ಜರಿಯಾಗಿ ಎಂಟ್ರಿ ಕೊಡುತ್ತಿದೆ. ಹೀಗಾಗಿಯೇ ಡಿ-ಬಾಸ್ ಸಿನಿಮಾ ದೊಡ್ಡ ಸದ್ದು ಮಾಡಲಿದೆ ಅಂತಿದ್ದಾರೆ ಅಭಿಮಾನಿಗಳು. ಇನ್ನೊಂದು ಕಡೆ ಬಾಲಿವುಡ್ ಸಿನಿಮಾಗಳು ಅಥವಾ ಪ್ಯಾನ್ ಇಂಡಿಯಾ ಸಿನಿಮಾಗಳು ಕನ್ನಡದ ಸಿನಿಮಾಗೆ ಏನೂ ಮಾಡೋಕೆ ಆಗಲ್ಲ ಅನ್ನೋ ಮಾತು ಕೇಳಿಬರ್ತಿವೆ.

ಯಾರೆಲ್ಲಾ ಇದ್ದಾರೆ ಶಾರುಖ್ ಜೊತೆ?

'ಡಂಕಿ' ಸಿನಿಮಾಗೆ ಡಿಫರೆಂಟ್ ಆಗಿ ಕಥೆ ಹೆಣೆದಿದ್ದಾರೆ ರಾಜ್‌ಕುಮಾರ್ ಹಿರಾನಿ. ಪಂಜಾಬ್‌ ಮತ್ತು ಸುತ್ತಮುತ್ತಲಿನ ಪ್ರದೇಶದಿಂದ ಕಾನೂನು ಬಾಹಿರವಾಗಿ ಕೆನಡಾ ಹಾಗೂ ಅಮೆರಿಕಗೆ ತೆರಳುವವರನ್ನ ಕೇಂದ್ರಿಕರಿಸಿ ಈ ಸಿನಿಮಾ ಮಾಡಲಾಗಿದೆ. ವಿದೇಶ, ಪ್ರೀತಿ, ಸ್ನೇಹ, ತಾಯ್ನಾಡು ಇಂತಹದ್ದೆ ಎಳೆ ಆಧರಿಸಿ ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ & ಕನಿಕಾ ಧಿಲ್ಲೋನ್ 'ಡಂಕಿ' ಸಿನಿಮಾ ಕಥೆ ಹೆಣೆದಿದ್ದಾರೆ. ಶಾರುಖ್ ಖಾನ್ ಜೊತೆಗೆ ಸ್ಟಾರ್ಸ್ ದಂಡೇ ಸಿನಿಮಾಗೆ ಸಾಥ್ ನೀಡಿದೆ.

ಮತ್ತೊಂದು ಕಡೆ ಸಲಾರ್ ಸಿನಿಮಾ ಕೂಡ ದೊಡ್ಡ ತಾರಾಬಳಗ ಹೊಂದಿದೆ. ಈ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಶ್ರುತಿ ಹಾಸನ್‌, ಪ್ರಮೋದ್ & ಮಧು ಗುರುಸ್ವಾಮಿ ನಟಿಸಿದ್ದಾರೆ. ದೊಡ್ಡ ಸ್ಟಾರ್ ಕಾಸ್ಟ್ ಈ ಸಿನಿಮಾದಲ್ಲಿ ಮಿಂಚಿದೆ. ಇದೇ ಎಲ್ಲಾ ಕಾರಣಗಳಿಂದಲೇ ಇಡೀ ಜಗತ್ತಿನಾದ್ಯಂತ ಸಲಾರ್ ನೋಡೋಕೆ ಫ್ಯಾನ್ಸ್ ಕಾಯುತ್ತಿದ್ದಾರೆ. ಇದರ ಜೊತೆಗೆ ಸಲಾರ್‌ಗೆ ಟಕ್ಕರ್ ಕೊಡಲು ಕನ್ನಡ ಸಿನಿಮಾ ಕಾಟೇರ ಕೂಡ ಸಜ್ಜಾಗಿದೆ. ಹೀಗಾಗಿ ಬಾಕ್ಸ್ ಆಫಿಸ್ ಅಖಾಡ ರಂಗೇರಿದೆ. ಗೆಲುವಿಗಾಗಿ ಭರ್ಜರಿ ಫೈಟ್ ಗ್ಯಾರಂಟಿ ಅಂತಿದ್ದಾರೆ ಫ್ಯಾನ್ಸ್. ಈ ನಡುವೆ ಫ್ಯಾನ್ಸ್‌ಗೆ ಟಿಕೆಟ್ ಪಡೆಯುವ ಚಿಂತೆ ಕೂಡ ಶುರುವಾಗಿದೆ. ಅದರಲ್ಲೂ ಕಾಟೇರ ಸಿನಿಮಾ ಹೊಸವರ್ಷದ ಸಮಯದಲ್ಲೇ ರಿಲೀಸ್ ಆಗುತ್ತಿರುವುದು ಮತ್ತಷ್ಟು ಸಂಭ್ರಮ ತರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+