Bigg Boss: ಬಿಗ್‌ಬಾಸ್ ಮನೆಯಲ್ಲಿ ಹಾವುಗಳ ಬಗ್ಗೆ ಸ್ನೇಕ್‌ ಶ್ಯಾಮ್‌ ತೆರೆದಿಟ್ಟರು ವಿಸ್ಮಯಕಾರಿ ಮಾಹಿತಿ!

ಬಿಗ್ ಬಾಸ್ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗ್ತಿದ್ದು, ಅದ್ರಲ್ಲೂ ಕನ್ನಡ ಬಿಗ್ ಬಾಸ್ ಮನೆಯೇ ಈ ಬಾರಿ ಸಿಕ್ಕಾಪಟ್ಟೆ ಸ್ಪೆಷಲ್ ಆಗಿದೆ. ಈ ಪೈಕಿ ಕನ್ನಡ ನಾಡಿನ ಉರಗ ರಕ್ಷಕ ಸ್ನೇಕ್ ಶ್ಯಾಮ್ ಕೂಡ ಕಮಾಲ್ ಮಾಡಲು ಬಿಗ್ ಬಾಸ್ ಮನೆ ಸೇರಿದ್ದಾರೆ. ಹೀಗೆ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಹಾವುಗಳ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಹೇಳಿದ್ದಾರೆ. ಹಾಗಾದರೆ ಹಾವುಗಳ ಕುರಿತು ಸ್ನೇಕ್ ಶ್ಯಾಮ್ ತಮ್ಮ ಅನುಭವದ ಮೂಲಕ ಬಿಚ್ಚಿಟ್ಟ ಭಯಾನಕ ಕಹಾನಿ ಎಂತಹದ್ದು?

ಹೌದು ಹತ್ತಾರು ಸಾವಿರ ಹಾವು ರಕ್ಷಿಸಿ ಸುರಕ್ಷಿತ ಜಾಗಕ್ಕೆ ಬಿಟ್ಟಿರುವ ಅನುಭವ ಹೊಂದಿರುವ ಸ್ನೇಕ್‌ ಶ್ಯಾಮ್‌ ಈ ಬಾರಿ ಬಿಗ್‌ಬಾಸ್‌ ಮನೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಪ್ರಾಣಿ ಪ್ರಪಂಚದ ಕುರಿತಾಗಿ ಸ್ನೇಕ್ ಶ್ಯಾಮ್ ಅವರಿಗೆ ಇರುವ ಜ್ಞಾನ ಬಹುದೊಡ್ಡದು. ಅದರಲ್ಲೂ ಹಾವುಗಳ ಬಗ್ಗೆ ಸ್ನೇಕ್ ಶ್ಯಾಮ್ ಹೊಂದಿರುವ ಜ್ಞಾನ ದೇಶಕ್ಕೇ ಆಸ್ತಿ. ಹಲವು ದಶಕಗಳಿಂದಲೂ ಹಾವು ರಕ್ಷಣೆಯನ್ನೇ ತಮ್ಮ ಕಾಯಕ ಮಾಡಿಕೊಂಡಿರುವ ಶ್ಯಾಮ್, ಮೈಸೂರು ಮಾತ್ರವಲ್ಲ ದೇಶಾದ್ಯಂತ ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದ್ದಾರೆ. ಹೀಗೆ ತಮ್ಮ ಅನುಭವದ ಆಧಾರದಲ್ಲಿ ಈಗ ಭಯಾನಕ ಸತ್ಯ ಹೇಳಿದ್ದಾರೆ.

Discover how Snake information shared at Kannada Bigg Boss house

ಅಷ್ಟಕ್ಕೂ ಬಿಗ್ ಬಾಸ್ ಮನೆ ಸ್ಪರ್ಧಿಗಳು ಸ್ವಿಮ್ಮಿಂಗ್ ಪೂಲ್ ಬಳಿ ಆರಾಮವಾಗಿ ಕೂತು, ಹರಟೆ ಹೊಡೆಯುತ್ತಿದ್ದರು. ಆಗ ಹಾವುಗಳ ಬಗ್ಗೆ ತಮ್ಮ ಜ್ಞಾನ ಬಂಡಾರ ಬಿಚ್ಚಿಟ್ಟರು ಸ್ನೇಕ್ ಶ್ಯಾಮ್‌. ಹೀಗೆ ಸ್ನೇಕ್ ಶ್ಯಾಮ್‌ ಹೇಳಿದ ಸಂಗತಿ ಕೇಳಿ, ಬಿಗ್ ಬಾಸ್ ಮನೆಯ ಇನ್ನುಳಿದ ಸ್ಪರ್ಧಿಗಳು ಬೆಕ್ಕಸ ಬೆರಗಾಗಿ ಕೂತರು. ಹಾಗಾದರೆ ಹಾವುಗಳ ಬಗ್ಗೆ ಸ್ನೇಕ್ ಶ್ಯಾಮ್ ಹೇಳಿದ ಕಹಾನಿ ಏನು? ಅವರ ಜೀವನದಲ್ಲಿ ಹಾವುಗಳ ಬಗ್ಗೆ ಅದೆಷ್ಟು ಜ್ಞಾನ ಹೊಂದಿದ್ದಾರೆ ಗೊತ್ತಾ?

ಹಾವು ಮೊಟ್ಟೆ ಇಡುವುದು ಹೇಗೆ ಗೊತ್ತಾ?

ನಮಗೆಲ್ಲಾ ಗೊತ್ತಿರುವಂತೆ ಹಾವುಗಳು ಮೊಟ್ಟೆ ಇಟ್ಟು, ಮರಿ ಮಾಡುತ್ತವೆ. ಹೀಗೆ ಹಾವುಗಳಲ್ಲಿ 45-65 ದಿನಗಳ ಒಳಗೆ ಮೊಟ್ಟೆ ಬೆಳವಣಿಗೆ ಆಗುತ್ತದೆ. ಈ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಕೂತು ಮಾತು ಶುರುಮಾಡಿದ ಸ್ನೇಕ್ ಶ್ಯಾಮ್, ಪ್ರಾಣಿಗಳಲ್ಲಿ ಫೈಟಿಂಗ್ ಆಗೋದು ಈಟಿಂಗ್ & ಮೆಟಿಂಗ್ ಎರಡಕ್ಕೇನೇ. ನಮ್ ಥರ ಅಲ್ಲ ನಾವು ಎಲ್ಲದಕ್ಕೂ ಹೊಡೆದಾಡುತ್ತೇವೆ. ಮೆಟಿಂಗ್ ಮುಗಿದ ಮೇಲೆ ಗಂಡು ಹಾವು ಅದರ ಪಾಡಿಗೆ ಅದು ಹೋಗುತ್ತದೆ. ಹೆಣ್ಣು ಹಾವು ಮೊಟ್ಟೆ ಡೆವಲೆಪ್ ಆದ ನಂತರ ಸರಿಯಾದ ಜಾಗ ಹುಡುಕಿಕೊಂಡು ಹೋಗಿ ಮೊಟ್ಟೆ ಇಡುತ್ತದೆ ಎಂದರು ಸ್ನೇಕ್ ಶ್ಯಾಮ್. ಅಲ್ಲದೆ ಹಾವು ಮೊಟ್ಟೆ ಇಡುವಾಗ ಅನುಸರಿಸುವ ಕ್ರಮದ ಬಗ್ಗೆಯೂ ತಿಳಿಸಿದರು.

Discover how Snake information shared at Kannada Bigg Boss house

ಬಿಸಿ ನೋಡಿ ಮೊಟ್ಟೆ ಇಡುವ ಹಾವು!

ಅಲ್ಲದೆ ಹಾವು ಮೊಟ್ಟೆ ಇಡುವ ಜಾಗವನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತೆ ಅಂತಾ ಹೇಳುತ್ತಾ, ಹಾವು ಮೊಟ್ಟೆ ಇಡುವಾಗ ಟೆಂಪರೇಚರ್ ಸರಿಯಾಗಿರುವ ಜಾಗ ಸಿಗುವ ತನಕ ಕಾಯುತ್ತೆ. ನಮ್ ಥರ 9 ತಿಂಗಳು ಆಯ್ತು, ಹೊಟ್ಟೆ ನೋವು ಶುರುವಾಯ್ತು. ಡಾಕ್ಟರ್ ಹತ್ತಿರ ಹೋಗ್ಬೇಕು ಅಂತೆಲ್ಲ ಮಾಡಲ್ಲ. ಸರಿಯಾದ ಜಾಗ ಸಿಗುವ ತನಕ ಮೊಟ್ಟೆ ಹೊಟ್ಟೆಯಲ್ಲಿ ಇಟ್ಟುಕೊಂಡಿರುತ್ತದೆ. ಮೊಟ್ಟೆ ಇಟ್ಟ ನಂತರ ಕೆಲ ಜಾತಿ ಹಾವುಗಳು ಸುರುಳಿ ಸುತ್ಕೊಂಡು ಮೊಟ್ಟೆ ಮೇಲೆ ಕಾವು ಕೊಡ್ತವೆ. ಇನ್ನು ಕೆಲ ಜಾತಿ ಹಾವುಗಳು ಮೊಟ್ಟೆಗಳನ್ನಿಟ್ಟು ಕಾಯುತ್ತವೆ. ಮೊಟ್ಟೆ ಇಟ್ಟ 45-65 ದಿನದಲ್ಲಿ ಮರಿಗಳು ಹೊರಗಡೆ ಬಂದು ಜಗತ್ತು ನೋಡುತ್ತವೆ ಎಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ವಿವರಿಸಿದರು.

ಮರಿ ಹಾಕುವ ಹಾವುಗಳು ಯಾವುವು?

ಇನ್ನು ಎಲ್ಲಾ ಜಾತಿಯ ಹಾವು ಮೊಟ್ಟೆ ಇಟ್ಟರೆ 3 ಜಾತಿ ಹಾವು ಮರಿ ಹಾಕತ್ತವೆ ಅವು ಯಾವುವು ಅಂದ್ರೆ ಹಸಿರು ಹಾವು, ಮಣ್ಣು ಮುಕ್ಕ ಹಾವು ಮತ್ತು ಮಂಡಲದ ಹಾವು. ಈ 3 ಜಾತಿ ಹಾವುಗಳು ಮರಿ ಹಾಕತ್ತವೆ. ಆದ್ರೆ ಇವು ಸಸ್ತನಿ ಅಲ್ಲ, ಸಸ್ತನಿ ಅಂದ್ರೆ ಮರಿ ಹಾಕಿ ಮೊಲೆಹಾಲು ಕುಡಿಸಬೇಕು. ಈ ಹಾವುಗಳು ಹಾಗೆ ಮಾಡಲ್ಲ ಎಂದು ಸ್ನೇಕ್ ಶ್ಯಾಮ್ ಮಾಹಿತಿ ನೀಡಿದರು. ಅಲ್ಲದೆ, ಒಂದು ವಿಷಯ ಹೇಳ್ಬೇಕು ಹಾವಿನ ಪ್ರತಿ ಮರಿಯು ಸಂಪೂರ್ಣ ಸ್ವಾವಲಂಬಿಗಳಾಗಿ ಇರ್ತವೆ. ನಮ್ಮ ಥರ ಹುಟ್ಟಿದ ಮೇಲೆ ಬೇರೆಯವರ ಮೇಲೆ ಅವಲಂಬನೆ ಆಗಿರಲ್ಲ. ಅವುಗಳ ಪಾಡಿಗೆ ಅವು ಆಹಾರವನ್ನ ಹುಡುಕಿಕೊಂಡು ಹೋಗುತ್ತಿರುತ್ತವೆ. ತಾಯಿ-ತಂದೆಯ ಮೇಲೆ ಅವಲಂಬನೆ ಮಾಡುವುದೇ ಇಲ್ಲ ಎಂದು ಮಾಹಿತಿ ನೀಡಿದರು.

Discover how Snake information shared at Kannada Bigg Boss house

ಗಂಡು ಹಾವು ಇಲ್ಲದೆ ಸಂತಾನೋತ್ಪತ್ತಿ!

ಎಲ್ಲ ಜಾತಿ ಹಾವುಗಳಲ್ಲಿ ಗಂಡು ಜಾತಿ ಹಾವುಗಳು ಇರುತ್ತವೆ . ಆದ್ರೂ ಒಂದೇ ಒಂದು ಜಾತಿಯ ಹಾವುಗಳಲ್ಲಿ ಗಂಡು ಹಾವು ಇರಲ್ಲ. ಹೆಣ್ಣು ಹಾವೇ ಸೆಲ್ಫ್‌ ರಿಪ್ರೊಡಕ್ಷನ್ ಮಾಡಿಕೊಳ್ಳುತ್ತೆ. ಇನ್ನು ಆ ಜಾತಿಯ ಹಾವುಗಳನ್ನು ನೀವೆಲ್ಲರೂ ನೋಡಿರ್ತೀರಾ, ಎಲ್ಲರ ಅಡುಗೆ ಮನೆ, ಬಚ್ಚಲು ಮನೆ, ಟಾಯ್ಲೆಟ್‌ ಪ್ರದೇಶದಲ್ಲಿ ಓಡಾಡ್ತಿರುತ್ತೆ, ಪಿಣಿ ಪಿಣಿ ಪಿಣಿ ಅಂತ. ಎರೆಹುಳದ ಥರ ಇರತ್ತೆ. ಅದು ಭಾರತದ ಅತಿ ಸಣ್ಣ ಹಾವು. ಅದು ರಿಪ್ರೊಡಕ್ಷನ್‌ ಅನ್ನು ಅದೇ ಮಾಡಿಕೊಳ್ಳುತ್ತದೆ. ಎಲ್ಲಾ ಜಾತಿ ಹಾವುಗಳೂ ಬಿಲಗಳಲ್ಲಿ, ಪೊಟರೆಗಳಲ್ಲಿ ಮೊಟ್ಟೆ ಇಟ್ಟರೆ, ಒಂದೇ ಒಂದು ಜಾತಿ ಹಾವು ಗೂಡು ಕಟ್ಟಿ ಮೊಟ್ಟೆ ಇಡುತ್ತದೆ ಎಂದು ಮತ್ತೊಂದು ವಿಸ್ಮಯಕಾರಿ ಮಾಹಿತಿ ನೀಡಿದರು. ಎಲೆಗಳಿಂದ ಗೂಡು ಕಟ್ಟಿ ಮೊಟ್ಟೆ ಇಡುತ್ತದೆ. ಅದೇ ಕಿಂಗ್ ಕೋಬ್ರಾ ಅಥವಾ ಕಾಳಿಂಗ ಸರ್ಪ ಎಂದು ಸ್ನೇಕ್ ಶ್ಯಾಮ್ ತಿಳಿಸಿದರು.

ಒಟ್ನಲ್ಲಿ ಸ್ನೇಕ್ ಶ್ಯಾಮ್ ಅವರು ತಮ್ಮ ಅನುಭವದ ಆಧಾರದಲ್ಲಿ ಬಿಗ್ ಬಾಸ್ ಮನೆಯಲ್ಲೂ ಹಾವುಗಳ ಬಗ್ಗೆ ಮಾಹಿತಿ ಹಂಚುತ್ತಿದ್ದಾರೆ. ಹಾಗೇ ಈ ಮೂಲಕ ಹಾವುಗಳ ರಕ್ಷಣೆಗೆ ಜಾಗೃತಿಯ ಮೂಡಿಸಲು ಸ್ನೇಕ್ ಶ್ಯಾಮ್ ಅವರು ಮುಂದಾಗಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಹೀಗೆ ಸ್ನೇಕ್ ಶ್ಯಾಮ್ ಹಾವುಗಳ ಬಗ್ಗೆ ಮಾಹಿತಿ ನೀಡುತ್ತಿದ್ದರೆ, ಸ್ಪರ್ಧಿಗಳು ಮೈಮರೆತು ಕೇಳುತ್ತಿದ್ದರು. ಈ ಮೂಲಕ ಬಿಗ್ ಬಾಸ್ ಮನೆ ಮನರಂಜನೆಗೆ ಮಾತ್ರ ಸೀಮಿತವಾಗದೆ, ಮಾಹಿತಿಗೂ ವೇದಿಕೆ ಒದಗಿಸುತ್ತಿರುವುದು ವಿಶೇಷ ಅಂತಿದ್ದಾರೆ ವೀಕ್ಷಕ ಪ್ರಭುಗಳು. ಅದರಲ್ಲೂ ಹಾವುಗಳ ಕುರಿತಾಗಿ ಸ್ನೇಕ್ ಶ್ಯಾಮ್ ನೀಡಿದ ಮಾಹಿತಿ ಮತ್ತಷ್ಟು ವಿಸ್ಮಯ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+