ದರ್ಶನ್ ಇಚ್ಛೆಯಂತೆ ಈ ದಿನವೇ ನಡೆಯಲಿದೆ ತರುಣ್‌ ಸುಧೀರ್‌-ಸೋನಲ್‌ ಮದುವೆ

ಬೆಂಗಳೂರು, ಜುಲೈ 19: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ನಟ ತರುಣ್‌ ಸುಧೀರ್‌ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನುವ ಸುದ್ದಿ ಕೆಲ ದಿನಗಳಿಂದ ಎಲ್ಲೆಡೆ ಹರಿದಾಡುತ್ತಿದೆ. ಇದೀಗ ಈ ಸುದ್ದಿ ಖಚಿತವಾಗಿದ್ದು, ತರುಣ್ ಸುಧೀರ್ ನಟಿ ಸೋನಲ್ ಮೊಂಥೆರೋ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಆಗಸ್ಟ್‌ನಲ್ಲಿ ಈ ಜೋಡಿ ಹೊಸ ಬಾಳಿಗೆ ಕಾಲಿಡಲಿದ್ದು, ದಿನಾಂಕ ಕೂಡ ನಿಗದಿಯಾಗಿದೆ. ಗುರು-ಹಿರಿಯರ ಸಮ್ಮುಖದಲ್ಲಿ ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ಅವರ ಮದುವೆ ಇದೇ ಆಗಸ್ಟ್ 10 ಹಾಗೂ 11ರಂದು ಜರುಗಲಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.

Director Tharun Sudhir And Sonal Monteiro Marriage Held On August 10 And 11

ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ವಿವಾಹದ ಬಗ್ಗೆ ಈ ಹಿಂದೆಯೇ ತರುಣ್‌ ಸುಧೀರ್‌ ಅವರ ತಾಯಿ ಮಾಲತಿ ಖಚಿತ ಪಡಿಸಿದ್ದರು. ತರುಣ್ ಸುಧೀರ್‌ ಹಾಗೂ ಸೊಲಾನ್‌ ಅವರ ಮದುವೆ ಆಗುತ್ತದೆ. ಆದರೆ ದಿನಾಂಕ ಎಲ್ಲಾ ನಿಗದಿಯಾಗಿಲ್ಲ. ಸೊಲಾನ್‌ ಅವರ ಸಂಬಂಧಿಕರೆಲ್ಲಾ ದುಬೈನಿಂದ ಬರಬೇಕು. ಅವರೆಲ್ಲಾ ಮಾತನಾಡಬೇಕು. ಅದೆಲ್ಲಾ ಆದ ಮೇಲೆ ಅಂತಿಮ ನಿರ್ಧಾರವಾಗುತ್ತದೆ. ನಮ್ಮ ಮನೆಗೆ ಸೊಸೆಯಾಗಿ ಯಾರು ಬಂದರೂ ನನಗೆ ಖುಷಿ. ನನ್ನ ಮಗನಿಗೆ ಹೆಂಡತಿಯಾಗಿ ಯಾರು ಬಂದರೂ ನನಗೆ ಸಂತೋಷ ಎಂದಿದ್ದರು.

ಇನ್ನು ತರುಣ್ ಮತ್ತು ಸೋನಲ್ ಅವರ ಮದುವೆಗೆ ಮುನ್ನುಡಿ ಬರೆದಿದ್ದೇ ನಟ ದರ್ಶನ್‌ ಅಂತೆ. ಹೀಗಾಗಿ ಸದ್ಯ ದರ್ಶನ್‌ ಜೈಲಿನಲ್ಲಿರುವ ಕಾರಣ ತರುಣ್ ಮದುವೆ ದಿನಾಂಕ ಮುಂದಕ್ಕೆ ಹಾಕಲು ಮುಂದಾಗಿದ್ದರಂತೆ. ಆದರೆ ತನ್ನ ಕಾರಣಕ್ಕೆ ತರುಣ್ ಮದುವೆ ದಿನಾಂಕ ಮುಂದೂಡಬಾರದು ಎಂದು ಪತ್ನಿ ವಿಜಯಲಕ್ಷ್ಮಿ ಕಡೆಯಿಂದ ದರ್ಶನ್ ಹೇಳಿ ಕಳುಹಿಸಿದ್ದರು. ತರುಣ್ ಸುಧೀರ್ ಜೈಲಿಗೆ ಭೇಟಿ ಕೊಟ್ಟ ವೇಳೆ ಕೂಡ ದರ್ಶನ್ ಇದನ್ನೇ ಹೇಳಿ ಕಳುಹಿಸಿದ್ದಂತೆ. ಹೀಗಾಗಿ ಕುಟುಂಬಸ್ಥರು ಹಾಗೂ ದರ್ಶನ್ ಒತ್ತಾಯ ಮೇರೆಗೆ ಆಗಸ್ಟ್‌ 10,11ರಂದೇ ತರುಣ್-ಸೋನಲ್ ಮದುವೆ ನಡೆಯಲಿದೆ.

Director Tharun Sudhir And Sonal Monteiro Marriage Held On August 10 And 11

ತರುಣ್- ಸೋನಲ್ ಇಬ್ಬರ ಲವ್ ಸ್ಟೋರಿ ಆರಂಭವಾಗಿದ್ದು ಹೇಗೆ?

ತರುಣ್ ನಿರ್ದೇಶನದ 'ರಾಬರ್ಟ್' ಚಿತ್ರದಲ್ಲಿ ಸೋನಲ್ ನಟಿಸಿದ್ದರು. 'ರಾಬರ್ಟ್' ಚಿತ್ರದಲ್ಲಿ ವಿನೋದ್ ಪ್ರಭಾಕರ್(ರಾಘವ) ಜೋಡಿ ತನು ಆಗಿ ಸೋನಲ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ಶೂಟಿಂಗ್ ಸಮಯದಲ್ಲೇ ತರುಣ್- ಸೋನಲ್ ನಡುವೆ ಪ್ರೀತಿ ಹುಟ್ಟಿತ್ತು ಎಂದು ಆಪ್ತರು ಹೇಳುತ್ತಿದ್ದಾರೆ. ನಟ ದರ್ಶನ್ ತರುಣ್ ಸುಧೀರ್‌ಗೆ ಮದುವೆ ಮಾಡಿಸಬೇಕು ಎಂದು ಹೇಳುತ್ತಿದ್ದರು. ಹಾಗಾಗಿ ಶೂಟಿಂಗ್‌ ಸೆಟ್‌ನಲ್ಲಿ ತರುಣ್- ಸೋನಲ್ ಇಬ್ಬರನ್ನು ತಮಾಷೆಯಾಗಿ ರೇಗಿಸುತ್ತಿದ್ದರು, ಇದೇ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+