ಸುದೀಪ್ ಅಭಿಮಾನಿಗಳಿಗೆ ಹೊಸ ವರ್ಷದ ದಿನವೇ ಸರ್ಪ್ರೈಸ್ ಕೊಡ್ತೀನಿ: ನಿರ್ದೇಶಕ ಪ್ರೇಮ್
ನಟ ಕಿಚ್ಚ ಸುದೀಪ್ ಅವರ "ಮಾರ್ಕ್" ಸಿನಿಮಾ ಈ ಕ್ರಿಸ್ಮಸ್ಗೆ ರಿಲೀಸ್ ಆಗಿ ಥಿಯೇಟರ್ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇದೇ ಸಿನಿಮಾದ "ಸೈಕೋ ಸೈತಾನ್" ಹಾಗೂ "ಮಸ್ತ್ ಮಲೈಕಾ" ಹಾಡುಗಳು ಟ್ರೆಂಡಿಂಗ್ನಲ್ಲಿವೆ. ಇದರ ನಡುವೆ ಹೊಸ ವರ್ಷದಂದೇ ಕಿಚ್ಚನ ಅಭಿಮಾನಿಗಳಿಗೆ ಭರ್ಜರಿ ಸಿಹಿಸುದ್ದಿಯೊಂದು ಕಾದಿದೆ. ಈ ಬಗ್ಗೆ ನಿರ್ದೇಶಕ ಪ್ರೇಮ್ ಮಹತ್ವದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಮಾರ್ಕ್ ಸಂಭ್ರಮದಲ್ಲಿರುವ ಸುದೀಪ್ ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ನೀಡುವುದಾಗಿ ಪ್ರೇಮ್ ಹೇಳಿದ್ದಾರೆ.
ನಿರ್ದೇಶಕ ಪ್ರೇಮ್ ಸದ್ಯ ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷಿತ ಸಿನಿಮಾ ಆಗಿರುವ ಕೆಡಿ ಸಿನಿಮಾ ಬಿಡುಗಡೆಗೆ ದೊಡ್ಡಮಟ್ಟದಲ್ಲಿ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದ್ದು, ನಿರೀಕ್ಷೆ ಕೂಡ ಹೆಚ್ಚಾಗಿದೆ. ಕೆಡಿ ಸಿನಿಮಾದಲ್ಲಿ ಕಿಚ್ಚ ಸುದೀಪ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಈ ಬಗ್ಗೆ ಸುದೀಪ್ ಅವರನ್ನು ಕೇಳಿದಾಗ ಸ್ಪಷ್ಟ ಉತ್ತರ ನೀಡಿರಲಿಲ್ಲ.

ಕೆಡಿಯಲ್ಲಿ ಕಿಚ್ಚನ ಫಸ್ಟ್ ಲುಕ್
ಕೆಡಿ ನಿರ್ದೇಶಕ ಜೋಗಿ ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಶೂಟಿಂಗ್ ಸೆಟ್ನ ಫೋಟೋಗಳನ್ನು ಹಂಚಿಕೊಂಡಿದ್ದರು. ಕಿಚ್ಚ ಸುದೀಪ್, ಧ್ರುವ ಸರ್ಜಾ ಹಾಗೂ ಪ್ರೇಮ್ ಇರುವ ಫೋಟೋ ವೈರಲ್ ಆಗಿದ್ದವು. ಜೊತೆಗೆ "ಇನ್ನು ಗಾಸಿಪ್ಗಳಿಲ್ಲ... ನೀವು ಅಧಿಕೃತವಾಗಿ ನಮ್ಮವರು, ಲವ್ ಯು ಮೈ ಡಾರ್ಲಿಂಗ್ ಕಿಚ್ಚ ಸುದೀಪ್" ಎಂದು ಪ್ರೇಮ್ ಬರೆದುಕೊಂಡಿದ್ದರು. ಈ ಮೂಲಕ ಸುದೀಪ್ ಅವರ ಪಾತ್ರವನ್ನು ಪ್ರೇಮ್ ದೃಢಪಡಿಸಿದ್ದರು. ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಮಾಹಿತಿ ಇದ್ದು, ಹೈದರಾಬಾದ್ನಲ್ಲಿ ನಡೆದ ಶೂಟಿಂಗ್ನಲ್ಲಿ ಭಾಗಿಯಾಗಿದ್ದರು. ಸಿನಿಮಾ ತಂಡ ಸಾಮಾಜಿಕ ಜಾಲತಾಣಗಳಲ್ಲಿ ಶೂಟಿಂಗ್ ಸ್ಪಾಟ್ನ ಫೋಟೋ ಹಂಚಿಕೊಂಡಿದ್ದರಿಂದ ಕುತೂಹಲ ಹೆಚ್ಚಾಗಿತ್ತು.
ಕೊನೆಗೂ ಕೆಡಿ ಸಿನಿಮಾದಲ್ಲಿ ಕಿಚ್ಚ ನಟಿಸುತ್ತಿರುವುದು ಕನ್ಫರ್ಮ್ ಆದರೂ ಸುದೀಪ್ ಅವರ ಪಾತ್ರವೇನು? ಎಂದು ಇಲ್ಲಿವರೆಗೆ ರಿವೀಲ್ ಆಗಿಲ್ಲ. ಸುದೀಪ್ ಫ್ಯಾನ್ಸ್ ಕೂಡ ಅಪ್ಡೇಟ್ ಕೊಡಿ ಎಂದು ಪ್ರೇಮ್ ಹಿಂದೆ ಬಿದ್ದಿದ್ದರು. ಕೊನೆಗೂ ಪ್ರೇಮ್ ಸುದೀಪ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟೇಬಿಟ್ಟಿದ್ದಾರೆ. ಈ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವ ಪ್ರೇಮ್, ಖಂಡಿತವಾಗಿಯೂ ಕೆಡಿ ಸಿನಿಮಾದಲ್ಲಿ ಸುದೀಪ್ ಅವರ ಫಸ್ಟ್ ಲುಕ್ ಹೊಸ ವರ್ಷಕ್ಕೆ ರಿಲೀಸ್ ಮಾಡ್ತೀನಿ ಎಂದಿದ್ದಾರೆ. ಹೀಗಾಗಿ ಕೆಡಿಯಲ್ಲಿ ಕಿಚ್ಚನ ಲುಕ್ ಹೇಗಿರಲಿದೆ ಎಂದು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಬಹುಭಾಷೆಗಳಲ್ಲಿ ಕೆಡಿ
ಕೆಡಿ ಸಿನಿಮಾದ ಹಾಡುಗಳು ಈಗಾಗಲೇ ಹಿಟ್ ಆಗಿವೆ. ಸೆಟ್ಟಾಗಲ್ಲ ಹೋಗೇ ನಂಗೂ ನಿಂಗು, "ಅಣ್ತಮ್ಮ ಜೋಡೆತ್ತು ಕಣೋ" ಎಂಬ ಹಾಡುಗಳು ಟ್ರೆಂಡಿಂಗ್ನಲ್ಲಿವೆ. ಕೆಡಿ (KD: The Devil) ಸಿನಿಮಾವನ್ನು ಜೋಗಿ ಪ್ರೇಮ್ ನಿರ್ದೇಶಿಸಿದ್ದು, ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ಚಿತ್ರವಾಗಿದೆ. ಇದು 1970ರ ಬೆಂಗಳೂರಿನ ಭೂಗತ ಲೋಕದ ಕಥೆ ಎನ್ನಲಾಗಿದೆ. ಬಾಲಿವುಡ್ನ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಸೇರಿದಂತೆ ದೊಡ್ಡ ತಾರಾಬಳಗ ಈ ಸಿನಿಮಾದಲ್ಲಿದೆ. 2026ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ. ಕಿಚ್ಚ ಸುದೀಪ್ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದು, ಚಿತ್ರಕ್ಕೆ ದೊಡ್ಡ ಮೈಲೇಜ್ ಸಿಕ್ಕಂತಾಗಿದೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications