ರಶ್ಮಿಕಾ ಮಂದಣ್ಣ ಕಾಲು ಪೆಟ್ಟಾಗಿದ್ದರೂ ಪ್ರಚಾರಕ್ಕೆ ಬರ್ತಾರೆ.. ಆದರೆ ರಚಿತಾ ಬರಲಿಲ್ಲ; ನಿರ್ದೇಶಕ ಗರಂ
ನಟಿ ರಚಿತಾ ರಾಮ್ ಅವರು ಸಂಜು ವೆಡ್ಸ್ ಗೀತಾ 2 ಸಿನಿಮಾದ ಪ್ರಚಾರಕ್ಕೆ ಬಂದಿಲ್ಲ ಎಂಬುದು ವಿವಾದಕ್ಕೆ ಕಾರಣ ಆಗಿದೆ. ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ನಾಯಕಿಯಾಗಿ ನಟಿ ರಚಿತಾ ರಾಮ್ ಅವರು ನಟಿಸಿದ್ದಾರೆ. ಶ್ರೀನಗರ ಕಿಟ್ಟಿ ಜೊತೆ ರಚಿತಾ ರಾಮ್ ಅವರು ಅಭಿನಯಿಸಿದ್ದಾರೆ. ಈ ಸಿನಿಮಾಗೆ ನಾಗಶೇಖರ್ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಬಿಡುಗಡೆ ಆಯಿತು. ಇದೀಗ ರಚಿತಾ ರಾಮ್ ವಿರುದ್ಧ ಚಿತ್ರತಂಡ ತಿರುಗಿ ಬಿದ್ದಿದೆ. ನಟಿಯ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ. ಸಿನಿಮಾದ ಪ್ರಚಾರಕ್ಕೆ ಬಾರದೇ ರಚಿತಾ ರಾಮ್ ಅವರು ಅಸಹಕಾರ ತೋರುತ್ತಿದ್ದಾರೆ ಎಂದು ನಿರ್ದೇಶಕ ನಾಗಶೇಖರ್ ನಟ ಶ್ರೀನಗರ ಕಿಟ್ಟಿ ಅವರು ಆರೋಪಿಸಿದ್ದಾರೆ.
ಈ ಬಗ್ಗೆ ಖಾಸಗಿ ಸುದ್ದಿ ವಾಹಿನಿಯಲ್ಲಿ ನಿರ್ದೇಶಕ ನಾಗಶೇಖರ್ ಅವರು ಮಾತನಾಡಿ,'ಸುದೀಪ್, ದರ್ಶನ್, ನಾಗಾರ್ಜುನ, ಸಲ್ಮಾನ್ ಖಾನ್, ಶಾರುಖ್ ಖಾನ್ ಅವರಂತಹ ದೊಡ್ಡ ಕಲಾವಿದರು ಪ್ರಚಾರ ಮಾಡುತ್ತಾರೆ. ರಶ್ಮಿಕಾ ಮಂದಣ್ಣ ಕಾಲು ಪೆಟ್ಟಾಗಿದ್ದರೂ ಕೂಡ ಬಂದು ಪ್ರಮೋಷನ್ ಮಾಡುತ್ತಾರೆ. ಈ ಕಾಲಘಟ್ಟದಲ್ಲಿ ರಚಿತಾ ರಾಮ್ 3 ದಿನ ಬಿಡುವು ಮಾಡಿಕೊಂಡು ನಮ್ಮ ಸಿನಿಮಾದ ಪ್ರಚಾರಕ್ಕೆ ಬರಬಹುದಿತ್ತು ಎಂದು ರಚಿತಾ ರಾಮ್ ವಿರುದ್ಧ ನಿರ್ದೇಶಕ ನಾಗಶೇಖರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾನು ನಿಮ್ಮ ಫ್ರೀ ಟೈಮ್ ಕೊಡಿ ಅಂತ ಕೇಳಿದ್ದೆ. ನಮ್ಮಿಂದ ಏನಾದ್ರೂ ತಪ್ಪಾಗಿದಿಯಾ, ನಮ್ಮಿಂದ ಆಗೌರವವಾಗಿದ್ಯಾ? ನಾವು ಸಂಭಾವನೆಯನ್ನ ಕೊಟ್ಟಿಲ್ವಾ? ಈ ಪ್ರಶ್ನೆಗಳಿಗೆ ಉತ್ತರ ಬೇಕು. ಆ ಸ್ಪಷನೆಯನ್ನ ರಚಿತಾ ರಾಮ್ ಅವರು ಫಿಲ್ಮ್ ಚೇಂಬರ್‌ಗೆ ಬಂದು ಉತ್ತರ ಕೊಡಬೇಕು. ನಾವು ಅವರಿಗೆ ಕ್ಷಮೆ ಕೇಳಿ ಅಂತ ಹೇಳ್ತಾ ಇಲ್ಲ. ಬ್ಯಾನ್ ಮಾಡಿ ಅಂತ ಹೇಳ್ತಾ ಇಲ್ಲ. ಬಂದು ಸ್ಪಷ್ಟನೆ ಕೊಡ್ಬೇಕು . ಈ ರೀತಿ ಮತ್ತೆ ಯಾವ ನಿರ್ದೇಶಕರಿಗೆ ಆಗಬಾರ್ದು ಎಂದು ಹೇಳಿದರು.
ಕಠಿಣ ಕ್ರಮ ಅಂದ್ರೆ, ಅಗ್ರಿಮೆಂಟ್ ಪೇಪರ್ ಗೆ ಸಹಿ ಹಾಕಬೇಕು. ಅಗ್ರಿಮೆಂಟ್ ಗೆ ಸಹಿ ಹಾಕಲು ನಾನು ಕಳುಹಿಸಿದಾಗ ನಾವೆಲ್ಲಾ ಅಗ್ರಿಮೆಂಟ್ ಮೇಲೆ ಕೆಲಸ ಮಾಡಬೇಕಾ ಸರ್ ಎಂದು ರಚಿತಾ ರಾಮ್ ಅವರು ಹೇಳಿದ್ರು. ನಮ್ಮಿಂದ ಗೊತ್ತಿಲ್ಲ ತಪ್ಪಾಗಿದ್ರೆ ನಾನು ಕ್ಷಮೆ ಕೇಳುತ್ತೇನೆ. ನಾನು ಒಬ್ಬ ನಿರ್ದೇಶಕನಾಗಿ ನಾನು ಇವತ್ತು ಸಂಕಷ್ಟದಲ್ಲಿದ್ದೇನೆ ಎಂದು ನಿರ್ದೇಶಕ ನಾಗಶೇಖರ್ ಅವರು ಅಸಮಾಧಾನ ಹೊರಹಾಕಿದ್ದಾರೆ.
ನಾನು ರಮ್ಯಾ, ತಮನ್ನಾ ಮುಂತಾದ ಕಲಾವಿದರ ಜೊತೆ ಸಿನಿಮಾ ಮಾಡಿದ್ದೀನಿ. ಆದರೆ ಯಾವ ನಟಿಯೂ ಇಂತಹ ಸಮಸ್ಯೆ ಕೊಟ್ಟಿಲ್ಲ. ಸಿನಿಮಾ ಇಷ್ಟು ದಿನ ಪ್ರದರ್ಶನ ಕಂಡರೂ ಕೂಡ ಒಂದು ದಿನವೂ ಸಪೋರ್ಟ್ ಮಾಡಿಲ್ಲ ಎಂದು ರಚಿತಾ ರಾಮ್ ವಿರುದ್ಧ ನಿರ್ದೇಶಕ ನಾಗಶೇಖರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ಇಂಥ ಕಲಾವಿದರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ನಮ್ಮ ಸಿನಿಮಾ ಪ್ರಚಾರಕ್ಕೆ ಒಂಚೂರು ಸಹಕಾರ ಕೊಟ್ಟಿಲ್ಲ ಎಂದರು.












Click it and Unblock the Notifications