ನಟಿ ಮುಂದೆ 'ಬೇಡ್ ಶೇರಿಂಗ್' ಬೇಡಿಕೆ; ಸಿಕ್ಕಿಬಿದ್ದರೇ ದರ್ಶನ್, ಅಪ್ಪು ಸಿನಿಮಾಗಳ ನಿರ್ದೇಶಕ?

ಬೆಂಗಳೂರು, ಮೇ 30: ಕಾಸ್ಟಿಂಗ್ ಕೌಚ್ ಬಗ್ಗೆ ಇತ್ತೀಚ್ಚಿನ ದಿನಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಯಾವುದೇ ಚಿತ್ರರಂಗಕ್ಕೆ ಹೋದರೂ ನಟಿಯರು ಈ ಸಮಸ್ಯೆಯನ್ನ ಎದುರಿಸಬೇಕಾದ ಅನಿವಾರ್ಯತೆ ಇರುತ್ತದೆ. ಈ ಕಾಸ್ಟಿಂಗ್‌ ಕೌಚ್‌ ಇದೀದ ಕನ್ನಡದಲ್ಲೂ ಆಗಾಗ ಚರ್ಚೆಗೆ ಬರುತ್ತಿರುತ್ತಿದೆ. ಇದೀಗ ಕಾಸ್ಟಿಂಗ್ ಕೌಚ್ ಬಗ್ಗೆ ಮತ್ತೊಂದು ಪ್ರಕರಣ ಬಹಿರಂಗವಾಗಿದೆ.

ಹೌದು, ದರ್ಶನ್ ನಟಿಸಿದ 'ಗಜ', 'ಬೃಂದಾವನ', ಪುನೀತ್ ರಾಜ್‌ಕುಮಾರ್ ನಟಿಸಿದ 'ರಾಮ್', 'ಪವರ್' ಅಂತಹ ಯಶಸ್ವಿ ಸಿನಿಮಾಗಳನ್ನು ನಿರ್ದೇಶಿಸಿದ್ದ ಮಾದೇಶ ಕಾಸ್ಟಿಂಗ್ ಕೌಚ್ ಪ್ರಕರಣದಲ್ಲಿ ಸಿಕ್ಕಿಕೊಂಡಿದ್ದಾರೆ. ಪವರ್ ಟಿವಿ ನಡೆಸಿದ ರಹಸ್ಯ ಕಾರ್ಯಚರಣೆಯಲ್ಲಿ ನಿರ್ದೇಶಕ ಮಾದೇಶ ಅವರು 'ಬೆಡ್‌ ಶೇರಿಂಗ್' ಬಗ್ಗೆನೂ ಬೇಡಿಕೆ ಇಟ್ಟಿದ್ದಾರೆಂದು ವರದಿಯಾಗಿದೆ. ನಿರ್ದೇಶಕ ಮಾದೇಶ ಅವರು ಕಮಿಂಟ್‌ಮೆಂಟ್ ಬಗ್ಗೆ ಮಾತಾನಾಡುತ್ತಾ 'ಬೆಡ್‌ ಶೇರಿಂಗ್' ಬಗ್ಗೆ ಬೇಡಿಕೆ ಇಟ್ಟಿದ್ದಾರೆ.

Director Madhesh Caught In A Sting Operation Over Casting Couch Issue

ಪವರ್‌ ಟಿವಿ ನಡೆಸಿದ ಈ ರಹಸ್ಯ ಕಾರ್ಯಾಚರಣೆಯಿಂದಾಗಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಸಂಚಲನವನ್ನು ಸೃಷ್ಟಿಸಿದೆ. ನಟಿಯೊಂದಿಗೆ ನಿರ್ದೇಶಕ ಮಾದೇಶ ನಡೆಸಿರುವ ಈ ಮಾತುಕತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವುದಕ್ಕೆ ಶುರುವಾಗಿದ್ದು, ಚಿತ್ರರಂಗಕ್ಕೆ ಏನಾಗಿದೆ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗ ಪಾತಾಳದ ಕಡೆ ಮುಖ ಮಾಡುತ್ತಿರುವ ಸಂದರ್ಭದಲ್ಲಿ ನಿರ್ದೇಶಕ ಮಾದೇಶ ಕಾಸ್ಟಿಂಗ್ ಕೌಚ್ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ಹಲವು ವರ್ಷಗಳಿಂದ ನಿರ್ದೇಶಕ ಮಾದೇಶ ಕನ್ನಡ ಚಿತ್ರರಂಗದಲ್ಲಿ ಸೂಪರ್‌ ಹಿಟ್‌ ಸಿನಿಮಾಗಳನ್ನು ಕೊಟ್ಟಿದ್ದಾರೆ. ಪುನೀತ್ ರಾಜ್‌ಕುಮಾರ್‌ಗೆ ಆಕ್ಷನ್ ಕಟ್ ಹೇಳಿದ್ದ ಮೂರು ಸಿನಿಮಾಗಳು ಸೂಪರ್‌ ಹಿಟ್ ಆಗಿತ್ತು.ಇನ್ನೂ ದರ್ಶನ್‌ಗೂ 'ಗಜ', 'ಬೃಂದಾವನ'ದಂತಹ ಯಶಸ್ವಿ ಸಿನಿಮಾಗಳನ್ನು ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ನಿರ್ದೇಶಕ ಮಾದೇಶ ಯಾವುದೇ ಸಿನಿಮಾವನ್ನು ನಿರ್ದೇಶನ ಮಾಡಿರಲಿಲ್ಲ. ಇದೀಗ ಹೊಸ ಸಿನಿಮಾವೊಂದನ್ನು ನಿರ್ದೇಶನ ಮಾಡುವುದಕ್ಕೆ ಮುಂದಾಗಿದ್ದರು ಎನ್ನಲಾಗಿತ್ತು. ಆದರೆ, ಇದೀಗ ಪವರ್‌ ಟಿವಿ ನಡೆಸಿದ ಈ ರಹಸ್ಯ ಕಾರ್ಯಾಚರಣೆಯಲ್ಲಿ ನಟಿಯೊಂದಿಗಿನ ಬೆಡ್‌ ಶೇರಿಂಗ್‌ ಬಗ್ಗೆ ಬೇಡಿಕೆ ಇಟ್ಟಿರುವುದು ಕನ್ನಡ ಚಿತ್ರರಂಗ ಮತ್ತಷ್ಟು ಅವಮಾನಗಳನ್ನು ಎದುರಿಸುವಂತಾಗಿದೆ.

ಹೊಟೇಲ್ ಒಂದರಲ್ಲಿ ನಟಿಯೊಂದಿಗೆ ನಿರ್ದೇಶಕ ಮಾದೇಶ ಆಡಿದ ಮಾತುಗಳು ಪವರ್ ಟಿವಿಯ ಸ್ಟಿಂಗ್ ಆಪರೇಷನ್‌ನಲ್ಲಿ ಸೆರೆಯಾಗಿವೆ. ಈ ವಿಡಿಯೋದಲ್ಲಿ ಮೊದಲು ನಿರ್ಮಾಪಕರೊಂದಿಗೆ (ಪವರ್‌ ಟಿವಿ ಸಿಬ್ಬಂದಿ) ಎಲ್ಲದಕ್ಕೂ ಹೊಂದಾಣಿಯಾಗಬೇಕು. ಎಲ್ಲಾ ಆಪ್ಷನ್‌ಗೂ ರೆಡಿಯಿರಬೇಕು ಅಂತವರನ್ನೇ ಹುಡುಕುತ್ತೇನೆ ಎಂದೂ ಹೇಳಿದ್ದಾರೆ. ಇವರಿಬ್ಬರು ಮಾತನಾಡುವಾಗ ನಟಿಯ ಎಂಟ್ರಿ ಆಗುತ್ತೆ. ಆಗ ನಿರ್ಮಾಪಕ (ಪವರ್‌ ಟಿವಿ ಸಿಬ್ಬಂದಿ) ನಟಿಯೊಂದಿಗೆ ಮಾತಾಡುವುದಕ್ಕೆ ಶುರು ಮಾಡಿತ್ತಾರೆ. ಆಗ ನಟಿ ನಿರ್ದೇಶಕರು ಬೆಡ್ ಶೇರಿಂಗ್ ಮಾಡ್ಬೇಕು ಅಂತ ಹೇಳಿದ್ದರು. ನನಗೂ ಅದೇನು ಅಂತ ಅರ್ಥ ಆಗಿಲ್ಲ. ನೀವೇ ಹೇಳಿ ಎನ್ನುತ್ತಾರೆ. ಆಗ ನಟಿ ಅವರು ಏನು ಕಮಿಟ್ಮೆಂಟ್ ಹೇಳಿದರೋ ನೀವೇ ಹೇಳಿಬಿಡಿ. ನನಗೆ ಅವರು ಕಮಿಟ್ಮೆಂಟ್‌ ಅಂತ ಹೇಳಿದರು. ನನಗೆ ಏನೂ ಅರ್ಥ ಆಗಿಲ್ಲ. ನಾನು ಕಮಿಟ್‌ಮೆಂಟ್‌ ಎಲ್ಲಾ ಮಾಡುವುದಿಲ್ಲ ಎಂದು ಹೇಳಿದೆ. ಇಂತಹದ್ದೇ ಒಂದಿಷ್ಟು ಆಫರ್ ಬಂತು ನಾನು ಬಿಟ್ಟೆ ಎಂದು ನಟಿ ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+