ಡಿಂಪಲ್ ಕ್ವೀನ್ ರಚಿತಾಗೆ ಈ ಹುಡುಗನೇ ಫೇವರಿಟ್!
ಕನ್ನಡ ಸಿನಿಮಾ ರಂಗದಲ್ಲಿ ಸಿಕ್ಕಾಪಟ್ಟೆ ಚ್ಯೂಸಿ ಹಾಗೂ ಬ್ಯುಸಿ ಆಗಿರುವ ನಟಿ ಅಂದ್ರೆ ಅದು ಡಿಂಪಲ್ ಕ್ವೀನ್ ರಚಿತಾ ಅವರು. ಹೀಗೆ ರಚಿತಾ ರಾಮ್ ಕೋಟಿ ಕೋಟಿ ಅಭಿಮಾನಿಗಳನ್ನ ಸಂಪಾದಿಸಿ, ಕನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ಆದ ಹವಾ ಇಟ್ಟಿದ್ದಾರೆ. ಹಾಗೇ ನಟಿ ರಚಿತಾ ರಾಮ್ ಜೊತೆ ಒಂದೇ ಒಂದು ಫೋಟೋ ಬೇಕು ಅಂತಾ ಫ್ಯಾನ್ಸ್ ಕೂಡ ಕಾಯುತ್ತಾ ಕೂರುತ್ತಾರೆ. ಆದರೆ ಈ ನಟಿಗೆ ಒಬ್ಬ ಹುಡುಗನ ಮೇಲೆ ಸಿಕ್ಕಾಪಟ್ಟೆ ಕ್ರಶ್ ಆಗಿದೆ!
ಹೌದು ನಟಿ ರಚಿತಾ ರಾಮ್ ಮದುವೆ ಬಗ್ಗೆ ಚರ್ಚೆಗಳು ಜೋರಾಗಿವೆ. ಅದ್ರಲ್ಲೂ ಇನ್ನೇನು 32ನೇ ವಯಸ್ಸಿಗೆ ಕಾಲಿಡುತ್ತಿರುವ ರಚಿತಾ ರಾಮ್ ಅವರಿಗೆ ಮದುವೆ ಯಾವಾಗ? ಅಂತಾನೆ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಹೀಗಿದ್ದಾಗ ಇದ್ಯಾರಪ್ಪಾ ಆ ಹುಡುಗ? ನಟಿ ರಚಿತಾ ರಾಮ್ ತುಂಬಾ ಇಷ್ಟ ಪಡುವ ಹುಡುಗ? ಅಂತಾ ಪ್ರಶ್ನೆ ಓಡಾಡ್ತಾ ಇದಿಯಾ. ಹಾಗಿದ್ದರೆ ಟೆನ್ಷನ್ ಆಗಬೇಡಿ, ಯಾಕಂದ್ರೆ ಆ ಹುಡುಗ ದೊಡ್ಡವನಲ್ಲ ಇನ್ನೂ ಪುಟಾಣಿ. ಮುದ್ದು, ಮುದ್ದು ಮಾತುಗಳಿಂದಲೇ ಕನ್ನಡಿಗರ ಮನಸ್ಸು ಗೆದ್ದಿರುವ ಈ ಪುಟಾಣಿ ಹುಡುಗನ ಕಂಡ್ರೆ ನಟಿ ರಚಿತಾ ರಾಮ್‌ಗೆ ಸಖತ್ ಇಷ್ಟವಂತೆ.

ರಚಿತಾ ಅವರಿಗೆ ಈ ಹುಡುಗ ಇಷ್ಟ
'ಡ್ರಾಮಾ ಜೂನಿಯರ್ಸ್' ಯಾರಿಗೆ ಗೊತ್ತಿಲ್ಲ ಹೇಳಿ? ಬಹುತೇಕರು ಶನಿವಾರ & ಭಾನುವಾರ ಈ ಕಾರ್ಯಕ್ರಮ ನೋಡೇ ನೋಡಿರುತ್ತಾರೆ. ಅದರಲ್ಲೂ ಕುಟುಂಬ ಸಮೇತ ನೋಡಬಹುದು ಹಾಗೂ ಯಾವುದೇ ಡಬಲ್ ಮೀನಿಂಗ್ ಮುಜುಗರ ಇರೋದಿಲ್ಲ ಅನ್ನೋ ಶೋ ಅಂದರೆ, ಈ ಶೋ ಮಾತ್ರ ಎನ್ನಬಹುದು. ಹೀಗಾಗಿ 'ಡ್ರಾಮಾ ಜೂನಿಯರ್ಸ್' ಕೋಟ್ಯಂತರ ವೀಕ್ಷಕ ಪ್ರಭುಗಳನ್ನ ಹೊಂದಿದೆ.
ಇದೇ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹುಡುಗ, ಆರ್ಯ ಸಖತ್ ಸದ್ದು ಮಾಡುತ್ತಿದ್ದಾನೆ. ಈ ಪುಟಾಣಿಯ ಮಾತುಗಳಿಗೆ ಸ್ವತಃ ನಟಿ ರಚಿತಾ ರಾಮ್ ಕೂಡ ಫಿದಾ ಆಗಿಬಿಟ್ಟಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರವಾಗುವ 'ಡ್ರಾಮಾ ಜೂನಿಯರ್ಸ್' ಈಗ ಸಿಕ್ಕಾಪಟ್ಟೆ ಹವಾ ಎಬ್ಬಿಸಿದೆ. ಹಾಗೇ ಟಿಆರ್‌ಪಿ ಲೆಕ್ಕದಲ್ಲೂ ಮುಂದೆ ನುಗ್ಗುತ್ತಿದೆ.
ಎಂಟ್ರಿಯಲ್ಲೇ ಮನಸ್ಸು ಗೆದ್ದ ಆರ್ಯ
ತನ್ನ ಮೊದಲ ಪ್ರಯತ್ನದಲ್ಲೇ 'ಡ್ರಾಮಾ ಜೂನಿಯರ್ಸ್' ಜಡ್ಜ್‌ಗಳ ಮನಸ್ಸು ಕದ್ದಿದ್ದ ಈ ಪೋರ ಇದೀಗ ಇಡೀ ಕಾರ್ಯಕ್ರಮವನ್ನು ಆವರಿಸಿಕೊಂಡಿದ್ದಾನೆ. ಹೀಗೆ ವಯಸ್ಸು ಇನ್ನೂ ಚಿಕ್ಕದಾಗಿದ್ದರೂ, ಈತನ ಕಾಮಿಡಿ ಪಂಚ್ ಸಖತ್ ಆಗಿರುತ್ತದೆ. ಇದೇ ಕಾರಣಕ್ಕೆ ರಚಿತಾರ ಹೊಗಳಿಕೆ ಕೂಡ ಗಿಟ್ಟಿಸಿಕೊಂಡಿದ್ದಾನೆ ಆರ್ಯ. ಹಾಗೇ ಇತರ ಮಕ್ಕಳಿಗಿಂತ ನೇರವಾಗಿಯೇ ಮಾತನಾಡುವ & ಕೊಟ್ಟಿರುವ ಪಾತ್ರವನ್ನು ಅಚ್ಚುಕಟ್ಟಾಗಿ ಮುಗಿಸುವ ಶಕ್ತಿ ಈ ಪುಟಾಣಿಗೆ ಇದೆ. ಹೀಗಾಗಿ ಈ ಹುಡುಗನನ್ನ ಡಿಂಪಲ್ ಕ್ವೀನ್ ರಚಿತಾ ಹೆಚ್ಚು ಇಷ್ಟಪಡುತ್ತಾರೆ.
ಟಚಪ್ ಬಾಯ್ ಆರ್ಯ!
ಇನ್ನು 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರದ ಮಧ್ಯದಲ್ಲಿ ಆಗಾಗ ರಚಿತಾ ರಾಮ್ ಅವರ ಟಚಪ್ ಬಾಯ್ ಆಗಿಯೂ ಆರ್ಯ ಎಂಟ್ರಿ ಕೊಡುತ್ತಾನೆ. ಹಾಗೇ ರಚಿತಾ ಅವರ ಮೇಕಪ್ ಸರಿ ಮಾಡುವಂತೆ ಡ್ರಾಮಾ ಮಾಡಿ ಮತ್ತೆ ಹೊರಟು ಹೋಗುತ್ತಾನೆ ಈ ಪುಟಾಣಿ ಆರ್ಯ. ಈ ಹುಡುಗ ರಚಿತಾ ಅವರಿಗೆ ಮಾತ್ರವಲ್ಲ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ & ಕನ್ನಡ ಸಿನಿಮಾ ರಂಗದ ಹಿರಿಯ ನಟಿ ಲಕ್ಷ್ಮೀ ಅವರಿಗೂ ಆರ್ಯ ಎಂದರೆ ತುಂಬಾ ಇಷ್ಟ.
ಒಟ್ನಲ್ಲಿ ಹೀಗೆ ಪುಟಾಣಿ ವಯಸ್ಸಲ್ಲೇ ಸಿಕ್ಕಾಪಟ್ಟೆ ಹೆಸರು ಮಾಡಿರುವ ಈ ಆರ್ಯನಿಗೆ ಈಗ ಕನ್ನಡ ನಾಡಲ್ಲಿ, ದೊಡ್ಡ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ. ಹಾಗೇ ಬಡವರ ಮನೆ ಹುಡುಗನಿಗೆ ಸಖತ್ ಸಪೋರ್ಟ್ ಕೂಡ ಸಿಗ್ತಿದೆ. ಪುಟಾಣಿ ಮಕ್ಕಳು ವಾರಾಂತ್ಯದಲ್ಲಿ ಇಡೀ, ಕನ್ನಡ ನಾಡಿನ ಪ್ರೇಕ್ಷಕರನ್ನು ಸೆಳೆದು ಟಿವಿ ಎದುರು ಕೂರಿಸುತ್ತಿದ್ದಾರೆ. ಈ ಮೂಲಕ ಈಗ ಜೀ ವಾಹಿನಿ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ.












Click it and Unblock the Notifications