Rakshit Shetty: ರಕ್ಷಿತ್ ಶೆಟ್ಟಿ ಲುಕ್ ಕಾಪಿ ಮಾಡಿದ ವಿಜಯ್ ದೇವರಕೊಂಡ ಫಸ್ಟ್ ಲುಕ್‌ಗೆ ರಶ್ಮಿಕಾ ಮಂದಣ್ಣ ಮೆಚ್ಚುಗೆ!
ತೆಲಗು ನಟ ವಿಜಯ್ ದೇವರಕೊಂಡ ಅರ್ಜುನ್ ರೆಡ್ಡಿ ಮತ್ತು ಗೀತ ಗೋವಿಂದಂ ಸಿನಿಮಾಗಳ ಬಳಿಕ ದೊಡ್ಡ ಮಟ್ಟದ ಹಿಟ್ ಕೊಡುವಲ್ಲಿ ವಿಫಲವಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಹೋಗಿ ಸೋಲು ಕಂಡಿದ್ದಾರೆ.
ಇತ್ತೀಚೆಗೆ ಭಾರಿ ನಿರೀಕ್ಷೆ ಮೂಡಿಸಿದ್ದ ಫ್ಯಾಮಿಲಿ ಮ್ಯಾನ್ ಸಿನಿಮಾ ಕೂಡ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಟಾಲಿವುಡ್‌ನಲ್ಲಿ ಕಮ್‌ಬ್ಯಾಕ್ ಮಾಡಲು ಪ್ರಯತ್ನ ಪಡುತ್ತಿರುವ ವಿಜಯ್ ದೇವರಕೊಂಡ ಹೊಸ ಸಿನಮಾದ ಮೊದಲ ಲುಕ್ ಇಂದು ಬಿಡುಗಡೆಯಾಗಿದೆ.

2025ರ ಮಾರ್ಚ್ 28ರಂದು ವಿಜಯ್ ದೇವರಕೊಂಡ ಅವರ ಮುಂದಿನ ಸಿನಿಮಾ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಸಿನಿಮಾದ ಹೆಸರನ್ನು ಇನ್ನೂ ರಿವೀಲ್ ಮಾಡದೇ ಇದ್ದರೂ, ಮೊದಲ ಲುಕ್ ಇಂದು ಬಿಡುಗಡೆಯಾಗಿದೆ. ಇದೇ ತಿಂಗಳಿನಲ್ಲಿ ಟೈಟಲ್ ಅನೌನ್ಸ್ ಮಾಡುವುದಾಗಿ ಚಿತ್ರತಂಡ ಹೇಳಿದೆ.
After stealing his girl. Now he is stealing his look. pic.twitter.com/M8XypbKIqQ #VD12
— 👑Che_ಕೃಷ್ಣ🇮🇳💛❤️ (@ChekrishnaCk) August 2, 2024
ರಕ್ಷಿತ್ ಶೆಟ್ಟಿ ಲುಕ್ ಕಾಪಿ!
ವಿಜಯ್ ದೇವರಕೊಂಡ ಹೊಸ ಸಿನಿಮಾದ ಗೆಟಪ್ ನೋಡಿದ ಜನ ರಕ್ಷಿತ್ ಶೆಟ್ಟಿ ಅವರ ಗೆಟಪ್ ಕಾಪಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಸಪ್ತ ಸಾಗರದಾಚೆ ಎಲ್ಲೂ ಸಿನಿಮಾ ಸರಣಿಯಲ್ಲಿ ನಟ ರಕ್ಷಿತ್ ಶೆಟ್ಟಿ ಜೈಲು ಖೈದಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಶಾರ್ಟ್ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದ ರಕ್ಷಿತ್ ಶೆಟ್ಟಿ ಸಪ್ತ ಸಾಗರದಾಚೆ ಸಿನಿಮಾದ ನಟನೆಗೆ ಸಾಕಷ್ಟು ಪ್ರಶಂಸೆ ಪಡೆದುಕೊಂಡಿದ್ದರು.
ಈಗ ಬಿಡುಗಡೆಯಾಗಿರುವ ವಿಜಯ್ ದೇವರಕೊಂಡ ಹೊಸ ಲುಕ್ ಅನ್ನು ರಕ್ಷಿತ್ ಶೆಟ್ಟಿ ಅವರ ಗೆಟಪ್‌ಗೆ ಹೋಲಿಕೆ ಮಾಡಲಾಗುತ್ತಿದೆ. ರಶ್ಮಿಕಾ ಮಂದಣ್ಣ ವಿಚಾರವನ್ನು ಕೂಡ ಕೆಲವು ಅಭಿಮಾನಿಗಳು ಎಳೆದು ತಂದಿದ್ದಾರೆ.
ನಟ ರಕ್ಷಿತ್ ಶೆಟ್ಟಿ ರಶ್ಮಿಕಾ ಮಂದಣ್ಣ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದು, ಮದುವೆ ಮುರಿದುಬಿದ್ದಿದ್ದು ಗೊತ್ತೇ ಇದೆ. ವಿಜಯ್ ದೇವರಕೊಂಡ ಪರಿಚಯದ ನಂತರವೇ ರಶ್ಮಿಕಾ ರಕ್ಷಿತ್ ಶೆಟ್ಟಿಯಿಂದ ದೂರವಾದರು ಎನ್ನುವುದು ರಕ್ಷಿತ್ ಶೆಟ್ಟಿ ಅಭಿಮಾನಿಗಳ ವಾದ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ಮದುವೆಯಾಗುತ್ತಾರೆ ಎನ್ನುವ ಗಾಸಿಪ್ ಕೂಡ ಕೇಳಿಬಂದಿದೆ. ಇಬ್ಬರೂ ಕೂಡ ಈ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳದೇ ಇದ್ದರೂ, ಹಲವು ಘಟನೆಗಳು ಇಬ್ಬರೂ ಉತ್ತಮ ಸ್ನೇಹಿತರು ಎನ್ನುವ ವಿಚಾರಕ್ಕೆ ಸಾಕ್ಷಿಯಾಗಿವೆ.
ವಿಜಯ್ ದೇವರಕೊಂಡ ಹೊಸ ಲುಕ್ ಪೋಸ್ಟರ್ ಪೋಸ್ಟ್‌ಗೆ ನಟಿ ರಶ್ಮಿಕಾ ಮಂದಣ್ಣ ಕೂಡ ಪ್ರತಿಕ್ರಿಯೆ ನಿಡಿದ್ದು, ಮ್ಯಾಡ್‌ನೆಸ್ (ಹುಚ್ಚುತನ) ಎಂದು ಕರೆದಿದ್ದಾರೆ. ಇದಕ್ಕೆ ವಿಜಯ್ ದೇವರಕೊಂಡ ಕೂಡ ಪ್ರತಿಕ್ರಿಯೆ ನೀಡಿದ್ದು, ಹೃದಯದ ಇಮೋಜಿಯನ್ನು ಪೋಸ್ಟ್ ಮಾಡಿದ್ದಾರೆ.












Click it and Unblock the Notifications