Rashmika Mandanna: ಕನ್ನಡವರಲ್ಲ ಎನ್ನುವ ನಟಿ ರಶ್ಮಿಕಾ ಅಟಿಟ್ಯೂಡ್ ಬಗ್ಗೆ ದೀಕ್ಷಿತ್ ಶೆಟ್ಟಿ ಹೇಳಿಕೆ ವೈರಲ್

Rashmika Mandanna: ಬಹುಬೇಡಿಕೆಯ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಸಿನಿಮಾ ರಂಗದಲ್ಲಿ, ಜಾಹೀರಾತು ಇತರ ವೃತ್ತಿಪರ ಕೆಲಸಗಳಲ್ಲಿ ಬ್ಯೂಸಿಯಾಗಿದ್ದಾರೆ. ಕನ್ನಡ ಮೂಲದವರಾದರೂ ಕನ್ನಡದ ಬಗ್ಗೆ ಅವರಿಗೆ ಅಸಡ್ಡೆ, ಕನ್ನಡ ಮಾತನಾಡಲ್ಲ ಎಂದು ಆಗಾಗ ಟ್ರೋಲ್ ಆಗಿದ್ದು ಉಂಟು. ಅವರಿಗೆ ಅಟಿಟ್ಯೂಡ್ ಇದೆ ಎಂಬಿತ್ಯಾದಿ ಪ್ರಶ್ನೆಗಳು ರಶ್ಮಿಕಾ 'ದಿ ಗರ್ಲ್‌ ಫ್ರೆಂಡ್' ಕೋಸ್ಟಾರ್ ಕನ್ನಡದ ದೀಕ್ಷಿತ್ ಶೆಟ್ಟಿ ಅವರಿಗೆ ಎದುರಾಗಿದ್ದವು. ರಶ್ಮಿಕಾ ಜೊತೆಗಿನ ನಟನೆ, ಅವರ ಸ್ಟಾರ್‌ಗಿರಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

'ದಿ ಗರ್ಲ್‌ಫ್ರೆಂಡ್' ಸಿನಿಮಾದಲ್ಲಿ ರಶ್ಮಿಕಾ ಮತ್ತು ದೀಕ್ಷಿತ್ ಶೆಟ್ಟಿ ಇಬ್ಬರು ನಟಿಸಿದ್ದಾರೆ. ಈ ಸಿನಿಮಾದ ಹಾಡು ಪಂಚ ಭಾಷೆಗಳಲ್ಲಿ ರಿಲೀಸ್ ಆಗಿ ದೊಡ್ಡ ಸದ್ದು ಮಾಡುತ್ತಿದೆ. ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆದಿದೆ. 'ರಶ್ಮಿಕಾ ಕನ್ನಡದವರಲ್ಲ ಎಂದು ಹೇಳಿಕೊಳ್ಳುತ್ತಾರೆ. ಅವರಿಗೆ ಅಟಿಟ್ಯೂಡ್ ಇದೆ ಎಂದೆ ಟ್ರೊಲ್ ಆಗಿದ್ದರು. ಅವರು ನಿಮ್ಮೊಂದಿಗೆ ಹೇಗಿದ್ದರು'? ಎಂಬ ಪ್ರಶ್ನೆಗೆ ನಗುತ್ತಲೇ ದೀಕ್ಷಿತ್ ಶೆಟ್ಟಿ ಉತ್ತರ ಕೊಟ್ಟಿದ್ದಾರೆ.

Dheekshith Shetty Reacts to Rashmika Mandanna s Attitude Rumors She Was Very Comfortable on Set

ಅವರ ಬಗ್ಗೆ ಹೊರಗಡೆ ಏನು ಮಾತನಾಡುತ್ತಾರೆ. ಹೊರಗಡೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಾನು ಕಾಮೆಂಟ್ ಮಾಡೋಕೆ ಆಗಲ್ಲ. ಅದು ಅವರ ಅಭಿಪ್ರಾಯ. ರಶ್ಮಿಕಾ ಅವರು ''ಭಾರತದಲ್ಲಿ ಎಲ್ಲ ಭಾಷೆಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೆ ನಟಿಸಿದ್ದಾರೆ. ಅವರು ಕೂಡ ಸ್ಟಾರ್ ನಟಿ. ನನ್ನ ಬಳಿ ಆ ರೀತಿ (ಅಟಿಟ್ಯೂಡ್) ನಡೆದುಕೊಂಡಿಲ್ಲ. ರಶ್ಮಿಕಾ ಅವರು ಅಷ್ಟೊ ದೊಡ್ಡ ಸ್ಟಾರ್ ನಟಿ ಆದರೂ ಸಹಿತ ತುಂಬಾ ಕಂಫರ್ಟೆಬಲ್ ಆಗಿದ್ದರು. ಅವರು ಹಾಗಿದ್ದಿದ್ದಕ್ಕೆ ನನಗೆ ಸಿನಿಮಾದಲ್ಲಿ ಕೆಲಸ ಮಾಡಲು ಸರಳವಾಯ್ತು.

ನನಗಿಂತ ಹೆಚ್ಚು ಕೆಲಸ ಮಾಡ್ತಾರೆ ರಶ್ಮಿಕಾ

ರಶ್ಮಿಕಾ ಅವರು ತುಂಬಾ ಹಾರ್ಡ್ ವರ್ಕಿಂಗ್. ಕೆಲವು ನನಗೆ ಹೇಳುತ್ತಾರೆ. ಆದರೆ ನನಗಿಂತ ಹತ್ತು ಪಟ್ಟು ಹೆಚ್ಚು ಕೆಲಸ ಮಾಡುವ ನಟಿ ರಶ್ಮಿಕಾ. ಸೆಟ್ ನಲ್ಲಿದ್ದಾಗ ನಾವಿಬ್ಬರು ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮಾತನಾಡುತ್ತಿದ್ದೆವು. ಸೆಟ್‌ನಲ್ಲಿ ಕನ್ನಡವನ್ನು ಮಾತನಾಡಿದ್ದೇವೆ. ಸಿನಿಮಾ ಡೈಲಾಗಿಗೋಸ್ಕರ ಭಾಷೆ ಸರಳವಾಗಿ ಬರುವಂತೆ ನಾವು ತುಲುಗಿನಲ್ಲಿ ಮಾತನಾಡಿದ್ದೇವೆ ಎಂದು 'ಈ ಸಂಜೆ' ಮುಂದೆ ದೀಕ್ಷಿತ್ ಶೆಟ್ಟಿ ತಿಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹೊಸ ಬಿಸಿನೆಸ್ ಆರಂಭಿಸಿದ ರಶ್ಮಿಕಾ

ನಟಿ ರಶ್ಮಿಕಾ ಅಭಿನಯದ 'ಕುಬೇರ' ಸಿನಿಮಾ ಅಷ್ಟಾಗಿ ಜನರಿಗೆ ತಲುಪಲಿಲ್ಲ. ಈ ಮಧ್ಯೆ ರಶ್ಮಿಕಾ 'ಡಿಯರ್ ಡೈರಿ' ಪರ್‌ಫ್ಯೂಮ್ ಉದ್ಯಮ ಆರಂಭಿಸಿದ್ದಾಗಿ ಅವರೇ ಸೋಮವಾರ ಘೋಷಿಸಿದ್ದಾರೆ. 'ದಿ ಗರ್ಲ್‌ಫ್ರೆಂಡ್' ಹಾಡುಗಳು ಸದ್ದು ಮಾಡುತ್ತಿವೆ. ದೀಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ನೃತ್ಯ ಎಲ್ಲ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸಿನಿಮಾ ರಿಲೀಸ್‌ಗಾಗಿ ರಶ್ಮಿಕಾ ಫ್ಯಾನ್ಸ್ ಕಾಯುತ್ತಿದ್ದಾರೆ. ಇದಲ್ಲದೇ ಪ್ಯಾನ್ ಇಂಡಿಯಾ ಮಟ್ಟದ ಕೆಲವು ಸಿನಿಮಾಗಳಲ್ಲಿ ನಟಿ ರಶ್ಮಿಕಾ ಬ್ಯೂಸಿ ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+