ಕನ್ನಡಿಗರ ‘ಟಗರು ಪಲ್ಯ’ ಬೇರೆ ಭಾಷೆಗೂ ಲಗ್ಗೆ ಇಡುತ್ತಾ?

ಕನ್ನಡಿಗರ ಸಿನಿಮಾಗಳೇ ಹೀಗೆ, ಅದರಲ್ಲೂ ಆಧುನಿಕ ಕಾಲಘಟ್ಟದಲ್ಲಿ ಕೆಜಿಎಫ್ ಹಾಗೂ ಕಾಂತಾರಾ ಸಿನಿಮಾಗಳು ಕನ್ನಡ ಸಿನಿಮಾ ಇಂಡಸ್ಟ್ರಿ ಹೆಸರನ್ನು ಬೇರೆ ಲೆವೆಲ್‌ಗೆ ತಲುಪಿಸಿ ಅಚ್ಚರಿ ಮೂಡಿಸಿವೆ. ಹೀಗಾಗಿ ಸಾಲು ಸಾಲು ಸಿನಿಮಾಗಳು ಬೇರೆ ಭಾಷೆ ಜನರನ್ನು ಕೂಡ ಸೆಳೆಯುತ್ತಿವೆ. ಇತ್ತೀಚೆಗೆ ರಿಲೀಸ್ ಆಗಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಕೂಡ ಇದೇ ರೀತಿ ಸದ್ದು ಮಾಡಿತ್ತು, ಈಗ ಡಾಲಿ ಹಣ ಹಾಕಿರುವ 'ಟಗರು ಪಲ್ಯ' ಅಬ್ಬರಿಸಿದೆ.

ಹೌದು, ಕರ್ಮಷಿಯಲ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದ ನಡುವೆ ಈ ವಾರ ತೆರೆಗೆ ಬಂದ ಹಳ್ಳಿ ಸೊಗಡಿನ ಟಗರು ಪಲ್ಯವನ್ನು ಪ್ರೇಕ್ಷಕ ಎಂಜಾಯ್ ಮಾಡಿದ್ದಾನೆ. ಮೊನ್ನೆ, ಮೊನ್ನೆ ಅಂದ್ರೆ ಅಕ್ಟೋಬರ್ 27ರ ಶುಕ್ರವಾರ ರಾಜ್ಯಾದ್ಯಂತ ರಿಲೀಸ್ ಆಗಿದ್ದ 'ಟಗರು ಪಲ್ಯ' ಎಲ್ಲೆಡೆ ಅದ್ಭುತ ಪ್ರದರ್ಶನ ಕಾಣುತ್ತಿದ್ದು ದಿನದಿಂದ ದಿನಕ್ಕೆ ಶೋಗಳ ಸಂಖ್ಯೆಯು ಹೆಚ್ಚಾಗಿದೆ. ಇದೇ ಸಂದರ್ಭದಲ್ಲಿ, ಕನ್ನಡ ಸಿನಿಮಾ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ ಟಗರು ಪಲ್ಯ ಸಿನಿಮಾ.

Demand For Kannada Movie Tagaru Palya Remake Rights

ಟಗರು ಪಲ್ಯಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್!

ಒಂದೊಳ್ಳೆ ಫ್ಯಾಮಿಲಿ ಡ್ರಾಮಾ ಎನಿಸಿಕೊಂಡಿರುವ ಟಗರು ಪಲ್ಯ ಸಿನಿಮಾ ಬಗ್ಗೆ, ಪ್ರೇಕ್ಷಕ ಮುಕ್ತ ಕಂಠದಿಂದ ಹೊಗಳಿದ್ದ. ವಿಮರ್ಶಕರು ಹಾಗೂ ಪ್ರೇಕ್ಷಕರ ವಲಯದಿಂದಲೂ ಸಖತ್ ರೆಸ್ಪಾನ್ಸ್ ಪಡೆಯುತ್ತಿರುವ ಸಿನಿಮಾಗೆ ಈಗ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ 'ಟಗರು ಪಲ್ಯ' ರಿಮೇಕ್ ಮಾಡಲು ಭರ್ಜರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಟಗರು ಪಲ್ಯ ಕನ್ನಡ ಪ್ರೇಕ್ಷಕರನ್ನ ಮಾತ್ರ ಅಲ್ಲ ಬೇರೆ ಭಾಷೆ ಪ್ರೇಕ್ಷಕರನ್ನೂ ಸೆಳೆಯುತ್ತಿದೆ.

ಕನ್ನಡ ಸಿನಿಮಾಗಳ ಶಕ್ತಿ ಅಂತಹದ್ದು!

ಪರಭಾಷೆ ಪ್ರೇಕ್ಷಕರ ಜೊತೆ ಪರಭಾಷೆಯ ನಿರ್ಮಾಪಕರು ಕೂಡ ಈ ಸಿನಿಮಾ ನೋಡಿ ಫಿದಾ ಆಗಿದ್ದಾರಂತೆ. ಇದೇ ಕಾರಣಕ್ಕೆ 'ಟಗರು ಪಲ್ಯ' ಚಿತ್ರದ ರಿಮೇಕ್ ರೈಟ್ಸ್‌ಗೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ತಮಿಳು, ತೆಲುಗು ಭಾಷೆಯಿಂದ ಬೇಡಿಕೆ ಹೆಚ್ಚಾಗಿದ್ದು, ಮಾತುಕತೆ ಕೂಡ ಶುರುವಾಗಿದೆಯಂತೆ. ಶೀಘ್ರ ರಿಮೇಕ್ ರೈಟ್ಸ್ ಸೇಲ್ ಆಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇದು ಡಾಲಿ ಫ್ಯಾನ್ಸ್ ಖುಷಿಯನ್ನ ಮತ್ತಷ್ಟು ಹೆಚ್ಚು ಮಾಡುವ ಜೊತೆಗೆ ಕನ್ನಡ ನೆಲದಲ್ಲಿ ತಯಾರಾದ ಸಿನಿಮಾಗಳ ತಾಕತ್ತನ್ನು ಮತ್ತೆ ಪ್ರೂವ್ ಮಾಡಿದೆ.

Demand For Kannada Movie Tagaru Palya Remake Rights

ಡಾಲಿ ಪಿಕ್ಚರ್ಸ್ ನಿರ್ಮಿಸಿರುವ ಮೂರನೇ ಚಿತ್ರವಾಗಿರುವ ಟಗರು ಪಲ್ಯ ಸಿನಿಮಾಗೆ ಉಮೇಶ್ ಕೆ ಕೃಪಾ ಆಕ್ಷನ್ & ಕಟ್ ಹೇಳಿದ್ದು ಮೊದಲ ಹೆಜ್ಜೆಯಲ್ಲಿ ಬಂಪರ್ ಸಿಕ್ಕಂತಗಿದೆ. ಹಿರಿಯ ನಟಿ ತಾರಾ, ರಂಗಾಯಣ ರಘು ನಟನೆಗೆ ಪ್ರೇಕ್ಷಕ ಮತ್ತೆ ಫಿದಾ ಆಗಿದ್ದಾನೆ. ಒಟ್ನಲ್ಲಿ ಕನ್ನಡಿಗರ ಸಿನಿಮಾಗಳು ಇದೇ ರೀತಿ ಸದ್ದು ಮಾಡಲಿ ಅಂತಾ ಅಭಿಮಾನಿಗಳು ಕೂಡ ಆಶಿಸುತ್ತಿದ್ದಾರೆ. ಮುಂದೆ ಕೂಡ ಇಂತಹದ್ದೇ ಸಾಲು ಸಾಲು ಕನ್ನಡದ ಹಿಟ್ ಸಿನಿಮಾಗಳು, ತೆರೆಗೆ ಬರಲು ಸಿದ್ಧತೆ ನಡೆಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+