6-7 ತಿಂಗಳ ಹಿಂದೆಯೇ ಸಂಜಯ್ ಸಿಂಗ್ ಕೊನೆಯುಸಿರೆಳೆದಿದ್ರಾ? ಮಾಜಿ ಪತಿ ಸಾವಿಗೆ ಪವಿತ್ರಾ ಗೌಡನೇ ಕಾರಣನಾ? ಆಗಿದ್ದೇನು?
Darshan Thoogudeepa's friend Pavithra Gowda; ಪವಿತ್ರಾ ಗೌಡ ಅನ್ನೋ ಹೆಣ್ಣುಮಗಳ ಬಗ್ಗೆ ಅನೇಕ ಮಂದಿ ಅನೇಕ ಬಗೆಯಲ್ಲಿ ಮಾತನಾಡುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದವರೆಗೆ ಪಿಸುದನಿಯ ಮಾತುಕತೆಯಲ್ಲಿದ್ದದ್ದು ಈಗ ಬೀದಿಬದಿಯಲ್ಲೂ ಮಾತನಾಡುವಷ್ಟು ಬೆಳೆದು ನಿಂತಿದೆ. ಈ ಹೆಣ್ಣುಮಗಳ ಸಮಸ್ಯೆಗೆ ಇದೀಗ ಮತ್ತೊಂದು ಪ್ರಕರಣವೂ ಸೇರಿಕೊಂಡಿದೆ. ಅದು ಅವರ ಮಾಜಿ ಪತಿಯ ಸಾವು. ಒಂದು ಕಾಲದಲ್ಲಿ ತಾನು ಪ್ರೀತಿಸಿ ಮದುವೆಯಾಗಿದ್ದ, ಈ ದಾಂಪತ್ಯದಲ್ಲಿ ಮಗಳನ್ನೂ ಪಡೆದಿದ್ದ ಪವಿತ್ರಾ ಗೌಡ ಆ ಬಳಿಕ ಯಾವುದೋ ಕಾರಣಕ್ಕೆ ದೂರವಾದರು. ಆ ಬಳಿಕ ದರ್ಶನ್ ಜೊತೆ ಸ್ನೇಹಕ್ಕೆ ಬಿದ್ದರು ಎಂಬ ಮಾತಿದೆ. ಸದ್ಯಕ್ಕಂತೂ ಪವಿತ್ರಾ ಗೌಡ ಜೈಲಿನಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದಾರೆ. ಈ ಕೇಸ್‌ನಿಂದ ಅವರು ಹೊರಬರುವುದು ಅಂದುಕೊಂಡಷ್ಟು ಸುಲಭವಲ್ಲ.

ಆರೇಳು ತಿಂಗಳ ಹಿಂದೆಯೇ ಮೃತರಾದ ಸಂಜಯ್ ಸಿಂಗ್
ಇದೀಗ ತಾನೇ ಸಂಜಯ್ ಸಿಂಗ್ ಸಾವಿನ ಸುದ್ದಿ ಹೊರಜಗತ್ತಿಗೆ ರಿವೀಲ್ ಆಗಿದೆ. ಆದರೆ 7 ರಿಂದ 8 ತಿಂಗಳ ಹಿಂದೆಯೇ ಸಂಜಯ್ ಸಿಂಗ್ ಅವರು ಮೃತರಾಗಿದ್ದಾರೆ ಎನ್ನಲಾಗುತ್ತಿದೆ. ವಿಷಯ ತಡವಾಗಿ ಬೆಳಕಿಗೆ ಬಂದಿದ್ದು, ವರ್ಷಗಳಿಂದ ಅನಾರೋಗ್ಯದಿಂದ ಬಳುತ್ತಿದ್ದುದ್ದೇ ಸಾವಿಗೆ ಕಾರಣ ಎನ್ನಲಾಗಿದೆ. ಆಸ್ಪತ್ರೆ ಸೇರಿದ್ದ ಸಂಜಯ್ ಸಿಂಗ್, ಚಿಕಿತ್ಸೆ ಫಲಕಾರಿಯಾಗದೇ ತಮ್ಮ ಹುಟ್ಟೂರಾದ ರಾಜಸ್ಥಾನದಲ್ಲಿ ಮೃತಪಟ್ಟಿದ್ದಾರಂತೆ.
ಇದಕ್ಕೂ ಪವಿತ್ರಾಗೌಡ ಪರೋಕ್ಷ ಕಾರಣವೇ!
ಮೂಲಗಳ ಪ್ರಕಾರ ಪವಿತ್ರಾ ಗೌಡ ಅವರಿಗೆ 2013ರಲ್ಲಿ ವಿಚ್ಛೇದನ ನೀಡಿದ ಬಳಿಕ ಸಂಜಯ್ ಸಿಂಗ್ ಕುಡಿತಕ್ಕೆ ದಾಸನಾಗಿದ್ದರು. ವಿಪರೀತ ಕುಡಿತದ ಚಟವೇ ಅವರನ್ನ ಬಲಿ ಪಡೆದಿದೆ. ರೇಣುಕಾಸ್ವಾಮಿ ಕೊಲೆಕೇಸ್‌ನಲ್ಲಿ ಪವಿತ್ರಾ ಗೌಡ ಬಂಧನವಾದಾಗ, ಸಂಜಯ್ ಸಿಂಗ್ ಕುರಿತು ವಿಚಾರಗಳು ಬಹಿರಂಗವಾಗಿದ್ದವು. ತಮ್ಮ ಮತ್ತು ಪವಿತ್ರಾ ಅವರ ಸಂಬಂಧದ ಕುರಿತು ಸಂಜಯ್ ಸಿಂಗ್ ಮಾಧ್ಯಮಗಳ ಜೊತೆ ಪ್ರಾಮಾಣಿಕವಾಗಿ ಮಾತನಾಡಿದ್ದರು. ಉತ್ತರ ಪ್ರದೇಶದಲ್ಲಿ ಗೋರಕ್‌ಪುರ ಜಿಲ್ಲೆಯ ಮೂಲದವರು ಸಂಜಯ್ ಸಿಂಗ್. ಅನೇಕ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಇಲ್ಲಿ ಪವಿತ್ರಾ ಜೊತೆ ಪ್ರೇಮವಿವಾಹವಾಗಿದ್ದರು.
ಡಿವೋರ್ಸ್‌ನಿಂದ ಆವರಿಸಿದ ಖಿನ್ನತೆ
ಸಂಜಯ್ ಸಿಂಗ್ ಅವರೇ ಹೇಳಿರುವ ಪ್ರಕಾರ 2013ರಲ್ಲೇ ಪವಿತ್ರಾ ಜೊತೆ ಸಂಜಯ್ ಡಿವೋರ್ಸ್ ಪಡೆದಿದ್ದರು. 2008ರ ವರ್ಷದಲ್ಲಿ ಈ ಜೋಡಿ ಪ್ರೀತಿಸಿ ಮದುವೆಯಾಗಿದ್ದರು. ಡಿವೋರ್ಸ್ ಬಳಿಕ ಸಂಜಯ್ ಸಿಂಗ್ ಜೊತೆಗಿನ ಸಂಪರ್ಕವನ್ನ ಸಂಪೂರ್ಣವಾಗಿ ಕಡಿದುಕೊಂಡಿದ್ದರು ನಟಿ ಪವಿತ್ರಾ ಗೌಡ.
ದರ್ಶನ್ ಪತ್ನಿ ಮೂಲಕ ಬಯಲಾದ ಹಳೆ ಸಂಬಂಧ
ಪವಿತ್ರಾ ಗೌಡ ಹಾಗೂ ಸಂಜಯ್ ಸಿಂಗ್ ಸಂಬಂಧದ ಮ್ಯಾಟರ್ ರಿವೀಲ್ ಮಾಡಿದ್ದು ದರ್ಶನ್ ಪತ್ನಿ ವಿಜಯಲಕ್ಷ್ಮೀ. ದರ್ಶನ್ ಜೊತೆಗಿನ ಪವಿತ್ರಾ ಗೌಡ ಆಪ್ತ ಸಂಬಂಧದ ಕಾರಣಕ್ಕೆ ವಿಜಯಲಕ್ಷ್ಮೀ ಹಾಗೂ ಪವಿತ್ರಾ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳ ಯುದ್ಧವೇ ಶುರುವಾಗಿತ್ತು. ಆ ಸಂದರ್ಭ ವಿಜಯಲಕ್ಷ್ಮೀ ಅವರಿಂದ ಸಂಜಯ್ ಸಿಂಗ್ ಮತ್ತು ಪವಿತ್ರಾ ಗೌಡ ಅವರ ಹಳೆ ಫೋಟೋಗಳು ಬಹಿರಂಗವಾಗಿದ್ದವು. ಅವನ್ನು ವಿಜಯಲಕ್ಷ್ಮೀ ತನ್ನ ಸೋಷಲ್ ಮೀಡಿಯಾ ಅಕೌಂಟ್ ಮೂಲಕ ಅಪ್‌ಲೋಡ್ ಮಾಡಿದ್ದರು. ಆಗ ಈ ಸುದ್ದಿ ವೈರಲ್ ಆಗಿತ್ತು.
ಮಾಜಿ ಪತಿ ಸಾವಿಗೆ ಪರೋಕ್ಷ ಕಾರಣವಾದರಾ ಪವಿತ್ರಾ!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಲು ಪವಿತ್ರಾ ಕಾರಣ ಎಂಬ ಆರೋಪ ದರ್ಶನ್ ಅಭಿಮಾನಿಗಳದ್ದು. ಇದೀಗ ಇವರ ಪತಿಯೂ ಖಿನ್ನತೆಯ ಕಾರಣಕ್ಕೆ ಸಾವಿಗೀಡಾಗಿದ್ದಾರೆ ಎನ್ನಲಾಗಿದ್ದು, ಇದಕ್ಕೂ ಪವಿತ್ರಾ ಅವರನ್ನೇ ಹೊಣೆ ಮಾಡಲಾಗುತ್ತಿದೆ. ತನ್ನ ಮಹಾತ್ವಾಕ್ಷಾಂಕ್ಷೆಯೇ ಈ ಹೆಣ್ಣುಮಗಳಿಗೆ ಶಾಪವಾಯ್ತಾ ಎಂಬಂಥಾ ಮಾತುಗಳು ಕೇಳಿಬರುತ್ತಿವೆ. ಅವರಿಗಿರುವ ಮಹತ್ವಾಕಾಂಕ್ಷೆ ಬಗ್ಗೆ ಸಂಜಯ್ ಸಿಂಗ್ ಅವರೇ ಹಿಂದೆ ಮಾತನಾಡಿದ್ದರು. ಜೊತೆಗೆ ಪವಿತ್ರ ಜೊತೆಗೆ ವಿಚ್ಛೇದನ ಆಗಿದ್ದರೂ ಅವರು ಮಾಜಿ ಪತ್ನಿಯ ಪರವಾಗಿಯೇ ದನಿ ಎತ್ತಿದ್ದರು. ಅಲ್ಲೂ ಅವರ ಕಾಳಜಿ ಎದ್ದು ಕಾಣುತ್ತಿತ್ತು. ಪತ್ನಿಯಿಂದ ದೂರವಾದ ಮೇಲೆ ಅವರು ಕುಡಿತದ ಚಟಕ್ಕೆ ಬಿದ್ದಿದ್ದರು ಅನ್ನುವ ವಿಚಾರ ಇದೀಗ ಬಯಲಾಗಿದೆ. ಇದರಿಂದ ಖಿನ್ನತೆಗೆ ಒಳಗಾಗಿ ಅವರು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂಬ ಮಾತೂ ಕೇಳಿ ಬರುತ್ತಿದೆ. ಅಲ್ಲಿಗೆ ಈಗಾಗಲೇ ದರ್ಶನ್ ಜೈಲುವಾಸಕ್ಕೆ ಕಾರಣವಾದ ಆರೋಪದ ನಡುವೆಯೇ ಮಾಜಿ ಪತಿಯ ಸಾವಿಗೂ ಈಕೆಯೇ ಕಾರಣವಾದರಾ ಎಂಬ ಬಗೆಯ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ.


Click it and Unblock the Notifications
