Darshan Thoogudeepa: ದರ್ಶನ್ ರಿಲೀಸ್ ಆಗುವುದು ಫಿಕ್ಸ್, ಮುಂದಿನ ತಿಂಗಳೇ ಹೊರಗೆ ಬರ್ತಾರಂತೆ ಅಭಿಮಾನಿಗಳ ‘ಡಿ-ಬಾಸ್’!
ದರ್ಶನ್ ತೂಗುದೀಪ್ ಅವರು ರಿಲೀಸ್ ಆಗುವ ದಿನಾಂಕ ಫಿಕ್ಸ್ ಆಗಿದೆ, ಈ ಮೂಲಕ ಸದ್ಯ ದರ್ಶನ್ ಅವರ ಆಗಮನಕ್ಕೆ ಕಾದು ಕುಳಿತಿದ್ದ ಕೋಟ್ಯಂತರ ಕನ್ನಡಿಗರಿಗೆ ಸಿಹಿಸುದ್ದಿ ಕೂಡ ಸಿಕ್ಕಂತಾಗಿದೆ. ಮುಂದಿನ ತಿಂಗಳೇ ನಟ ದರ್ಶನ್ ತೂಗುದೀಪ್ ಅವರು, ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆಗಿ ಹೊರಗೆ ಬರಲಿದ್ದಾರಂತೆ. ಹಾಗಾದ್ರೆ ಯಾವ ಡೇಟ್ ಗೊತ್ತಾ? ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಹೌದು ದರ್ಶನ್ ತೂಗುದೀಪ್ ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿಗು ಸೇರಿರುವುದು ಗೊತ್ತಿರುವ ಸುದ್ದಿ ಈ ಸಮಯದಲ್ಲಿ ದರ್ಶನ್ ತೂಗುದೀಪ್‌ರ ಬೆನ್ನಿಗೆ ನಿಂತು ಜೈಲಿಂದ ದರ್ಶನ್ ತೂಗುದೀಪ್ ಅವರನ್ನು ರಿಲೀಸ್ ಮಾಡಿಸಿಕೊಂಡು ಬರಲು, ಕೋಟಿ ಕೋಟಿ ಅಭಿಮಾನಿ ಬಳಗ ಹೋರಾಟ ನಡೆಸುತ್ತಿದೆ. ಆದರೆ ಇಂತಹ ಸಮಯದಲ್ಲೇ ನಟ ದರ್ಶನ್ ತೂಗುದೀಪ್ ಅವರಿಗೆ ಸದ್ಯಕ್ಕೆ ಜಾಮೀನು ಸಿಗಲ್ಲ ಅಂತಾ ಅವರ ಶತ್ರುಗಳು ಹೇಳುತ್ತಿದ್ದಾರೆ ಎಂಬುದು ಅಭಿಮಾನಿ ಬಳಗದ ಆರೋಪ. ಹೀಗಿದ್ದಾಗಲೇ ದರ್ಶನ್ ಅವರ ಫ್ಯಾನ್ಸ್‌ಗೆ ಈಗ ಭರ್ಜರಿ ಸುದ್ದಿ ಸಿಕ್ಕಿದೆ. ಅದು ಏನೆಂದರೆ ಮುಂದಿನ ತಿಂಗಳೇ ನಟ ದರ್ಶನ್ ರಿಲೀಸ್ ಆಗುತ್ತಾರಾಂತೆ!

ಸೆಪ್ಟಂಬರ್ ತಿಂಗಳಲ್ಲೇ ನಟ ದರ್ಶನ್ ರಿಲೀಸ್?
ದರ್ಶನ್ ತೂಗುದೀಪ್ ನಟರಾಗಿ ಮಾತ್ರವಲ್ಲ, ಕರ್ನಾಟಕದಲ್ಲಿ ದೊಡ್ಡ ಬ್ರಾಂಡ್ ಆಗಿದ್ದರು. ಅಂದಹಾಗೆ, ನಟ ದರ್ಶನ್ ತೂಗುದೀಪ್ ಅವರು ಹೊರಗಡೆ ರಾಜನಂತೆ ಮೆರೆಯುತ್ತಿದ್ದರು. ನೂರಾರು ಕೋಟಿ ಆಸ್ತಿ, ಕೋಟಿ ಕೋಟಿ ಬೆಲೆಬಾಳುವ ಕಾರುಗಳು, ಕೈಗೆ ಒಂದು & ಕಾಲಿಗೆ ಒಂದು ಎಂಬಂತೆ ಸೌಲಭ್ಯಗಳು. ಇಷ್ಟೆಲ್ಲದರ ಜೊತೆಯಲ್ಲಿ, ಸುತ್ತಲೂ ಇದ್ದ ಬೆಂಬಲಿಗರು, ಈ ಅಬ್ಬರಕ್ಕಿಂತ ಹೆಚ್ಚಾಗಿ ಕೋಟ್ಯಂತರ ಅಭಿಮಾನಿಗಳಿಂದ ಸಿಗುತ್ತಿದ್ದ ಬೆಂಬಲ ದರ್ಶನ್‌ರ ಖದರ್ ಹೆಚ್ಚು ಮಾಡಿತ್ತು.
ಆದರೂ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ದರ್ಶನ್ ಅವರು ಇದೀಗ ಜೈಲಿನಲ್ಲಿ ಪರದಾಡುತ್ತಿದ್ದಾರೆ. ಹೀಗಿದ್ದಾಗಲೇ, ನಟ ದರ್ಶನ್ ಅವರು 2024ರ ಸೆಪ್ಟಂಬರ್ ತಿಂಗಳಲ್ಲೇ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆಗಿ ಹೊರ ಬರುತ್ತಾರೆ ಎನ್ನಲಾಗಿದೆ. ಈ ಬಗ್ಗೆ ಖ್ಯಾತ ಜೋತಿಷಿ ಒಬ್ಬರು ಖಾಸಗಿ ಸಂದರ್ಶನದ ವೇಳೆ ಮಾಹಿತಿನ ಕೂಡ ನೀಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ!
ಜೋತಿಷಿ ಅವರು ಇದೀಗ ಹೇಳಿರುವ ಪ್ರಕಾರ 2024ರ ಸೆಪ್ಟಂಬರ್ ತಿಂಗಳ 2ನೇ ವಾರದಂದು ದರ್ಶನ್ ಅವರಿಗೆ ಎಲ್ಲವೂ ಸರಿ ಹೊಂದಲಿದ್ದು, ಜೈಲಿನಿಂದ ಹೊರಗೆ ಬಂದು ರಾಜನಂತೆ ಮತ್ತೆ ಮೆರೆಯುತ್ತಾರೆ ಎಂದಿದ್ದಾರೆ ಖ್ಯಾತ ಜೋತಿಷಿ ಒಬ್ಬರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. ಹಾಗೇ ನಟ ದರ್ಶನ್ ಅವರ ಅಭಿಮಾನಿಗಳು, ಈ ವಿಡಿಯೋ ಶೇರ್ ಮಾಡುತ್ತಿದ್ದಾರೆ. ಈ ಮೂಲಕ ಮತ್ತೊಮ್ಮೆ ದರ್ಶನ್ ತೂಗುದೀಪ್‌ರ ಬೆಂಬಲಕ್ಕೆ ನಿಂತಿದ್ದಾರೆ. ಆದರೂ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಮಾತ್ರ ಜೋರಾಗಿದೆ.












Click it and Unblock the Notifications