ದರ್ಶನ್ ವಿರುದ್ಧ ಕೇಳಿಬಂದಿರುವ ಕೊಲೆ ಆರೋಪದ ಸಂತ್ರಸ್ತ ರೇಣುಕಾಸ್ವಾಮಿ ವಿರಶೈವ ಕುಟುಂಬದವರು

ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧದ ಕೊಲೆ ಆರೋಪ ಪ್ರಕರಣ ಈಗ ದೊಡ್ಡ ತಿರುವು ಪಡೆಯುತ್ತಿದ್ದು, ನಟ ದರ್ಶನ್ ಅವರು ಪೊಲೀಸರ ವಶದಲ್ಲಿ ಇದ್ದಾರೆ. ಇಂದು ಬೆಳಗ್ಗೆಯೇ ನಟ ದರ್ಶನ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಹೀಗಿದ್ದಾಗ ದರ್ಶನ್ & ಗ್ಯಾಂಗ್ ಸೇರಿಯೇ ಕೊಲೆ ಮಾಡಿದೆ ಎಂದು ಆರೋಪ ಮಾಡಲಾದ, ಮೃತ ರೇಣುಕಾಸ್ವಾಮಿ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಮತ್ತೊಂದ್ಕಡೆ ವಿರಶೈವ ಲಿಂಗಾಯತ ಸಂಪ್ರದಾಯದಂತೆ ಈಗ ಅಂತಿಮ ಸಂಸ್ಕಾರ ನಡೆಸಲು ಸಿದ್ಧತೆ ಸಾಗಿದೆ.

ಉಗುರಲ್ಲಿ ಹೋಗೋದಕ್ಕೆ ಕೊಡಲಿ ತೆಗೆದುಕೊಂಡರು, ಎನ್ನುವಂತೆ ಆಗಿದೆ ನಟ ದರ್ಶನ್‌ರ ಬಾಳು. ಯಾಕಂದ್ರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪದೇ ಪದೇ ಇಲ್ಲ ಸಲ್ಲದ ವಿಚಾರಗಳಿಗೆ ಹೋಗಿ ಸಂಕಷ್ಟದ ಪರಿಸ್ಥಿತಿಗೆ ಸಿಲುಕುತ್ತಾರೆ. ಈಗ ಕೂಡ ಅಷ್ಟೇ ಅದೇ ರೀತಿಯಾಗಿ ಕಷ್ಟದ ಪರಿಸ್ಥಿತಿಗೆ ಸಿಲುಕಿರುವ ನಟ ದರ್ಶನ್ ಅವರು ಪರದಾಡುತ್ತಿದ್ದಾರೆ. ಈ ಘಟನೆ ಬಳಿಕ ದರ್ಶನ್ ಕೂಡ ಆತಂಕದಲ್ಲಿ ಇದ್ದಾರೆ ಎಂಬ ಆರೋಪಗಳ ನಡುವೆ ಮಹತ್ವದ ಬೆಳವಣಿಗೆ ನಡೆದಿದೆ.

Darshan Thoogudeepa Will Face More Conflict After Renuka Swamy Case

ದರ್ಶನ್ ಕೇಸ್ ತನಿಖೆ ಸಿಬಿಐಗೆ?

ಅದರಲ್ಲಿಯೂ ಕೊಲೆ ಆರೋಪ ಪ್ರಕರಣದ ಮೃತ ರೇಣುಕಾಸ್ವಾಮಿ ಕುಟುಂಬದ ಸದಸ್ಯರು ನ್ಯಾಯಕ್ಕಾಗಿ ಆಗ್ರಹಿಸಿದ್ದು, ಈ ಕೇಸ್ ತನಿಖೆ ಸಿಬಿಐಗೆ ವಹಿಸಬೇಕು ಅಂತಿದ್ದಾರೆ. ಹೀಗಿದ್ದಾಗಲೇ ರೇಣುಕಾಸ್ವಾಮಿ ಅವರು ವೀರಶೈವ ಕುಟುಂಬಕ್ಕೆ ಸೇರಿದ್ದು ವೀರಶೈವ ಲಿಂಗಾಯತ ಕುಟುಂಬದ ಸಂಪ್ರದಾಯದ ಪ್ರಕಾರ ಈಗ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದಾರೆ. ಮತ್ತೊಂದು ಕಡೆ ದರ್ಶನ್ ಅವರ ಜೊತೆಗಾರರಿಗೆ, ರೇಣುಕಾಸ್ವಾಮಿ ಮನೆಯವರು ಹಿಡಿಶಾಪ ಹಾಕುತ್ತಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ನ್ಯಾಯ ಸಿಗುವ ತನಕ ಹೋರಾಟ ಪಕ್ಕಾ ಅಂತಿದ್ದಾರೆ.

ಅಭಿಮಾನಿಗಳ ಉಗ್ರ ಹೋರಾಟ?

ದರ್ಶನ್ ಅಭಿಮಾನಿಗಳು ಉಗ್ರ ಹೋರಾಟಕ್ಕೆ ಸಜ್ಜಾಗಿದ್ದಾರೆ, ಹೀಗಾಗಿ ಪೊಲೀಸರು ಕೂಡ ಪರಿಸ್ಥಿತಿ ನಿಭಾಸಲು ಸಜ್ಜಾಗಿದ್ದಾರೆ. ಅದರಲ್ಲೂ ದರ್ಶನ್‌ರ ಮನೆ ಇರುವ ರಾಜರಾಜೇಶ್ವರಿ ನಗರದಲ್ಲಿ ಪರಿಸ್ಥಿತಿಯು ಕೈಮೀರುತ್ತಿದೆ. ಆರ್‌ಆರ್ ನಗರದಲ್ಲಿ ದರ್ಶನ್ ಅವರ ಫೋಟೋ ಇರುವ ಬಾವುಟ ಹಿಡಿದು ದರ್ಶನ್ ಅವರ ಅಭಿಮಾನಿಗಳು ಜಮಾಯಿಸುತ್ತಿದ್ದಾರೆ. ಈಗಾಗಲೇ ಸಾವಿರಾರು ಅಭಿಮಾನಿಗಳು ರಾಜರಾಜೇಶ್ವರಿ ನಗರದಲ್ಲಿ ಒಂದೇ ಕಡೆ ಸೇರಿದ್ದಾರೆ. ಪೊಲೀಸ್ ಸಿಬ್ಬಂದಿ ಕೂಡ ಕ್ರಮ ಕೈಗೊಂಡಿದ್ದಾರೆ.

ದರ್ಶನ್ ಸಾಲು ಸಾಲು ವಿವಾದಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿವಾದ ಎರಡೂ ಒಟ್ಟೊಟ್ಟಿಗೆ ಹುಟ್ಟಿವೆ ಅಂತಾನೇ ಕಾಣಿಸುತ್ತದೆ. ಯಾಕಂದ್ರೆ ನಟ ದರ್ಶನ್ ಮಾಡಿಕೊಳ್ಳುತ್ತಿರುವ ಕಿರಿಕ್ ಒಂದಲ್ಲ, ಎರಡಲ್ಲ. ಈ ನಟ ದರ್ಶನ್ ತನ್ನ ವೈವಾಹಿಕ ಜೀವನದಿಂದ ಹಿಡಿದು, ಹೊರಗಡೆ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡುವ ತನಕ ಹಲವು ಆರೋಪ ಎದುರಿಸಿದ್ರು. ಈಗ ನೋಡಿದರೆ ನೇರವಾಗಿ ಕೊಲೆ ಮಾಡಿಸುವ ಹಂತಕ್ಕೆ ಬಂದಿದ್ದಾರೆ ಎಂಬ ಆರೋಪ ಕನ್ನಡ ನಾಡಿನಲ್ಲಿ ಸಂಚಲನ ಸೃಷ್ಟಿಸಿ ರೊಚ್ಚಿಗೆಬ್ಬಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+