Darshan Thoogudeepa: ವಿಜಯಲಕ್ಷ್ಮೀ ಅವರ ಮನೆಯಲ್ಲಿ ರಾತ್ರಿ ಕಳೆದ ದರ್ಶನ್ ತೂಗುದೀಪ್...

ಬಳ್ಳಾರಿ ಜೈಲಿನಿಂದ ಹೊರಗೆ ಬಂದಿರುವ ದರ್ಶನ್ ತೂಗುದೀಪ್ ಅವರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಬಳ್ಳಾರಿ ಜೈಲಿಗೆ ಹೋದ ನಂತರ ಆರೋಗ್ಯ ಸಮಸ್ಯೆ & ಮಾನಸಿಕ ಒದ್ದಾಟದ ವೇದನೆಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಒದ್ದಾಡಿ ಬಿಟ್ಟರು. ಈ ರೀತಿ ತಮ್ಮ ಡಿ-ಬಾಸ್ ನರಳಾಟ ನೋಡಿದ ಅಭಿಮಾನಿಗಳು ಕಣ್ಣೀರು ಹಾಕಿ ಬಿಟ್ರು. ಹೀಗಿದ್ದಾಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಕೋರ್ಟ್ ಜಾಮೀನು ನೀಡಿದ ಹಿನ್ನೆಲೆ ಬಿಡುಗಡೆ ಆಗಿದ್ದು, ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿದ್ದಾರೆ. ವಿಜಯಲಕ್ಷ್ಮೀ ಅವರ ಮನೆಯಲ್ಲಿ ರಾತ್ರಿ ಕಳೆದ ದರ್ಶನ್ ತೂಗುದೀಪ್....

ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಿಂದ ಹೊರಗೆ ಬಂದ ನಂತರ ಮೊದಲ ಎರಡು ದಿನಗಳನ್ನು ಹೆಂಡತಿ ವಿಜಯಲಕ್ಷ್ಮೀ ಅವರ ಮನೆಯಲ್ಲೇ ಕಳೆದಿದ್ದಾರೆ. ದರ್ಶನ್ ತೂಗುದೀಪ್ ಅವರಿಗೆ ಇದು ನೆಮ್ಮದಿ ತಂದಿದೆ, ಅದೆಷ್ಟೋ ವರ್ಷಗಳ ಕಾಲ ಹೆಂಡತಿ ವಿಜಯಲಕ್ಷ್ಮೀ ಅವರ ಜೊತೆಯಲ್ಲಿ ಜಗಳ ಮಾಡಿಕೊಂಡು ದೂರವಾಗಿದ್ದರು. ಆದರೆ ಇದೀಗ, ವಿಜಯಲಕ್ಷ್ಮೀ ಅವರ ಮನೆಯಲ್ಲಿ ರಾತ್ರಿ ಕಳೆದ ದರ್ಶನ್ ತೂಗುದೀಪ್....

Darshan Thoogudeepa Staying In Vijayalakshmi Home after Coming From Ballari

ಹೆಂಡತಿ & ಮಗನ ಜೊತೆ ಡಿ-ಬಾಸ್!

ಡಿ-ಬಾಸ್ ಅಂತ ಅಭಿಮಾನಿಗಳ ಹೃದಯದಿಂದ ಬಿರುದು ಪಡೆದ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಲ್ಲಿ ಪರದಾಡಿ ಒದ್ದಾಡಿಬಿಟ್ಟರು. ಇದನ್ನು ನೋಡಿ ಅಭಿಮಾನಿಗಳು ಹೊರಗಡೆ ಕಣ್ಣೀರು ಹಾಕಿದ್ದರು. ಸುಮಾರು 131 ದಿನ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಫ್ಯಾನ್ಸ್ ಕಾಯುತ್ತಿದ್ದರು. ಇದೀಗ ಬಳ್ಳಾರಿ ಜೈಲಿನಿಂದ ಹೊರಗಡೆ ಬಂದ ದಾಸ ದರ್ಶನ್ ತೂಗುದೀಪ್ ಅವರ ಪರ ಭಾರಿ ದೊಡ್ಡ ಜಯಘೋಷ ಮೊಳಗಿದೆ. ಮತ್ತೊಂದು ಕಡೆ ಅದೆಷ್ಟೋ ವರ್ಷಗಳ ನಂತರ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಹೆಂಡತಿ ಮನೆಯಲ್ಲಿ ಮಗನ ಜೊತೆ & ಕುಟುಂಬದ ಜೊತೆಗೆ ಹಾಯಾಗಿ ಕಾಲ ಕಳೆಯುತ್ತಿದ್ದಾರೆ.

ದರ್ಶನ್ ತೂಗುದೀಪ್ ಅವರಿಗೆ ಜಾಮೀನು ಸಿಗಬೇಕು ಎಂಬ ಹೋರಾಟ ಹಲವು ದಿನದಿಂದ ಕೂಡ ನಡೆಯುತ್ತಿತ್ತು. ಇದಕ್ಕಾಗಿ ದರ್ಶನ್ ಅವರ ಪರ ವಕೀಲರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿ, ವಾದ & ಪ್ರತಿವಾದ ನಡೆದಿತ್ತು. ಹೀಗಿದ್ದಾಗ ದರ್ಶನ್ ತೂಗುದೀಪ್ ಅವರಿಗೆ ಬೇಲ್ ಸಿಕ್ಕ ಖುಷಿಯಲ್ಲಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಅಲ್ಲದೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಂಭ್ರಮಾಚರಣೆ ಜೋರಾಗಿದ್ದು, ದೀಪಾವಳಿ ಖುಷಿ ಡಬಲ್ ಆಗಿದೆ. ಈ ವೇಳೆ ನಟ ದರ್ಶನ್ ಅವರು ತಮ್ಮ ಕುಟುಂಬದ ಜೊತೆಗೆ ಹಾಯಾಗಿ ಇರುವುದು ಅಭಿಮಾನಿಗಳಿಗೆ ಕಣ್ಣು ತುಂಬಿ ಬಂದಿದೆ.

131 ದಿನ ಜೈಲಿನಲ್ಲಿ ಪರದಾಡಿದ್ದರು

ದರ್ಶನ್ ತೂಗುದೀಪ್ ಅವರು ಕಳೆದ 131 ದಿನದಿಂದ ಸೆಂಟ್ರಲ್ ಜೈಲಿನಲ್ಲಿ ಪರದಾಡುತ್ತಿದ್ದರು. ಮೊದಲಿಗೆ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದ ದರ್ಶನ್ ತೂಗುದೀಪ್ ಅವರು ಆ ನಂತರ ಬಳ್ಳಾರಿ ಜೈಲು ಸೇರಿದ್ದರು. ಬಳ್ಳಾರಿಯ ಜೈಲಿನಿಂದ ದರ್ಶನ್ ತೂಗುದೀಪ್ ರಿಲೀಸ್ ಆಗಿದ್ದು, ಮುಂದೆ ಸಿನಿಮಾಗಳ ಮೂಲಕ ಮತ್ತೆ ತಮ್ಮ ಅಭಿಮಾನಿಗಳ ಮನಸ್ಸಿನಲ್ಲಿ ಹೊಸ ಖುಷಿ & ಸಂಭ್ರಮ ಮೂಡಿಸಲು ಡಿ-ಬಾಸ್ ಸಜ್ಜಾಗಿದ್ದಾರೆ ಅಂತಿದ್ದಾರೆ ಅಭಿಮಾನಿಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+