Darshan Thoogudeepa: ಡೆವಿಲ್ ಶೂಟಿಂಗ್ ಎಂಟ್ರಿ ಕೊಟ್ಟ ದಾಸ: ನಾಳೆನೇ ಶೂಟಿಂಗ್- ಎಲ್ಲಿ? ಭದ್ರತೆ ಹೇಗಿದೆ ಗೊತ್ತಾ?

ಡೆವಿಲ್ ಸಿನಿಮಾ ಶೂಟಿಂಗ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ಮತ್ತೆ ಭಾಗಿಯಾಗುತ್ತಿದ್ದಾರೆ. ಇದಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದೆ. ಮೈಸೂರಿನಲ್ಲಿ ಸ್ಥಗಿತಗೊಂಡಿದ್ದ ಡೆವಿಲ್ ಸಿನಿಮಾ ಶೂಟಿಂಗ್ ಮತ್ತೆ ಶುರುವಾಗಲಿದೆ. ಹತ್ತು ತಿಂಗಳ ಬಳಿಕ ದರ್ಶನ್ ಮತ್ತೆ ಶೂಟಿಂಗ್‌ಗೆ ಎಂಟ್ರಿ ಕೊಡುತ್ತಿದ್ದಾರೆ.

ಹೌದು... ಮೈಸೂರಿನಲ್ಲಿ ಡೆವಿಲ್ ಶೂಟಿಂಗ್‌ಗೆ ಪರ್ಮಿಷನ್ ಸಿಕ್ಕಿದೆ. ಈ ಹಿಂದೆ ಡೆವಿಲ್ ಶೂಟಿಂಗ್‌ನಲ್ಲಿ ಇದ್ದಾಗಲೇ ದರ್ಶನ್ ಅವರ ಬಂಧನವಾಗಿತ್ತು. ರ್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ತಂಗಿದ್ದ ದರ್ಶನ್ ಅವರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದರು. ಈಗ ಅವರು ಜೈಲಿನಿಂದ ಹೊರಬಂದು ಮತ್ತೆ ಶೂಟಿಂಗ್‌ನಲ್ಲಿ ಭಾಗಿಯಾಗಲು ನಿರ್ಧರಿಸಿದ್ದಾರೆ.

darshan thoogudeepa starting shooting from tomorrow- where how the security is

ಡೆವಿಲ್ ಶೂಟಿಂಗ್‌ಗೆ ಮುಹೂರ್ತ ಫಿಕ್ಸ್

ಮೈಸೂರಿನಲ್ಲಿ ಮಾರ್ಚ್ 12ರಿಂದ ಮಾರ್ಚ್ 15ರವರೆಗೆ ಶೂಟಿಂಗ್‌ಗೆ ಅನುಮತಿ ಸಿಕ್ಕಿದೆ. ಇದರ ಜೊತೆಗೆ ಹತ್ತು ಜನ ಪೊಲೀಸರು ಒಂದು ಪಾಳಿಯಂತೆ ಅವರು ಶೂಟಿಂಗ್ ಮಾಡುವ ಸಂದರ್ಭದಲ್ಲಿ ಭದ್ರತೆ ಕೊಡಲು ಕೂಡ ಅವಕಾಶ ಸಿಕ್ಕಿದೆ. ಇದೇ ಸಂದರ್ಭದಲ್ಲಿ ಭದ್ರತೆಗಾಗಿ 16,4,785 ರೂಪಾಯಿ ಹಣವನ್ನು ಕಟ್ಟಿಸಿಕೊಂಡಿದ್ದಾರೆ.

ಡೆವಿಲ್ ಶೂಟಿಂಗ್ ಎಂಟ್ರಿ ಕೊಟ್ಟ ದಾಸ

ಸ್ಯಾಂಡಲ್‌ವುಡ್ ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಹೊರಬಂದಿದ್ದರು ಕೂಡ ಅವರ ಮೇಲಿನ ಅಭಿಮಾನ ಮಾತ್ರ ಅಭಿಮಾನಿಗಳಲ್ಲಿ ಕೊಂಚವೂ ಕಡಿಮೆ ಆಗಿಲ್ಲ. ಅವರ ಸಿನಿಮಾ ಹಾಗೂ ಅವರ ನಟನೆಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದರಿಂದ ಈವರೆಗೂ ಡಿ-ಬಾಸ್‌ಗೆ ಅವರಿಗೆ ಸಿನಿಮಾ ಮಾಡಲು ಸಾಧ್ಯವಾಗಿರಲಿಲ್ಲ.

ಆದರೀಗ ಅರ್ಧಕ್ಕೆ ನಿಂತು ಹೋಗಿದ್ದ ಡೆವಿಲ್ ಸಿನಿಮಾ ಶೂಟಿಂಗ್ ಮತ್ತೆ ಆರಂಭಿಸಲಾಗುತ್ತಿದೆ. ನಾಳೆಯಿಂದ ದರ್ಶನ್ ಮೈಸೂರಿನಲ್ಲಿ ಸಿನಿಮಾ ಶೂಟಿಂಗ್ ಆರಂಭಿಸಲಿದ್ದಾರೆ. ಈ ವೇಳೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಸಾಧ್ಯತೆ ಇದ್ದು, ಶೂಟಿಂಗ್ ಮುಗಿಯುವವರೆಗೂ ಭಾರೀ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.

darshan thoogudeepa starting shooting from tomorrow- where how the security is

ನಾಳೆನೇ ದಾಸನ ಶೂಟಿಂಗ್ ಶುರು

ನಾಳೆ ಶೂಟಿಂಗ್ ಶುರುವಾಗಲಿದ್ದು ಇದ್ದಕ್ಕಾಗಿ ದರ್ಶನ್ ಸಿಕ್ಕಾಪಟ್ಟೆ ತಯಾರಿ ಮಾಡಿಕೊಂಡಿದ್ದಾರೆ. ಕಾಲು ನೋವಿನಿಂದ ಬಳಲುತ್ತಿರುವ ದರ್ಶನ್ ಇದೀಗ ಚೇತರಿಸಿಕೊಂಡಿದ್ದಾರೆ. ಆದರೆ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಆದರೂ ಕೂಡ ತಮ್ಮ ವೃತ್ತಿ ಜೀವನವನ್ನು ಹೊಸದಾಗಿ ಆರಂಭಿಸಲು ದರ್ಶನ್ ಮನಸ್ಸು ಮಾಡಿದ್ದಾರೆ. ಹೀಗಾಗಿ ದರ್ಶನ್ ಅಭಿಮಾನಿಗಳು ಕೂಡ ಬಹು ದಿನಗಳ ಬಳಿಕ ತಮ್ಮ ನೆಚ್ಚಿನ ನಟನನ್ನು ದೊಡ್ಡ ಪರದೆಯ ಮೇಲೆ ನೋಡಲು ಹೆಚ್ಚು ಕುತೂಹಲರಾಗಿದ್ದಾರೆ.

ಒಟ್ಟಿನಲ್ಲಿ ನಾಳೆ ದರ್ಶನ್ ಶೂಟಿಂಗ್ ಅನ್ನು ಹೇಗೆ ಪೂರ್ಣಗೊಳಿಸುತ್ತಾರೆ? ಶೂಟಿಂಗ್ ಪೂರ್ಣಗೊಳಿಸಲು ಸಾಧ್ಯವಾಗುತ್ತಾ? ಯಾವುದೇ ತೊಂದರೆ ಇಲ್ಲದೆ ಶೂಟಿಂಗ್ ಮುಗಿಯುತ್ತಾ? ಇದೇ ವರ್ಷ ದರ್ಶನ್ ಫ್ಯಾನ್ಸ್‌ಗೆ ಗುಡ್‌ ನ್ಯೂಸ್ ಸಿಗುತ್ತಾ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+