Darshan Thoogudeepa: ದರ್ಶನ್ ತೂಗುದೀಪ್‌ಗೆ ಇವತ್ತು ಜಾಮೀನು ಸಿಕ್ಕರೆ ರಿಲೀಸ್ ಆಗುವುದು ಯಾವಾಗ?
ದರ್ಶನ್ ತೂಗುದೀಪ್ ಅಭಿಮಾನಿಗಳು ಉಸಿರು ಬಿಗಿ ಹಿಡಿದು ಇದೀಗ ಕಾಯುತ್ತಿದ್ದಾರೆ. ಎಲ್ಲರ ಗಮನ ಇದೀಗ ಬಳ್ಳಾರಿ ಜೈಲಿನ ಮೇಲೆ ನೆಟ್ಟಿದೆ. ದರ್ಶನ್ ತೂಗುದೀಪ್ ಅವರ ಜಾಮೀನಿಗೆ ಇಂದು ವಿಚಾರಣೆ ನಡೆಸಲಿರುವ ಮಾನ್ಯ ನ್ಯಾಯಾಲಯ, ಅಭಿಮಾನಿಗಳ ಪಾಲಿನ ಡಿ-ಬಾಸ್ ದರ್ಶನ್ ತೂಗುದೀಪ್‌ಗೆ ರಿಲೀಫ್ ನೀಡುವ ಸಾಧ್ಯತೆ ದಟ್ಟವಾಗಿದೆ. ಅತ್ಯಂತ ಸಂಭ್ರಮದಿಂದ ಹಾಗೂ ಸಡಗರದಿಂದ ದರ್ಶನ್ ತೂಗುದೀಪ್ ಅವರನ್ನ ಬರಮಾಡಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಹಾಗಾದ್ರೆ, ದರ್ಶನ್ ತೂಗುದೀಪ್‌ಗೆ ಇವತ್ತು ಬೇಲ್ ಸಿಕ್ಕರೆ ರಿಲೀಸ್ ಆಗುವುದು ಯಾವಾಗ?
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ಅಭಿಮಾನಿಗಳ ಪಾಲಿನ ಪ್ರೀತಿಯ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಸಮಸ್ಯೆ ಮೇಲೆ ಸಮಸ್ಯೆ ಎದುರಾಗುತ್ತಿದೆ. ಹಾಗೇ ದರ್ಶನ್ ತೂಗುದೀಪ್‌ಗೆ ಜೊತೆಯಲ್ಲಿ ಇದ್ದವರೇ ಬೆನ್ನಿಗೆ ಚೂರಿ ಹಾಕಿದ್ದಾರೆ ಅನ್ನೋದು ಈಗ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಮಾಡುತ್ತಿರುವ ಆರೋಪ. ಹೀಗೆ ಆರೋಪ & ಪ್ರತ್ಯಾರೋಪದ ನಡುವೆ ದಿಢೀರ್ ಸಿಹಿಸುದ್ದಿ ಒಂದು ಸಿಗುತ್ತಿದೆ.

ನಟ ದರ್ಶನ್ ತೂಗುದೀಪ್ ಅವರಿಗೆ ಇಂದು ಕೋರ್ಟ್ ಜಾಮೀನು ನೀಡುವುದು ಬಹುತೇಕ ಖಚಿತ ಎಂಬ ಮಾತು ಕೇಳಿಬರುತ್ತಿದೆ. ಈ ಮೂಲಕ ನಟ ದರ್ಶನ್ ತೂಗುದೀಪ್ ಜೈಲಿನಿಂದ ರಿಲೀಸ್ ಆಗಿ ಹೊರ ಬರಲಿದ್ದಾರೆ ಎಂಬ ಖುಷಿಯಲ್ಲಿ ಫ್ಯಾನ್ಸ್ ಇದ್ದಾರೆ. ಹಾಗಾದರೆ ದರ್ಶನ್ ತೂಗುದೀಪ್ ಅವರಿಗೆ ಇವತ್ತು ಜಾಮೀನು ಸಿಕ್ಕರೆ ರಿಲೀಸ್ ಆಗುವುದು ಯಾವಾಗ? ಅಭಿಮಾನಿ ದೇವರುಗಳಿಗೆ ಸಿಹಿಸುದ್ದಿ ಸಿಗುವುದು ಯಾವಾಗ?
ದರ್ಶನ್ ತೂಗುದೀಪ್ ರಿಲೀಸ್ ಯಾವಾಗ?
ಕೊಲೆ ಪ್ರಕರಣದಲ್ಲಿ ಜಾಮೀನು ಸಿಗುವುದು ಸಾಕಷ್ಟು ತಡವಾಗುತ್ತದೆ. ಅದೇ ರೀತಿ ದರ್ಶನ್ ತೂಗುದೀಪ್ ಕೂಡ ಇದೀಗ ಕೊಲೆ ಆರೋಪ ಎದುರಿಸಿ ಜೈಲಿಗೆ ಹೋಗಿರುವ ಕಾರಣ ಪರಿಸ್ಥಿತಿ ಕೈಮೀರಿ ಹೋಗಿದೆ. ಹೀಗಿದ್ದಾಗ ಇಂದು ಮಾನ್ಯ ನ್ಯಾಯಾಲಯವು, ದರ್ಶನ್ ತೂಗುದೀಪ್ ಅವರಿಗೆ ಜಾಮೀನು ನೀಡಿದರೂ ಇಂದೇ ಅವರು ರಿಲೀಸ್ ಆಗುವುದಿಲ್ಲ. ಯಾಕೆ ಗೊತ್ತಾ? ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.
ಎಷ್ಟು ದಿನ ಸಮಯ ಬೇಕು?
ಕೋರ್ಟ್ ಜಾಮೀನು ನೀಡಿದ ನಂತರ ಅದರ ಪ್ರತಿ ಜೈಲಿನ ಅಧಿಕಾರಿಗಳಿಗು ತಲುಪಬೇಕಿದೆ. ಯಾವುದೇ ಕೊಲೆ ಕೇಸ್‌ನಲ್ಲಿ ಜೈಲಿನ ಅಧಿಕಾರಿಗಳು ಅತ್ಯಂತ ಮುತುವರ್ಜಿ ವಹಿಸಿರುತ್ತಾರೆ. ಹಾಗೇ ಆರೋಪಿಗಳಿಗೆ ಜಾಮೀನು ಸಿಕ್ಕ ನಂತರ ಅದರ ಪ್ರತಿ ಜೈಲಿನ ಅಧಿಕಾರಿಗಳಿಗೆ ತಲುಪಿ ಅದರ ಪರಿಶೀಲನೆ ಆಗಬೇಕು. ಆ ನಂತರ, ಜೈಲಿನ ಅಧಿಕಾರಿಗಳು ಅದನ್ನ ಚೆಕ್ ಮಾಡಿದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಹೀಗಾಗಿ ನಟ ದರ್ಶನ್ ತೂಗುದೀಪ್ ಅವರಿಗೆ ಈ ಸಮಯದಲ್ಲಿ ಜಾಮೀನು ಸಿಕ್ಕರೂ, ಅದರ ಪ್ರಕ್ರಿಯೆಗಳು ಪೂರ್ಣವಾಗಬೇಕು. ಜಾಮೀನಿನ ಪ್ರತಿ ಜೈಲಿಗೆ ತಲುಪಿ ಆ ನಂತರ ಅವರ ಬಿಡುಗಡೆ ಆಗಬೇಕು. ಹೀಗಾಗಿ ಕನಿಷ್ಠ ಎಂದರೂ 24 ಗಂಟೆ ಸಮಯ ಬೇಕಾಗಬಹುದು ಎಂಬ ಅಭಿಪ್ರಾಯ ಕೇಳಿಬಂದಿದೆ.












Click it and Unblock the Notifications