Darshan Chikkanna Comedy: ಹೀರೋ ಬಂದ್ರು ಸೈಡ್ ಬಿಡಿ ಎಂದು ರೇಗಿಸಿದ ದರ್ಶನ್

ಸ್ಯಾಂಡಲ್‌ವುಡ್ ನಟ ಧನ್ವೀರ್ ಅಭಿನಯದ ನಾಲ್ಕನೇ ಸಿನಿಮಾ ವಾಮನ ಏಪ್ರಿಲ್ 10ರಂದು ಭರ್ಜರಿಯಾಗಿ ತೆರೆಕಂಡಿದೆ. ದೊಡ್ಡ ಪರದೆಯ ಮೇಲೆ ಮಿಂಚುತ್ತಿರುವ ಧನ್ವೀರ್ ಸಿನಿಮಾವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇದೆಕ್ಕೆಲ್ಲಾ ಕಾರಣ ನಟ ದರ್ಶನ್ ಹಾಗೂ ಚಿಕ್ಕಣ್ಣ ಎಂದು ಹೇಳಲಾಗುತ್ತಿದೆ.

ಹೌದು ಸಿನಿಮಾ ತೆರೆ ಕಾಣುವ ಹಿಂದಿನ ದಿನ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ಹಾಗೂ ಹಾಸ್ಯ ನಟ ಚಿಕ್ಕಣ್ಣ ಆಪ್ತ ಧನ್ವೀರ್ ಅಭಿನಯದ 'ವಾಮನ' ಸಿನಿಮಾವನ್ನು ವೀಕ್ಷಿಸಿದರು. ಇದಕ್ಕಾಗಿ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್‌ಗೆ ದರ್ಶನ್ ಹಾಗೂ ಚಿಕ್ಕಣ್ಣ ಆಗಮಿಸಿದ್ದರು. ಈ ವೇಳೆ ಸ್ವತ: ಧನ್ವೀರ್ ಅವರೇ ಮುಂದೆ ನಿಂತು ಇಬ್ಬರು ನಟರನ್ನು ಮನಸ್ಸಿಂದ ಸ್ವಾಗತಿಸಿದರು. ಈ ಸಂದರ್ಭದಲ್ಲಿ ದರ್ಶನ್ ತಮ್ಮ ಆಪ್ತರನ್ನು ರೇಗಿಸಿದ್ದಾರೆ.

Darshan thoogudeepa make fun of actor chikkanna

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಬಂದಾಗಿನಿಂದಲೂ ಮೊದಲ ಬಾರಿಗೆ ದರ್ಶನ್ ಮಾಧ್ಯಮದ ಮುಂದೆ ಮಾತನಾಡಿದರು. ವಾಮನ ಸಿನಿಮಾವನ್ನು ಕೊಂಡಾಡಿ ಧನ್ವೀರ್ ಸಿನಿಮಾವನ್ನು ನೋಡಿ ಹಾರೈಸಿ ಆಶೀರ್ವಾದ ಮಾಡಿ ಎಂದು ದರ್ಶನ್ ಸಿನಿಮಾ ಬಗ್ಗೆ ಮನ ಬಿಚ್ಚಿ ಮಾತನಾಡಿದರು. ಆದರೆ ಇಲ್ಲಿ ವಿಷಯ ಅದಲ್ಲ. ಸಿನಿಮಾ ನೋಡಲು ಹೋಗುವಾಗ ದರ್ಶನ್ ತಮ್ಮ ಆತ್ಮೀಯ ಗೆಳೆಯನನ್ನು ರೇಗಿಸಿದ್ದಾರೆ.

Take a Poll

ವಾಮನ ಸಿನಿಮಾವನ್ನು ತೋರಿಸಲು ದರ್ಶನ್ ಹಾಗೂ ಚಿಕ್ಕಣ್ಣ ಅವರನ್ನು ಧನ್ವೀರ್ ಕರೆದುಕೊಂಡು ಹೋಗುತ್ತಿದ್ದರು. ಈ ಸಮಯದಲ್ಲಿ ಧ್ವನೀರ್ ಹಾಗೂ ದರ್ಶನ್ ಮುಂದೆ ಬರುವಾಗ ಚಿಕ್ಕಣ್ಣ ಅವರಿಂದೆ ಬರುತ್ತಿದ್ದರು. ಈ ವೇಳೆ ದರ್ಶನ್ ಅವರು ಚಿಕ್ಕಣ್ಣ ಅವರನ್ನು ಮುಂದೆ ಕರೆದು 'ಹೀರೋ ಬಂದ್ರು ಸೈಡ್ ಬಿಡಿ' ಎಂದು ರೇಗಿಸಿದ್ದಾರೆ. ಅದಕ್ಕೆ ಚಿಕ್ಕಣ್ಣ ನಾಚಿಕೊಂಡು ಮತ್ತೆ ಹಿಂದೆ ಹೋಗುವಾಗ ದರ್ಶನ್ ಅವರ ಹೆಗಲ ಮೇಲೆ ಕೈ ಹಾಕಿ ಜೊತೆಗೆ ಕರೆದುಕೊಂಡು ಸಿನಿಮಾ ಹಾಲ್‌ಗೆ ತೆರಳಿದರು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ದರ್ಶನ್ ಒಬ್ಬರನ್ನು ಹಚ್ಚಿಕೊಂಡರೆ ಅದೆಷ್ಟು ಪ್ರೀತಿಸುತ್ತಾರೆ ಅನ್ನೋದನ್ನು ಜಿಟಿ ಮಾಲ್‌ನಲ್ಲಿ ನಡೆದ ಈ ಘಟನೆಯಿಂದ ಅರ್ಥವಾಗುತ್ತದೆ. ದರ್ಶನ್ ಅವರನ್ನು ಚಿಕ್ಕಣ್ಣ ಅವರು ತುಂಬಾ ಪ್ರೀತಿಸುತ್ತಾರೆ.

ಅಲ್ಲದೆ ವಾಮನ ಸಿನಿಮಾ ನಟ ಧನ್ವೀರ್ ಅವರು ದರ್ಶನ್ ಜೈಲಿನಲ್ಲಿ ಇರುವಾಗ ವಿಜಯಲಕ್ಷ್ಮೀ ಅವರೊಂದಿಗೆ ಒಬ್ಬ ತಮ್ಮನಾಗಿ ನಿಂತುಕೊಂಡರು. ಅವರಿಗೆ ತಮ್ಮ ಕೈಲಾದಷ್ಟು ಸಹಾಯ ಕೂಡ ಮಾಡಿದರು. ಈ ಸಹಾಯ ದರ್ಶನ್ ಹಾಗೂ ಧನ್ವೀರ್ ಅವರ ನಡುವಿನ ಆಪ್ತತೆಯನ್ನು ಹೆಚ್ಚಿಸಿದೆ.

ಹೀಗಾಗಿ ದರ್ಶನ್ ವಾಮನ ಸಿನಿಮಾ ರಿಲೀಸ್‌ಗೂ ಮುನ್ನ ಸಿನಿಮಾ ನೋಡಿ ಮಾಧ್ಯಮದ ಮುಂದೆ ಮಾತನಾಡಿದರು. ವಾಮನ ಸಿನಿಮಾ ನೋಡಿ ಹಾರೈಸಿ ಸಿನಿಮಾ ತುಂಬಾ ಚೆನ್ನಾಗಿದೆ ಎಂದು ಮೆಚ್ಚಿಕೊಂಡರು. ಅಲ್ಲದೇ ಚಿಕ್ಕಣ್ಣ ಕೂಡ ಸಿನಿಮಾ ಬಗ್ಗೆ ಮಾತನಾಡಿ ಒಳ್ಳೆಯ ಫೀಡ್‌ಬ್ಯಾಕ್ ಕೊಟ್ಟಿದ್ದರು. ಹೀಗಾಗಿ ಸಿನಿಮಾವನ್ನು ನೋಡಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್‌ಗೆ ಬರುತ್ತಿದ್ದಾರೆ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+