ನನ್ನ ಬಿಟ್ಟುಬಿಡಿ ಸರ್ ಪ್ಲೀಸ್.. ಅಂತಾ ಪೊಲೀಸರ ಕಾಲು ಹಿಡಿದ ನಟ ದರ್ಶನ್!

ದರ್ಶನ್ ಅಹಂಕಾರ ಮಣ್ಣಲ್ಲಿ ಮಣ್ಣಾಗಿ ಹೋಗಿದೆ, ಕೊಲೆ ಆರೋಪದಲ್ಲಿ ಅರೆಸ್ಟ್ ಆಗಿರುವ ಈ ನಟ ಈಗ ಸೈಲೆಂಟ್ ಆಗಿದ್ದಾನೆ. ಅದರಲ್ಲೂ ರೇಣುಕಾಸ್ವಾಮಿ ಕೊಲೆ ಆರೋಪ ಹಿನ್ನೆಲೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ, ಕೊಲೆಯಲ್ಲಿ ದರ್ಶನ್ ಪಾತ್ರ ದೊಡ್ಡದಾಗಿದೆ ಎಂಬುದಕ್ಕೆ ಬಲವಾದ ಸಾಕ್ಷ್ಯ ಸಿಕ್ಕಿದೆ ಎಂಬ ಆರೋಪಗಳ ನಡುವೆ ಇದೀಗ ದರ್ಶನ್ ಪೊಲೀಸರ ಕಾಲು ಹಿಡಿದ್ದಾರಂತೆ!

ದರ್ಶನ್ & ಗ್ಯಾಂಗ್ ರೇಣುಕಾಸ್ವಾಮಿ ಹತ್ಯೆ ಮಾಡಿದೆ ಎಂದು ಆರೋಪ ಕೇಳಿಬಂದ ನಂತರ. ಈ ಇಡೀ ಗ್ಯಾಂಗ್‌ನ ಜೀಪ್‌ಗೆ ಎತ್ತಾಕಿ ಪೊಲೀಸ್ ಠಾಣೆಗೆ ಕರೆತಂದ ಪೊಲೀಸರು, ಕಳೆದ 1 ವಾರದಿಂದ ನಿರಂತರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಹೀಗಿದ್ದಾಗ ದರ್ಶನ್ ನೇರವಾಗಿ ರೇಣುಕಾಸ್ವಾಮಿಯ ಕೊಲೆಯಲ್ಲಿ ಭಾಗಿ ಆಗಿದ್ದಾರೆ ಎಂಬ ಆರೋಪಗಳ ನಡುವೆ, ಸತ್ಯ ಒಪ್ಪಿಕೊಳ್ಳಲು ಈತ ಸಿದ್ಧವೇ ಇಲ್ಲ. ಆದರೆ ಪೊಲೀಸರು ದರ್ಶನ್‌ಗೆ ಏನ್ ಮಾಡ್ತಿದ್ದಾರೆ ಗೊತ್ತಾ?

Darshan Thoogudeepa Is Requesting This With Karnataka Police

ಪೊಲೀಸರಿಂದ ದರ್ಶನ್‌ಗೆ ಕ್ಲಾಸ್!

ಏನೇ ಕೇಳಿದರೂ ನನಗೆ ಗೊತ್ತೇ ಇಲ್ಲ ನನಗೆ ಗೊತ್ತೇ ಇಲ್ಲ ಅಂತಿದ್ದಾನೆ. ಆದರೆ ದರ್ಶನ್ ಸೊಕ್ಕು, ಅಹಂಕರಾದ ಮಾತು ಕರಗಿಸಿರುವ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಶುರು ಮಾಡಿದ್ದಾರೆ ಎನ್ನಲಾಗಿದೆ. ಆದರೆ ಪೊಲೀಸರ ಸಿಟ್ಟು ನೋಡಿ ದರ್ಶನ್ ಬೆಚ್ಚಿಬಿದ್ದು, ಈಗ ಪೊಲೀಸರ ಕಾಲು ಹಿಡಿಯಲು ಹೋದ ಘಟನೆ ವರದಿ ಆಗಿದೆ. 'ಸರ್ ನನ್ನದು ತಪ್ಪಾಯ್ತು, ಸರ್ ನನ್ನ ಬಿಟ್ಟುಬಿಡಿ' ಅಂತಾ ನಟ ದರ್ಶನ್ ನೇರವಾಗಿ ಪೊಲೀಸರ ಕಾಲು ಹಿಡಿಯಲು ಹೋಗಿದ್ದಾನಂತೆ!

ಏಯ್.. ಏನೋ ಇದು ನಿಂದು!!

ಪೊಲೀಸರು ಕೊಲೆ ಆರೋಪಿಗಳಿಗೆ ಮರ್ಯಾದಿ ಕೊಡುವುದೇ ಇಲ್ಲ, ಯಾಕಂದ್ರೆ ಕೊಲೆಗಡುಕರ ಬಳಿ ಸಮಾಧಾನ & ಶಾಂತ ರೀತಿಯಲ್ಲಿ ವರ್ತಿಸಿದರೆ ಸತ್ಯ ಹೊರಗೆ ಬರುವುದೇ ಇಲ್ಲ. ಆದರೂ, ಕೊಲೆ ಆರೋಪಿ ನಟ ದರ್ಶನ್ ಬಳಿ ಪೊಲೀಸರು ಸ್ವಲ್ಪ ಸಮಾಧಾನವಾಗಿ ಇದ್ದರು. ಹೀಗಿದ್ದರೂ ದರ್ಶನ್ ಮಾತ್ರ ತನ್ನ ವರಸೆ ಬದಲಾಯಿಸಿಲ್ಲ, ಹೀಗಾಗಿ ಇದೀಗ ಪೊಲೀಸರು ರೊಚ್ಚಿಗೆದ್ದಿದ್ದಾರೆ.

ತಮ್ಮದೇ ಶೈಲಿಯಲ್ಲಿ ನಟ ದರ್ಶನ್‌ಗೆ ಸತ್ಯ ಹೇಳು ಅಂತಿದ್ದಾರೆ. ಪೊಲೀಸರ ಖಡಕ್ ಮಾತನ್ನು ಕೇಳಿ ಬೆಚ್ಚಿಬಿದ್ದಿರುವ ಕೊಲೆ ಆರೋಪಿ ದರ್ಶನ್, ಸರ್ ನನ್ನಿಂದ ತಪ್ಪಾಗಿದೆ ಬಿಟ್ಟುಬಿಡಿ ಪ್ಲೀಸ್ ಅಂತಾ ಕಾಲು ಹಿಡಿಯಲು ಹೋದನಂತೆ. ಆಗ ಪೊಲೀಸರು, ಏನೋ ನೀನು ಇಷ್ಟು ದಿನ ಬರೀ ಸುಳ್ಳು ಹೇಳ್ತಾ ಇದ್ದೆ ಯಾಕೋ? ಅಂತಾ ಪ್ರಶ್ನೆ ಮಾಡಿದ್ದಾರಂತೆ, ಅಲ್ಲದೆ ಕೊಲೆ ಆರೋಪದಲ್ಲಿ ನಿನ್ನ ಪಾತ್ರದ ಬಗ್ಗೆ ಎಲ್ಲಾ ರೀತಿಯ ಸಾಕ್ಷ್ಯ ಇದೆ ಎಂದು ಪೊಲೀಸರು ದರ್ಶನ್‌ಗೆ ತಿಳಿಸಿದ್ದಾರಂತೆ.

ನಟ ಚಿಕ್ಕಣ್ಣಗೆ ಪೊಲೀಸರ ನೋಟಿಸ್!

ದರ್ಶನ್ ಸಹವಾಸ ಮಾಡಿದ್ದಕ್ಕೆ ನೂರಾರು ಜನ ಸಮಸ್ಯೆಗೆ ಸಿಲುಕಿದ್ದಾರೆ, ಅದರಲ್ಲೂ ಈಗ ತಾನೆ ಹೀರೋ ಆಗಿ ಜೀವನ ಕಟ್ಟಿಕೊಳ್ಳುತ್ತಿದ್ದ ನಟ ಚಿಕ್ಕಣ್ಣ ಕೂಡ ಮಾಜಿ ಡಿ-ಬಾಸ್ ಸಹವಾಸದಿಂದ ಪೊಲೀಸ್ ಠಾಣೆಗೆ ಹೋಗುವಂತಾಗಿದೆ. ಇಲ್ಲಿ ಆಗಿದ್ದು ಏನು ಅಂದ್ರೆ, ಜೂನ್‌ 8 ರಂದು ರೇಣುಕಾ ಸ್ವಾಮಿ ಮೇಲೆ ಹಲ್ಲೆ & ಕೊಲೆ ನಡೆಸುವ ಮೊದಲು ದರ್ಶನ್‌ & ಗ್ಯಾಂಗ್ ಆರೋಪಿ ವಿನಯ್‌ಗೆ ಸೇರಿದ ಸ್ಟೋನಿ ಬ್ರೂಕ್ ಎಂಬ ಖಾಸಗಿ ಹೋಟೆಲ್‌ನಲ್ಲಿ ಪಾರ್ಟಿ ಮಾಡಿದ್ದರಂತೆ. ಇದೇ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಕೂಡ ಭಾಗವಹಿಸಿದ್ರು ಎನ್ನಲಾಗಿದೆ. ಹೀಗಾಗಿ ಪೊಲೀಸರು ತನಿಖೆಯನ್ನ ನಡೆಸಿ ಈ ವಿಚಾರ ಕನ್ಫರ್ಮ್ ಮಾಡಿಕೊಂಡಿದ್ದು, ಇದೀಗ ನಟ ಚಿಕ್ಕಣ್ಣಗೆ ವಿಚಾರಣೆ ಬಾ ಎಂದು ನೋಟಿಸ್ ಕೂಡ ನೀಡಿದ್ದಾರೆ.

ನಟ ಚಿಕ್ಕಣ್ಣ ಕೂಡ ಅರೆಸ್ಟ್?

ಹೌದು, ಇದೀಗ ದರ್ಶನ್ ಅರೆಸ್ಟ್ ಆದ ನಂತರ ನಟ ಚಿಕ್ಕಣ್ಣ ಕೂಡ ಅರೆಸ್ಟ್ ಆಗುತ್ತಾರಾ? ಎಂಬ ಪ್ರಶ್ನೆ ಕಾಡತೊಡಗಿದೆ. ಅಷ್ಟಕ್ಕೂ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣವೇ ವಿಚಾರಣೆಗೆ ಹಾಜರಾಗಲು ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರು ಇಂದು ಬೆಳಗ್ಗೆ ಚಿಕ್ಕಣ್ಣನಿಗೆ ನೋಟಿಸ್‌ ನೀಡಿದ್ದು ತಕ್ಷಣ ಕಾಮಾಕ್ಷಿಪಾಳ್ಯ ಠಾಣೆಗೆ ಹಾಜರಾಗಲು ಸೂಚನೆ ಕೂಡ ನೀಡಿದ್ದಾರಂತೆ. ಹೀಗಾಗಿ ಚಿಕ್ಕಣ್ಣ ವಿಚಾರಣೆಗೆ ಓಡೋಡಿ ಬರುವ ಸಾಧ್ಯತೆ ಇದೆ.

ಆದರೆ ಸದ್ಯಕ್ಕೆ ನಟ ಚಿಕ್ಕಣ್ಣ ಅರೆಸ್ಟ್ ಆಗುವುದಿಲ್ಲ, ಆದರೆ ಪಾರ್ಟಿ ಮಾಡುವ ಸಮಯದಲ್ಲಿ. ಈ ಕೊಲೆ ಸಂಬಂಧಿಸಿದ ವಿಚಾರ ಪ್ರಸ್ತಾಪ ಆಗಿತ್ತಾ? ನಟ ದರ್ಶನ್ ರೇಣುಕಾಸ್ವಾಮಿ ಕೊಲೆಯ ಬಗ್ಗೆ ಏನಾದ್ರೂ ಹೇಳಿದ್ದರಾ? ಎಂಬ ಬಗ್ಗೆ ಚಿಕ್ಕಣ್ಣ ಅವರನ್ನ ವಿಚಾರಣೆ ಮಾಡಲಿದ್ದಾರೆ ಪೊಲೀಸರು ಎನ್ನಲಾಗಿದೆ. ಹಾಗೇ ಚಿಕ್ಕಣ್ಣ ಏನಾದ್ರೂ ಈ ವಿಚಾರಗಳನ್ನ ತಿಳಿಸಿದರೆ, ಚಿಕ್ಕಣ್ಣ ಹೇಳಿಕೆಯನ್ನ ಸಾಕ್ಷಿಯಾಗಿ ಪರಿಗಣಿಸುತ್ತೇವೆ ಅಂತಿದ್ದಾರೆ ಪೊಲೀಸರು. ಹೀಗಾಗಿ ನಟ ಚಿಕ್ಕಣ್ಣಗೆ ಸದ್ಯಕ್ಕೆ ರಿಲೀಫ್ ಸಿಕ್ಕಂತಾಗಿದೆ.

ದರ್ಶನ್ ಮನುಷ್ಯನ ರಾಕ್ಷಸನಾ...

ಕರ್ನಾಟಕದಲ್ಲಿ ದರ್ಶನ್ ದೊಡ್ಡ ಹೆಸರು ಮಾಡಿದ್ದಾನೆ. ನಟನೆ ಮೂಲಕ ಕೋಟ್ಯಂತರ ಫ್ಯಾನ್ಸ್ ಸಂಪಾದನೆ ಮಾಡಿದ್ದಾನೆ. ಇದೇ ಕಾರಣಕ್ಕೆ ದರ್ಶನ್‌ಗೆ ದೊಡ್ಡ ಜವಾಬ್ದಾರಿ ಇತ್ತು. ಆದರೆ ಹೀಗೆ ಜವಾಬ್ದಾರಿ ಸ್ಥಾನದಲ್ಲಿ ಇದ್ದು, ಸರಿಯಾಗಿ ನಡೆದುಕೊಳ್ಳಬೇಕಿದ್ದ ಈತ ಕೆಟ್ಟದಾಗಿ ನಡೆದುಕೊಂಡು ಈಗ ಕಂಬಿ ಎಣಿಸುತ್ತಿದ್ದಾನೆ. ಅದರಲ್ಲೂ ನಟ ದರ್ಶನ್ ಕೊಲೆ ಆರೋಪದಲ್ಲಿ ಅರೆಸ್ಟ್ ಆಗುವ ಮೊದಲು, ಆತ ಮಾಡಿದ ಕೃತ್ಯದ ವಿಡಿಯೋಗಳನ್ನ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ವೀಕ್ಷಣೆ ಮಾಡಿದ್ದರಂತೆ. ಖುದ್ದು ಬೆಂಗಳೂರು ಕಮೀಷನರ್ ದರ್ಶನ್ ಅಟ್ಟಹಾಸದ ವಿಡಿಯೋ ತೋರಿಸಿ, ಸಿಎಂ ಬಳಿ ಅನುಮತಿ ಪಡೆದು ಕೊಲೆ ಆರೋಪಿ ದರ್ಶನ್ ಬಂಧಿಸಿದ್ದರಂತೆ.

118 ಸಾಕ್ಷ್ಯ ಸಂಗ್ರಹಿಸಿದ ಪೊಲೀಸರು?

ದರ್ಶನ್ ತೂಗುದೀಪ್ & ಗ್ಯಾಂಗ್ ವಿರುದ್ಧ ಕೇಳಿಬಂದಿರುವ ಕೊಲೆ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸರು ಖಡಕ್ ತನಿಖೆ ನಡೆಸುತ್ತಿದ್ದಾರೆ. ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಈ ವಿಚಾರದಲ್ಲಿ ಕರ್ನಾಟಕದ ಪೊಲೀಸರಿಗೆ ಫುಲ್ ಪವರ್ ಕೊಟ್ಟಿದ್ದು, ಯಾವುದೇ ರೀತಿಯ ಒತ್ತಡಗಳಿಗೆ ಮಣಿಯಬೇಡಿ ಎಂದಿದ್ದಾರೆ. ಹೀಗಾಗಿ ಕೇಸ್ ಕೂಡ ತುಂಬಾ ಸ್ಟ್ರಾಂಗ್ ಆಗುತ್ತಿದೆ. ಅದರಲ್ಲೂ ದರ್ಶನ್ & ಗ್ಯಾಂಗ್ ವಿರುದ್ಧ ಈವರೆಗೂ ಸುಮಾರು 118 ಸಾಕ್ಷ್ಯ ಸಂಗ್ರಹವಾಗಿದೆ ಎಂಬ ಸುದ್ದಿ ತಿಳಿದುಬಂದಿದೆ. ಹೀಗಾಗಿ ಕೇಸ್ ಕೂಡ ತುಂಬಾ ಸ್ಟ್ರಾಂಗ್ ಆಗುತ್ತಿದ್ದು, ಈಗ ದರ್ಶನ್‌ಗೆ ಜೈಲೂಟ ಗ್ಯಾರಂಟಿ ಆಗಿದೆ.

ಡಿ-ಗ್ಯಾಂಗ್‌ಗೆ ಮಾನಸಿಕ ವಿಕೃತಿ?

ದರ್ಶನ್ & ಗ್ಯಾಂಗ್ ಸೇರಿ ರೇಣುಕಾಸ್ವಾಮಿ ಕೊಲೆ ಮಾಡಿರುವ ರೀತಿ ನೋಡಿದರೆ, ಈ ಗ್ಯಾಂಗ್ ಮಾನಸಿಕ ವಿಕೃತಿ ಹೊಂದಿದೆಯಾ? ಎಂಬ ಅನುಮಾನ ಮೂಡಿದೆ ಯಾಕಂದ್ರೆ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯಲ್ಲಿ ಭಯಾನಕ ಸಂಗತಿ ಗೊತ್ತಾಗಿದೆ. ರೇಣುಕಾಸ್ವಾಮಿ ಚರ್ಮಕ್ಕೆ, ತಲೆಗೆ ಹಾಗೂ ಮರ್ಮಾಂಗಕ್ಕೆ ಭಾರಿ ಗಾಯ ಮಾಡಲಾಗಿದೆ. ಹಾಗೇ ಮರ್ಮಾಂಗದ ಚರ್ಮ ಸುಲಿದು ಟಾರ್ಚರ್ ಕೊಟ್ಟಿದ್ದಾರೆ. ಈ ಮೂಲಕ ವಿಕೃತವಾಗಿ ರೇಣುಕಾಸ್ವಾಮಿ ಕೊಲೆ ಮಾಡಿದೆ ಈ ವಿಕೃತರ ಗ್ಯಾಂಗ್. ಹೀಗಾಗಿಯೇ ಪೊಲೀಸರು ಈ ಗ್ಯಾಂಗ್‌ಗೆ ವಿಕೃತ ಮನಸ್ಥಿತಿ ಇದೆಯಾ? ಎಂಬ ಆಂಗಲ್ ಮೂಲಕವೂ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಇವರಿಂದ ಇನ್ನೂ ಯಾರು, ಯಾರೆಲ್ಲಾ ಸಮಸ್ಯೆ ಎದುರಿಸಿದ್ದಾರೆ? ಅನ್ನೋದನ್ನ ಕೂಡ ಪರಿಶೀಲನೆ ಮಾಡಲಾಗುತ್ತಿದೆ.

ಮುಂದೆ ಐತೆ ಮಾರಿ ಹಬ್ಬ?

ದರ್ಶನ್ & ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಮಾಡಿದೆ ಅಂತಾ ಗಂಭೀರ ಆರೋಪವು ಕೇಳಿಬಂದ ನಂತರದಲ್ಲಿ ಇಡೀ ಗ್ಯಾಂಗ್‌ನ ಜೀಪ್‌ಗೆ ಎತ್ತಾಕಿ ಪೊಲೀಸ್ ಠಾಣೆಗೆ ಕರೆತಂದ ಪೊಲೀಸರು, ಕಳೆದ 10 ದಿನದಿಂದ ನಿರಂತರ ವಿಚಾರಣೆ ನಡೆಸುತ್ತಿದ್ದಾರೆ. ದರ್ಶನ್ ನೇರವಾಗಿ ರೇಣುಕಾಸ್ವಾಮಿಯ ಕೊಲೆಯಲ್ಲಿ ಭಾಗಿ ಆಗಿದ್ದಾರೆ ಎಂಬ ಆರೋಪಗಳ ನಡುವೆ, ಈಗಾಗಲೇ ಎರಡು ಬಾರಿ ದರ್ಶನ್ & ಗ್ಯಾಂಗ್‌ನ ವಶಕ್ಕೆ ಪಡೆದಿದ್ದ ಪೊಲೀಸರು, ವಿಚಾರಣೆ ನಡೆಸಿದ್ದಾರೆ. ಇದೀಗ ಮತ್ತೊಮ್ಮೆ, ದರ್ಶನ್ ಮತ್ತು ಸಹಚರರ ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಕೋರ್ಟ್ ಕೂಡ ಪೊಲೀಸರ ಮನವಿ ಪುರಸ್ಕರಿಸಿ, ದರ್ಶನ್ & ಗ್ಯಾಂಗ್‌ನ ಪೊಲೀಸರ ವಶಕ್ಕೆ ನೀಡಲಾಗಿದೆ.

ದರ್ಶನ್ ಅಲಿಯಾಸ್ ರೌಡಿ ದರ್ಶನ್?

2011ರ ಸಮಯದಲ್ಲಿ ತನ್ನ ಹೆಂಡತಿ ಮೇಲೆಯೇ ದರ್ಶನ್ ರಾಕ್ಷಸನ ರೀತಿ ಹಲ್ಲೆ ಮಾಡಿರುವುದು ಸೇರಿದಂತೆ, ಪದೇ ಪದೇ ದರ್ಶನ್ & ಗ್ಯಾಂಗ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ. ಹೀಗೆ ಕನ್ನಡ ನಾಡಿನಲ್ಲಿ ತನ್ನ ಪಟಾಲಂ ಕಟ್ಟಿಕೊಂಡು ದರ್ಶನ್ & ಗ್ಯಾಂಗ್ ಜನರಿಗೆ ಹಾಗೂ ಹಲವು ನಿರ್ಮಾಪಕ, ನಿರ್ದೇಶಕರಿಗೆ ಟಾರ್ಚರ್ ಮಾಡಿದೆ ಎಂಬ ಆರೋಪ ಇದೆ. ಹೀಗಾಗಿಯೇ ಇದೀಗ, ದರ್ಶನ್ ಮತ್ತು ಆತನ ಸಹಚರರ ವಿರುದ್ಧ ರೌಡಿಶೀಟ್ ತೆರೆಯಲು ಕನ್ನಡ ನಾಡಿನ ಪೊಲೀಸರು ಅಂತಿಮ ಹಂತದ ಸಿದ್ಧತೆ ನಡೆಸಿದ್ದಾರೆ. ಈ ಹಿನ್ನೆಲೆ ಎಲ್ಲಾ ದಾಖಲೆಗಳನ್ನ ಸಂಗ್ರಹಿಸುವ ಮೂಲಕ, ದರ್ಶನ್ & ಗ್ಯಾಂಗ್‌ಗೆ ಶಾಕ್ ನೀಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ದರ್ಶನ್ ಮುಂದಿನ ಸಿನಿಮಾ 'ಪರಪ್ಪನ ಅಗ್ರಹಾರ'?

ಕಲಾಸಿಪಾಳ್ಯ, ಮೆಜೆಸ್ಟಿಕ್ ಅಂತಾ ಬೆಂಗಳೂರಿನ ಏರಿಯಾಗಳ ಹೆಸರನ್ನು ಇಟ್ಟುಕೊಂಡೇ ಭಾರಿ ಭರ್ಜರಿ ಸಿನಿಮಾ ನೀಡಿದ್ದ ದರ್ಶನ್, ಈಗ 'ಪರಪ್ಪನ ಅಗ್ರಹಾರ' ಸೇರಿದ್ದಾರೆ. ದರ್ಶನ್ ತಾನೇ ಮಾಡಿಕೊಂಡ ಎಡವಟ್ಟಿಗೆ & ದುರಹಂಕಾರಕ್ಕೆ ಇಂದು ವಿಲವಿಲ ಒದ್ದಾಡುವ ಪರಿಸ್ಥಿತಿ ಬಂದಿದೆ ಅಂತಾರೆ ಅವರ ಸ್ನೇಹಿತರು. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಚರ್ಚೆ ನಡೆಯುತ್ತಿದೆ. ಹೀಗೆ ದರ್ಶನ್ ಕೊಲೆ ಆರೋಪದಲ್ಲಿ ಸೆಂಟ್ರಲ್ ಜೈಲ್ 'ಪರಪ್ಪನ ಅಗ್ರಹಾರ'ಕ್ಕೆ ಹೋಗಿದ್ದು, ಕೊಲೆ ಆರೋಪಿ ದರ್ಶನ್ ಮುಂದಿನ ಸಿನಿಮಾ 'ಪರಪ್ಪನ ಅಗ್ರಹಾರ' ಆಗಿರಲಿದೆ ಅಂತಿದ್ದಾರೆ ದರ್ಶನ್ ವಿರೋಧಿಗಳು. ಹೀಗಾಗಿ ದರ್ಶನ್ & ಅವರ ವಿರೋಧಿಗಳ ಫೈಟಿಂಗ್‌ಗೆ ಭರ್ಜರಿ ತಿರುವು ಸಿಕ್ಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+