Darshan Thoogudeepa: ‘ಡಿ-ಬಾಸ್ ಅಲ್ಲ ಡ್ರಗ್ ಬಾಸ್, ನನ್ನ ಜಾಂ** ಬಾಸ್...’

ಡಿ-ಬಾಸ್ ದರ್ಶನ್ ತೂಗುದೀಪ್ ಎದುರು ಹಾಕಿಕೊಂಡಿದ್ದು ಒಬ್ಬರನ್ನ ಇಬ್ಬರನ್ನ? ದರ್ಶನ್ ತೂಗುದೀಪ್ ಕನ್ನಡ ಸಿನಿಮಾ ಇಂಡಸ್ಟ್ರಿಯ ದೊಡ್ಡ ದೊಡ್ಡ ನಟರನ್ನೆ ಎದುರು ಹಾಕಿಕೊಂಡು ನೇರವಾಗಿ ಬೈದು ಬಿಸಾಡುತ್ತಾರೆ ಅಂತಾ, ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು ಎದೆ ತಟ್ಟಿಕೊಂಡು ಹೇಳುತ್ತಾರೆ. ಹೀಗಿದ್ದಾಗಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನು, 'ಡಿ-ಬಾಸ್ ಅಲ್ಲ ಡ್ರಗ್ ಬಾಸ್, ನನ್ನ ಜಾಂ** ಬಾಸ್...' ಅಂತಿದ್ದಾರೆ ಇವರು!

ಡಿ-ಬಾಸ್ ದರ್ಶನ್ ತೂಗುದೀಪ್, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಲಾಕ್ ಆದ ನಂತರ ವಿಲವಿಲ ಒದ್ದಾಡುವ ಸ್ಥಿತಿ ಬಂದಿದೆ. ಯಾಕಂದ್ರೆ ಒಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ವಿರುದ್ಧ ಕೊಲೆ ಪ್ರಕರಣದಲ್ಲಿ ಸಾಕ್ಷ್ಯಗಳು ಬಲವಾಗಿ ಇವೆ ಎಂಬ ಮಾತು ಕೇಳಿ ಬರುತ್ತಿದೆ. ಹಾಗೇ ಇನ್ನೊಂದು ಕಡೆ ಪೊಲೀಸರು ಕೂಡ ಭಾರಿ ಕಠಿಣ ತನಿಖೆ ನಡೆಸಿ ದರ್ಶನ್ ತೂಗುದೀಪ್ ಮೇಲೆ ಕಣ್ಣು ಇಟ್ಟಿದ್ದಾರೆ. ಇಂಥ ಸಮಯದಲ್ಲೇ 'ಡಿ-ಬಾಸ್ ಅಲ್ಲ ಡ್ರಗ್ ಬಾಸ್, ನನ್ನ ಜಾಂ** ಬಾಸ್...' ಅಂತಿದ್ದಾರೆ ಇವರು! ಹಾಗಾದ್ರೆ ಯಾರು ಅವರು? ಮುಂದೆ ಓದಿ.

Darshan Thoogudeepa Is Not DBoss Said By The Jagadeesh

ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ...

ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಆತ್ಮೀಯ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂಬ ಕಾರಣಕ್ಕೆ, ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ವ್ಯಕ್ತಿ ಮೇಲೆ ಭೀಕರ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಅದರಲ್ಲೂ ಖುದ್ದು ದರ್ಶನ್ ತೂಗುದೀಪ್ ಅವರೇ ರೇಣುಕಾಸ್ವಾಮಿ ಮರ್ಮಾಂಗ ತುಳಿದು ಹಾಕಿದ್ದಾರೆ ಎಂಬ ಆರೋಪ ಕೂಡ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ರೇಣುಕಾಸ್ವಾಮಿಯ ರಕ್ತ ದರ್ಶನ್ ತೂಗುದೀಪ್ ಬೂಟ್ & ಮತ್ತು ಬಟ್ಟೆ ಮೇಲೆ ಕೂಡ ಪತ್ತೆಯಾಗಿದೆ ಎಂಬ ಆರೋಪ ಇದೆ.

'ಡಿ-ಬಾಸ್ ಅಲ್ಲ ಅವನು ಡ್ರಗ್...'

ಹೀಗೆ ರೇಣುಕಾಸ್ವಾಮಿ ಬರ್ಬರವಾಗಿ ಕೊಲೆಯಾದ ನಂತರ ಇಡೀ ಕರ್ನಾಟಕವೇ ಈ ಕುರಿತು ಮಾತನಾಡುತ್ತಿದೆ. ಮತ್ತೊಂದು ಕಡೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿ ಬಳಗ ಜನರಿಗೆ ಬೆದರಿಕೆ ಹಾಕುತ್ತಿರುವ ಆರೋಪ ಕೇಳಿ ಬರುತ್ತಿದೆ. ಈ ಆರೋಪಗಳ ಮಧ್ಯೆ ಇದೀಗ ಲಾಯರ್ ಜಗದೀಶ್, 'ಡಿ-ಬಾಸ್ ಅಲ್ಲ ಅವನು ಡ್ರಗ್ ಬಾಸ್, ನನ್ನ ಜಾಂ** ಬಾಸ್ ಅವನು...' ಅಂತಾ ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತು ಡಿ-ಬಾಸ್ ದರ್ಶನ್ ಅಭಿಮಾನಿ ಬಳಗಕ್ಕೆ ಎಚ್ಚರಿಕೆ ನೀಡಿದ್ದಾರೆ!

ಹೀಗೆ ಲಾಯರ್ ಜಗದೀಶ್ ಮಾತನಾಡಿರುವ ವಿಡಿಯೋ ಫುಲ್ ವೈರಲ್ ಆಗುತ್ತಿದ್ದು, ಇದೀಗ ಭಾರಿ ದೊಡ್ಡ ಚರ್ಚೆ ಕೂಡ ಆರಂಭ ಆಗಿದೆ. ಮತ್ತೊಂದ್ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಗ್ಗೆ ಲಾಯರ್ ಜಗದೀಶ್ ಮಾತನಾಡಿರುವ ವಿಡಿಯೋ ಬಗ್ಗೆ ಪರ & ವಿರೋಧ ಚರ್ಚೆ ಜೋರಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+