Darshan Thoogudeepa: 30 ಕೆ.ಜಿ. ಸೊರಗಿ ಸುಣ್ಣವಾದ ದರ್ಶನ್ ತೂಗುದೀಪ್‌ಗೆ ಕಾಡುತ್ತಿರುವ ಆ ಭಯಾನಕ ರೋಗ...
ದರ್ಶನ್ ತೂಗುದೀಪ್ ಇಂದು ಬಳ್ಳಾರಿ ಜೈಲಿನಿಂದ ಹೊರಗಡೆ ಬಂದು, ತಮ್ಮ ಧರ್ಮಪತ್ನಿ ಅಂದ್ರೆ ಲೀಗಲ್ ಹೆಂಡತಿ ವಿಜಯಲಕ್ಷ್ಮೀ ದರ್ಶನ್ ಅವರನ್ನ ಭೇಟಿ ಮಾಡಿದ್ದಾರೆ. ಈ ವೇಳೆ ಸ್ವಂತ ತಮ್ಮನ ಜೊತೆಗೂ ಮಾತುಕತೆ ನಡೆಸಿದ್ದಾರೆ. ಆದರೆ ಅಸಲಿ ಮ್ಯಾಟರ್ ಇದಲ್ಲ, ಈ ವೇಳೆ ದರ್ಶನ್ ತೂಗುದೀಪ್ ಅವರ ಸೊರಗಿ ಹೋದ ದೇಹ ನೋಡಿ ಅಭಿಮಾನಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಜೈಲಿಗೆ ಹೋದ ನಂತರ ಇಲ್ಲಿಯವರೆಗೂ ದರ್ಶನ್ ತೂಗುದೀಪ್ ಬರೋಬ್ಬರಿ 30 ಕೆ.ಜಿ. ಕಳೆದುಕೊಂಡು, ದರ್ಶನ್ ತೂಗುದೀಪ್‌ಗೆ ಕಾಡುತ್ತಿರುವ ಆ ಭಯಾನಕ ರೋಗ...
ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಲ್ಲಿ ವಿಲವಿಲ ಒದ್ದಾಡಿ ಹೋಗಿದ್ದಾರೆ, ಯಾಕೆ ಅಂದ್ರೆ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ತೂಗುದೀಪ್‌ಗೆ ಎಣ್ಣೆ & ಸಿಗರೇಟ್ ಹೀಗೆ ಬೇಕಾದ ಎಲ್ಲಾ ವಸ್ತುಗಳು ಕೈ ಕೈಗೆ ಸಿಗುತ್ತಿದ್ದವು. ಆದರೆ ಈಗ ಬಳ್ಳಾರಿ ಜೈಲಿನಲ್ಲಿ ಸೈಲೆಂಟ್ ಆಗಿ ಜೈಲಿನ ಊಟವನ್ನೇ ಮಾಡಬೇಕಿದೆ. ಹೀಗಿದ್ದಾಗ ದರ್ಶನ್ ತೂಗುದೀಪ್‌ಗೆ ಭಯಾನಕ ರೋಗ ಕೂಡ ಶುರುವಾಗಿದ್ದು, ದರ್ಶನ್ ತೂಗುದೀಪ್ ತೂಕದಲ್ಲಿ ಭಾರಿ ಇಳಿಕೆ ಆಗಿದೆ. ಇದೇ ಕಾರಣಕ್ಕಾಗಿ ನಿನ್ನೆ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನ ಸೆಲ್‌ನಿಂದ ಹೊರಗೆ ನಡೆದುಕೊಂಡು ಬರುವಾಗ ದೇಹದಲ್ಲಿ ಮಾಂಸವೇ ಕಾಣೆ ಆಗಿತ್ತು. ಹಾಗಾದ್ರೆ ದರ್ಶನ್‌ಗೆ ಕಾಡುತ್ತಿರುವ ಆ ಭಯಾನಕ & ಬೆಚ್ಚಿ ಬೀಳಿಸುವ ರೋಗ ಯಾವುದು?

ದರ್ಶನ್ ತೂಗುದೀಪ್ ಜೀವಕ್ಕೆ...
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಲ್ಲಿ ಒದ್ದಾಡುತ್ತಿದ್ದಾರೆ ದರ್ಶನ್ ತೂಗುದೀಪ್. ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನ ಊಟ ಹಿಡಿಸದೆ, ಆರೋಗ್ಯವು ಕೈಕೊಟ್ಟು ಪರದಾಡುವ ಪರಿಸ್ಥಿತಿ ಬಂದಿದೆ. ಬಳ್ಳಾರಿ ಜೈಲಿನ ವಿಶೇಷ ಭದ್ರತೆಯ ಕೋಣೆಯ ಒಳಗೆ ದರ್ಶನ್ ತೂಗುದೀಪ್ ಜೈಲಿನ ಊಟ ಹಿಡಿಸದೆ ಒದ್ದಾಡುತ್ತಿದ್ದಾರೆ. ಈ ಸಮಯದಲ್ಲಿ ತಮ್ಮ ಹೆಂಡತಿ & ತಮ್ಮನ ಜೊತೆ ಭೇಟಿ ಮಾಡಿ ಮಾತನಾಡಿದ ದರ್ಶನ್ ತೂಗುದೀಪ್, ಆರೋಗ್ಯದಲ್ಲು ಏರುಪೇರು ಆದ ವಿಚಾರ ತಿಳಿಸಿದ್ದಾರೆ. ಹಾಗಾದ್ರೆ ನಟ ದರ್ಶನ್ ತೂಗುದೀಪ್‌ಗೆ ಕಾಡುತ್ತಿರುವ ಆ ಭಯಾನಕವಾದ ರೋಗ ಯಾವುದು? ಮುಂದೆ ಓದಿ.
ಚಿಂತೆ.. ಚಿಂತೆ.. ಚಿಂತೆ!
ದರ್ಶನ್ ತೂಗುದೀಪ್‌ಗೆ ಬೇಕಾದ ಎಲ್ಲಾ ವಸ್ತುಗಳು ಸುಲಭವಾಗಿ ಸಿಗುತ್ತಿತ್ತು, ಇದರ ಜೊತೆ ವರ್ಷಕ್ಕೆ ಕನಿಷ್ಠ ಹತ್ತು ಸಾರಿ ವಿದೇಶಿ ಪ್ರವಾಸಗಳಿಗೂ ಹೋಗಿ ಬರುತ್ತಿದ್ದರು ನಟ ದರ್ಶನ್ ತೂಗುದೀಪ್. ಹೀಗಿದ್ದಾಗಲೇ ನಟ ದರ್ಶನ್ ತೂಗುದೀಪ್ ಅವರಿಗೆ ಇದೀಗ ಚಿಂತೆ ಕಾಡ್ತಿದ್ದು, ಇಡೀ ಜಗತ್ತಿನಲ್ಲೇ ಇದನ್ನು ಅತ್ಯಂತ ಭಯಾನಕ ರೋಗ ಎನ್ನುತ್ತಾರೆ ವೈದ್ಯರು.
ಯಾಕಂದ್ರೆ ಮನುಷ್ಯನ ಮನಸ್ಸು & ದೇಹ ಎರಡನ್ನು ಒಟ್ಟಿಗೆ ಹಾಳು ಮಾಡುವ ಶಕ್ತಿ ಇರುವುದು ಚಿಂತೆ ಎಂಬ ರೋಗಕ್ಕೆ ಮಾತ್ರ. ಈಗ ದರ್ಶನ್ ತೂಗುದೀಪ್ ಕೂಡ ತಾನು ಜೈಲಿಗೆ ಬಂದಿದ್ದು ಮತ್ತು ಜೈಲಿನ ಕೋಣೆಗಳಲ್ಲಿ ವಿಲವಿಲ ಒದ್ದಾಡುತ್ತಿರುವುದು ಸೇರಿದಂತೆ ಈ ಪರಿಸ್ಥಿತಿ ನೆನಪು ಮಾಡಿಕೊಂಡು ನರಳುತ್ತಿದ್ದಾರೆ. ಹೀಗಾಗಿ ದರ್ಶನ್ ತೂಕ ಕೂಡ ಭಾರಿ ಪ್ರಮಾಣದಲ್ಲಿ ಈಗ ಕುಸಿದು ಹೋಗಿದೆ.
ಚಿಂತೆಯಲ್ಲಿ ನರಳುತ್ತಿರುವ ಡಿ-ಬಾಸ್?
ದರ್ಶನ್ ತೂಗುದೀಪ್ ತಮ್ಮ ಕುಟುಂಬದ ಸದಸ್ಯರನ್ನು ಭೇಟಿ ಮಾಡೋದಕ್ಕೆ ನಡೆದು ಹೊರಗೆ ಬರುವ ಸಮಯದಲ್ಲಿ ತುಂಬಾ ಸೊರಗಿ ಹೋಗಿರುವ ರೀತಿ ಕಂಡುಬಂದರು. ಈ ಸಮಯದಲ್ಲೇ ದರ್ಶನ್ ತೂಗುದೀಪ್ ಅವರ ಆರೋಗ್ಯದಲ್ಲಿ ಏರುಪೇರು ಆಗಿರುವ ರೀತಿಯೆ ಅವರ ಮುಖದಲ್ಲಿ ಕಂಡುಬಂತು ಎನ್ನುತ್ತಾ ದರ್ಶನ್ ಅಭಿಮಾನಿಗಳು ಈಗ ಆತಂಕ ಹೊರ ಹಾಕುತ್ತಿದ್ದಾರೆ. ಹಾಗೇ ಮತ್ತೊಂದು ಕಡೆ ದರ್ಶನ್ ತೂಗುದೀಪ್ ಆರೋಗ್ಯದಲ್ಲಿ ಭಾರಿ ಏರುಪೇರು ಆಗಿದ್ದು, ಜೀವಕ್ಕೂ ಕಂಟಕ ಎದುರಾಗಿದೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ ಕೆಲವರು. ಆದರೆ ದರ್ಶನ್ ತೂಗುದೀಪ್ ಆರೋಗ್ಯ ಚನ್ನಾಗಿದ್ದು, ಚಿಂತೆ ಅವರನ್ನ ಕಾಡುತ್ತಿದೆ ಎನ್ನಲಾಗಿದೆ.
ಡಿ-ಬಾಸ್ ಸೈಲೆಂಟ್ ಆಗಿದ್ದು ಏಕೆ?
ದರ್ಶನ್ ತೂಗುದೀಪ್‌ಗೆ ಅಹಂಕಾರ & ಕೋಪವೇ ಮುಳ್ಳಾಗಿ ಪರಿಣಮಿಸಿದೆ ಎನ್ನುವ ಆರೋಪ ಇದೆ. ರೇಣುಕಾಸ್ವಾಮಿ ಕಿಡ್ನಾಪ್ ಮಾಡಲು ಸ್ವತಃ ದರ್ಶನ್ ತೂಗುದೀಪ್ ಸುಪಾರಿ ಕೊಟ್ಟು, ನಂತರ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಮರ್ಮಾಂಗಕ್ಕೆ ಒದ್ದಿದ್ದೂ ಇದೆ ಎಂಬ ಆರೋಪ ಇದೆ. ಅದರಲ್ಲೂ ದರ್ಶನ್ ತೂಗುದೀಪ್ ಈ ರೀತಿ ರೇಣುಕಾಸ್ವಾಮಿಗೆ ಹಿಂಸೆ ಕೊಟ್ಟಿರುವುದಕ್ಕೆ & ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಕರೆದುಕೊಂಡು ಬರಲು ಆರ್ಡರ್ ಮಾಡಿದ್ದಕ್ಕೂ ಸಾಕ್ಷ್ಯಗಳು ಸಿಕ್ಕಿವೆ. ಪರಿಸ್ಥಿತಿ ಹೀಗಿದ್ದಾಗ ರೇಣುಕಾಸ್ವಾಮಿಯ ಬರ್ಬರ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಪ್ರಮುಖ ಆರೋಪಿ ಆಗಿದ್ದಾನೆ. ಇಷ್ಟಾದರೂ ಈಗ ಮೀಡಿಯಾಗಳಿಗೆ ಬೆರಳು ತೋರಿಸಿ ತನ್ನ ಬುಡಕ್ಕೆ ತಾನೆ ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನುವ ಅಭಿಪ್ರಾಯ ದರ್ಶನ್ ವಿರೋಧಿಗಳದ್ದು. ಹೀಗಿದ್ದಾಗಲೇ ಬಳ್ಳಾರಿ ಜೈಲಿನ ಅಧಿಕಾರಿಗಳಿಂದ ಕೂಡ ಎಚ್ಚರಿಕೆ ಪಡೆದಿದ್ದಾನೆ ಕೊಲೆ ಆರೋಪಿ ದರ್ಶನ್ ತೂಗುದೀಪ!
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications