Darshan Thoogudeepa: ಬಿಗ್‌ಬಾಸ್‌ಗೆ ಇವರೇ ಅಂತೆ ಹೊಸ ಹೋಸ್ಟ್‌, ವಾರದ ಕಥೆ ಇನ್ಮುಂದೆ...

ಬಿಗ್‌ಬಾಸ್‌ನ ಮುಂದಿನ ಸೀಸನ್‌ನಿಂದ ನಾನು ಇರೋಲ್ಲ ಅಂತ ಕಿಚ್ಚ ಸುದೀಪ್‌ ಹೇಳಿದ್ದಾರೆ. ಇದರ ಬೆನ್ನಲ್ಲೇ ಮುಂದಿನ ಸೀಸನ್‌ ಯಾರು ನಡೆಸ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಮುಂದಿನ ಬಿಗ್‌ಬಾಸ್‌ ಸೀಸನ್‌ ಅನ್ನು ನಟ ಯಶ್ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದ್ದಾರೆ. ಆದರೆ, ನಟ, ಚಾಲೆಂಜಿಂಗ್ ಸ್ಟಾರ್‌ ಹಾಗೂ ರೇಣುಕಾಸ್ವಾಮಿ ಕೊಲೆ ಆರೋಪಿ ಬಿಗ್‌ಬಾಸ್‌ ಸೀಸನ್ 12ರ ಸೀಸನ್ ಹೋಸ್ಟ್‌ ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ನಟ ದರ್ಶನ್ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದು, ಸದ್ಯಕ್ಕೆ ಜಾಮೀನಿನ ಭಾಗ್ಯ ಸಿಕ್ಕಿಲ್ಲ. ಈ ನಡುವೆ ದರ್ಶನ್ ಬಗ್ಗೆ ಹಲವು ಸುದ್ದಿಗಳು ಓಡಾಡುತ್ತಿವೆ. ಅದರಲ್ಲಿ ಕೆಲವು ಫೇಕ್‌ ಕೂಡ. ಫೇಕ್‌ ಯಾವ್ದು, ಒರಿಜಿನಲ್‌ ಯಾವ್ದು ಅಂತ ತಿಳಿಯದೆ ಕೆಲವು ಫ್ಯಾನ್ಸ್‌ ಗೊಂದಲದಲ್ಲಿರುವುದು ಸಹ ನಿಜ. ಇದೀಗ ಕನ್ನಡದ ಸುದ್ದಿ ವಾಹಿನಿಯೊಂದು ಬಿಗ್‌ಬಾಸ್‌ ಸೀಸನ್ 12 ನಟ ದರ್ಶನ್‌ ನಡೆಸಿಕೊಡಲಿದ್ದಾರೆ ಎಂದು ವರದಿ ಮಾಡಿದೆ. ಈ ವರದಿ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ.

Darshan Thoogudeepa He is the new host of Bigg Boss

ಅಲ್ಲದೇ ಟ್ರೋಲ್‌ ಸಹ ಆಗುತ್ತಿದೆ. ದರ್ಶನ್‌ಗೆ ಜೈಲಿನಿಂದ ಹೊರಗೆ ಬರಲು ಆಗುತ್ತಿಲ್ಲ. ಈ ನಡುವೆ ಬಿಗ್‌ಬಾಸ್‌ ಹೋಸ್ಟ್‌ ದರ್ಶನ್‌ ಬಂದು ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸಾರ್ವಜನಿಕರು ಈ ವಿಷಯ ನಟ ದರ್ಶನ್‌ಗೆ ಗೊತ್ತಾ ಎಂದೂ ಪ್ರಶ್ನೆ ಮಾಡುತ್ತಿದ್ದಾರೆ.

ಟ್ರೋಲ್ ಸುರಿಮಳೆ: ಬಿಗ್‌ಬಾಸ್‌ ಸೀಸನ್‌ 12ನ್ನು ದರ್ಶನ್‌ ನಡೆಸಿಕೊಡಲಿದ್ದಾರೆ ಎನ್ನುವ ವಿಷಯ ಇದೀಗ ಭಾರೀ ಟ್ರೋಲ್‌ ಆಗುತ್ತಿದೆ. ಕೆಲವರು ಈ ವಿಷಯ ನಟ ದರ್ಶನ್‌ಗೆ ಗೊತ್ತೆ ಎಂದು ಪ್ರಶ್ನೆ ಮಾಡಿದ್ದರೆ. ಇನ್ನೂ ಕೆಲವರು ಬಹುಶಃ ಅವರು ಜೈಲಿನಿಂದಲೇ ಹೋಸ್ಟ್‌ ಮಾಡ್ತಾರೆ ಅನಿಸುತ್ತೆ ಅಂತಲೂ ಪೋಸ್ಟ್‌ ಮಾಡಿದ್ದಾರೆ. ಇದು ಈ ವರ್ಷದ ಬೆಸ್ಟ್‌ ಜೋಕ್ಸ್‌, ವಾರದ ಕಥೆ... ಜೊತೆ ಅಂತಲೂ ಕಾಮೆಂಟ್‌ ಮಾಡಿದ್ದಾರೆ.

ಎಲ್ಲಿ ಪಟ್ಟಣಗೆರೆ ಶೆಡ್‌ನಲ್ಲಿ ನಡ್ಯುತ್ತಾ: ಹಾಗಾದರೆ ಮುಂದಿನ ಬಿಗ್‌ಬಾಸ್‌ ಸೀಸನ್ ಜೈಲಿನಲ್ಲಿ ಇಲ್ಲ ಪಟ್ಟಣಗೆರೆ ಶೆಡ್‌ನಲ್ಲಿ ನಡ್ಯುತ್ತೆ ಅನಿಸುತ್ತೆ. ಪಟ್ಟಣಗೆರೆ ಶೆಡ್‌ ಫಿಕ್ಸ್‌ ಅಂತಲೂ ಟ್ರೋಲ್‌ ಮಾಡ್ತಿದ್ದಾರೆ. ಮುಂದಿನ ವರ್ಷ ಬಿಗ್‌ಬಾಸ್‌ ಶೋ ಶೆಡ್‌ನಲ್ಲಿ ನಡೆಯಬಹುದು ಎಂದು ಹೇಳಿದ್ದಾರೆ. ಸೋಷಿಯಲ್‌ ಮೀಡಿಯಾದ ಎಕ್ಸ್‌ನಲ್ಲಿ Karnataka Update ಎನ್ನುವ ಖಾತೆಯಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದಕ್ಕೆ ದರ್ಶನ್‌ ಫ್ಯಾನ್ಸ್‌ ಸಹ ರಿಯಾಕ್ಟ್‌ ಮಾಡಿದ್ದು, ನಕ್ಕಿದ್ದಾರೆ.

ಕಿಚ್ಚ ಸುದೀಪ್‌ ಬಿಟ್ಟರೆ ಯಾರೂ ಆಗಲ್ಲ

ಬಿಗ್‌ಬಾಸ್‌ ಶೋವನ್ನು ನಟ ಕಿಚ್ಚ ಸುದೀಪ್‌ ಅವರನ್ನು ಬಿಟ್ಟರೆ ಇನ್ಯಾರೂ ಮಾಡಲು ಸಾಧ್ಯವಿಲ್ಲ ಎಂದು ಕಿಚ್ಚ ಸುದೀಪ್‌ ಫ್ಯಾನ್ಸ್‌ ಹೇಳಿದ್ದಾರೆ. ಬಿಗ್‌ಬಾಸ್‌ ಸೀಸನ್‌ಗೆ ಒಂದು ಕಳೆ ಹಾಗೂ ತೂಕ ಬಂದಿರುವುದೇ ನಟ ಕಿಚ್ಚ ಸುದೀಪ್‌ ಅವರ ಹೋಸ್ಟ್‌ನಿಂದ ಈ ಶೋವನ್ನು ಕಿಚ್ಚ ಸುದೀಪ್‌ ಅವರಿಂದ. ಅವರನ್ನು ಬಿಟ್ಟು ಬೇರೆ ಯಾರೇ ನಡೆಸಿಕೊಟ್ಟರೂ, ಈ ಶೋ ನೋಡಲು ಕಷ್ಟ ಎಂದೂ ಕೆಲವು ಅಭಿಮಾನಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+