Darshan Thoogudeepa: ದಸರಾ ಸಂಭ್ರಮದಲ್ಲೂ ‘ಡಿ-ಬಾಸ್’ ದರ್ಶನ್ ತೂಗುದೀಪ್ ಅಭಿಮಾನಿಗಳ ಆರ್ಭಟ...

ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್ ಆರೋದಡಿ ತೀವ್ರ ಪರದಾಟ ಪಡುತ್ತಿದ್ದಾರೆ. ದರ್ಶನ್ ತೂಗುದೀಪ್ ಅವರಿಗೆ ಜಾಮೀನು ಸಿಗುತ್ತದೆ, ಈ ಮೂಲಕ ದಸರಾ ಹಬ್ಬಕ್ಕೂ ಮೊದಲೇ ತಮ್ಮ ನೆಚ್ಚಿನ ನಟನ ಬಿಡುಗಡೆ ಆಗಲಿದೆ ಅಂತಾ ಅಭಿಮಾನಿಗಳು ಕಾಯುತ್ತಿದ್ದರು. ಹೀಗಿದ್ದಾಗ ದರ್ಶನ್ ತೂಗುದೀಪ್ ರಿಲೀಸ್ ಆಗದೆ, ಕೋಟಿ ಕೋಟಿ ಅಭಿಮಾನಿ ಬಳಗಕ್ಕೆ ಬೇಸರ ಎದುರಾಗಿದೆ. ಹೀಗಿದ್ದಾಗಲೇ, ದಸರಾ ಸಂಭ್ರಮದಲ್ಲೂ 'ಡಿ-ಬಾಸ್' ದರ್ಶನ್ ತೂಗುದೀಪ್ ಅಭಿಮಾನಿಗಳ ಆರ್ಭಟ...

ದರ್ಶನ್ ತೂಗುದೀಪ್ ರಾಜನ ರೀತಿ ಮೆರೆಯುತ್ತಿದ್ದ ಕಾಲ ಇತ್ತು, ಕೇವಲ 3 ತಿಂಗಳ ಹಿಂದಷ್ಟೇ ದರ್ಶನ್ ತೂಗುದೀಪ್ ಅವರ ಫ್ಯಾನ್ಸ್ 'ಡಿ-ಬಾಸ್.. ಡಿ-ಬಾಸ್..' ಅಂತಾ ಜೈಕಾರ ಹಾಕುತ್ತಾ ಸಂಭ್ರಮಿಸುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಎಲ್ಲವೂ ಅಲ್ಲೋಲ ಕಲ್ಲೋಲ ಆಗಿತ್ತು, ದರ್ಶನ್ ತೂಗುದೀಪ್ ರೇಣುಕಾಸ್ವಾಮಿ ಮರ್ಡರ್ ಅಂದ್ರೆ ಭೀಕರ ಕೊಲೆ ಕೇಸ್‌ನಲ್ಲಿ ಈಗ ಕೈದಿ ಆಗಿದ್ದಾರೆ ಎಂಬ ಬೇಸರ ಅವರ ಅಭಿಮಾಗಳನ್ನ ಕಾಡುತ್ತಿದೆ. ದರ್ಶನ್ ತೂಗುದೀಪ್ ಹೀಗೆ ಬಳ್ಳಾರಿಯ ಜೈಲು ಸೇರಿದ್ದರೂ, ಹೊರಗಡೆ ದರ್ಶನ್ ತೂಗುದೀಪ್ ಅವರಿಗೆ ಇರುವ ಹವಾ ಒಂದು ಚೂರು ಕೂಡ ಕಡಿಮೆ ಆಗಿಲ್ಲ. ಅದರಲ್ಲೂ, ದಸರಾ ಸಂಭ್ರಮದಲ್ಲೂ ನಟ 'ಡಿ-ಬಾಸ್' ದರ್ಶನ್ ತೂಗುದೀಪ್ ಅಭಿಮಾನಿಗಳ ಆರ್ಭಟ ಹೇಗಿತ್ತು? ಆ ಬಗ್ಗೆ ಸಾಕ್ಷಿಯಾಗಿ ವಿಡಿಯೋ ಸಿಕ್ಕಿದೆ!

Darshan Thoogudeepa Got Very Big Support In Yuva Dasara 2024

ದಸರಾದಲ್ಲಿ ದರ್ಶನ್ ತೂಗುದೀಪ್ ಆರ್ಭಟ...

ಮೈಸೂರು ನಗರ ಈಗ ಥೇಟ್ ಮದುಮಗಳ ರೀತಿ ಸಿಂಗಾರಗೊಂಡು, ದಸರಾ ಆಚರಣೆಗಾಗಿ ಕಾದು ಕೂತಿದೆ. ಹೀಗಿದ್ದಾಗ ಮೈಸೂರು ನಗರದಲ್ಲಿ ಇದೀಗ ಯುವ ದಸರಾ ಕಾರ್ಯಕ್ರಮವು ಕೂಡ ಅದ್ಧೂರಿಯಾಗಿ ನಡೆಯುತ್ತಿದೆ. ಈ ಸಮಯದಲ್ಲೇ ದರ್ಶನ್ ಅವರ 'ಕಾಟೇರ' ಹಾಡು ಹಾಡಿ, ಭರ್ಜರಿಯಾಗಿ ಯುವ ದಸರಾ ವೇದಿಕೆ ಮೇಲೆ ಡಾನ್ಸ್ ಮಾಡಲಾಗಿದೆ. ಇದೇ ವೇಳೆ ಕೆಳಗೆ ಕೂತಿದ್ದ ಜನರು ತಮ್ಮ, ತಮ್ಮ ಮೊಬೈಲ್ ಫ್ಲಾಶ್ ಲೈಟ್ ಆನ್ ಮಾಡಿ ಬಳ್ಳಾರಿಯ ಜೈಲಿನಲ್ಲಿ ನೋವು ಎದುರಿಸುತ್ತಿರುವ ದರ್ಶನ್ ತೂಗುದೀಪ್ ಅವರ ಪರ ನಿಂತಿದ್ದಾರೆ. ಅಲ್ಲದೆ 'ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್..' ಅಂತಾ ಭರ್ಜರಿಯಾಗಿ ಘೋಷಣೆ ಕೂಗಿದ್ದಾರೆ!

ದೇವರ ಬಳಿ 'ಡಿ-ಬಾಸ್' ಫ್ಯಾನ್ಸ್ ಪ್ರಾರ್ಥನೆ!

ದರ್ಶನ್ ತೂಗುದೀಪ್ ಅವರಿಗೆ ಕರ್ನಾಟಕದಲ್ಲಿ ಮಾತ್ರವಲ್ಲ ದೇಶದ ವಿವಿಧ ರಾಜ್ಯಗಳಲ್ಲೂ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಇದೀಗ ನಟ ದರ್ಶನ್ ತೂಗುದೀಪ್ ಅವರು ಜೈಲಿನಿಂದ ರಿಲೀಸ್ ಆಗಿ ಹೊರಗೆ ಬರಲಿ ಅಂತಾ ಕೋಟ್ಯಂತರ ಅಭಿಮಾನಿಗಳು ಆಶಿಸುತ್ತಿದ್ದಾರೆ. ಹೀಗೆ ಅಭಿಮಾನಿಗಳ ಆಶಯ ಈಡೇರಲಿ ಅಂತಾ ದೇವರ ಬಳಿ ಕೂಡ ಪ್ರಾರ್ಥನೆ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ಯುವ ದಸರಾ ಕಾರ್ಯಕ್ರಮ ಕೂಡ ದರ್ಶನ್ ತೂಗುದೀಪ್ ಅವರ ಮೇಲೆ ಅಭಿಮಾನಿಗಳಿಗೆ ಎಷ್ಟು ಪ್ರೀತಿ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅಲ್ಲದೆ ಈಗ ನಟ ದರ್ಶನ್ ಅವರ ಹೆಸರನ್ನು ಅಭಿಮಾನಿಗಳು ಕೂಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+