Darshan Thoogudeepa: 2 ಕೋಟಿ ರೂಪಾಯಿ ಮನೆ, ಕೋಟಿ ಕೋಟಿ ಕಾರು.. ಪವಿತ್ರಾ ಗೌಡಗೆ ದರ್ಶನ್ ತೂಗುದೀಪ್...
ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಲಿವ್ ಇನ್ ರಿಲೇಶನ್‌ಶಿಪ್ ಅಂದ್ರೆ ಮದುವೆ ಆಗದೆ ಗಂಡ & ಹೆಂಡತಿಯ ರೀತಿ ಬಾಳುತ್ತಿದ್ದರು ಎಂಬುದು, ಪೊಲೀಸ್ ತನಿಖೆಯಲ್ಲಿ ಬಟಾ ಬಯಲಾಗಿತ್ತು. ಹೀಗೆ ಇಬ್ಬರ ನಡುವೆ ಪ್ರೀತಿ ಇದ್ದ ಕಾರಣ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಪವಿತ್ರಾ ಗೌಡಗೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿದ್ದರು ಎಂಬ ಸುದ್ದಿಯು ಕೂಡ ಹಬ್ಬಿತ್ತು. ಹೀಗಿದ್ದಾಗಲೇ, 2 ಕೋಟಿ ರೂಪಾಯಿ ಮನೆ, ಕೋಟಿ ಕೋಟಿ ಕಾರು...
ಪವಿತ್ರಾ ಗೌಡ ಮದುವೆ ಆಗಿ ಗಂಡನ ಬಿಟ್ಟು ಒಂಟಿಯಾಗಿ ಇದ್ದ ಸಂದರ್ಭದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಪ್ರೀತಿ ಬಲೆಗೆ ಬಿದ್ದಿದ್ದರು. ಅದರಲ್ಲೂ 2014ರ 'ಬುಲ್‌ಬುಲ್' ಸಿನಿಮಾ ಸಮಯದಲ್ಲಿ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಪರಿಚಯ ಮಾಡಿಕೊಂಡು ಪ್ರೀತಿಸಲು ಶುರು ಮಾಡಿದರು ಎಂಬ ಸುದ್ದಿ ಹಬ್ಬಿತ್ತು. ಅದರಲ್ಲೂ ರೇಣುಕಾಸ್ವಾಮಿ ಕೊಲೆ ನಂತರ, ಪವಿತ್ರಾ ಗೌಡರ ಮನೆಗೆ ನುಗ್ಗಿದ್ದ ಪೊಲೀಸರಿಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಟ್ಟೆಗಳು & ಪ್ರಶಸ್ತಿಗಳು ಪವಿತ್ರಾ ಗೌಡ ಅವರ ಮನೆಯಲ್ಲಿ ಸಿಕ್ಕಿದ್ದವು ಎಂಬ ಆರೋಪ ಇತ್ತು.

2 ಕೋಟಿ ರೂಪಾಯಿ ಮನೆ...
ರೇಣುಕಾಸ್ವಾಮಿ ಕೊಲೆಯ ನಂತರ ಒಂದೊಂದೇ ವಿಚಾರಗಳು ಬಯಲಾಗುತ್ತಿದ್ದು, ಪವಿತ್ರಾ ಗೌಡ ಮತ್ತು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಪ್ರೇಮ್ ಕಹಾನಿ ಕೂಡ ಗೊತ್ತಾಗಿತ್ತು. ಹೀಗೆ ಪವಿತ್ರಾ ಗೌಡಗೆ ಅಂತಾನೆ ಸುಮಾರು 2 ಕೋಟಿ ರೂಪಾಯಿ ಬೆಲೆ ಬಾಳುವ ಮನೆಯ ಜೊತೆಗೆ ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಕಾರುಗಳು & ವಸ್ತುಗಳ ಜೊತೆಗೆ ಚಿನ್ನ & ಬೆಳ್ಳಿಯನ್ನ ಕೂಡ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಪವಿತ್ರಾ ಗೌಡಗೆ ಕೊಡಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಹೀಗಿದ್ದಾಗ ಪವಿತ್ರಾ ಗೌಡ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನ ಒಳಗೆ ಮುದ್ದೆ ಮುರಿಯುತ್ತಿದ್ದರೆ, ಡಿ-ಬಾಸ್ ದರ್ಶನ್ ತೂಗುದೀಪ್ ಆಸ್ಪತ್ರೆಯ ಬೆಡ್ ಮೇಲೆ ಒದ್ದಾಡುತ್ತಿದ್ದಾರೆ. ಹೀಗಿದ್ದಾಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕೋಟಿ ಕೋಟಿ ಖರ್ಚು ಮಾಡಿ ಪವಿತ್ರಾ ಗೌಡಗೆ ಕೊಡಿಸಿದ್ದ ಕಾರುಗಳು ಧೂಳು ತಿನ್ನುತ್ತಿವೆ. ಇದರ ಜೊತೆಗೆ ಕೋಟಿ ಕೋಟಿ ಖರ್ಚು ಮಾಡಿ ಕೊಡಿಸಿದ್ದ ಪವಿತ್ರಾ ಗೌಡ ಮನೆ ಕೂಡ ಧೂಳು ಹಿಡಿಯುತ್ತಿದೆ.
ಪವಿತ್ರಾ ಗೌಡ ರಿಲೀಸ್ ಯಾವಾಗ?
ಡಿ-ಬಾಸ್ ದರ್ಶನ್ ತೂಗುದೀಪ್ ಬೆನ್ನು ನಡೆಯಲು ಆಗದಷ್ಟು ಊತ ಬಂದಿದೆ, ಕಾಲುಗಳ ಒಳಗೂ ಊತ ಕಾಣಿಸಿಕೊಂಡಿದೆ ಅಂತಾ ಜಾಮೀನು ನೀಡಿ ರಿಲೀಸ್ ಮಾಡಲಾಗಿದೆ. ಇನ್ನು ಪವಿತ್ರಾ ಗೌಡಗೆ ಜಾಮೀನು ಯಾವಾಗ ಸಿಗುತ್ತೆ? ಅನ್ನೋ ಪ್ರಶ್ನೆ ಕೂಡ ಈಗ ಮೂಡಿದ್ದು, ಭಾರಿ ಕುತೂಹಲ ಕೆರಳಿದೆ.
ಮತ್ತೊಂದು ಕಡೆ ಪವಿತ್ರಾ ಗೌಡಗೆ ಜಾಮೀನು ಕೊಡಿಸಲು ಈ ಸಮಯದಲ್ಲಿ ಎಲ್ಲಾ ರೀತಿಯ ಪ್ರಯತ್ನವನ್ನ ಅವರ ಮನೆಯವರು ಮಾಡುತ್ತಿದ್ದಾರೆ. ಆದ್ರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮೊದಲ ಆರೋಪಿ ಅಂದ್ರೆ ಎ-1 ಆರೋಪಿ ಆಗಿರುವುದಕ್ಕೆ ಅಷ್ಟು ಸುಲಭವಾಗಿ ಈಗ ಪವಿತ್ರಾ ಗೌಡಗೆ ಜಾಮೀನು ಸಿಗುವುದು ಕಷ್ಟ ಎನ್ನಲಾಗುತ್ತಿದೆ.












Click it and Unblock the Notifications