Darshan Thoogudeepa: ದುನಿಯಾ ವಿಜಯ್ ‘ಭೀಮ’ ಸಿನಿಮಾದಲ್ಲೂ ‘ಡಿ-ಬಾಸ್.. ಡಿ-ಬಾಸ್..’ ಜೈಕಾರ!
ದುನಿಯಾ ವಿಜಯ್ ಸಿನಿಮಾಗೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸಂಪೂರ್ಣ ರೀತಿ ಬೆಂಬಲ ಘೋಷಣೆ ಮಾಡಿದ್ದಾರೆ. ಶುಕ್ರವಾರ ಕರ್ನಾಟಕದ ಮೂಲೆ, ಮೂಲೆಯಲ್ಲೂ ರಿಲೀಸ್ ಆಗಿರುವ ದುನಿಯಾ ವಿಜಯ್ ಅವರ ನಿರ್ದೇಶನ & ಹೀರೋ ಆಗಿ ಖುದ್ದಾಗಿ ದುನಿಯಾ ವಿಜಯ್ ನಟನೆ ಮಾಡಿರುವ 'ಭೀಮ' ಸಿನಿಮಾಗೆ ಇದೀಗ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಅಲ್ಲದೆ ಥಿಯೇಟರ್‌ಗೆ ಸುನಾಮಿ ರೀತಿ ನುಗ್ಗುತ್ತಿದ್ದಾರೆ.
ದುನಿಯಾ ವಿಜಯ್ & ದರ್ಶನ್ ತೂಗುದೀಪ್ ಅವರು ಆತ್ಮೀಯ ಗೆಳೆಯರು. ಇಂದಿಗೆ ಕೂಡ ಇಬ್ಬರ ನಡುವೆ ಅತ್ಯುತ್ತಮ ಸ್ನೇಹ ಹಾಗೇ ಉಳಿದುಕೊಂಡು & ಬೆಳೆದುಕೊಂಡು ಬಂದಿದೆ. ದುನಿಯಾ ವಿಜಯ್ ಹೀರೋ ಆಗಿ ನಟನೆ ಮಾಡಿ ನಿರ್ದೇಶನ ಕೂಡ ಮಾಡಿರುವ ಸಿನಿಮಾ 'ಭೀಮ' ಅದ್ಧೂರಿಯಾಗಿ ರಿಲೀಸ್ ಆಗಿದೆ. ಹೀಗಾಗಿ ಎಲ್ಲೆಲ್ಲೂ ಸಂಭ್ರಮ ಮನೆಮಾಡಿದ್ದು, ತಮ್ಮ ಹೀರೋ ಜೈಲಲ್ಲಿ ಇದ್ದಾರೆ ಎಂಬ ದುಖಃದಲ್ಲೇ ಇದೀಗ ದರ್ಶನ್ ತೂಗುದೀಪ್ ಅವರ ಆತ್ಮೀಯ ಗೆಳೆಯ ದುನಿಯಾ ವಿಜಯ್ ಅವರಿಗೆ ಸಪೋರ್ಟ್ ಮಾಡುತ್ತಿದ್ದಾರೆ ಅಭಿಮಾನಿಗಳು. ಹೀಗಾಗಿ ಥಿಯೇಟರ್ ತುಂಬಾ ಡಿ-ಬಾಸ್, ಡಿ-ಬಾಸ್ ಕೂಗು ಮೊಳಗುತ್ತಿದೆ.

'ಭೀಮ' ಸಿನಿಮಾ ಕಲೆಕ್ಷನ್ ಎಷ್ಟು ಕೋಟಿ?
ಕನ್ನಡಿಗರ ಸಿನಿಮಾ 'ಭೀಮ' ನಿನ್ನೆ ಅದ್ಧೂರಿಯಾಗಿ ರಾಜ್ಯದ ಮೂಲೆ ಮೂಲೆಯಲ್ಲಿ ರಿಲೀಸ್ ಆಗಿದೆ. ಹೀಗಾಗಿ ದುನಿಯಾ ವಿಜಯ್ ಡೈರೆಕ್ಷನ್ ಮಾಡಿ & ಹೀರೋ ಆಗಿ ನಟನೆ ಮಾಡಿರುವ 'ಭೀಮ' ಸಿನಿಮಾ ನೋಡಲು ಅಭಿಮಾನಿಗಳು ಮುಗಿಬಿದ್ದು ಮುಂದೆ ಬರುತ್ತಿದ್ದಾರೆ. ಹೀಗೆ ಎಲ್ಲೆಲ್ಲೂ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಮತ್ತೊಂದು ಕಡೆ ಸಿನಿಮಾ ಮಂದಿರಗಳು ಕೂಡ ತುಂಬಿ ತುಳುಕುತ್ತಿವೆ. ಹಾಗೇ 'ಭೀಮ' ಸಿನಿಮಾ ಮೊದಲ ದಿನವೇ ಕೋಟಿ ಕೋಟಿ ಗಳಿಸಿದೆ ಎನ್ನಲಾಗಿದೆ. ಹಾಗಾದ್ರೆ ದುನಿಯಾ ವಿಜಯ್ ಸಿನಿಮಾ 'ಭೀಮ' ಮೊದಲ ದಿನವೇ ಗಳಿಕೆ ಮಾಡಿದ ಹಣ ಎಷ್ಟು ಕೋಟಿ ರೂಪಾಯಿ?
15 ಕೋಟಿ ಗಳಿಸಿದ 'ಭೀಮ' ಸಿನಿಮಾ?
'ಭೀಮ' ಸಿನಿಮಾ ರಿಲೀಸ್ ಆಗಿರುವ ಬಹುತೇಕ ಥಿಯೇಟರ್‌ಗಳು ನಿನ್ನೆ ಹೌಸ್‌ಫುಲ್ ಬೋರ್ಡ್ ಹಾಕಿವೆ. ಹೀಗಾಗಿ ಕೋಟ್ಯಂತರ ರೂಪಾಯಿ ಹಣವನ್ನ ದುನಿಯಾ ವಿಜಯ್ ಡೈರೆಕ್ಷನ್ ಮಾಡಿ & ಹೀರೋ ಆಗಿ ನಟನೆ ಮಾಡಿರುವ 'ಭೀಮ' ಸಿನಿಮಾ ಗಳಿಸಿದೆ ಎನ್ನಲಾಗಿದೆ. ಅದ್ರಲ್ಲೂ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೆರೈಟಿ ವೆರೈಟಿ ಮಾಹಿತಿ ಹರಿದಾಡುತ್ತಿದ್ದು, ಈ ಸಮಯದಲ್ಲಿ 'ಭೀಮ' ಸಿನಿಮಾ ಮೊದಲ ದಿನ ಸುಮಾರು 15 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗುತ್ತಿದೆ. ಆದರೆ 'ಭೀಮ' ಸಿನಿಮಾ ಬಾಕ್ಸ್ ಆಫಿಸ್ ಕಲೆಕ್ಷನ್ ಬಗ್ಗೆ ದುನಿಯಾ ವಿಜಯ್ ಅವರೇ ಆಗಲಿ ಅಥವಾ ಸಿನಿಮಾ ತಂಡವೇ ಆಗಲಿ ಅಧಿಕೃತ ಮಾಹಿತಿ ನೀಡಿಲ್ಲ. ಹೀಗಾಗಿಯೇ ಕುತೂಹಲ ಕೂಡ ಡಬಲ್ ಆಗುತ್ತಿದೆ.












Click it and Unblock the Notifications