ಡಿ-ಬಾಸ್ ದರ್ಶನ್ ತೂಗುದೀಪ್, ಶಿವಣ್ಣ ಬಗ್ಗೆ ಕೆಟ್ಟದಾಗಿ ಮಾತನಾಡಿದ ಮಡೇನೂರ್ ಮನು ಬಿಗ್‌ಬಾಸ್.. Darshan Thoogudeepa

ಡಿ-ಬಾಸ್ ದರ್ಶನ್ ತೂಗುದೀಪ್ ಬಗ್ಗೆ ಯಾರು ಏನೇ ಮಾತನಾಡಿದರೂ ಅವರ ಅಭಿಮಾನಿಗಳು ಸಹಿಸಿಕೊಳ್ಳಲ್ಲ, ಅದರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಸಮಸ್ಯೆ ಎದುರಾದರೆ ಕೋಟಿ ಕೋಟಿ ಅಭಿಮಾನಿಗಳು ಓಡೋಡಿ ಬರುತ್ತಾರೆ. ಅದೇ ರೀತಿಯಾಗಿ ಹ್ಯಾಟ್ರಿಕ್ ಹೀರೋ ನಟ ಶಿವಣ್ಣ ಅವರಿಗೂ ಕೋಟಿ ಕೋಟಿ ಅಭಿಮಾನಿಗಳು ಜೀವ ಕೊಡಲು ಸಜ್ಜಾಗಿದ್ದಾರೆ. ಆದರೇ ಇದೇ ಡಿ-ಬಾಸ್ ದರ್ಶನ್ ತೂಗುದೀಪ್, ಶಿವಣ್ಣ ಅವರ ಬಗ್ಗೆ ಮಡೇನೂರ್ ಮನು ಕೆಟ್ಟದಾಗಿ ಮಾತನಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಹೀಗಿದ್ದಾಗಲೇ, ಡಿ-ಬಾಸ್ ದರ್ಶನ್ ತೂಗುದೀಪ್, ಶಿವಣ್ಣ ಬಗ್ಗೆ ಕೆಟ್ಟದಾಗಿ ಮಾತನಾಡಿದ ಮಡೇನೂರ್ ಮನು ಬಿಗ್‌ಬಾಸ್...

ಕನ್ನಡ ಸಿನಿಮಾ ರಂಗದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಹೊಸ ಗತ್ತು ಉಳಿಸಿಕೊಂಡು ಬಂದಿದ್ದರೆ, ನಟ & ಹ್ಯಾಟ್ರಿಕ್ ಹೀರೋ ಶಿವಣ್ಣ ಕನ್ನಡ ಸಿನಿಮಾ ರಂಗದ ಆಧಾರ ಸ್ತಂಭ ಅಂತಾ ಹೇಳಬಹುದು. ಯಾಕಂದ್ರೆ ಈ ಇಬ್ಬರೂ ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಪ್ರಭಾವವನ್ನ ಹೊಂದಿದ್ದಾರೆ. ಆದರೆ ಇದೇ ಡಿ-ಬಾಸ್ ದರ್ಶನ್ ತೂಗುದೀಪ್, ನಟ & ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಬಗ್ಗೆ ಮಡೇನೂರ್ ಮನು ಭಾರಿ ಕೆಟ್ಟದಾಗಿ ಮಾತನಾಡಿದ್ದರು ಎಂಬ ಆರೋಪ ಕೇಳಿಬಂದು, ಆಡಿಯೋ ಕೂಡ ವೈರಲ್ ಆಗಿತ್ತು. ಆದರೆ ಇದೇ ಮಡೇನೂರ್ ಮನು ಇದೀಗ ಬಿಗ್‌ಬಾಸ್‌ಗೆ ಎಂಟ್ರಿ?

Darshan Thoogudeepa Fans Are Saying This About Madenur Manu

ಮಡೇನೂರ್ ಮನು ಬಿಗ್‌ಬಾಸ್‌ಗೆ ಎಂಟ್ರಿ?

ಕನ್ನಡದಲ್ಲಿ ಹಲವು ರಿಯಾಲಿಟಿ ಶೋಗಳು ನಡೆದಿವೆ, ಹಾಗೇ ಹಲವು ರಿಯಾಲಿಟಿ ಶೋಗಳು ಇತಿಹಾಸ ಸೃಷ್ಟಿ ಮಾಡಿವೆ. ಅದರಲ್ಲೂ ಕಿಚ್ಚ ಸುದೀಪ್ ಅವರು ನಡೆಸಿಕೊಡುವ ರಿಯಾಲಿಟಿ ಶೋ ಬಿಗ್‌ಬಾಸ್ ಭಾರಿ ದೊಡ್ಡ ಸೌಂಡ್ ಮಾಡಿಕೊಂಡೇ ಬಂದಿದೆ. ಯಾಕಂದ್ರೆ ಬಿಗ್‌ಬಾಸ್ ಕನ್ನಡ ನೋಡಲು ಕೋಟಿ ಕೋಟಿ ಕನ್ನಡಿಗರು ಉಸಿರು ಬಿಗಿಹಿಡಿದು ಕಾಯುತ್ತಾರೆ. ಇಷ್ಟೆಲ್ಲಾ ಸಂಭ್ರಮದ ನಡುವೆ ಇದೀಗ ಒಂದು ಸುದ್ದಿ ಸೋಷಿಯಲ್ ಮೀಡಿಯಾ ಮೂಲಕ ಹಬ್ಬಿದ್ದು, ಸಂಚಲನ ಸೃಷ್ಟಿ ಮಾಡಿದೆ!

ಸಂಚಲನ ಸೃಷ್ಟಿಸಿದ ಮಡೇನೂರ್ ಮನು ವಿಷಯ!

ಹೌದು, ಮಡೇನೂರ್ ಮನು ಕೂಡ ರಿಯಾಲಿಟಿ ಶೋಗಳ ಮೂಲಕ ಹೆಸರು ಮಾಡಿ ಕನ್ನಡ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿ. ಆದರೆ ಕೆಲವು ದಿನಗಳ ಹಿಂದೆ ದೊಡ್ಡ ಆರೋಪ ಕೇಳಿಬಂದ ನಂತರ ಜೈಲಿಗೆ ಸಹ ಹೋಗಿ ಬಂದಿದ್ದು ಆಗಿದೆ. ಅದರಲ್ಲೂ ಮಡೇನೂರ್ ಮನು ಡಿ-ಬಾಸ್ ದರ್ಶನ್ ತೂಗುದೀಪ್, ನಟ & ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಸೇರಿದಂತೆ ನಟ ಧ್ರುವ ಸರ್ಜಾ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಎಂಬ ಆರೋಪ ಕೇಳಿ ಬಂದಿತ್ತು.

ಅಲ್ಲದೆ ಆಡಿಯೋ ಕೂಡ ವೈರಲ್ ಆಗಿತ್ತು, ಹೀಗಿದ್ದಾಗಲೇ ಬಿಗ್‌ಬಾಸ್ ಮನೆಗೆ ಮಡೇನೂರ್ ಮನು ಕೂಡ ಸ್ಪರ್ಧಿಯಾಗಿ ಹೋಗ್ತಾರೆ ಅನ್ನೋ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿದ್ದು ಸಂಚಲನ ಸೃಷ್ಟಿಸಿದೆ. ಅಲ್ಲದೆ ಇದಕ್ಕೆ ಅವಕಾಶ ಬೇಡ, ಅಂತಾ ಕೂಡ ನೆಟ್ಟಿಗರು ಹೇಳುತ್ತಿದ್ದಾರೆ. ಆದರೆ ಮಡೇನೂರ್ ಮನು ಬಿಗ್‌ಬಾಸ್ ಮನೆಗೆ ಹೋಗುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲ, ಹೀಗಾಗಿ ಉತ್ತರ ತಿಳಿಯಲು ಇನ್ನೂ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+