Darshan Thoogudeepa: ದರ್ಶನ್‌ಗೆ ಬಾಕಿ ಇರೋದು ನಾಲ್ಕು ವಾರ ಮಾತ್ರ, ಅಷ್ಟರಲ್ಲಿ ಆಗುತ್ತಾ ಆ ಕೆಲಸ ?!

ನಟ ದರ್ಶನ್ ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿ ಈಗಾಗಲೇ ಎರಡು ವಾರ ಕಳೆದಿದೆ. ಅವರಿಗೆ ಉಳಿದಿರುವುದು ಇನ್ನು ನಾಲ್ಕು ವಾರಗಳು ಮಾತ್ರ.‌ ನಟ ಹಾಗೂ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಯಾಗಿರುವ ದರ್ಶನ್‌ಗೆ ಹೈಕೋರ್ಟ್‌ ಆರೋಗ್ಯ ದೃಷ್ಟಿಯಿಂದ ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದೆ. ಈ ಅವಧಿಯಲ್ಲಿ ಅವರು ಅವರ ಆರೋಗ್ಯ ಸಮಸ್ಯೆಯನ್ನು ಮಾತ್ರ ಪರಿಹರಿಸಿಕೊಳ್ಳುವುದಕ್ಕೆ (ಚಿಕಿತ್ಸೆ) ಪಡೆಯುವುದಕ್ಕೆ ಅವಕಾಶ ನೀಡಲಾಗಿದೆ. ಆದರೆ, ದರ್ಶನ್ ಇಲ್ಲಿಯವರೆಗೆ ಆಪರೇಷನ್‌ಗೆ ಒಳಗಾಗಿಲ್ಲ.

ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯುವ ಸಂದರ್ಭದಲ್ಲಿ ಅವರಿಗೆ ಆಪರೇಷನ್ ‌ಮಾಡುವ ಅಗತ್ಯ ಇದೆ ಎಂದು ಹೇಳಲಾಗಿತ್ತು. ಆದರೆ, ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿ ಎರಡು ವಾರಗಳು ಈಗಾಗಲೇ ಆಗಿದ್ದರೂ, ಆಪರೇಷ್‌ನ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬರದೆ ಇರುವುದು ಯಾಕೆ ಎನ್ನುವ ಪ್ರಶ್ನೆ ಎದುರಾಗಿದೆ. ಈ ನಡುವೆ ಅವರ ಆರೋಗ್ಯ ಪರೀಕ್ಷೆ ಹಾಗೂ ಚಿಕಿತ್ಸೆಗಳು ನಿರಂತರವಾಗಿ ಮುಂದುವರಿದಿದೆ ಎನ್ನಲಾಗಿದೆ.

Darshan Thoogudeepa Darshan has only four weeks to go meanwhile that work will happen

ಇನ್ನು ಮಧ್ಯಂತರ ಜಾಮೀನಿನ ಕೊನೆಯ ಹಂತದಲ್ಲಿ ಒಂದೊಮ್ಮೆ ದರ್ಶನ್ ಆಪರೇಷನ್‌ ಮಾಡಿಸಿಕೊಂಡರೆ ಇನ್ನಷ್ಟು ವಿಶ್ರಾಂತಿಯ ಅವಶ್ಯಕತೆ ಇರಲಿದೆ. ಆಗ ಮತ್ತೆ ಇನ್ನಷ್ಟು ವಿಶ್ರಾಂತಿಗೆ ಅವಕಾಶ ನೀಡುವಂತೆ ಹೈಕೋರ್ಟ್‌ಗೆ ಮನವಿ ಮಾಡುವ ಸಾಧ್ಯತೆಯೂ ಇದೆ. ಆದರೆ, ಈ ಎಲ್ಲದರ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. ಇದೀಗ ದರ್ಶನ್‌ ಅವರಿಗೆ ಫಿಸಿಯೋ ಥೆರಫಿ ನಡೆದಿದೆ ಎಂದು ಹೇಳಲಾಗಿದೆ.

ದರ್ಶನ್‌ಗೆ ತೀವ್ರ ಬೆನ್ನು ನೋವು: ಇನ್ನು ನಟ ದರ್ಶನ್ ತೀವ್ರ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದರ್ಶನ್ ತೂಗುದೀಪ್‌ ಆಸ್ಪತ್ರೆಗೆ ಹೋಗ್ತಿರುವ ವಿಡಿಯೋಗಳು ಈಚೆಗೆ ವೈರಲ್‌ ಆಗಿತ್ತು. ಬಾಸ್‌ನ ಈ ರೀತಿ ನೋಡೋಕೆ ಆಗ್ತಿಲ್ಲ ಎಂದು ಅವರ ಅಭಿಮಾನಿಗಳು ಪೋಸ್ಟ್‌ ಮಾಡಿ ನೋವು ತೋಡಿಕೊಂಡಿದ್ದರು. ದರ್ಶನ್‌ ಅವರ ಆರೋಗ್ಯ ಮೊದಲಿನಂತೆ ಇಲ್ಲ ಎನ್ನುವುದು ಅವರು ನಡೆಯುವುದನ್ನು ನೋಡಿದರೆನೇ ತಿಳಿಯುತ್ತೆ.

ಆರೋಗ್ಯ ಪರೀಕ್ಷೆ ಹಾಗೂ ಬೆನ್ನು ನೋವಿನ ಚಿಕಿತ್ಸೆಗೆಂದು ಅವರಿಗೆ 6 ವಾರಗಳ ಮಧ್ಯಂತರ ಜಾಮೀನನ್ನು ಹೈಕೋರ್ಟ್‌ ನೀಡಿದೆ. ಕಳೆದ ಎರಡು ವಾರದಿಂದ ದರ್ಶನ್‌ಗೆ ಚಿಕಿತ್ಸೆ ನಡೆದಿದೆ. ಈಗಾಗಲೇ ಅವರಿಗೆ ಆಪರೇಷನ್‌ ಮಾಡುವ ಅವಶ್ಯಕತೆ ಇದೆ ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ. ಆದರೆ, ದರ್ಶನ್‌ ಅವರು ಆಪರೇಷನ್‌ಗೆ ಸುತಾರಾಮ್‌ ಒಪ್ತಿಲ್ಲ ಅಂತಲೂ ಹೇಳಲಾಗಿತ್ತು. ಆದರೆ, ಯಾವ ಕಾರಣಕ್ಕೆ ಆಪರೇಷನ್‌ ಬೇಡ ಎನ್ನುತ್ತಿದ್ದಾರೆ ಎನ್ನುವುದು ಗೊತ್ತಾಗಿಲ್ಲ.

Darshan Thoogudeepa Darshan has only four weeks to go meanwhile that work will happen

ಮಾತ್ರೆ ಕೊಡಿ ಪ್ಲೀಸ್‌: ನಟ ದರ್ಶನ್ ಅವರು ವೈದ್ಯರ ಬಳಿ ನನಗೆ ಆಪರೇಷನ್‌ ಮಾಡ್ಬೇಡಿ, ಮಾತ್ರೆ ಇಲ್ಲ ಥೆರಫಿಯಿಂದಲೇ ವಾಸಿ ಮಾಡ್ಸಿ ಅಂತ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಅವರಿಗೆ ನೀಡಿರುವ ಮಧ್ಯಂತರ ಜಾಮೀನಿನ ಅವಧಿ ಕಡಿಮೆಯಾಗ್ತಿದೆ. ಹೀಗಾಗಿ, ಇನ್ನುಳಿದ ನಾಲ್ಕು ವಾರಗಳ ಅವಧಿಯಲ್ಲಿ ಅವರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನುವ ಕುತೂಹಲ ಎದುರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+