Darshan Thoogudeepa: ದರ್ಶನ್ ತೂಗುದೀಪ್ ಅಭಿಮಾನಿಗಳು ಕುಣಿದಾಡುವ ಸುದ್ದಿ!
ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಲ್ಲಿ ಪರದಾಡುತ್ತಿದ್ದು, ಆದಷ್ಟು ಬೇಗ ಹೊರ ಬಂದು ಮತ್ತೆ ಸಿನಿಮಾಗಳಲ್ಲಿ ಬ್ಯುಸಿ ಆಗಬೇಕು ಅಂತಾ ಕಾಯುತ್ತಿದ್ದಾರೆ. ಆದರೆ ಹೀಗಿದ್ದಾಗ ಕೆಲವು ದಿನಗಳ ಹಿಂದಷ್ಟೇ ನಟ ದರ್ಶನ್ ಅವರ ಜಾಮೀನು ಅರ್ಜಿ ವಜಾ ಆಗಿತ್ತು. ಇಷ್ಟೆಲ್ಲಾ ನೋವು & ಬೇಸರದ ನಡುವೆ ನೊಂದಿದ್ದ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಈಗ ಭಾರಿ ಭರ್ಜರಿ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಯಾಕೆ ಗೊತ್ತಾ? ಮಾಹಿತಿ ತಿಳಿಯೋಣ ಬನ್ನಿ.
ದರ್ಶನ್ ತೂಗುದೀಪ್ ಸಿನಿಮಾಗಳು ಅಂದ್ರೆ ಫುಲ್ ಕ್ರೇಜ್, ಅದರಲ್ಲು ಅಭಿಮಾನಿಗಳೂ ಈ ರೀತಿ ದರ್ಶನ್ ತೂಗುದೀಪ್ ಸಿನಿಮಾಗಳು ರಿಲೀಸ್ ಆಗುತ್ತವೆ ಅಂದ್ರೆ ವರ್ಷಗಟ್ಟಲೇ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಾರೆ. ಈ ಮೂಲಕ ದರ್ಶನ್ ತೂಗುದೀಪ್ ಅವರ ಸಿನಿಮಾ ಕಣ್ತುಂಬಿಕೊಳ್ಳುತ್ತಾರೆ. ಹೀಗಿದ್ದಾಗ ಬಳ್ಳಾರಿ ಜೈಲಿನಲ್ಲಿ ಇರುವ ನಟ ದರ್ಶನ್ ಅವರ ಚಿತ್ರ ಹೊಸದಾಗಿ ಯಾವುದೂ ರಿಲೀಸ್ ಆಗಿಲ್ಲ. ಹೀಗಾಗಿ ಹಳೆಯ ಸಿನಿಮಾಗಳನ್ನೇ ನೋಡಿ, ಆ ಮೂಲಕ ದರ್ಶನ್ ತೂಗುದೀಪ್ ಅವರ ಸಿನಿಮಾಗಳಿಗೆ ಸಪೋರ್ಟ್ ಮಾಡುತ್ತಿದ್ದಾರೆ ಫ್ಯಾನ್ಸ್. ಹೀಗೆ ಕೆಲವು ದಿನಗಳ ಅಂತರದಲ್ಲಿ ದರ್ಶನ್ ತೂಗುದೀಪ್ ಅವರ ಹಲವು ಸಿನಿಮಾಗಳು ಈ ರೀತಿ ಸಾಲು ಸಾಲಾಗಿ ಬಿಡುಗಡೆ ಆಗಿದ್ದವು. ಇದೀಗ ಮತ್ತೊಂದು ಸಿನಿಮಾ ಕೂಡ ಬರ್ತಿದೆ.

'ಡೆವಿಲ್' ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ...
ದರ್ಶನ್ ತೂಗುದೀಪ್ ಅವರ 'ಕಾಟೇರ' ಕಳೆದ ವರ್ಷ ಡಿಸೆಂಬರ್ ಸಮಯದಲ್ಲಿ ರಿಲೀಸ್ ಆಗಿತ್ತು. ಅಲ್ಲದೆ ಕನ್ನಡ ಸಿನಿಮಾ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದ್ದ 'ಕಾಟೇರ' ಎವರ್‌ಗ್ರೀನ್ ಸಿನಿಮಾ ಎನಿಸಿಕೊಂಡಿದೆ. ಹೀಗಿದ್ದಾಗ ಎಲ್ಲಾ ಸರಿಯಾಗಿತ್ತು ಅಂದ್ರೆ ದರ್ಶನ್ ತೂಗುದೀಪ್ ಅವರ ಹೊಸ ಸಿನಿಮಾ 'ಡೆವಿಲ್' ಇದೀಗ ರಿಲೀಸ್ ಆಗಬೇಕಿತ್ತು. ಆದರೆ ಅದು ನೆರವೇರಲಿಲ್ಲ, ಯಾಕಂದ್ರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಅವರು ಬಳ್ಳಾರಿಯ ಜೈಲಿನಲ್ಲಿ ಪರದಾಡ್ತಿದ್ದಾರೆ. ಇಂತಹ ಸಮಯದಲ್ಲಿ ದರ್ಶನ್ ಬಂಧನದ ಬಳಿಕ ಸಾಲು, ಸಾಲು ಸಿನಿಮಾಗಳು ರೀ ರಿಲೀಸ್ ಆಗುತ್ತಿವೆ.
'ಶಾಸ್ತ್ರಿ' & 'ಕರಿಯ' ಜೊತೆಗೆ...
ದರ್ಶನ್ ತೂಗುದೀಪ್ ಅವರ 'ಶಾಸ್ತ್ರಿ' & 'ಕರಿಯ' ಸಿನಿಮಾಗಳು ಈಗಾಗಲೇ ಅದ್ಧೂರಿಯಾಗಿ ರೀ ರಿಲೀಸ್ ಆಗಿ ದೊಡ್ಡ ದಾಖಲೆ ಬರೆದಿವೆ. ಹೀಗಿದ್ದಾಗ, 'ನವಗ್ರಹ' ಸಿನಿಮಾ ಶೀಘ್ರದಲ್ಲೇ ಮರು ಬಿಡುಗಡೆ ಆಗುವುದಾಗಿ ಕೂಡ ದರ್ಶನ್ ಕುಟುಂಬಸ್ಥರು ಘೋಷಣೆ ಮಾಡಿದ್ದಾರೆ. ಈ ಮೂಲಕ ದರ್ಶನ್ ಅವರ ಅಭಿಮಾನಿಗಳಿಗೆ ಸಾಲು ಸಾಲು ಸರ್ಪ್ರೈಸ್ ಸಿಗುತ್ತಿವೆ.
ಮತ್ತೊಂದು ಕಡೆ ದೀಪಾವಳಿ ಹಬ್ಬಕ್ಕೆ ಸಿಕ್ಕಿರುವ ಭರ್ಜರಿಯಾದ ಸುದ್ದಿ ಏನು ಅಂದ್ರೆ ದರ್ಶನ್ ತೂಗುದೀಪ್ ಅವರ 'ನಮ್ಮ ಪ್ರೀತಿಯ ರಾಮು' ಸಿನಿಮಾ ಕೂಡ ರೀ ರಿಲೀಸ್ ಆಗುತ್ತದೆಯಂತೆ. ಈ ಬಾರಿ ನಮ್ಮ ನಾಡಿಗೆ ಡಬಲ್ ಸಂಭ್ರಮ, ಯಾಕಂದ್ರೆ ದೀಪವಾಳಿ & ಕನ್ನಡ ರಾಜ್ಯೋತ್ಸವ ಒಟ್ಟೊಟ್ಟಿಗೆ ಬರ್ತಿವೆ. ಈ ಕಾರಣಕ್ಕೆ ನವೆಂಬರ್ 1ರ ಕನ್ನಡ ರಾಜ್ಯೋತ್ಸವಕ್ಕೆ 'ನಮ್ಮ ಪ್ರೀತಿಯ ರಾಮು' ಭರ್ಜರಿಯಾಗಿ ರಿಲೀಸ್ ಆಗಲಿದೆಯಂತೆ. ಇದು ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ.












Click it and Unblock the Notifications