Darshan Thoogudeepa: ಪವಿತ್ರಾ ಗೌಡ ಹೀರೋಯಿನ್ ಆಗಿ ಡಿ-ಬಾಸ್ ದರ್ಶನ್ ತೂಗುದೀಪ್ ಹೊಸ ಸಿನಿಮಾದಲ್ಲಿ ನಟಿಸಲು...
ಪವಿತ್ರಾ ಗೌಡ & ಡಿ-ಬಾಸ್ ದರ್ಶನ್ ತೂಗುದೀಪ್ ಅವರು 2014ರ ಬುಲ್ ಬುಲ್ ಸಿನಿಮಾದ ಶೂಟಿಂಗ್ ಸಮಯದಲ್ಲಿ ಪರಿಚಿತರಾಗಿದ್ದರು. ಇಬ್ಬರ ಪರಿಚಯ ನಂತರ ಸ್ನೇಹಕ್ಕೆ ತಿರುಗಿ, ಆ ನಂತರ ಆತ್ಮೀಯ ಸ್ನೇಹಿತರಾಗಿದ್ದರು. ಪವಿತ್ರಾ ಗೌಡ & ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸ್ನೇಹದ ವಿಚಾರ ಗಾಂಧಿ ನಗರದ ಗಲ್ಲಿ ಗಲ್ಲಿಗಳಲ್ಲಿ ಮಾತ್ರವಲ್ಲ ಇಡೀ ಕರ್ನಾಟಕದ ತುಂಬಾ ಸೌಂಡ್ ಮಾಡಿತ್ತು, ಫೋಟೋಸ್ ಕೂಡ ವೈರಲ್ ಆಗಿದ್ದವು.
ಪವಿತ್ರಾ ಗೌಡ ನಟಿಯಾಗಿ ಒಂದೆರಡು ಕನ್ನಡ ಸಿನಿಮಾ ಮಾಡಿದ್ದರೂ ಅವೆಲ್ಲಾ ಅಟ್ಟರ್ ಫ್ಲಾಪ್ ಆಗಿದ್ದವು. ಪವಿತ್ರಾ ಗೌಡ ಕನ್ನಡ ಸಿನಿಮಾ ರಂಗದಲ್ಲಿ ಸಾಲು ಸಾಲು ಸೋಲು ಕಂಡಿದ್ದರು. ಹೀಗಿದ್ದಾಗ, 2014ರ ಬುಲ್ ಬುಲ್ ಸಿನಿಮಾದಲ್ಲಿ ತನಗೆ ಹೀರೋಯಿನ್ ಆಗಿ ನಟಿಸಲು ಚಾನ್ಸ್ ಕೊಡಿ ಅಂತಾನೇ ಪವಿತ್ರಾ ಗೌಡ ಅವರು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಎದುರು ಮನವಿ ಮಾಡಿದ್ದರಂತೆ. ಆದರೆ ಆಗ ರಚಿತಾ ರಾಮ್ ಇದ್ದ ಕಾರಣಕ್ಕೆ ಪವಿತ್ರಾ ಗೌಡಗೆ ಈ ಅವಕಾಶ ಸಿಕ್ಕಿರಲಿಲ್ಲ. ಆದ್ರೆ ಈಗ, ಪವಿತ್ರಾ ಗೌಡ ಹೀರೋಯಿನ್ ಆಗಿ ಡಿ-ಬಾಸ್ ದರ್ಶನ್ ತೂಗುದೀಪ್ ಹೊಸ ಸಿನಿಮಾದಲ್ಲಿ ನಟಿಸಲು....

ಪವಿತ್ರಾ ಗೌಡ & ಡಿ-ಬಾಸ್ ದರ್ಶನ್...
ರೇಣುಕಾಸ್ವಾಮಿ ಎಂಬ ವ್ಯಕ್ತಿ ಪವಿತ್ರಾ ಗೌಡ ಅವರಿಗೆ ಕೆಟ್ಟದಾಗಿ ಮೆಸೇಜ್ ಮಾಡುತ್ತಾ, ಅಶ್ಲೀಲ ಫೋಟೋ ಕಳುಹಿಸುತ್ತಿದ್ದ ಆರೋಪ ಹಿನ್ನೆಲೆ ಕೊಲೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನು ಅಪಹರಣ ಮಾಡಿ ಕರೆದುಕೊಂಡು ಬಂದು ಪಟ್ಟಣಗೆರೆ ಶೆಡ್‌ನಲ್ಲಿ ಹಲ್ಲೆ ಮಾಡಿ ಭೀಕರವಾಗಿ ಕೊಲೆ ಮಾಡಿದ್ದ ಆರೋಪ ಕೇಳಿ ಬಂದಿತ್ತು...
ಬಳ್ಳಾರಿ ಜೈಲು ಸೇರಿ ನಂತರ....
ಇದೇ ಕಾರಣಕ್ಕೆ ಬಳ್ಳಾರಿ ಜೈಲು ಸೇರಿ, ನಂತರ ಬಿಡುಗಡೆ ಆಗಿ ಹೊರಗೆ ಬಂದಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಹೊಸ ಸಿನಿಮಾಗೆ ಸಜ್ಜಾಗಿದ್ದಾರೆ. ಇಂತಹ ಸಮಯದಲ್ಲೇ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಮುಂದಿನ ಸಿನಿಮಾದಲ್ಲಿ ಪವಿತ್ರಾ ಗೌಡ ಹೀರೋಯಿನ್ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಸುದ್ದಿ ಹಬ್ಬಿಸಲಾಗುತ್ತಿದೆ. ಈ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ & ಕಮೆಂಟ್ ಹಾಕಲಾಗುತ್ತಿದೆ.
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಹೀರೋ ಆಗಲಿರುವ ಸಿನಿಮಾದಲ್ಲೇ ಪವಿತ್ರಾ ಗೌಡಗೆ ಹೀರೋಯಿನ್ ಪಟ್ಟ ಸಿಗುತ್ತಾ? ಎಂಬ ಪ್ರಶ್ನೆ ಮೂಡಿದೆ. ಆದರೆ ಈ ಅಂತೆ & ಕಂತೆಗಳಿಗೆ, ಈವರೆಗೂ ಯಾವುದೇ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ. ಹೀಗಾಗಿ ಪವಿತ್ರಾ ಗೌಡ ಹೀರೋಯಿನ್ ಆಗಿ ಡಿ-ಬಾಸ್ ದರ್ಶನ್ ಅವರ ಜೊತೆಗೆ ನಟನೆ ಮಾಡ್ತಾರಾ? ಅನ್ನೋ ಕುತೂಹಲ ಹೆಚ್ಚಾಗ್ತಿದೆ.
ಮೊದಲ ಗಂಡನಿಂದ ದೂರವಾಗಿದ್ದರು!
2014 ರಲ್ಲಿ ದರ್ಶನ್ ತೂಗುದೀಪ್‌ರ ಸ್ನೇಹ ಮಾಡುವುದಕ್ಕೂ ಮೊದಲು, ಪವಿತ್ರಾ ಗೌಡ ಮಾಜಿ ಗಂಡ ಅಂದ್ರೆ ಸಂಜಯ್ ಸಿಂಗ್ ಜೊತೆ ಮದುವೆ ಆಗಿದ್ದರು. ಆದರೆ, ಅವರ ಸಂಸಾರದಲ್ಲಿ ಬಿರುಕು ಮೂಡಿದ್ದ ಕಾರಣಕ್ಖೇ ಪವಿತ್ರಾ ಗೌಡ & ಸಂಜಯ್ ಸಿಂಗ್ ದೂರವಾದರು ಎನ್ನಲಾಗಿದೆ. ಹೀಗೆ ಪವಿತ್ರಾ ಗೌಡ ಮೊದಲ ಗಂಡನಿಂದ ದೂರವಾದ ನಂತರ, 2014ರ ಸಮಯದಲ್ಲಿ 'ಬುಲ್ ಬುಲ್' ಸಿನಿಮಾ ಶೂಟಿಂಗ್ ಸಮಯದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಪರಿಚಯವಾಗಿ, ಸ್ನೇಹ ಬೆಳೆಸಿದ್ದರು. ಈಗ ಇಬ್ಬರೂ ಒಟ್ಟಿಗೆ ನಟಿಸುತ್ತಾರಾ? ಎಂಬ ಕುತೂಹಲದ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ.











Click it and Unblock the Notifications