Darshan Thoogudeepa: ದೌಲತ್ತಲ್ ಮೆರದೋರೆಲ್ಲ ಹಿಸ್ಟರಿಲಿ ಉಳಿದೆಯಿಲ್ಲ... ಡಿ-ಬಾಸ್ ದರ್ಶನ್ ಬಗ್ಗೆ ಜೋಗಿ ಪ್ರೇಮ್...
ಜೋಗಿ ಪ್ರೇಮ್ & ಡಿ-ಬಾಸ್ ದರ್ಶನ್ ತೂಗುದೀಪ್ ಇಬ್ಬರೂ ಪರದಾಡುತ್ತಾ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಂದವರು. ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲೇ ಹವಾ ಎಬ್ಬಿಸಿದ್ದ 'ಕರಿಯ' ಸಿನಿಮಾ ಮೂಲಕ, ಜೋಗಿ ಪ್ರೇಮ್ & ಡಿ-ಬಾಸ್ ದರ್ಶನ್ ತೂಗುದೀಪ್ ಒಟ್ಟಿಗೆ ಸಿನ್ಮಾ ಮಾಡಿ ಕನ್ನಡಿಗರ ಮನಸ್ಸು ಗೆದ್ದಿದ್ದರು. ಆದರೆ, ಕೆಲವು ವರ್ಷಗಳ ಹಿಂದೆ ಜೋಗಿ ಪ್ರೇಮ್ ಕುರಿತು ಮಾತನಾಡಿದ್ದ ಡಿ-ಬಾಸ್ ದರ್ಶನ್ ತೂಗುದೀಪ್ 'ಪುಡಾಂಗ್' ಎಂಬ ಪದ ಪ್ರಯೋಗ ಮಾಡಿ ಉರಿಯುವ ಬೆಂಕಿಗೆ ಪೆಟ್ರೋಲ್ ಸುರಿದಿದ್ದರು!
ನಿರ್ಮಾಪಕ ಉಮಾಪತಿ ಗೌಡ & ಡಿ-ಬಾಸ್ ದರ್ಶನ್ ತೂಗುದೀಪ್ ನಡುವೆ ಗಲಾಟೆ ನಡೆಯುವ ವೇಳೆ, ಸುಖಾಸುಮ್ಮನೆ ಜೋಗಿ ಪ್ರೇಮ್ ಹೆಸರನ್ನೂ ಪ್ರಸ್ತಾಪ ಮಾಡಿದ್ದರು ಡಿ-ಬಾಸ್ ದರ್ಶನ್ ಅವರು ಎಂಬ ಆರೋಪ ಕೇಳಿ ಬಂದಿತ್ತು. ದರ್ಶನ್ ಹೀಗೆ 'ಜೋಗಿ ಪ್ರೇಮ್ ಏನು ದೊಡ್ಡ ಪುಡಾಂಗ್...' ಅನ್ನೋ ಪದ ಪ್ರಯೋಗ ಮಾಡಿದ ನಂತರ ಅಲ್ಲೋಲ ಕಲ್ಲೋಲವೇ ಸೃಷ್ಟಿ ಆಗಿತ್ತು. ಅದೇ ವೇಳೆ ಖುದ್ದಾಗಿ ಜೋಗಿ ಪ್ರೇಮ್ ವಾರ್ನಿಂಗ್ ಕೊಟ್ಟಿದ್ದರು. ಹೀಗಿದ್ದಾಗಲೇ, ದೌಲತ್ತಲ್ ಮೆರದೋರೆಲ್ಲ ಹಿಸ್ಟರಿಲಿ ಉಳಿದೆಯಿಲ್ಲ... ಹೀಗಂತಾ ಡಿ-ಬಾಸ್ ದರ್ಶನ್ ಅವರಿಗೆ ಜೋಗಿ ಪ್ರೇಮ್...

ಡಿ-ಬಾಸ್ ದರ್ಶನ್ VS ಜೋಗಿ ಪ್ರೇಮ್?
ಅಂದಹಾಗೆ, ಜೋಗಿ ಪ್ರೇಮ್ ನಿರ್ದೇಶನ ಮಾಡಿರುವ & ಆಕ್ಷನ್‌ಪ್ರಿನ್ಸ್ ದ್ರುವ ಸರ್ಜಾ ಹೀರೋ ಆಗಿ ಮತ್ತೆ ಎಂಟ್ರಿ ಕೊಡ್ತಿರುವ 'ಕೆಡಿ ದಿ ಡೆವಿಲ್' ಸಿನಿಮಾ ಈಗ ದೊಡ್ಡ ಸೌಂಡ್ ಮಾಡ್ತಾ ಇದೆ. ಅದರಲ್ಲೂ 'ಕೆಡಿ ದಿ ಡೆವಿಲ್' ಚಿತ್ರದ ಶಿವ ಶಿವ ಲಿರಿಕಲ್ ಸಾಂಗ್ ವಿಡಿಯೋ ಹವಾ ಎಬ್ಬಿಸಿ ಭಾರಿ ಸಂಚಲನ ಸೃಷ್ಟಿ ಮಾಡಿದೆ. ಆದರೆ ಇದೇ ಹಾಡಿನಲ್ಲಿ ಡೈರೆಕ್ಟರ್ ಜೋಗಿ ಪ್ರೇಮ್ ಅವರು, ಡಿ-ಬಾಸ್ ದರ್ಶನ್ ತೂಗುದೀಪ್ ವಿರುದ್ಧ....
ಅಂದಹಾಗೆ 'ಕೆಡಿ ದಿ ಡೆವಿಲ್' ಚಿತ್ರದ ಶಿವ ಶಿವ ಲಿರಿಕಲ್ ಸಾಂಗ್‌ನಲ್ಲಿ, ಗುರುವೇ ನಿನ್ನಾಟ ಬಲ್ಲೋರ್ ಯಾರ್ ಯಾರೋ.. ಶಿವನೇ ನಿನ್ನಾಟ ಬಲ್ಲೋರ್ ಯಾರ್ ಯಾರೋ... ಎನ್ನುವ ಲಿರಿಕ್ಸ್ ಇದೆ. ಹಾಗೇ, 'ದೌಲತ್ತಲ್ ಮೆರದೋರೆಲ್ಲ ಹಿಸ್ಟರಿಲಿ ಉಳಿದೆಯಿಲ್ಲ.. ಕಾಲೇಳೆಯೋಕ್ ಬಂದೋರೆಲ್ಲ ಕಾಲ ಕೆಳ್ಗೆ ಉಳ್ದೊದ್ರಲ್ಲ, ನೀನ್ ಅಂತೋನ್ ಅಲ್ವೇ ಅಲ್ಲ.. ನೀನ್ ಅಂತೋನ್ ಅಲ್ವೇ ಅಲ್ಲ... ನಿನ್ನಂಗೆ ಯಾರು ಇಲ್ಲ.. ಬಕೇಟಾ ಹಿಡಿಯೋರ್ನೆಲ್ಲ ಸೈಡಿಟ್ಟು ಹೋಯ್ತ ಇರ್ಲಾ...' ಅನ್ನೋ ಸಾಲುಗಳು ಇದ್ದು ಇದನ್ನ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಬರೆದಿದ್ದಾರೆ ಅನ್ನೋ ಆರೋಪವನ್ನ ಕೆಲವರು ಮಾಡ್ತಾ ಇದ್ದಾರೆ.
ಹಾಡು ಕೇಳಿ ಕನ್ನಡಿಗರು ಫಿದಾ!
ಆದ್ರೆ ಈ ಹಾಡಿನ ಲಿರಿಕ್ಸ್ ಜೋಗಿ ಪ್ರೇಮ್ ಅವರು ಹೀಗೆ ಬರೆದಿರುವುದಕ್ಕೂ, ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೂ ಯಾವುದೇ ಸಂಬಂಧವಿಲ್ಲ ಅನ್ನೋ ಮಾತು ಕೂಡ ಕೇಳಿ ಬರುತ್ತಿವೆ. ಒಟ್ನಲ್ಲಿ ಈ ಎಲ್ಲಾ ತಿಕ್ಕಾಟದ ನಡುವೆಯೂ 'ಕೆಡಿ ದಿ ಡೆವಿಲ್' ಚಿತ್ರದ ಶಿವ ಶಿವ ಲಿರಿಕಲ್ ಸಾಂಗ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಕನ್ನಡಿಗರು ಕೂಡ ಫಿದಾ ಆಗಿದ್ದಾರೆ.












Click it and Unblock the Notifications