Darshan Thoogudeep: ಆಸ್ಪತ್ರೆಯಲ್ಲಿ ನಡೆಯಲು ಕಷ್ಟಪಡುತ್ತಿರುವ ದರ್ಶನ್; ವಿಡಿಯೋ ನೋಡಿ

131 ದಿನಗಳ ಜೈಲುವಾಸದ ಬಳಿಕ ನಟ ದರ್ಶನ್‌ ತೂಗುದೀಪ್‌ಗೆ ಹೈಕೋರ್ಟ್‌ನಲ್ಲಿ ಮಧ್ಯಂತರ ಜಾಮೀನು ಸಿಕ್ಕಿದೆ. ಬೆನ್ನ ನೋವು ಸಮಸ್ಯೆಯಿಂದ ಬಳಲುತ್ತಿರುವ ದರ್ಶನ್‌ಗೆ ಚಿಕಿತ್ಸೆ ಪಡೆಯಲು 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರಾಗಿದೆ. ದರ್ಶನ್ ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ದರ್ಶನ್‌ಗೆ ಬೆನ್ನುನೋವು ತೀವ್ರವಾಗಿದ್ದು ಅವರ ಎಡಗಾಲು ಕೂಡ ಜೋಮು ಹಿಡಿದಂತಾಗುತ್ತಿದೆ ಎಂದು ವಕೀಲರು ವಿಚಾರಣೆ ಸಂದರ್ಭದಲ್ಲಿ ಹೇಳಿದ್ದರು. ಬಳ್ಳಾರಿ ಜೈಲಿನಲ್ಲಿ ದರ್ಶನ್‌ ನಡೆಯಲು ಕೂಡ ಕಷ್ಟಪಡುತ್ತಿರುವ ವಿಡಿಯೋಗಳು ಮಾಧ್ಯಮದಲ್ಲಿ ಪ್ರಸಾರವಾಗಿದ್ದವು. ದರ್ಶನ್‌ಗೆ ನೋವು ಇದೀಗ ಮತ್ತಷ್ಟು ಹೆಚ್ಚಿದ್ದು, ತುಂಬಾ ಕಷ್ಟಪಡುತ್ತಿದ್ದಾರೆ. ಆಸ್ಪತ್ರೆಯಲ್ಲಿನ ವಿಡಿಯೋ ವೈರಲ್ ಆಗಿದ್ದು, ದರ್ಶನ್‌ ಅಭಿಮಾನಿಗಳು ಮರುಗುತ್ತಿದ್ದಾರೆ.

Darshan Thoogudeep hospital video goes viral

ದರ್ಶನ್‌ಗೆ ನಡೆಯಲು ಕಷ್ಟವಾಗಿದೆ

ಅಭಿಮಾನಿಯೊಬ್ಬರು ಬಿಜಿಎಸ್ ಆಸ್ಪತ್ರೆಯಲ್ಲಿನ ದರ್ಶನ್‌ರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನಟ ದರ್ಶನ್‌ ನಡೆಯಲು ಕೂಡ ಕಷ್ಟಪಡುತ್ತಿರುವುದನ್ನು ಸ್ಪಷ್ಟವಾಗಿ ನೋಡಬಹುದು. ಎಡಗಾಲು ಸಮಸ್ಯೆಯಾಗಿದ್ದು ಅದನ್ನು ಎಳೆಯುವಂತೆ ನಡೆಯುವುದನ್ನು ನೋಡಬಹುದು. ದರ್ಶನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತೆರಳುವ ಸಂದರ್ಭದಲ್ಲಿ ಪತ್ನಿ ವಿಜಯಲಕ್ಷ್ಮಿ ದರ್ಶನ್ ಮತ್ತು ಗೆಳೆಯ ಧನ್ವೀರ್ ಜೊತೆಗಿದ್ದಾರೆ.

ದರ್ಶನ್ ಆಸ್ಪತ್ರೆಗೆ ದಾಖಲಾಗುವ ಹಿನ್ನಲೆಯಲ್ಲಿ ಬಿಜಿಎಸ್‌ ಆಸ್ಪತ್ರೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ದರ್ಶನ್ ಅಭಿಮಾನಿಗಳು ಆಸ್ಪತ್ರೆ ಬಳಿ ಬರುವ ಸಾಧ್ಯತೆ ಇರುವ ಕಾರಣ 50 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ದರ್ಶನ್‌ ಆರೋಗ್ಯ ಹೇಗಿದೆ

ನಟ ದರ್ಶನ್‌ ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದರು. ಆದರೆ ವಿಚಾರಣಾಧೀನ ಕೋರ್ಟ್ ವ್ಯಾಪ್ತಿಯಲ್ಲೇ ದರ್ಶನ್ ಚಿಕಿತ್ಸೆ ಪಡೆಯಬೇಕು ಎಂದು ಕೋರ್ಟ್ ಷರತ್ತು ವಿಧಿಸಿದ ಕಾರಣ, ದರ್ಶನ್ ಬೆಂಗಳೂರಿನಲ್ಲೇ ಚಿಕಿತ್ಸೆ ಪಡೆಯಬೇಕಾಗಿದೆ. ಇದೇ ಕಾರಣಕ್ಕೆ ಕೆಂಗೇರಿಯಲ್ಲಿರುವ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದಾರೆ.

ದರ್ಶನ್‌ ತಮ್ಮ ವೈದ್ಯಕೀಯ ವರದಿಗಳನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಬೇಕಿರುವ ಕಾರಣ, ಶುಕ್ರವಾರ ಹಲವು ಟೆಸ್ಟ್‌ಗಳನ್ನು ಮಾಡಿಸಿದ್ದಾರೆ. ಎಲ್ಲ ವರದಿಗಳು ಬಂದ ಬಳಿಕ ಅವರಿಗೆ ಚಿಕಿತ್ಸೆ ಬಗ್ಗೆ ನಿರ್ಧರಿಸುವುದಾಗಿ ವೈದ್ಯರು ಹೇಳಿದ್ದಾರೆ. ಸೋಮವಾರ ಎಲ್ಲ ವರದಿಗಳು ವೈದ್ಯರ ಕೈಸೇರುವ ಸಾಧ್ಯತೆ ಇದ್ದು, ಶಸ್ತ್ರಚಿಕಿತ್ಸೆ ಮಾಡುವ ಬಗ್ಗೆ ವೈದ್ಯರು ನಿರ್ಧಾರ ಮಾಡಲಿದ್ದಾರೆ. ದರ್ಶನ್ ಚಿಕಿತ್ಸೆ, ಆರೋಗ್ಯ ವರದಿಯನ್ನು ವಕೀಲರು ಕೋರ್ಟ್‌ಗೆ ಸಲ್ಲಿಕೆ ಮಾಡಲಿದ್ದಾರೆ.

ಸದ್ಯ ದರ್ಶನ್‌ಗೆ ಆರು ವಾರಗಳು ಮಾತ್ರ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ. ಅವರಿಗೆ ಆರೋಗ್ಯ ಸುಧಾರಣೆಯಾಗದೇ ಇದ್ದರೆ ಮಧ್ಯಂತರ ಜಾಮೀನು ವಿಸ್ತರಣೆ ಮಾಡಲು ವಕೀಲರು ಕೋರ್ಟ್‌ಗೆ ಮನವಿ ಮಾಡುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+