ನವಗ್ರಹ ಖ್ಯಾತಿಯ ಗಿರಿ ದಿನೇಶ್‌ ಇನ್ನಿಲ್ಲ: ನಟ ದರ್ಶನ್‌ ಆಪ್ತನಿಗೆ ಏನಾಯ್ತು?

ಕನ್ನಡ ಚಿತ್ರರಂಗದ ಹಿರಿಯ ನಟ ದಿನೇಶ್‌ ಅವರ ಪುತ್ರ ನವಗ್ರಹ ಖ್ಯಾತಿಯ ಗಿರಿ ದಿನೇಶ್‌ ವಿಧಿವಶರಾಗಿದ್ದಾರೆ. 45 ವರ್ಷದ ಗಿರಿ ದಿನೇಶ್‌ ಅವರು ತಮ್ಮ ಅಣ್ಣನ ಮನೆಯಲ್ಲೇ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇಂದು(ಫೆಬ್ರವರಿ 07) ಶುಕ್ರವಾರ ಸಂಜೆ ಮನೆಯಲ್ಲಿ ಪೂಜೆ ಮಾಡುವ ವೇಳೆ ಗಿರಿ ದಿನೇಶ್‌ ಅವರು ಏಕಾಏಕಿ ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ಕುಟುಂಬಸ್ಥರು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲು ಮುಂದಾಗಿದ್ದಾರೆ. ಆದರೆ, ದುರಾದೃಷ್ಟವಶಾತ್ ಗಿರಿ ದಿನೇಶ್‌ ಮಾರ್ಗ ಮಧ್ಯವೇ ಕೊನೆಯುಸಿರೆಳೆದಿದ್ದಾರೆ. ಗಿರಿ ದಿನೇಶ್‌ ಅವರಿಗೆ ಹೃದಯಾಘಾತವಾಗಿದೆ ಎನ್ನುವುದು ಸದ್ಯದ ಮಾಹಿತಿಯಾಗಿದೆ.

Darshan Navagraha Movie Actor Giri Dinesh Passed Away

ಗಿರಿ ದಿನೇಶ್‌ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಅಭಿನಯದ ನವಗ್ರಹ ಚಿತ್ರದಲ್ಲಿ ನಟಿಸಿದ್ದರು. ನವಗ್ರಹ ಚಿತ್ರದ ವಿಶೇಷತೆಯಾದ 9 ಖಳನಟರ ಪುತ್ರರಲ್ಲಿ ಇವರು ಕೂಡ ಒಬ್ಬರಾಗಿದ್ದರು. ಚಮ್ಕಾಯ್ಸು ಚಿಂದಿ ಉಡಾಯ್ಸು, ವಜ್ರ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದ ಗಿರಿ ದಿನೇಶ್‌ ಅವರಿಗೆ ನಟನೆಯಲ್ಲಿ ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಆದರೆ ನವಗ್ರಹ ಚಿತ್ರ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿತ್ತು. ನವಗ್ರಹ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದ ಗಿರಿ ದಿನೇಶ್‌ ಇತ್ತೀಚಿಗೆ ನವಗ್ರಹ ರೀ-ರಿಲೀಸ್‌ ವೇಳೆಯೂ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

ನವಗ್ರಹ ಚಿತ್ರದಲ್ಲಿ ಗಿರಿ ದಿನೇಶ್‌ ಹಾಗೂ ನಾಗೇಂದ್ರ ಅರಸ್ ಅವರ ನಾಗಿ- ಶೆಟ್ಟಿ ಕಾಂಬಿನೇಷನ್ ಹಿಟ್ ಆಗಿತ್ತು. ಡ್ಯೂಪ್ಲಿಕೇಟ್ ವಸ್ತುಗಳನ್ನು ಮಾಡುವ ಬ್ಯುಸಿನೆಸ್‌ ಮಾಡಿಕೊಂಡಿದ್ದ ಈ ಜೋಡಿ ಕೊನೆಗೆ ಜಗ್ಗು ಅಂಡ್ ಗ್ಯಾಂಗ್ ಜೊತೆ ಸೇರಿ ಅಂಬಾರಿ ಕದಿಯುವ ಸಾಹಸಕ್ಕೆ ಕೈ ಹಾಕುತ್ತಾರೆ. ಮೈಸೂರು ದಸರಾ ಅಂಬರಿ ಕದಿಯುವ ಕಥೆಯಲ್ಲಿ ನಾಗಿ- ಶೆಟ್ಟಿ ಡಮ್ಮಿ ಅಂಬಾರಿಯನ್ನು ಅಸಲಿ ಅಂಬಾರಿ ಜಾಗಕ್ಕೆ ಇಡುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ನವಗ್ರಹದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದ ಗಿರಿ ದಿನೇಶ್‌ ಬಳಿಕ ನಟನೆಯ ಅವಕಾಶವಿರದೇ ಚಿತ್ರರಂಗದಿಂದ ದೂರ ಉಳಿದುಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+