Dinakar Thoogudeepa: ದರ್ಶನ್ ವಿಶ್ವದ ಅತ್ಯುತ್ತಮ ನಟ, ನಾನು ಅತ್ಯುತ್ತಮ ನಿರ್ದೇಶಕ: ದಿನಕರ್ ತೂಗುದೀಪ್ ಹೀಗೆ ಹೇಳಿದ್ಯಾರಿಗೆ?

Dinakar Thoogudeepa: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ಧ ನಟ ದರ್ಶನ್‌ಗೆ ಇತ್ತೀಚೆಗಷ್ಟೇ ಜಾಮೀಮಿನು ಸಿಕ್ಕಿದೆ. ಇದೀಗ ಅವರು ಮೈಸೂರು ಫಾರ್ಮ್‌ಹೌಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮತ್ತೊಂದೆಡೆ ತಮ್ಮ ದಿನಕರ್ ತೂಗುದೀಪ ನಿರ್ದೇಶನ ಮಾಡಿರುವ ರಾಯಲ್ ಸಿನಿಮಾವ ಕುಟುಂಬದ ಜೊತೆ ಕುಳಿತು ವೀಕ್ಷಣೆ ಮಾಡಿದ್ದಾರೆ. ಇನ್ನು ದಿನಕರ್ ಅವರು ಸಿನಿಮಾದ ಬಗ್ಗೆ ಅದ್ಭುತ ಹೇಳಿಕೆಯೊಂದನ್ನ ನೀಡಿ ಗಮನ ಸೆಳೆದಿದ್ದಾರೆ.

ದಿನಕರ್ ತೂಗುದೀಪ ಅವರು ನಿರ್ದೇಶನ ಮಾಡಿರುವ ವಿರಾಟ್ ನಟನೆಯ ರಾಯಲ್‌ ಸಿನಿಮಾ ಇದೇ ಜನವರಿ 24ರಂದು ತೆರೆಗೆ ಬರಲಿದೆ. ಇನ್ನು ದರ್ಶನ್ ಅವರಿಗಾಗಿಯೇ ವಿಶೇಷ ಪ್ರದರ್ಶನವೊಂದನ್ನು ಏರ್ಪಡಿಸಲಾಗಿತ್ತು. ಈ ವೇಳೆ ದರ್ಶನ್ ಜೊತೆ ಅವರ ಪತ್ನಿ ವಿಜಯಲಕ್ಷ್ಮೀ, ತಾಯಿ ಮೀನಾ ತೂಗುದೀಪ ಶ್ರೀನಿವಾಸ್, ಅಕ್ಕ ಮತ್ತು ಬಾವ ಆಗಮಿಸಿದ್ದರು.

Darshan is best actor and I am best director in world to our mother Dinakar Thoogudeepa

ದಿನಕರ್ ತೂಗುದೀಪ ಅವರ ಪತ್ನಿ ಮತ್ತು ಮಕ್ಕಳು ಕೂಡ ರಾಯಲ್ ಸಿನಿಮಾವನ್ನು ವೀಕ್ಷಣೆ ಮಾಡಿದರು. ಇದೀಗ ನಟ ದರ್ಶನ್‌ ಕುಟುಂಬದ ಈ ವಿಡಿಯೋ ಭಾರೀ ವೈರಲ್‌ ಆಗುತ್ತಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಕುಟುಂಬ ಅಂದರೆ ಹೀಗೆ ಇರಬೇಕು ಅಂತಲೂ ಕಾಮೆಂಟ್‌ಗಳನ್ನು ಕೂಡ ಕಾಮೆಂಟ್‌ ಬಾಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

6 ವರ್ಷಗಳ ಬಳಿಕ ರಾಯಲ್ ಸಿನಿಮಾನದ ಮೂಲಕ ದಿನಕರ್ ತೂಗುದೀಪ್ ನಿರ್ದೇಶನಕ್ಕೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಈ ಸಿನಿಮಾ ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನಕ್ಕೆ ಮೈಲಿಗಲ್ಲಿ ಆಗಿದೆ. ರಾಯಲ್ ಸಿನಿಮಾದ ಮೊದಲ ಪ್ರದರ್ಶನವು ಕುಟುಂಬಕ್ಕೆ ಸೀಮಿತ ಆಗಿತ್ತು. ಇನ್ನು ಸಿನಿಮಾ ಬಗ್ಗೆ ಮಾತನಾಡುವಾಗ ದಿನಕರ್ ತೂಗುದೀಪ್ ಅವರು ಅದ್ಭುತ ಹೇಳಿಕೆಯೊಂದನ್ನು ನೀಡಿ ಗಮನ ಸೆಳೆದಿದ್ದಾರೆ.

"ನನ್ನ ತಾಯಿಗೆ ವಿಶ್ವದ ಅತ್ಯುತ್ತಮ ನಟ ದರ್ಶನ್ ಮತ್ತು ನಾನು ಅತ್ಯುತ್ತಮ ನಿರ್ದೇಶಕ,"ಎಂದು ದಿನಕರ್ ಅವರು ನಗುತ್ತಲೇ ಹೇಳುವ ಮೂಲಕ ಗಮನ ಸೆಳೆದಿದ್ದಾರೆ ಎಂದು ಕನ್ನಡ ಪ್ರಭಾ ವರದಿ ಮಾಡಿದೆ. ಇನ್ನು ನಮ್ಮ ಮೇಲಿನ ಅವರ ಪ್ರೀತಿ ಎಷ್ಟು ಶುದ್ಧವಾಗಿದೆ ಎಂದರೆ ಅವರು ನಮ್ಮ ನ್ಯೂನತೆಗಳನ್ನು ಎಂದಿಗೂ ನೋಡುವುದಿಲ್ಲ. ನಾವು ಮಾಡುವ ಎಲ್ಲವನ್ನೂ ಅವರು ಮೆಚ್‌ಚಿಕೊಳ್ಳುತ್ತಾರೆ ಎಂದು ದಿನಕರ್ ತಮ್ಮ ತಾಯಿಯನ್ನ ಶ್ಲಾಘನೆ ಮಾಡಿದ್ದಾರೆ.

ದಿನಕರ್ ತೂಗುದೀಪ ಅವರ ರಾಯಲ್ ಸಿನಿಮಾ ನೋಡಲು ಕುಟುಂಬಸ್ಥರ ಜೊತೆ ಅವರ ಮಗ ಸೂರ್ಯ ಕೂಡ ಆಗಮಿಸಿದ್ದರು. ಈ ಪ್ರದರ್ಶನದ ನಿಜವಾದ ಹೈಲೈಟ್ ಸೂರ್ಯ ಎಂದು ದಿನಕರ್ ಬಹಿರಂಗಪಡಿಸಿದರು. ಈ ಚಿತ್ರದ ಮೂಲಕ ಬಾಲ ಕಲಾವಿದನಾಗಿ ಪಾದಾರ್ಪಣೆ ಮಾಡುತ್ತಿರುವ ನನ್ನ ಮಗ ಸೂರ್ಯ ಅವರ ಕಾರಣದಿಂದ ದರ್ಶನ್ ಈ ಚಿತ್ರವನ್ನು ವೀಕ್ಷಣೆ ಮಾಡಿರು.

ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರಿಗಾಗಿ ಹೇಳಿ ಮಾಡಿಸಿದ ಕ್ಲಾಸಿಕ್ ಕಮರ್ಷಿಯಲ್ ಮನರಂಜನಾತ್ಮಕ ಸಿನಿಮಾ ಇದಾಗಿದೆ ಎಂದು ಸಿನಿಮಾ ನೋಡಿದ ದರ್ಶನ್ ಹೇಳಿದರು ಅಂತಾ ಎಂದು ದಿನಕರ್ ಅವರು ಹೇಳಿದರು. ದಿನಕರ್ ಮತ್ತೆ ನಿರ್ದೇಶನಕ್ಕೆ ಮರಳಿದ ಸಂಭ್ರಮ ಒಂದೆಡೆ ಆದರೆ ಮೊದಲ ಪ್ರದರ್ಶನವನ್ನ ನನ್ನ ಎಲ್ಲಾ ಕುಟುಂಬಸ್ಥರು ಒಟ್ಟಿಗೆ ಸೇರಿ ವೀಕ್ಷಣೆ ಮಾಡಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+