Puneeth Rajkumar & Darshan:"ನಟ ದರ್ಶನ್‌ನ ಮನೆಯಲ್ಲಿ ಅಪ್ಪು ಅಂತನೇ ಕರಿತಾರೆ"
Puneeth Rajkumar & Darshan: ನಟ ದರ್ಶನ್ ಅವರು ಇದೀಗ ಮತ್ತೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸುದ್ದಿಯಲ್ಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆದ ಬೆನ್ನಲ್ಲೇ ಅವರು ಮರಳಿ ಜೈಲು ಸೇರಲಿದ್ದಾರೆಯೇ ಎನ್ನುವ ವಿಷಯವು ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ನಡುವೆ ನಟ ದರ್ಶನ್ ಅವರ ಬಗ್ಗೆ ನಟಿ ತಾರಾ ಅವರು ಸಂದರ್ಶನವೊಂದರಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಅದರಲ್ಲಿ ನಟ ದರ್ಶನ್ ಅವರು ಸಣ್ಣ ಸಣ್ಣ ಖುಷಿಗಳನ್ನು ಹೇಗೆ ಸಂಭ್ರಮಿಸಿದ್ದರು. ಅವರ ಸಿನಿಮಾ ಕೆರಿಯರ್‌ನ ಮೊದ ಮೊದಲ ಯಶಸ್ಸನ್ನು ದರ್ಶನ್ ಅವರು ಹೇಗೆ ಸಂಭ್ರಮಿಸಿದ್ದರು ಎನ್ನುವ ವಿಷಯವನ್ನೂ ನಟಿ ತಾರಾ ಅವರು ಹಂಚಿಕೊಂಡಿದ್ದಾರೆ.
ನಟಿ ಹಾಗೂ ರಾಜಕಾರಣಿ ತಾರಾ ಅವರು ಸಂದರ್ಶನವೊಂದರಲ್ಲಿ ದರ್ಶನ್ ಅವರ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ನಟ ದರ್ಶನ್ ಅವರನ್ನು ಮನೆಯಲ್ಲಿ ಪ್ರೀತಿಯಿಂದ ಎಲ್ಲರೂ "ಅಪ್ಪು" ಅಂತಾ ಕರೆಯುತ್ತಾರೆ ಎನ್ನುವುದು ಸಹ ಒಂದಾಗಿದೆ. ಹೌದು ಕರ್ನಾಟಕದಲ್ಲಿ ನಟ ದಿ. ಪುನೀತ್ ರಾಜ್‌ಕುಮಾರ್ ಅವರು ಅಪ್ಪು ಅಂತಲೇ ಫೇಮಸ್. ಅಪ್ಪು ಅಂತಾಲೇ ಅವರ ಅಭಿಮಾನಿಗಳು ಹಾಗೂ ದೊಡ್ಮನೆಯವರು ಪ್ರೀತಿಯಿಂದ ಕರೆಯುವುದು ಇದೆ. ಇನ್ನು ಪುನೀತ್ ರಾಜ್ ಕುಮಾರ್ ಅವರ ಮೊದಲ ಸಿನಿಮಾ ಸಹ (ನಾಯಕ ನಟನಾಗಿ) ಅಪ್ಪು. ಹಲವು ವಿಶೇಷತೆಗಳು ಅಪ್ಪು ಎನ್ನುವ ಸಿನಿಮಾದೊಂದಿಗೆ ಕೂಡಿಕೊಂಡಿದೆ. ಇದೀಗ ದರ್ಶನ್ ಅವರನ್ನೂ ಅವರ ಮನೆಯಲ್ಲಿ ಪ್ರೀತಿಯಿಂದ ಅಪ್ಪು ಅಂತಾರೆ ಎಂದು ನಟಿ ತಾರಾ ಅವರು ಹೇಳಿಕೊಂಡಿದ್ದಾರೆ.

ದರ್ಶನ್ ಹಾಗೂ ದಿ. ಪುನೀತ್ ರಾಜ್‌ಕುಮಾರ್ ಅವರ ನಡುವೆ ಒಳ್ಳೆಯ ಸ್ನೇಹ ಸಂಬಂಧವಿತ್ತು. ಆದರೆ ಫ್ಯಾನ್ಸ್ ವಾರ್ ಸೇರಿದಂತೆ ವಿವಿಧ ಕಾರಣಕ್ಕೆ ಕೆಲವು ವರ್ಷಗಳಿಂದ ಟ್ರೋನ್‌ಗಳು ನಡೆದಿದ್ದವು. ಇದೀಗ ಸಂದರ್ಶನವೊಂದರಲ್ಲಿ ತಾರಾ ಅವರು ದರ್ಶನ್‌ನ ಬಗ್ಗೆ ಯಾರಿಗೂ ತಿಳಿಯದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನಟ ದರ್ಶನ್ ಅವರು ಮದುವೆಗೂ ಮುಂಚೆ ಒಂದು ಕಾರ್ ಖರೀದಿ ಮಾಡಿದ್ದರು. ಆ ಕಾರ್ ಅನ್ನು ನಟ ಅಂಬರೀಷ್ ಅವರಿಗೆ ತೋರಿಸುವುದಕ್ಕೆ ತೆಗೆದುಕೊಂಡು ಬಂದಿದ್ದರು. ಆಗ ದರ್ಶನ್‌ಗೆ ಇನ್ನೂ ಮದುವೆಯಾಗಿರಲಿಲ್ಲ. ಇನ್ನು ಅಂಬರೀಷ್ ಮನೆಯ ಪಕ್ಕವೇ ನಮ್ಮ ಮನೆಯೂ ಇತ್ತು. ನಮ್ಮ ಮನೆಗೂ ದರ್ಶನ್ ಬಂದಿದ್ದರು ನಾನು - ವೇಣು ಇಬ್ಬರನ್ನೂ ಕಾರ್‌ನಲ್ಲಿ ತಿರುಗಿಸಿಕೊಂಡು ಅವರ ಮನೆಗೆ ಕರೆದುಕೊಂಡು ಹೋಗಿದ್ದರು. ಆಗ ದರ್ಶನ್ ಅವರ ಮನೆಯಲ್ಲಿ ಎಲ್ಲರೂ ಅಪ್ಪು .. ಅಪ್ಪು ಅಂತ ಕರೆಯುತ್ತಿದ್ದರು. ನನಗೆ ಆಶ್ಚೆರ್ಯವಾಯ್ತು.
ಪುನೀತ್ ರಾಜ್‌ಕುಮಾರ್ ಅವರನ್ನು ಎಲ್ಲರೂ ಅಪ್ಪು.. ಅಪ್ಪು ಅಂತಲೇ ಕರೆಯುವುದನ್ನು ನೋಡಿದ್ದೆ. ದರ್ಶನ್‌ನೂ ಅಪ್ಪು ಅಂತಾ ಕರಿಯೋದು ಅವತ್ತೇ ನೋಡಿದ್ದು. ಆ ದಿನ ಕಾರು ಖರೀದಿ ಮಾಡಿದ ಖುಷಿಯಲ್ಲಿ ನಟ ದರ್ಶನ್ ಅವರು ಇದ್ದರು. ಸಣ್ಣ ಸಣ್ಣ ಯಶಸ್ಸನ್ನೂ ಸಂಭ್ರಮಿಸುತ್ತಿದ್ದ. ಈಗ ದರ್ಶನ್ ದೊಡ್ಡ ಆಲದ ಮರವಾಗಿ ಬೆಳೆದಿದ್ದಾನೆ ಎಂದು ತಾರಾ ಅವರು ಹೇಳಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ದರ್ಶನ್ ಅವರ ಫ್ಯಾನ್ಸ್ ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ಎಷ್ಟೋ ಜನರಿಗೆ ದರ್ಶನ್ ಅವರು ಸಹಾಯ ಮಾಡಿದ್ದಾರೆ ದೊಡ್ಡ ಸ್ಟಾರ್ ಆದ ಮೇಲೂ ಬಡವರಿಗೆ ಆರ್ಥಿಕ ನೆರವು ಕೊಟ್ಟಿದ್ದಾರೆ ಅಂತಲೂ ತಾರಾ ಅವರು ಹೇಳಿದ್ದಾರೆ.












Click it and Unblock the Notifications