Milana Nagaraj: ಬಾಲಿಯಲ್ಲಿರುವ ಡಾರ್ಲಿಂಗ್ ಕೃಷ್ಣ- ಮಿಲನಾಗೆ ಫ್ಯಾನ್ಸ್ ಕ್ಯೂಟ್ ಕಿವಿಮಾತು
ಕನ್ನಡ ಚಿತ್ರರಂಗದ ಮುದ್ದಾದ ಜೋಡಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ. ಲವ್ ಮಾಕ್ಟೇಲ್ ಚಿತ್ರದ ಮೂಲಕ ಜೋಡಿ ಎಂದರೆ ಹೀಗಿರಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದ ಈ ಜೋಡಿ ರೀಲ್ ಮಾತ್ರವಲ್ಲದೇ, ರಿಯಲ್ ಆಗಿ ಸತಿ-ಪತಿಯಾಗಿದ್ದು ಅಭಿಮಾನಿಗಳ ಮೆಚ್ಚಿನ ಸ್ಯಾಂಡಲ್‌ವುಡ್ ಕಪಲ್ ಆಗಿದ್ದಾರೆ.
ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗುತ್ತಿರುವ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದಿದೆ. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಈ ಖುಷಿಯ ವಿಚಾರವನ್ನು ಶಿವರಾತ್ರಿ ಹಬ್ಬದ ದಿನ ಈ ಸ್ಟಾರ್ ಜೋಡಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

ಮೊದಲಿನಿಂದಲೂ ಸದಾ ಆ್ಯಕ್ಟೀವ್ ಇರುವ ಮಿಲನಾ ನಾಗರಾಜ್ ತಾಯಾಗುತ್ತಿರುವ ಈ ಸಮಯದಲ್ಲಿಯೂ ಕೂಡ ಆ್ಯಕ್ವಿವ್ ಆಗಿದ್ದು, ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದೀಗ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ದಂಪತಿ ತಮ್ಮ ಈ ಖುಷಿಯನ್ನು ಸೆಲೆಬ್ರೇಟ್ ಮಾಡಲು ವಿದೇಶಕ್ಕೆ ಹಾರಿದ್ದಾರೆ.
ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಇದೀಗ ತಮ್ಮ ಬೇಬಿ ಮೂನ್ ಎಂಜಾಯ್ ಮಾಡುತ್ತಿದ್ದು, ಬಾಲಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ಸುಂದರವಾದ ಸಮಯದ ಫೋಟೋಗಳನ್ನು ಮಿಲನಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನಾವು ಮೂರು ಜನ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಫೋಟೋಗಳಲ್ಲಿ ಮಿಲನಾ ನಾಗರಾಜ್ ಮುದ್ದಾಗಿ ಕಾಣುತ್ತಿದ್ದು, ಅಭಿಮಾನಿಗಳು ನಿಧಿಮಾ ನಿಧಿಮಾ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಜೊತೆಗೆ ಅಭಿಮಾನಿಗಳು ಸಲಹೆಗಳನ್ನು ಸಹ ನೀಡುತ್ತಿದ್ದು, ತಮ್ಮ ಮೆಚ್ಚಿನ ನಟಿಯ ಮೇಲಿನ ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಪ್ರಯಾಣದ ಸಮಯದಲ್ಲಿ ಎಚ್ಚರಿಕೆ ಇರಲಿ. ತಾಯಾಗುತ್ತಿರುವ ಈ ಸಮಯದಲ್ಲಿ ಜಾಗ್ರತೆ ಕಾಳಜಿಯಿಂದ ಇರಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ಹಾಗೂ ಮುದ್ದಾದ ಜೋಡಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಫೋಟೋಗೆ ಲಕ್ಷಾಂತರ ಜನ ಲೈಕ್ ಮಾಡಿದ್ದಾರೆ.












Click it and Unblock the Notifications