Daali Dhananjay: ಆಶ್ರಮದ ವೃದ್ಧರನ್ನು ನೋಡಿ ಕರಗಿದ ನವ ಜೋಡಿ- ಸಹಾಯ ಹಸ್ತ ಚಾಚಿದ ಧನಂಜಯ್-ಧನ್ಯತಾ

ಕನ್ನಡ ಚಿತ್ರರಂಗದ ನಟ ಡಾಲಿ ಧನಂಜಯ್ ಹಾಗೂ ವೈದ್ಯೆ ಧನ್ಯತಾ ಕಳೆದ ವಾರವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಮದುವೆ ಅತ್ಯಂತ ಅದ್ಧೂರಿಯಾಗಿ ನೆರವೇರಿತು. ಈ ಅದ್ಧೂರಿ ಮದುವೆಗೆ ಸ್ಯಾಂಡಲ್‌ವುಡ್‌ನ ಹಲವಾರು ಸ್ಟಾರ್‌ ನಟ ನಟಿಯರು, ರಾಜಕೀಯ ಗಣ್ಯರು ಸೇರಿದಂತೆ ಸಾವಿರಾರು ಜನ ಆಗಮಿಸಿ ಶುಭ ಹಾರೈಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಡಾಲಿ ಹಾಗೂ ಧನ್ಯತಾ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಈ ಸುದ್ದಿಯನ್ನು ಕೇಳಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ.

ಹೌದು.. ಡಾಲಿ ಧನಂಜಯ್ ಹಾಗೂ ಧನ್ಯತಾ ಜೋಡಿ ತುಂಬಾ ಅದ್ಭುತವಾಗಿದೆ. ಇವರಿಬ್ಬರನ್ನು ನೋಡಿ ಅಭಿಮಾನಿಗಳು ಹೃದಯ ತುಂಬಿ ಆಶೀರ್ವದಿಸಿದ್ದಾರೆ. ಆದರೆ ಇಷ್ಟೊಂದು ಅದ್ದೂರಿ ಮದುವೆ ಬೇಕಿತ್ತಾ ಅಂತ ಕೆಲವರು ಪ್ರಶ್ನೆ ಮಾಡಿದ್ದಾರೆ. ಆದರೀಗ ಎಷ್ಟೇ ಅದ್ಧೂರಿಯಾಗಿ ಮದುವೆ ಮಾಡಿಕೊಂಡರೂ ಕೂಡ ಈ ಮುದ್ದಾದ ಜೋಡಿ ತಮ್ಮ ಮದುವೆಯ ಖುಷಿಯಲ್ಲಿ ಆಶ್ರಮವೊಂದಕ್ಕೆ ಸಹಾಯ ಧನ ನೀಡಿದೆ.

Daali dhananjay wife dhanyatha donate money to ashram in joy of marriage

ಡಾಲಿ ಧನಂಜಯ್ ಹಾಗೂ ಧನ್ಯತಾ ಅವರು ಚಿತ್ರದುರ್ಗದ ಆನಂದ ಕುಟೀರ ಎನ್ನುವ ವೃದ್ಧಾಶ್ರಮಕ್ಕೆ ಭೇಟಿ ನೀಡಿ ತಮ್ಮ ಕೈಲಾದಷ್ಟು ಹಣ ಸಹಾಯವನ್ನು ಮಾಡಿದ್ದಾರೆ. ಡಾಲಿ ಧನಂಜಯ್ ಹಾಗೂ ಧನ್ಯತಾ ಸುಮಾರು ಐದು ಲಕ್ಷ ರೂಪಾಯಿ ಚೆಕ್ ಅನ್ನು ಈ ಆಶ್ರಮಕ್ಕೆ ದೇಣಿಗೆಯಾಗಿ ನೀಡಿದ್ದಾರೆ.

ತಾವು ಬೆಳೆದು ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತಿರುವ ಈ ಜೋಡಿಗೆ ಅಭಿಮಾನಿಗಳು ಮನಸೋತಿದ್ದಾರೆ. ಸಿನಿಮಾ ನಟ ಡಾಲಿಗೆ ಇಂತಹ ಒಳ್ಳೆಯ ಮನಸ್ಸು ಇದೆ ಅನ್ನೋದು ಇದರಿಂದ ಸಾಬೀತಾಗಿದೆ. ಅಭಿಮಾನಿಗಳು ನಟನ ಈ ದಾರಾಳ ಗುಣವನ್ನು ಕೊಂಡಾಡುತ್ಯಿದ್ದಾರೆ. ಅಲ್ಲದೆ ಮದುವೆ ಬಗ್ಗೆ ಮಾತನಾಡಿದವರಿಗೆ ಈ ವಿಚಾರವನ್ನು ಟ್ಯಾಗ್ ಮಾಡುವ ಮೂಲಕ ತಮ್ಮ ನೆಚ್ಚಿನ ನಟನ ಬಗ್ಗೆ ತಿಳಿಸುತ್ತಿದ್ದಾರೆ.

ಫೆಬ್ರವರಿ 16ರಂದು ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಯಜ್ ತಮ್ಮ ಹಳೆಯ ಸ್ನೇಹಿತೆ ಡಾ.ಧನ್ಯತಾ ಜೊತೆಗೆ ಮೈಸೂರಿನ ವಸ್ತು ಪ್ರದರ್ಶನ್ ಮೈದಾನದಲ್ಲಿ ಹಾಕಲಾಗಿದ್ದ ಅರಮನೆ ಸೆಟ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮೂಲತ: ಚಿತ್ರದುರ್ಗದವರಾದ ವೈದ್ಯೆ ಧನ್ಯತಾ ಅವರನ್ನು ಮೀನ ಲಗ್ನದಲ್ಲಿ ಡಾಲಿ ಮದುವೆ ಆದರು.

Daali dhananjay wife dhanyatha donate money to ashram in joy of marriage

ವಿವಾಹಕ್ಕೆ ದೊಡ್ಡ ಸೆಟ್ ನಿರ್ಮಾಣ ಮಾಡಲಾಗಿತ್ತು. ಕಲಾವಿದ ಅರುಣ್ ಸಾಗರ್ ಅವರು ಈ ಸೆಟ್ಗಳನ್ನು ನಿರ್ಮಿಸಿದ್ದರು. ದೇವಸ್ಥಾನದ ಥೀಮ್‌ನಲ್ಲಿ ಮಂಟಪವನ್ನು ಹಾಕಲಾಗಿತ್ತು. ಈ ಮದುವೆಗೆ ಸಿನಿಮಾ ತಾರೆಯರು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ರಾಜಕಾರಣಿಗಳು ಹಾಗೂ ಇತರ ಗಣ್ಯರು ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದರು. ಅಲ್ಲದೆ ಮದುವೆಗೆ ಅಭಿಮಾನಿಗಳು, ಕುಟುಂಬಸ್ಥರು, ಗಣ್ಯರಿಗೆ ಬಾಯಲ್ಲಿ ನೀರೂರಿಸಿರುವ ಭರ್ಜರಿ ಭೋಜನದ ವ್ಯವಸ್ಥೆ ಕೂಡ ಮಾಡಲಾಗಿತ್ತು.

ಈ ಅದ್ಧೂರಿ ಮದುವೆಯ ವವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ. ಈ ವೀಡಿಯೋಗಳಿಗೆ ಕೆಲವು ಜನ ಇಷ್ಟೊಂದು ಅದ್ಧೂರಿ ಮದುವೆ ಬೇಕಿತ್ತಾ ಎಂದು ಕಾಮೆಂಟ್ ಮಾಡಿದ್ದರು. ಇದಕ್ಕೆ ಡಾಲಿ ಅಭಿಮಾನಿಗಳ ಕಣ್ಣು ಕೆಂಪಾಕಿತ್ತು. ಇದೀಗ ಡಾಲಿ ಅವರು ಒಳ್ಳೆಯತನ ಮದುವೆ ಬಗ್ಗೆ ಮಾತನಾಡಿದವರ ಬಾಯಿಯನ್ನು ಮುಚ್ಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+