ಡಾಲಿ ಧನಂಜಯ್ ಹುಟ್ಟುಹಬ್ಬಕ್ಕೆ 'ಅಣ್ಣ ಫ್ರಮ್ ಮೆಕ್ಸಿಕೋ' ಫಸ್ಟ್ ಲುಕ್!

ಸ್ಯಾಂಡಲ್ವುಡ್ ನಟರಾಕ್ಷಸ & ಕನ್ನಡ ಸಿನಿಮಾ ರಂಗದಲ್ಲಿ ಸಂಚಲನ ಸೃಷ್ಟಿಸಿರುವ ಸ್ಟಾರ್ ಡಾಲಿ ಧನಂಜಯ್‌ಗೆ ಇವತ್ತು ಬರ್ತ್ ಡೇ ಸಂಭ್ರಮ. ಬರೋಬ್ಬರಿ ಒಂದು ದಶಕದಿಂದಲೂ ಕನ್ನಡ ಸಿನಿ ಕ್ಷೇತ್ರಕ್ಕಾಗಿ ದುಡಿಯುತ್ತಿರುವ ಡಾಲಿ ಇವತ್ತು ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇಂತಿಪ್ಪ ಡಾಲಿ ಗ್ಯಾಂಗ್ ಇದೀಗ ಗುಡ್ ನ್ಯೂಸ್ ಕೊಟ್ಟಿದೆ. ಹಾಗಾದರೆ ಏನದು ಗುಡ್ ನ್ಯೂಸ್? ಬಡವರ ಮನೆ ಮಗನ ಬಗ್ಗೆ ಏನದು ಸಿಹಿಸುದ್ದಿ? ಮುಂದೆ ಓದಿ.

ಡಾಲಿ ಕಳೆದ 10 ವರ್ಷದಿಂದ ಕನ್ನಡ ಸಿನಿಮಾ ಇಂಡಸ್ಟ್ರಿಗೆ ದುಡಿಯುತ್ತಿದ್ರೂ ಬಿಗ್ ಬ್ರೇಕ್ ಕೊಟ್ಟ ಸಿನಿಮಾ 'ಟಗರು' ಮಾತ್ರ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಜೊತೆ ನಟಿಸಿದ ಮೊದಲ ಸಿನಿಮಾದಲ್ಲೇ ಡಾಲಿ ಜಾಕ್‌ಪಾಟ್ ಪಡೆದರು. ಹೀಗೆ 2018ರಿಂದ ಡಾಲಿ ಅಬ್ಬರ ನಿಲ್ಲುತ್ತಿಲ್ಲ. ಎಲ್ಲರ ಮನ ಗೆದ್ದು ಎಲ್ಲಾ ರೀತಿಯ ಪಾತ್ರ ಮಾಡಿರುವ ಧನಂಜಯ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಹೀಗೆ ಧನಂಜಯ್ ಅಭಿಮಾನಿಗಳಿಗೆ ಉಡುಗೊರೆ ಕೊಟ್ಟಿರುವ 'ಅಣ್ಣ ಫ್ರಮ್ ಮೆಕ್ಸಿಕೋ' ಚಿತ್ರತಂಡ, ಫಸ್ಟ್ ಲುಕ್ ರಿಲೀಸ್ ಮಾಡಿದೆ. ಇದರ ಜೊತೆಗೆ ಇನ್ನೊಂದು ಸಿಹಿಸುದ್ದಿ ಕೂಡ ಸಿಕ್ಕಿದೆ.

new-movie-first-look-revealed

ಧನಂಜಯ್ ಅಬ್ಬರ ಬಲು ಜೋರು

ಸಾಲು ಸಾಲು ಸಿನಿಮಾಗಳಲ್ಲಿ ಡಾಲಿ ಧನಂಜಯ್ ಬ್ಯುಸಿಯಾಗಿದ್ದಾರೆ. ಇದರ ಜೊತೆಯಲ್ಲಿ ನಿರ್ಮಾಣಕ್ಕೂ ಕೈಹಾಕಿ ಸೈ ಎನಿಸಿಕೊಂಡಿದ್ದಾರೆ. ಹೆಡ್ & ಬುಷ್ ಬಳಿಕ ಡಾಲಿಗೆ ಇನ್ನೂ ಮಾರ್ಕೆಟ್ ಹೆಚ್ಚಾಗಿದ್ದು, ಇದೀಗ ಧನು ಜನ್ಮದಿನದ ಹಿನ್ನೆಲೆ ಹೊಸ ಸಿನಿಮಾಗಳ ಪೋಸ್ಟರ್, ಟೀಸರ್ ಉಡುಗೊರೆಯಾಗಿ ಸಿಕ್ಕಿದೆ. ಅದರಂತೆ 'ಬಡವ ರಾಸ್ಕಲ್' ಚಿತ್ರ ತಂಡದಿಂದಲು ಡಾಲಿ ಬರ್ತ್ ಡೇಗೆ ಸ್ಪೆಷಲ್ ಗಿಫ್ಟ್ ಸಿಕ್ಕಿದೆ. ಹೀಗಾಗಿ ಇಂದು ಮಧ್ಯರಾತ್ರಿ 12 ಕ್ಕೆ ಟೈಟಲ್ ಸೇರಿದಂತೆ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಅನೌನ್ಸ್ ಮಾಡಿದೆ 'ಅಣ್ಣ From Mexico' ತಂಡ.

ಕೊರೊನಾ ಬಳಿಕ ಸೂಪರ್ ಸಕ್ಸಸ್

ಅದು ಕೊರೊನಾ ಅಪ್ಪಳಿಸಿದ ಸಮಯ, ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲ ಇಡೀ ಜಗತ್ತೇ ಆ ಮಹಾಮಾರಿಗೆ ತತ್ತರಿಸಿತ್ತು. ಆದ್ರೂ ಎಲ್ಲಾ ಸಮಸ್ಯೆಗಳನ್ನ ಸವಾಲಾಗಿ ಸ್ವೀಕರಿಸಿದ್ದ ಡಾಲಿ ಧನಂಜಯ್, 2021ರಲ್ಲಿ ಒಂದು ಸಾಹಸ ಮಾಡಿದ್ದರು. 2021ರಲ್ಲಿ ತೆರೆಗೆ ಬಂದಿದ್ದ 'ಬಡವ ರಾಸ್ಕಲ್' ಸೂಪರ್ ಹಿಟ್ ಆಗಿತ್ತು. ಈ ಚಿತ್ರದ ಮೂಲಕ ಧನಂಜಯ್ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದರು. ತಮ್ಮದೇ ಡಾಲಿ ಪಿಕ್ಚರ್ಸ್ ಅಡಿ ನಿರ್ಮಿಸಿ ನಟಿಸಿದ್ದ ಬಡವ ರಾಸ್ಕಲ್ ಚಿತ್ರವನ್ನ ಶಂಕರ್ ಗುರು ನಿರ್ದೇಶಿಸಿದ್ದರು. ಈಗ ಅದೇ ತಂಡ ಕಂಬ್ಯಾಕ್ ಮಾಡುತ್ತಿದೆ.

new-movie-first-look-revealed

ಫಸ್ಟ್ ಪಿಕ್ಚರ್, ಸಖತ್ ಸಕ್ಸಸ್!

ಮೊದಲ ಹೆಜ್ಜೆಯಲ್ಲಿಯೇ ಗೆದ್ದಿದ್ದ ಶಂಕರ್ ಗುರು ಈಗ ಮತ್ತೊಂದು ಚೆಂದದ ಕಥೆ ಮಾಡಿ ಡಾಲಿ ಫ್ಯಾನ್ಸ್ ರಂಜಿಸಲು ಅಣಿಯಾಗಿದ್ದಾರೆ. ಅದರ ಮೊದಲ ಭಾಗವೆಂಬಂತೆ ಇಂದು 'ಅಣ್ಣ From Mexico' ಟೈಟಲ್ & ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಕೊರಳಿಗೆ ಕರ್ನಾಟಕ ಮ್ಯಾಪ್ ಇರುವ ಪೆಂಡೆಂಟ್ ಆಭರಣ ಧರಿಸಿ suite ತೊಟ್ಟ ಧನಂಜಯ್ ಲುಕ್ ಈಗ ರಿವೀಲ್ ಮಾಡಿರುವ ಚಿತ್ರತಂಡ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.

ಅಣ್ಣ From Mexico ಶಂಕರ್ ಗುರು ನಿರ್ದೇಶನದ 2ನೇ ಚಿತ್ರ. ಇದು ಪಕ್ಕಾ ಆಕ್ಷನ್, ಎಂಟರ್ ಟೈನರ್ ಚಿತ್ರ. ಅಜ್ಜಿ ಮೊಮ್ಮಗನ ಬಾಂಧವ್ಯದ ಕಥೆ ಸಿನಿಮಾದಲ್ಲಿ ಇರಲಿದೆ. ಸತ್ಯ ರಾಯಲ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಈ ಸಿನಿಮಾಗೆ ವಾಸುಕಿ ಸಂಗೀತ ನಿರ್ದೇಶನ ಇದೆ. ಹಾಗೇ ನವೆಂಬರ್ ತಿಂಗಳಿಂದಲೇ ಶೂಟಿಂಗ್ ಕೂಡ ಶುರುವಾಗಲಿದೆ. ಮೆಕ್ಸಿಕೋ ಸೇರಿದಂತೆ ಹಲವೆಡೆ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಒಟ್ನಲ್ಲಿ ಡಾಲಿ ಅಭಿಮಾನಿಗಳ ನಿರೀಕ್ಷೆಯನ್ನು ಹೊಸ ಪೋಸ್ಟರ್ ಮತ್ತಷ್ಟು ಹೆಚ್ಚು ಮಾಡಿದೆ. ಅಲ್ಲದೇ ಡಾಲಿ ಮುಂದಿನ ಸಿನಿಮಾಗಳ ಬಗ್ಗೆ ಇರುವ ನಿರೀಕ್ಷೆ ದುಪ್ಪಟ್ಟಾಗಿದೆ. ಹಾಗೇ 'ಬಡವ ರಾಸ್ಕಲ್' ರೀತಿ ಹಿಟ್ ಸಿನಿಮಾ ಕೊಟ್ಟ ಚಿತ್ರತಂಡ ಇನ್ನೊಮ್ಮೆ ಕೈಜೋಡಿಸುತ್ತಿರುವುದು ವಿಶೇಷ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+