ಹುಲಿ ಡಾನ್ಸ್ ಮಾಡಿದ ಕಾಫಿನಾಡು ಚಂದು: ಇದು ಯಾವ ಕಾಯಿಲೆ ಅಂತ ಗೊತ್ತಾಗಿಲ್ಲ.. ಅಂತಿದ್ದಾರೆ ಜನ!
ಕಾಫಿನಾಡು ಚಂದು ಹೆಸರು ಕೇಳ್ತಾ ಇದ್ದಂಗೆ, ಕಿರಣ್ ಅಣ್ಣಾ.. ಕಿರಣ್ ಅಣ್ಣಾ.. ಹ್ಯಾಪಿ ಬರ್ತ್ ಡೇ, ಸಾಂಗ್ ನೆನಪಿಗೆ ಬರುತ್ತೆ. ಹಾಗೇ ಸಾವಿರಾರು ಜನ ಕಾಫಿನಾಡು ಚಂದು ಬಳಿ, ಹಾಡು ಹಾಡಿಸಿ ತಮ್ಮ ಬರ್ತ್ ಡೇ, ವೆಡ್ಡಿಂಗ್ ಆನಿವರ್ಸರಿ ಸೆಲೆಬ್ರೇಟ್ ಮಾಡಿದ್ದಾರೆ. ಹೀಗೆ ಕಾಫಿನಾಡು ಚಂದು ಅವರೇ ಹೇಳುವಂತೆ ಅವರು ಸುಮಾರು 40 ಲಕ್ಷ ಹಾಡು ಹಾಡಿದ್ದಾರೆ ಅಂತೆ. ಆದ್ರೆ ಇದು ಬರೀ ಓಳು, ಸುಳ್ಳು ಅಂತಾ ಆರೋಪ ಮಾಡುವ ಜನರ ಮಧ್ಯೆ ಈಗ ಹುಲಿ ಡಾನ್ಸ್ ಮಾಡಿದ್ದಾರೆ ಕಾಫಿನಾಡು ಚಂದು.
ಅಷ್ಟಕ್ಕೂ ಕಾಫಿನಾಡು ಚಂದು ಸೋಷಿಯಲ್ ಮೀಡಿಯಾದಲ್ಲಿ ತನ್ನ ಹಾಡುಗಳ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು. ಅದರಲ್ಲೂ ಕಾಫಿನಾಡು ಚಂದು ಕೆಟ್ಟದಾಗಿ ಹಾಡುತ್ತಾರೆ, ಆತನಿಗೆ ಹಾಡೋದಕ್ಕೆ ಬರಲ್ಲ ಅಂತಾ ಕೆಲವರು ಹೇಳಿದರೆ. ಇನ್ನೂ ಹಲವು ಜನ ಅವರ ಹಾಡು ಕೇಳಿ, ಭೇಷ್ ಭೇಷ್ ಅಂತಿದ್ದರು.

ಹೀಗೆ ಕಾಫಿನಾಡು ಚಂದು ಎರಡೂ ಬಣಗಳಿಗೆ ಬೇಕಾದ ಹಾಡುಗಾರ ಆಗಿ ಬೆಳೆದರು. ಆದರೆ ಕೆಲವು ತಿಂಗಳು ಮರೆಯಾಗಿದ್ದ ಈ ಸೋಷಿಯಲ್ ಮೀಡಿಯಾ ಸ್ಟಾರ್‌ಗೆ, ಈಗ ಹಾಡು ಹಾಡುವ ಹುಚ್ಚು ಇಲ್ಲ. ಬದಲಾಗಿ ಸಿಕ್ಕಾಪಟ್ಟೆ ಡಾನ್ಸ್ ಮಾಡ್ತಿದ್ದಾರೆ ಕಾಫಿನಾಡು ಚಂದು. ಅದೇ ರೀತಿ ಈಗ ಹುಲಿ ಹಾಡಿಗೂ ಹೆಜ್ಜೆ ಹಾಕಿದ್ದಾರೆ.
'ಇದು ಯಾವ ಕಾಯಿಲೆ' ಅಂತಿದ್ದಾರೆ ಜನ!
ಮತ್ತೊಂದು ಕಡೆ ಹೀಗೆ ಕಾಫಿನಾಡು ಚಂದು ಹುಲಿ ಡಾನ್ಸ್ ಮಾಡಿರುವ ವಿಡಿಯೋ ನೋಡಿ ಜನ ವೆರೈಟಿ ವೆರೈಟಿ ಕಮೆಂಟ್ ಹಾಕುತ್ತಿದ್ದಾರೆ. ಅದರಲ್ಲೂ ಒಬ್ಬ ಸೋಷಿಯಲ್ ಮೀಡಿಯಾ ಬಳಕೆದಾರ, 'ಇದು ಯಾವ ಕಾಯಿಲೆ ಅಂತ ಗೊತ್ತಾಗಿಲ್ಲ..' ಅಂತಾ ಕಮೆಂಟ್ ಹಾಕಿದ್ದಾರೆ.
ಹಾಗೇ ಮತ್ತೊಬ್ಬ ಬಳಕೆದಾರ ಈಗ 'ಮಂಗಳೂರಿಗೆ ಬರಬೇಡ ಯಾರಾದ್ರೂ ಕಂಡ್ರೆ ಹೊ...' ಅಂತಾ ವಾರ್ನ್ ಮಾಡಿದ್ದಾರೆ. ಇದರ ಜೊತೆಗೆ ಇನ್ನೊಬ್ಬರು, 'ನೀರ್ ಹಾಕ್ದೆ ಯಾವ್ದು ಬಿಟ್ಟಿ ಎ.. ಕುಡಿದು ಬಿಟ್ಟನೆ ಅನ್ನಿಸುತ್ತೆ' ಅಂತಾನೂ ಆರೋಪ ಮಾಡಿದ್ದಾರೆ. ಹೀಗೆ ಜನರು ಮತ್ತು ಕಾಫಿನಾಡು ಚಂದು ಕಿರಿಕ್ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ.
ಬೇರೆ ಬೇರೆ ಹಾಡಿಗೂ ಡಾನ್ಸ್!
ಕಾಫಿನಾಡು ಚಂದು ಇದೀಗ ಹುಲಿ ಡಾನ್ಸ್ ಮಾಡಿರುವ ರೀತಿಯೇ, ಕನ್ನಡದ ಅನೇಕ ಹಾಡು ಹಾಗೂ ಸಂಗೀತಕ್ಕೆ ಕುಣಿದಿದ್ದಾರೆ ಚಂದು. ಇತ್ತೀಚೆಗೆ ಕರಿಮಣಿ ಮಾಲೀಕ ಹಾಡಿಗೂ ಹೀಗೆ ಚಂದು ಡಾನ್ಸ್ ಮಾಡಿದ್ದು ವೈರಲ್ ಆಗಿತ್ತು. ಜನರು ಕೂಡ ವೆರೈಟಿ ವೆರೈಟಿ ಕಮೆಂಟ್‌ನ ಮಾಡುತ್ತಾ, ಕಾಫಿನಾಡು ಚಂದು ವಿರುದ್ಧ ಗರಂ ಆಗಿದ್ದರು. ಇದೀಗ ನೋಡಿದರೆ ದಿಢೀರ್ ಹುಲಿ ಕುಣಿತ ಹಾಕಿದ್ದಾರೆ ಚಂದು. ಈಗಲೂ ಅಷ್ಟೇ ಚಂದು ಹುಲಿ ಡಾನ್ಸ್‌ಗೆ ವಿಧ ವಿಧದ ಕಮೆಂಟ್ಸ್ ಬರುತ್ತಿವೆ.
ಕರಿಮಣಿ ಮಾಲೀಕ ಡಾನ್ಸ್ ವೈರಲ್
ಉತ್ತರ ಕರ್ನಾಟಕ ಮೂಲದ ಕನಕ, 'ಉಪೇಂದ್ರ' ಸಿನಿಮಾದ ಏನಿಲ್ಲ ಏನಿಲ್ಲ ಹಾಡಿನ ಸಾಲು ಬಳಸಿ ಡೈಲಾಗ್ ಹೊಡೆದು ರೀಲ್ಸ್ ಹಾಕಿದ್ದರು. ಕೈಕೊಟ್ಟಿದ್ದ ಹುಡುಗಿ ಬಗ್ಗೆ ಮಾತನಾಡಿದ್ದರು. ಈಗ ಆ ಯುವಕನ ಈ ಒರಿಜಿನಲ್ ಡೈಲಾಗ್ ಮತ್ತು ಏನಿಲ್ಲ ಏನಿಲ್ಲ ಸಾಂಗ್ ಎಲ್ಲೆಲ್ಲೂ ವೈರಲ್ ಆಗಿದೆ. ಹಾಗೇ ಅಭಿಮಾನಿಗಳ ಬಾಯಲ್ಲಿ ಮತ್ತೊಮ್ಮೆ ಹಳೇ ಹಾಡು ಗುನುಗುವಂತೆ ಮಾಡಿದ್ದು ಇದೇ ಸಮಯದಲ್ಲಿ ಕಾಫಿನಾಡು ಚಂದು ಕೂಡ ಈ ಹಾಡಿಗೆ ಡಾನ್ಸ್ ಮಾಡಿದ್ದರು.
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ ಇದೀಗ ಕಾಫಿನಾಡು ಚಂದು ಮಾಡಿರುವ ಡಾನ್ಸ್ ಕುರಿತು, ಚರ್ಚೆ ಜೋರಾಗಿದೆ. ಹಾಗೇ ಸೋಷಿಯಲ್ ಮೀಡಿಯಾದಲ್ಲಿ ಇಂತಹ ಕುಣಿತದ ಕುರಿತಾಗಿ, ಆಗಾಗ ಬಲು ಜೋರಾಗಿ ವಾಗ್ವಾದ ಕೂಡ ನಡೆಯುತ್ತದೆ.ಅದೇ ರೀತಿ ಇದೀಗ ಕಾಫಿನಾಡು ಚಂದು ಮಾಡಿರುವ ಡಾನ್ಸ್ ಕೂಡ ವೈರಲ್ ಆಗುತ್ತಿದೆ, ಹಾಗೇ ಈ ಡಾನ್ಸ್ ಸರಿಯಾಗಿ ಇದೆ ಅಂತಾ ಕೆಲವರು ಹೇಳಿದ್ರೆ ಇನ್ನೂ ಕೆಲವರು ನಿನಗೆ ಡಾನ್ಸ್ ಮಾಡಲು ಬರಲ್ಲ ಅಂತಿದ್ದಾರೆ. ಆದರೆ ಇದ್ಯಾವುದಕ್ಕೂ ಕೇರ್ ಮಾಡುತ್ತಿಲ್ಲ ಕಾಫಿನಾಡು ಚಂದು. ಈಗಾಗಲೇ ಹಲವಾರು, ಹಾಡು ಹಾಗೂ ರೀಲ್ಸ್ ಮೂಲಕ ಕಾಫಿನಾಡು ಚಂದು ವೈರಲ್ ಆಗಿದ್ದರು. ಈಗ ಮತ್ತೊಮ್ಮೆ ಅದೇ ರೀತಿ ಸದ್ದು ಮಾಡಲು ಬಂದಿದ್ದಾರೆ.











Click it and Unblock the Notifications