Get Updates
Get notified of breaking news, exclusive insights, and must-see stories!

‘ಕರಿಮಣಿ ಮಾಲೀಕ ನೀನಲ್ಲ’ ಅಂತಿದ್ದಾರೆ ಕಾಫಿನಾಡು ಚಂದು!

'ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ' ಹಾಡು ಎಲ್ಲೆಲ್ಲೂ ಹರಡಿದೆ. ಸೋಷಿಯಲ್ ಮೀಡಿಯಾ ಓಪನ್ ಮಾಡಿದ್ರೂ ಇದೇ ಸಾಂಗ್, ಟಿವಿ ಚಾನೆಲ್ ಹಾಕಿದರೂ ಇದೇ ಹಾಡು ಗುನುಗುತ್ತಿದೆ. ಹೀಗಾಗಿ ರೀಲ್ಸ್ ಸ್ಟಾರ್ಸ್ ಕೂಡ 'ಕರಿಮಣಿ ಮಾಲೀಕ ನೀನಲ್ಲ' ಅಂತಿದ್ದಾರೆ. ಆದರೆ ಇದೇ ಸಮಯದಲ್ಲಿ ಕಾಫಿನಾಡು ಚಂದು ಕೂಡ ಉಪೇಂದ್ರ ಸಿನಿಮಾದ ಈ ಹಾಡಿಗೆ ಡಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ಕಾಫಿನಾಡು ಚಂದು ಡಾನ್ಸ್ ನೋಡಲು ಮುಂದೆ ಓದಿ.

1999ರಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ಯಾರೂ ಊಹಿಸದ ಸಿನಿಮಾ ಒಂದು ರಿಲೀಸ್ ಆಗಿತ್ತು. ನೋಡ ನೋಡುತ್ತಿದ್ದಂತೆ ಉಪೇಂದ್ರ ಅದ್ಭುತ ಒಂದನ್ನು ಸೃಷ್ಟಿ ಮಾಡಿಬಿಟ್ಟರು. ಹೀಗೆ 1999ರ ಅಕ್ಟೋಬರ್ 22ಕ್ಕೆ ಈ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಇದೀಗ ಈ ಸಿನಿಮಾದ ಅಂದ್ರೆ 'ಉಪೇಂದ್ರ' ಸಿನಿಮಾದ 'ಏನಿಲ್ಲ.. ಏನಿಲ್ಲ..' ಹಾಡು ಹಲ್‌ಚಲ್ ಎಬ್ಬಿಸಿದೆ. ಇದೇ ವೇಳೆ ಕಾಫಿನಾಡು ಚಂದು ಕೂಡ ಹಾಡು ಹಾಡೋದನ್ನು ಬಿಟ್ಟು ಇದೀಗ, ಇದೇ ಹಾಡಿಗೆ ತಮ್ಮ ಸೊಂಟ ಕುಣಿಸಿದ್ದಾರೆ. ಹಾಗಾದರೆ ಕಾಫಿನಾಡು ಚಂದು ಡಾನ್ಸ್ ಹೇಗಿತ್ತು ಗೊತ್ತಾ? ಅದರ ವಿಡಿಯೋ ನೋಡಲು ಮುಂದೆ ಓದಿ.

Coffee Nadu Chandu Made Dance For Sandalwood Blockbuster Upendra Movie Song Enilla Enilla

ಕಾಫಿನಾಡು ಚಂದು ಡಾನ್ಸ್ ನೋಡಿ

ಉತ್ತರ ಕರ್ನಾಟಕ ಮೂಲದ ಕನಕ, 'ಉಪೇಂದ್ರ' ಸಿನಿಮಾದ ಏನಿಲ್ಲ ಏನಿಲ್ಲ ಹಾಡಿನ ಸಾಲು ಬಳಸಿ ಡೈಲಾಗ್ ಹೊಡೆದು ರೀಲ್ಸ್ ಹಾಕಿದ್ದರು. ಕೈಕೊಟ್ಟಿದ್ದ ಹುಡುಗಿ ಬಗ್ಗೆ ಮಾತನಾಡಿದ್ದರು. ಈಗ ಆ ಯುವಕನ ಈ ಒರಿಜಿನಲ್ ಡೈಲಾಗ್ ಮತ್ತು ಏನಿಲ್ಲ ಏನಿಲ್ಲ ಸಾಂಗ್ ಎಲ್ಲೆಲ್ಲೂ ವೈರಲ್ ಆಗಿದೆ. ಹಾಗೇ ಅಭಿಮಾನಿಗಳ ಬಾಯಲ್ಲಿ ಮತ್ತೊಮ್ಮೆ ಹಳೇ ಹಾಡು ಗುನುಗುವಂತೆ ಮಾಡಿದ್ದು ಇದೇ ಸಮಯದಲ್ಲಿ ಕಾಫಿನಾಡು ಚಂದು ಕೂಡ ಈ ಹಾಡಿಗೆ ಡಾನ್ಸ್ ಮಾಡಿದ್ದಾರೆ. ಅವರ ವಿಡಿಯೋ ಇಲ್ಲಿದೆ ನೋಡಿ.

25 ವರ್ಷಗಳ ನಂತರ ವೈರಲ್

'ಏನಿಲ್ಲ ಏನಿಲ್ಲ' ಹಾಡು ವೈರಲ್ ಆಗಿದ್ದೇ ತಡ, ಸೋಷಿಯಲ್ ಮೀಡಿಯಾ ತುಂಬಾ ಹಾಡು ಧೂಳೆಬ್ಬಿಸಿದೆ. ರೀಲ್ಸ್ ಸ್ಟಾರ್‌ಗಳು ಕೂಡ ಈ ಹಾಡಿಗೆ ಈಗ ತುಟಿ ಪೋಣಿಸಿ, ರೀಲ್ಸ್ ಮಾಡುತ್ತಾ 'ಏನಿಲ್ಲ ಏನಿಲ್ಲ' ಸಂಭ್ರಮದಲ್ಲಿ ಕೈಜೋಡಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ಬರೋಬ್ಬರಿ 25 ವರ್ಷಗಳ ನಂತರ ಮತ್ತೊಮ್ಮೆ ಇದೀಗ, ಉಪೇಂದ್ರ ಅವರ ಸಿನಿಮಾ ಹಾಡು ಫುಲ್ ವೈರಲ್ ಆಗುತ್ತಿದೆ. 'ಏನಿಲ್ಲ ಏನಿಲ್ಲ.. ನಿನ್ನ ನನ್ನ ನಡುವೆ ಏನಿಲ್ಲ.. ಏನೇನಿಲ್ಲ.. ಏನಿಲ್ಲ ಏನಿಲ್ಲ.. ನಿನ್ನ ನನ್ನ ನಡುವೆ ಏನಿಲ್ಲ.. ನಿಜದಂತಿರುವ ಸುಳ್ಳಲ್ಲ.. ಸುಳ್ಳುಗಳೆಲ್ಲ ನಿಜವಲ್ಲ.. ಸುಳ್ಳಿನ ನಿಜವೂ ಸುಳ್ಳಲ್ಲ.. ಏನಿಲ್ಲ ಏನಿಲ್ಲ.. ಏನೇನಿಲ್ಲ..' ಹಾಡು ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.

ಹಾಡಿನ ಮೂಲಕವೇ ಚಂದು ಫೇಮಸ್!

ಕಾಫಿನಾಡು ಚಂದು ತನ್ನ ವಿಭಿನ್ನ ಶೈಲಿಯ ಹಾಡಿನ ಮೂಲಕವೇ ಫೇಮಸ್ ಆಗಿದ್ದವರು. ಕೆಲವರು ಕಾಫಿನಾಡು ಚಂದು ಹಾಡಿನ ಬಗ್ಗೆ ಸಿಟ್ಟು ಹೊರಹಾಕಿದ್ದರೆ, ಮತ್ತೆ ಕೆಲವರು ಈ ರೀತಿ ಚಂದು ಹಾಡುವಾಗ ಸಪೋರ್ಟ್ ಮಾಡಿದ್ದರು. ಈಗ ಕಾಫಿನಾಡು ಚಂದು ಕರಿಮಣಿ ಮಾಲೀಕ ಹಾಡಿಗೆ ಡಾನ್ಸ್ ಮಾಡಿರುವುದು ಫುಲ್ ವೈರಲ್ ಆಗಿದೆ. ಹಾಗೇ ಚಂದು ಡಾನ್ಸ್ ಬಗ್ಗೆ ಕೂಡ ಸಿಕ್ಕಾಪಟ್ಟೆ ಕಮೆಂಟ್ಸ್ ಬರುತ್ತಿವೆ. ಆದರೆ ಇದ್ಯಾವುದಕ್ಕೂ ಚಂದು ಪ್ರತಿಕ್ರಿಯೆ ನೀಡದೆ, ತನ್ನ ಪಾಡಿಗೆ ತಾವು ಮತ್ತೊಂದು ಡಾನ್ಸ್‌ಗೆ ಪ್ರಿಪೇರ್ ಆಗುತ್ತಿರುವಂತೆ ಕಾಣ್ತಿದೆ!

ಕರಿಮಣಿ ಮಾಲೀಕ + ಕನಕ!

ಇಷ್ಟೆಲ್ಲದರ ನಡುವೆ ಕರಿಮಣಿ ಮಾಲೀಕ ಹಾಡನ್ನು ವೈರಲ್ ಮಾಡಿದ ಹುಡುಗನಿಗೆ, ಈಗ ಸಿಕ್ಕಾಪಟ್ಟೆ ಬೇಡಿಕೆ ಬಂದಿದೆ. ಹಾಗೇ 'ಕರಿಮಣಿ ಮಾಲೀಕ' ಹಾಡಿನ ವೈರಲ್ ಹುಡುಗ ಕನಕ ಬೆಂಗಳೂರಿನಲ್ಲಿ ಗುರುಕಿರಣ್ ಅವರನ್ನು ಭೇಟಿ ಮಾಡಿದ್ದಾರೆ. ವಿಜಯನಗರ ಜಿಲ್ಲೆ ಹೊಸಪೇಟೆ ಮೂಲದ ಯುವಕ ಈಗ ಬೆಂಗಳೂರಿಗು ಬಂದು ಗುರುಕಿರಣ್ ಅವರ ಸ್ಟೂಡಿಯೋಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಜೊತೆಗೆ ಈ ಹುಡುಗನಿಗೆ ಇದೀಗ ಫುಲ್ ಹೈಪ್ ಸಿಗುತ್ತಿದೆ. ಹಾಗೆಯೇ ಸೋಷಿಯಲ್ ಮೀಡಿಯಾದಲ್ಲಿ ಕೂಡ ಕನಕಗೆ ಈಗ ಸಪೋರ್ಟ್ ಕೂಡ ಚೆನ್ನಾಗಿದೆ. ಅಲ್ಲದೆ ಹೊಸ ಹೊಸ ಆಫರ್ಸ್ ಕೂಡ ಪಡೆದಿದ್ದಾನಂತೆ ಕನಕ.

Coffee Nadu Chandu Made Dance For Sandalwood Blockbuster Upendra Movie Song Enilla Enilla

ಒಟ್ನಲ್ಲಿ 'ಏನಿಲ್ಲ ಏನಿಲ್ಲ.. ನಿನ್ನ ನನ್ನ ನಡುವೆ ಏನಿಲ್ಲ.. ಏನೇನಿಲ್ಲ.. ಏನಿಲ್ಲ ಏನಿಲ್ಲ.. ನಿನ್ನ ನನ್ನ ನಡುವೆ ಏನಿಲ್ಲ.. ನಿಜದಂತಿರುವ ಸುಳ್ಳಲ್ಲ.. ಸುಳ್ಳುಗಳೆಲ್ಲ ನಿಜವಲ್ಲ.. ಸುಳ್ಳಿನ ನಿಜವೂ ಸುಳ್ಳಲ್ಲ.. ಏನಿಲ್ಲ ಏನಿಲ್ಲ.. ಏನೇನಿಲ್ಲ..' ಹಾಡು ಸೋಷಿಯಲ್ ಮೀಡಿಯಾದ ತುಂಬಾ ಸುಂಟರಗಾಳಿ ಎಬ್ಬಿಸಿದೆ. ಹಾಗೇ ಈ ಹಾಡನ್ನು ನೋಡಿ ಅಭಿಮಾನಿಗಳು ಕೂಡ, ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಹಾಗೇ ಸಖತ್ ಮಜಾ ಮಾಡುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+