ರೇಣುಕಾಸ್ವಾಮಿ ನನಗೂ ಅಶ್ಲೀಲ ಸಂದೇಶ ಕಳಿಸಿದ್ದ: ಸಾಕ್ಷಿ ಸಮೇತ ವಿವರ ಕೊಟ್ಟ ಬಿಗ್ ಬಾಸ್ ಸ್ಪರ್ಧಿ

ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಜನ ಆರೋಪಿಗಳು ಈಗ ಜೈಲುಪಾಲಾಗಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಸಿಟ್ಟಿಗೆದ್ದು ಈ ಕೊಲೆ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ.

ದರ್ಶನ್ ಜನಪ್ರಿಯ ನಟನಾಗಿರುವ ಕಾರಣ ಅವರು ಕೊಲೆ ಮಾಡಬಾರದಿತ್ತು ಎನ್ನುವ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಆದರೆ ರೇಣುಕಾಸ್ವಾಮಿ ಮಾಡಿದ ಕೆಲಸದ ಬಗ್ಗೆ ಅಷ್ಟು ಚರ್ಚೆಯಾಗಿಲ್ಲ. ಈಗ ಬಿಗ್ ಬಾಸ್‌ ಸ್ಪರ್ಧಿಯಾಗಿದ್ದ, ಚಿತ್ರಾಲ್ ರಂಗಸ್ವಾಮಿ ಕೊಲೆಯಾಗಿರುವ ರೇಣುಕಾಸ್ವಾಮಿ ಕೂಡ ನನಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದ ಎಂದು ಹೇಳಿದ್ದಾರೆ.

chitral rangaswamy allegations on renukaswamy darshan case

ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿರುವ ಅವರು ರೇಣುಕಾಸ್ವಾಮಿ ಕೃತ್ಯಗಳ ಬಗ್ಗೆ ವಿವರ ಕೊಟ್ಟಿದ್ದಾರೆ. "ನಾನು ಯಾರ ಪರವಾಗಿಯೋ, ವಿರುದ್ಧವಾಗಿಯೋ ಮಾತನಾಡಲು ಬಂದಿಲ್ಲ, ರೇಣುಕಾಸ್ವಾಮಿ ಕುಟುಂಬಕ್ಕೆ ದೇವರು ಶಕ್ತಿ ಕೊಡಲಿ" ಎಂದಿರುವ ಅವರು, ಈ ಅಕೌಂಟ್‌ ಬಗ್ಗೆ ಸುದ್ದಿಗಳಲ್ಲಿ ನೋಡಿದಾಗ ನನಗೂ ಈ ರೀತಿ ಮೆಸೇಜ್ ಬಂದಿರುವುದು ನೆನಪಿಗೆ ಬಂತು ಎಂದು ಹೇಳಿದ್ದಾರೆ.

ಚಿತ್ರಾಲ್ ರಂಗಸ್ವಾಮಿ ಹೇಳಿದ್ದೇನು?

ಆ ಹೆಸರನ್ನು ನೋಡಿದಾಗ ನನಗೆ ಭಯವಾಯಿತು, ನನ್ನ ಬ್ಲಾಕ್‌ ಲಿಸ್ಟ್ ಚೆಕ್ ಮಾಡಿದಾಗ, ಅಲ್ಲಿ ಆ ಅಕೌಂಟ್ ಇತ್ತು. ನನಗೆ ಯಾರಾದರೂ ಕೆಟ್ಟದಾಗಿ ಮೆಸೇಜ್ ಮಾಡಿದರೆ, ನಗ್ನ ಚಿತ್ರಗಳನ್ನು ಕಳಿಸಿದರೆ ಬ್ಲಾಕ್ ಮಾಡುತ್ತೇನೆ ಎಂದು ಹೇಳಿದ್ದಾರೆ.

ನಿಮಗೂ ಆತ ಈ ರೀತಿ ಮೆಸೇಜ್ ಮಾಡಿದ್ದರೆ ನೀವೂ ಶೇರ್ ಮಾಡಿಕೊಳ್ಳಿ. ಮನೆಯಲ್ಲಿ ಅಷ್ಟು ಸುಂದರವಾದ ಹೆಂಡತಿ ಇರುವಾಗ ಇದೆಲ್ಲಾ ಯಾಕೆ ಬೇಕು, ಕಂಡವರಿಗೆ ಮೆಸೇಜ್ ಮಾಡುವುದು, ಅಂತಹ ಮೆಸೇಜ್ ನೋಡಿದಾಗ ಥೂ ಅನಿಸುತ್ತೆ ಎಂದರು.

ನನಗೂ ಒಂದು ಹಂತದಲ್ಲಿ ದಿನ ಬೆಳಗಾದ್ರೆ ಅಶ್ಲೀಲ ಬೈಗುಳ, ಟ್ರೋಲ್‌ಗಳು ಬರುತ್ತಿದ್ದವು. ಯಾರೋ ಒಬ್ಬ ಆತನ ಖಾಸಗಿ ಅಂಗದ ಫೋಟೊ ಕಳಿಸಿದ್ರೆ ನಮಗೆ ಹೇಗೆ ಅನ್ನಿಸುತ್ತೆ, ಇದು ಆನ್‌ಲೈನ್ ಅತ್ಯಾಚಾರ ಎಂದೇ ಹೇಳಬೇಕು. ಎಲ್ಲೋ ಕೂತು ಇನ್ನೊಬ್ಬರನ್ನು ಮಾನಸಿಕವಾಗಿ ಅತ್ಯಾಚಾರ ಮಾಡುವುದು ಎನ್ನಬೇಕು ಎಂದಿದ್ದಾರೆ.

ದರ್ಶನ್-ಪವಿತ್ರಾ ಬಗ್ಗೆ ಮಾತನಾಡಬಾರದು

ಈಗ ಆಗಿರುವ ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ. ಆದರೆ ಈ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿರುವುದು ಸರಿಯಲ್ಲ ಎಂದರು. ಆಕೆ ಇನ್ನೊಬ್ಬರ ಜೀವನದಲ್ಲಿ ಸುಮ್ಮನೆ ಎರಡನೆಯವರಾಗಿ ಹೋಗಿರುವುದಿಲ್ಲ, ಮೋಸ ಮಾಡುವವರಿದ್ದರೆ 10 ವರ್ಷ ಜೊತೆಯಲ್ಲಿ ಇರುತ್ತಿರಲಿಲ್ಲ ಇದರ ಬಗ್ಗೆ ಮಾತನಾಡಲು ನಮಗಾಗಲಿ, ನಿಮಗಾಹಲಿ ಯಾವ ಹಕ್ಕೂ ಇಲ್ಲ ಎಂದಿದ್ದಾರೆ.

ಅವರ ಮಗ, ಮಗಳು ಆ ರೀತಿ ಕಮೆಂಟ್ಸ್‌ಗಳನ್ನ ಓದಿದರೆ ಅಂತಹ ಎಳೆ ಮನಸ್ಸುಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ, ಆ ನೋವಿನಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಅದಕ್ಕೆ ಹೊಣೆಯಾಗ್ತೀರಾ. ಯಾಕೆ ಇನ್ನೊಬ್ಬರ ಸುದ್ದಿ, ಈಗಲಾದರೂ ಕಮೆಂಟ್ ಮಾಡೋದು ಬಿಡಿ ಎಂದು ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+