Darshan & Chiranjeevi: ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ದರ್ಶನ್ ಜೊತೆ ಚಿರಂಜೀವಿ ನಟನೆ?

ಕಾಟೇರ ಸಿನಿಮಾ ಬಿಡುಗಡೆಯ ಸಂತಸದಲ್ಲಿರುವ ದರ್ಶನ್ ಅಭಿಮಾನಿಗಳಿಗೆ ಮತ್ತೊಂದು ಖುಷಿ ಸುದ್ದಿ ಸಿಕ್ಕಿದೆ. ದರ್ಶನ್ ಮುಂದಿನ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿರುವ ಸಂದರ್ಭದಲ್ಲೇ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಾರೆ ಎನ್ನುವ ಸುದ್ದಿ ಗಾಂಧಿನಗರದಿಂದ ಬಂದಿದೆ.

ಎಲ್ಲವೂ ಅಂದುಕೊಂಡಂತೆ ಆದರೆ ಎರಡೂ ಚಿತ್ರರಂಗದ ದೊಡ್ಡ ಸ್ಟಾರ್ ಗಳು ಜೊತೆಯಾಗಿ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಚಿತ್ರಕ್ಕಾಗಿ ಅಭಿಮಾನಿಗಳು ಹಲವು ವರ್ಷ ಕಾಯಬೇಕಾಗುತ್ತದೆ. ಕಾಟೇರ ಬಳಿಕ ದರ್ಶನ್ ಮಿಲನ ಪ್ರಕಾಶ್ ನಿರ್ದೇಶನದ ಡೆವಿಲ್ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.

 Chiranjeevi and Challenging Star Darshan Set to Collaborate in Prems Multistarrer

ಬಹುಕೋಟಿ ವೆಚ್ಚದಲ್ಲಿ ಡೆವಿಲ್ ಸಿನಿಮಾ ನಿರ್ಮಾಣವಾಗಲಿದ್ದು ಈ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಮೂಡಿಸಿದೆ. ಆ ಬಳಿಕ ದರ್ಶನ್ ತರುಣ್ ಸುಧೀರ್ ನಿರ್ದೇಶನದ ಮತ್ತೊಂದು ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಿಂದ ಬಂದಿದೆ.

ಬಾರಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ

ಈ ಎರಡೂ ಸಿನಿಮಾ ಬಳಿಕ ದರ್ಶನ್ - ಪ್ರೇಮ್ ಜೋಡಿ ಒಂದಾಗಲಿದೆ ಎಂದು ಹೇಳಲಾಗಿದೆ. ಈ ಸಿನಿಮಾದಲ್ಲಿ ಚಿರಂಜೀವಿ ಕೂಡ ನಟಿಸುತ್ತಾರೆ ಎನ್ನುವ ಸುದ್ದಿ ಬಂದಿದೆ. ಸದ್ಯ ಯಶ್ ನಟನೆಯ ಟಾಕ್ಸಿಕ್ ಚಿತ್ರಕ್ಕೆ ಬಂಡವಾಳ ಹಾಕುತ್ತಿರುವ ಕೆವಿಎನ್ ಪ್ರೊಡಕ್ಷನ್ ದರ್ಶನ್ ಸಿನಿಮಾಗೂ ಬಂಡವಾಳ ಹಾಕಲಿದೆ.

ಈಗಾಗಲೇ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ ಅನೌನ್ಸ್ ಕೂಡ ಮಾಡಿದೆ. ಆದರೆ, ಚಿತ್ರದ ಹೆಸರು ಇನ್ನೂ ಅಂತಿಮವಾಗಿಲ್ಲ. 2025ರಲ್ಲಿ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಪ್ರೇಮ್, ಧ್ರುವ ಸರ್ಜಾ ನಟನೆಯ 'ಕೆಡಿ' ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಬಾರಿ ಬಜೆಟ್ ಸಿನಿಮಾ ಆಗಿದ್ದು, ಈ ಸಿನಿಮಾ ಬಳಿಕ ಪ್ರೇಮ್ ದರ್ಶನ್‌ಗಾಗಿ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಜೋಗಿ ಪ್ರೇಮ್ ಇತ್ತೀಚೆಗೆ ಹೈದರಾಬಾದ್‌ಗೆ ತೆರಳಿದ್ದ ಸಂದರ್ಭದಲ್ಲಿ ಚಿರಂಜೀವಿ ಅವರಿಗೆ ಕತೆ ಹೇಳಿದ್ದಾರೆ ಎನ್ನಲಾಗಿದ್ದು, ಚಿರಂಜೀವಿ ಕೂಡ ಕತೆಯನ್ನು ಮೆಚ್ಚಿದ್ದು ಸಿನಿಮಾದಲ್ಲಿ ಅಭಿಯನಯಿಸಲು ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ.

ತೆಲುಗು ಖ್ಯಾತ ನಟ ಚಿರಂಜೀವಿಗೆ ಕನ್ನಡ ಚಿತ್ರರಂಗ, ಸಿನಿಮಾ ಹೊಸದೇನಲ್ಲ. ಈ ಮೊದಲು ಅವರು ರವಿಚಂದ್ರನ್ ಜೊತೆ ಸಿಪಾಯಿ ಸಿನಿಮಾದಲ್ಲಿ ಅಭಿನಯಿಸಿದ್ದರು. ಅದಾದ ಬಳಿಕ ಶ್ರೀ ಮಂಜುನಾಥ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ತೆಲುಗು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಕೆಲವ ವರ್ಷ ಚಿತ್ರರಂಗ ತೊರೆದು ರಾಜಕೀಯ ರಂಗದಲ್ಲಿ ತೊಡಗಿದ್ದರು.

ಅದಾದ ಬಳಿಕ ಹಲವು ಸಿನಿಮಾ ಮಾಡಿ ಕೈಸುಟ್ಟುಕೊಂಡಿದ್ದ ಚಿರಂಜೀವಿಗೆ 2023ರಲ್ಲಿ ಬಿಡುಗಡೆಯಾದ ವಾಲ್ತೇರು ವೀರಯ್ಯ ಗೆಲುವು ತಂದುಕೊಟ್ಟಿತ್ತು. ಚಿರಂಜೀವಿ ಕೂಡ ದೊಡ್ಡ ಗೆಲುವಿಗಾಗಿ ಕಾಯುತ್ತಿದ್ದು ಕನ್ನಡ ಚಿತ್ರರಂಗದ ಕಡೆ ಬರುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+