ಚಿಕ್ಕಣ್ಣ ಸೂಪರ್ ಸ್ಟಾರ್, ಭರ್ಜರಿ ಕಲೆಕ್ಷನ್ ಮಾಡ್ತಿದೆ ‘ಉಪಾಧ್ಯಕ್ಷ’

ಕನ್ನಡ ಸಿನಿಮಾ ರಂಗಕ್ಕೆ ಮತ್ತೊಬ್ಬ ಹೀರೋ ಸಿಕ್ಕಾಗಿದೆ, ಇಷ್ಟು ದಿನ ತಮ್ಮ ಕಾಮಿಡಿ ಪಂಚ್ ಮೂಲಕ ಕನ್ನಡಿಗರ ಮನಸ್ಸಿಗೆ ಹತ್ತಿರವಾಗಿದ್ದ ಚಿಕ್ಕಣ್ಣ ಈಗ ಹೀರೋ ಆಗಿ ಕೂಡ ಗೆದ್ದಿದ್ದು ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಹಾಗಾದರೆ 'ಉಪಾಧ್ಯಕ್ಷ' ಸಿನಿಮಾ ಬಿಡುಗಡೆಯಾಗಿ 1 ವಾರಕ್ಕೆ ಎಷ್ಟು ಕಲೆಕ್ಷನ್ ಮಾಡಿದೆ ಗೊತ್ತಾ? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.

ಅದು 2014 ನಟ ಚಿಕ್ಕಣ್ಣ ಮತ್ತು ಶರಣ್ ಅವರ ಕಾಂಬಿನೇಷನ್ ಸಿಕ್ಕಾಪಟ್ಟೆ ಸಕ್ಸಸ್ ಕೊಟ್ಟಿತ್ತು. 'ಅಧ್ಯಕ್ಷ' ಮೂಲಕ ಇಬ್ಬರೂ ಭರ್ಜರಿ ಸಕ್ಸಸ್ ಪಡೆದಿದ್ದರು. ಹೀಗೆ ಅಧ್ಯಕ್ಷ ಸಿನಿಮಾ, ನೋಡ ನೋಡುತ್ತಲೇ ಸೂಪರ್ ಹಿಟ್ ಆಗಿತ್ತು. ಬಾಕ್ಸ್ ಆಫಿಸ್‌ನಲ್ಲಿ ಕೂಡ ಭರ್ಜರಿ ಸಕ್ಸಸ್ ಪಡೆದಿತ್ತು. ಇದೀಗ 10 ವರ್ಷಗಳ ನಂತರ 'ಅಧ್ಯಕ್ಷ' ಸಿನಿಮಾ ಮುಂದುವರಿದ ಭಾಗ 'ಉಪಾಧ್ಯಕ್ಷ' ರಿಲೀಸ್ ಆಗಿ ಅಬ್ಬರಿಸುತ್ತಿದೆ. ಚಿಕ್ಕಣ್ಣ ಉಪಾಧ್ಯಕ್ಷ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟು, ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಹಾಗಾದರೆ ಉಪಾಧ್ಯಕ್ಷ ಗಳಿಸಿದ್ದು ಎಷ್ಟು ಕೋಟಿ ರೂಪಾಯಿ?

Chikkanna Starrer Kannada Movie Upadhyaksha Box Office Collection Report

7 ದಿನಕ್ಕೆ ಗಳಿಸಿದ್ದು ಎಷ್ಟು ಕೋಟಿ?

ಚಿಕ್ಕಣ್ಣ ಯಾವುದೇ ಪಾತ್ರಕ್ಕೂ ಹೊಂದಿಕೊಳ್ಳುವ ನಟ. ಹೀಗಾಗಿಯೇ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ವೆರೈಟಿ ವೆರೈಟಿ ಪಾತ್ರಗಳನ್ನು ಮಾಡಿದ್ದಾರೆ. ಉಪಾಧ್ಯಕ್ಷ ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ಹೀಗಿದ್ದಾಗ ಚಿಕ್ಕಣ್ಣ ಅವರ ನಟನೆಗೆ ಸಖತ್ ರೆಸ್ಪಾನ್ಸ್ ಕೂಡ ಸಿಗುತ್ತಿದೆ. ಹಾಗೇ 'ಉಪಾಧ್ಯಕ್ಷ' ಸಿನಿಮಾ ಸಕ್ಸಸ್ ನೋಡಿ, ಪ್ರೇಕ್ಷಕರು ಜೈಕಾರ ಹಾಕುತ್ತಿದ್ದಾರೆ. ಈ ಸಿನಿಮಾ ರಿಲೀಸ್ ಆಗಿ ನಾಳೆಗೆ 1 ವಾರ ತುಂಬಲಿದ್ದು, ಈಗ ಬರೋಬ್ಬರಿ 7 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಸಿನಿಮಾ ಟೀಂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

ಗಲ್ಲಾಪೆಟ್ಟಿಗೆ ಶೇಕ್ ಮಾಡಿದ 'ಉಪಾಧ್ಯಕ್ಷ'

ಗಣರಾಜ್ಯೋತ್ಸವ ರಜೆ ನಡುವೆ ಸಂಭ್ರಮದ ಬಿಡುಗಡೆ ಪಡೆದ ಉಪಾಧ್ಯಕ್ಷ ಈಗ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಈ ಸಿನಿಮಾ ರಿಲೀಸ್ ಆದ ನಂತರ ಸಾಲು ಸಾಲು ರಜೆ ಬಂದಿವೆ. ಹೀಗಾಗಿ ಉಪಾಧ್ಯಕ್ಷ ಸಿನಿಮಾ ಮೊದಲ ದಿನ ಕೋಟಿಗೂ ಹೆಚ್ಚು ಗಳಿಸಿತ್ತಂತೆ, 2ನೇ ದಿನ ಕೂಡ ಭರ್ಜರಿ ಕಲೆಕ್ಷನ್ ಮಾಡಿ ವೀಕೆಂಡ್ ಧಮಾಖ ಮುಂದುವರಿಸಿತ್ತು. ಹೀಗೆ ನೋಡ ನೋಡಲುತ್ತಲೇ ಈ ಸಿನಿಮಾ ಬರೋಬ್ಬರಿ 7 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ ಎಂಬ ಮಾತು ಗಾಂಧಿನಗರ ಗಲ್ಲಿಯಲ್ಲಿ ಓಡಾಡುತ್ತಿದೆ.

Chikkanna Starrer Kannada Movie Upadhyaksha Box Office Collection Report

ಫ್ಯಾನ್ಸ್ ಪಾಲಿನ ಕಾಮಿಡಿ ಕಿಂಗ್

ಚಿಕ್ಕಣ್ಣ ಕಾಮಿಡಿ ಮಾಡುತ್ತಾ ಮಾಡುತ್ತಾ ಕೋಟ್ಯಂತರ ಫ್ಯಾನ್ಸ್ ಹೃದಯ ಗೆದ್ದರೆ. ಅದರಲ್ಲೂ ಚಿಕ್ಕಣ್ಣ ಈಗಾಗಲೇ ನೂರಾರು ಸಿನಿಮಾದಲ್ಲಿ ಮಿಂಚಿದ್ದಾರೆ. ಈ ಮೂಲಕ, ಚಿಕ್ಕಣ್ಣ ಹೀರೋ ಆಗಿ ಗೆದ್ದಿದ್ದಾರೆ. ಕನ್ನಡ ಸಿನಿ ಪ್ರೇಕ್ಷಕರು ಉಪಾಧ್ಯಕ್ಷ ಸಿನಿಮಾ ನೋಡಿ ಮೆಚ್ಚಿದ್ದಾರೆ. ಕುಟುಂಬ ಸಮೇತ ಸಿನಿಮಾ ನೋಡುತ್ತಿರುವ ಕಾರಣ ಕಲೆಕ್ಷನ್ ಹೆಚ್ಚಾಗುತ್ತಿದೆ. ಜತೆಗೆ ನಟ ಶರಣ್ ಕೂಡ, ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಈ ಮೂಲಕ, ಚಿಕ್ಕಣ್ಣ & ಶರಣ್ ಕಾಂಬಿನೇಷನ್ ಮತ್ತೊಮ್ಮೆ ಭರ್ಜರಿ ಸಕ್ಸಸ್ ಕೊಟ್ಟಿದೆ.

ಒಟ್ಟಾರೆ ಹೇಳುವುದಾದರೆ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಮತ್ತೊಬ್ಬ ಹೀರೋ ಸಿಕ್ಕಿದ್ದಾನೆ. ಈ ಹೀರೋಗೆ ಅಭಿಮಾನಿಗಳು ಕೂಡ ಆಶೀರ್ವಾದ ಮಾಡುತ್ತಿದ್ದಾರೆ. ಹಾಗೇ ಚಿಕ್ಕಣ್ಣ ಹೀಗೆಯೆ ಸುಮಾರು ಸಿನಿಮಾ ಮಾಡಲಿ ಅನ್ನೋ ಆಶಯ ಕೂಡ ವ್ಯಕ್ತಪಡಿಸಿದ್ದಾರೆ. ಫ್ಯಾನ್ಸ್ ಹಾಗೂ ಕನ್ನಡ ಸಿನಿಮಾ ಪ್ರೇಕ್ಷಕರು ಉಪಾಧ್ಯಕ್ಷ ಸಿನಿಮಾಗೆ ಫಿದಾ ಆಗಿದ್ದಾರೆ. ಇದೇ ಕಾರಣಕ್ಕೆ ತನ್ನ ಗಲ್ಲಾಪೆಟ್ಟಿಗೆ ಓಟವನ್ನೂ ಮುಂದುವರಿಸಿದೆ ಉಪಾಧ್ಯಕ್ಷ ಸಿನಿಮಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+