ಚಿಕ್ಕಣ್ಣ ಅಭಿನಯದ ಸಿನಿಮಾಗೆ ಮೊದಲ ಹೆಜ್ಜೆಯಲ್ಲೇ ಲಾಟರಿ, ಕೋಟಿ ಕೋಟಿ ಗಳಿಕೆ!
ಕನ್ನಡಿಗ ಚಿಕ್ಕಣ್ಣ ಎಲ್ಲೆಲ್ಲೂ ಹವಾ ಎಬ್ಬಿಸಿದ್ದು, ಚಿಕ್ಕಣ್ಣ ಮೊದಲ ಸಿನಿಮಾದಲ್ಲೇ ಹೊಸ ಇತಿಹಾಸ ನಿರ್ಮಾಣ ಮಾಡಿದ್ದಾರೆ. ಕೋಟಿ ಕೋಟಿ ಗಳಿಸಿರುವ ಚಿಕ್ಕಣ್ಣ ಸಿನಿಮಾ ಯಾವುದೇ ಸ್ಟಾರ್ ಹೀರೋಗೆ ಕಡಿಮೆ ಇಲ್ಲದಂತೆ ಸದ್ದು ಮಾಡುತ್ತಿದೆ. ಹಾಗಾದರೆ ಚಿಕ್ಕಣ್ಣ ಅಭಿನಯ ಮಾಡಿರುವ ಹಾಗೂ ಮೊದಲ ಬಾರಿಗೆ ಚಿಕ್ಕಣ್ಣ ಹೀರೋ ಆಗಿರುವ ಸಿನಿಮಾ 'ಉಪಾಧ್ಯಕ್ಷ' ಗಳಿಸಿದ್ದು ಎಷ್ಟು ಕೋಟಿ ಗೊತ್ತೆ?
ಜೀವನದಲ್ಲಿ ಹಲವಾರು ಸಮಸ್ಯೆ ಎದುರಿಸಿ ಗೆದ್ದು ಬೀಗಿರುವ ಕನ್ನಡಿಗರ ಪ್ರೀತಿಯ ನಟ ಚಿಕ್ಕಣ್ಣ ಮೊದಲ ಸಿನಿಮಾದಲ್ಲೇ ಬಂಪರ್ ಬಾರಿಸಿದ್ದಾರೆ. ಉಪಾಧ್ಯಕ್ಷ ಸಿನಿಮಾ ರಿಲೀಸ್ ಆಗಿ 1 ತಿಂಗಳ ಸಮಯಕ್ಕೆ ಬರೋಬ್ಬರಿ ದಾಖಲೆ ಮೊತ್ತದ ಕಲೆಕ್ಷನ್ ಮಾಡಿದೆಯಂತೆ. ಹಾಗಾದರೆ ಈ ಸಿನಿಮಾ ಅಂದ್ರೆ ಚಿಕ್ಕಣ್ಣ ಹೀರೋ ಆದ ಮೊದಲ ಸಿನಿಮಾ 'ಉಪಾಧ್ಯಕ್ಷ' ಗಳಿಸಿರುವುದೆಷ್ಟು ಕೋಟಿಗಳು? ಆ ಬಗ್ಗೆ ಇಂಚಿಂಚು ಮಾಹಿತಿ ತಿಳಿಯೋಣ ಬನ್ನಿ. ಹಾಗೇ ಚಿಕ್ಕಣ್ಣಗೆ ಈ ಸಿನಿಮಾಗೆ ಸಿಕ್ಕಿದ್ದು ಎಷ್ಟು ಕೋಟಿ ಅನ್ನೋ ಮಾಹಿತಿ ಕೂಡ ಇಲ್ಲಿದೆ.

ಪ್ರೇಕ್ಷಕರ ಮನಸ್ಸು ಗೆದ್ದ ಚಿಕ್ಕಣ್ಣ
ಕನ್ನಡಿಗರ ನಿರೀಕ್ಷೆ ಕೆರಳಿಸಿ, ಜನವರಿ 26 ರ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಿದ್ದ 'ಉಪಾಧ್ಯಕ್ಷ' ಹಲವು ದಾಖಲೆ ಪುಡಿ ಪುಡಿ ಮಾಡಿದೆ. ಅದರಲ್ಲೂ ನಟ ಚಿಕ್ಕಣ್ಣ ನಟನೆಗೆ ಮತ್ತು ಹೀರೊ ಆಗಿ ಎಂಟ್ರಿ ಕೊಟ್ಟಿರುವ ಕಾಮಿಡಿ ಸ್ಟಾರ್‌ಗೆ ಕನ್ನಡಿಗರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಹೀಗಾಗಿ ಬಾಕ್ಸ್ ಆಫಿಸ್‌ನಲ್ಲಿ ಈ ಚಿತ್ರ ಭರ್ಜರಿ ಮೊತ್ತ ಗಳಿಕೆ ಮಾಡಿದೆ. ಕನ್ನಡದ ಸಿನಿಮಾ ರಂಗಕ್ಕೆ ಮತ್ತೊಬ್ಬ ಹೀರೋ ಸಿಕ್ಕಾಗಿದೆ ಇಷ್ಟು ದಿನ ಕಾಮಿಡಿ ಪಂಚ್ ಮೂಲಕ ಕನ್ನಡ ಜನರ ಮನಸ್ಸಿಗೆ ಹತ್ತಿರವಾಗಿದ್ದ ಚಿಕ್ಕಣ್ಣ ಹೀರೋ ಆಗಿ ಕೂಡ ಗೆದ್ದು ಬೀಗಿದ್ದಾರೆ. ಚಿಕ್ಕಣ್ಣ ಅವ್ರ ಮೊದಲ ಸಿನಿಮಾ 'ಉಪಾಧ್ಯಕ್ಷ' ಬಿಡುಗಡೆಯಾಗಿ 1 ತಿಂಗಳಿಗೆ ಸುಮಾರು 12 ರಿಂದ 14 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನುವ ಮಾತು ಓಡಾಡುತ್ತಿದೆ.
ಕೋಟಿಗಳ ಬಗ್ಗೆ ಅಧಿಕೃತ ಮಾಹಿತಿ ಇಲ್ಲ!
ಆದ್ರೆ 'ಉಪಾಧ್ಯಕ್ಷ' ಸಿನಿಮಾ ಕಲೆಕ್ಷನ್ ಬಗ್ಗೆ ಈವರೆಗೂ ಯಾವುದೇ ರೀತಿಯ ಅಧಿಕೃತವಾದ ಮಾಹಿತಿ ಹೊರಬಿದ್ದಿಲ್ಲ. ಉಪಾಧ್ಯಕ್ಷ ಸಿನಿಮಾ ನಿರ್ಮಾಪಕರೇ ಆಗಲಿ, ಅಥವಾ ಉಪಾಧ್ಯಕ್ಷ ಸಿನಿಮಾ ತಂಡವೇ ಆಗಲಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಹೀಗಿದ್ದರೂ ಹೊರಗೆ ಈ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ಹಾಗೇ ಇತ್ತೀಚಿಗೆ ಉಮಾಪತಿ ಅವರು ಒಂದು ಉದಾಹರಣೆ ನೀಡಲು ಉಪಾಧ್ಯಕ್ಷ ಸಿನಿಮಾದ ಕಲೆಕ್ಷನ್ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದ್ದು. ಈ ಬಗ್ಗೆ ಚರ್ಚೆ ಜೋರಾಗಿದೆ. ಹಾಗೇ 'ಉಪಾಧ್ಯಕ್ಷ' ಬಿಡುಗಡೆಯಾಗಿ 1 ತಿಂಗಳಿಗೆ ಸುಮಾರು 12 ರಿಂದ 14 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗುತ್ತಿದೆ. ಆದರೆ ಈ ಮಾಹಿತಿ ಅಧಿಕೃತವಾಗಿಲ್ಲ.
10 ವರ್ಷಗಳ ಬಳಿಕ ಸಕ್ಸಸ್!
2014ರಲ್ಲಿ ನಟ ಚಿಕ್ಕಣ್ಣ & ಶರಣ್ ಅವರ ಕಾಂಬಿನೇಷನ್ ಸಿಕ್ಕಾಪಟ್ಟೆ ಸಕ್ಸಸ್ ಕೊಟ್ಟಿತ್ತು ಅಧ್ಯಕ್ಷ ಸಿನಿಮಾದ ಮೂಲಕ ಇಬ್ಬರೂ ಭರ್ಜರಿ ಸಕ್ಸಸ್ ಪಡೆದಿದ್ದರು. ಹೀಗೆ ಅಧ್ಯಕ್ಷ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಾಕ್ಸ್ ಆಫಿಸ್‌ನಲ್ಲಿ ಭರ್ಜರಿ ಸಕ್ಸಸ್ ಪಡೆದಿತ್ತು. ಇದೀಗ 10 ವರ್ಷಗಳ ನಂತರ 'ಅಧ್ಯಕ್ಷ' ಸಿನಿಮಾ ಮುಂದುವರಿದ ಭಾಗ 'ಉಪಾಧ್ಯಕ್ಷ' ರಿಲೀಸ್ ಆಗಿ ಅಬ್ಬರಿಸಿದೆ. ಹಾಗೆಯೇ ಕಾಮಿಡಿ ಸ್ಟಾರ್ ಆಗಿದ್ದ ಚಿಕ್ಕಣ್ಣ ಹೀರೋ ಆಗಿ ಮಿಂಚುತ್ತಿದ್ದಾರೆ.
ಅಧ್ಯಕ್ಷ & ಉಪಾಧ್ಯಕ್ಷರ ಸಮ್ಮಿಲನ
ಶರಣ್ ಈಗ ಕನ್ನಡದ ಟಾಪ್ ಹೀರೋ ಪೈಕಿ ಒಬ್ಬರು ಅವರು ಕೂಡ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನುವ ಮಾತು ಇದೆ. ಅದರಲ್ಲೂ ಶರಣ್ ಅವರು ಕನ್ನಡಿಗರ ಎದುರು ಹಲವು ಬ್ಲಾಕ್ ಬಸ್ಟರ್ ಸಿನಿಮಾ ಇಟ್ಟು ಗೆದ್ದಿದ್ದಾರೆ. ಈ ನಟ ಗೆಳೆಯನ ಸಿನಿಮಾಗಾಗಿ ಅಂದ್ರೆ ಚಿಕ್ಕಣ್ಣನ 'ಉಪಾಧ್ಯಕ್ಷ' ಸಿನಿಮಾಗೆ ಬಣ್ಣ ಹಚ್ಚಿದ್ದಾರೆ. 'ಉಪಾಧ್ಯಕ್ಷ' ಚಿತ್ರದಲ್ಲಿ ಶರಣ್ ಅವರು ಅತಿಥಿ ಪಾತ್ರದಲ್ಲಿ ಎಂಟ್ರಿ ಕೊಟ್ಟು, ಇಡೀ ಕ್ಲೈಮ್ಯಾಕ್ಸ್‌ಗೆ ಬಹು ದೊಡ್ಡ ಬದಲಾವಣೆ ನೀಡುತ್ತಾರೆ. ಈ ಪಾತ್ರಕ್ಕಾಗಿ ಶರಣ್ ಒಂದು ರೂಪಾಯಿ ಕೂಡ ಪಡೆದಿಲ್ಲ ಎನ್ನುವುದು ಮತ್ತೊಂದು ವಿಶೇಷ.












Click it and Unblock the Notifications