ಚಿಕ್ಕಣ್ಣ ಸಿನಿಮಾದಲ್ಲಿ ನಟಿಸಿದ್ದಕ್ಕೆ ನಟಿ ಮಲೈಕಾ ವಸುಪಾಲ್... Chikkanna

ಚಿಕ್ಕಣ್ಣ ಕನ್ನಡಿಗರ ಮನಸ್ಸು ಗೆದ್ದಿರುವ ನಟ, ಚಿಕ್ಕಣ್ಣ ಸಿನಿಮಾ ಸ್ಕ್ರೀನ್ ಮೇಲೆ ಬಂದರೆ ಸಾಕು ಜನರು ಬಿದ್ದು ಬಿದ್ದು ನಗುತ್ತಾರೆ. ಯಾಕಂದ್ರೆ ಚಿಕ್ಕಣ್ಣ ಆಕ್ಟಿಂಗ್ ಮಾಡೋದು ಬೇಡ ಬರೀ ಒಂದು ಲುಕ್ ಕೊಟ್ಟರೆ ಸಾಕು, ಅಭಿಮಾನಿಗಳು ಫಿದಾ ಆಗಿಬಿಡುತ್ತಾರೆ. ಇದೇ ಚಿಕ್ಕಣ್ಣ ಅವರು ಸರಿಯಾಗಿ 1 ವರ್ಷದ ಹಿಂದೆ 'ಉಪಾಧ್ಯಕ್ಷ' ಸಿನಿಮಾ ಮಾಡಿ ಗೆದ್ದು ಬೀಗಿದರು. ಹೀಗಿದ್ದಾಗಲೇ, ನಟಿ ಮಲೈಕಾ ವಸುಪಾಲ್ ಅವರು ಚಿಕ್ಕಣ್ಣನ ಉಪಾಧ್ಯಕ್ಷ ಸಿನಿಮಾದಲ್ಲಿ ನಟಿಸಿದ್ದಕ್ಕೆ ಯಾವ ರೀತಿ ಅವಮಾನ ಎದುರಿಸಿದ್ದರು ಗೊತ್ತಾ?

ಚಿಕ್ಕಣ್ಣ ಅವರಿಗೆ ಸಿನಿಮಾ ಜೀವನದಲ್ಲಿ ಹೊಸ ದಾರಿ ಹೇಳಿಕೊಟ್ಟಿದ್ದು ರಾಕಿಂಗ್ ಸ್ಟಾರ್ ಯಶ್ ಅವರು. ಯಾಕಂದ್ರೆ ರಾಕಿಂಗ್ ಸ್ಟಾರ್ ಯಶ್ ಅವರು ಚಿಕ್ಕಣ್ಣ ಅವರನ್ನು ಕರೆದು ಕಿರಾತಕ ಸಿನಿಮಾದಲ್ಲಿ ಒಂದು ಚಾನ್ಸ್ ಕೊಟ್ಟಿದ್ದರಂತೆ. ಈ ರೀತಿ ಯಶ್ ಅವಕಾಶ ನೀಡಿದ ನಂತರ ಸಾಲು ಸಾಲು ಆಫರ್ ಚಿಕ್ಕಣ್ಣ ಅವರನ್ನ ಹುಡುಕಿಕೊಂಡು ಬಂದವು, ಮುಂದೆ ಕನ್ನಡಿಗರ ಮನಸ್ಸು ಗೆದ್ದು ಚಿಕ್ಕಣ್ಣ ಯಾವ ಸ್ಟಾರ್‌ಗೂ ಕಡಿಮೆ ಇಲ್ಲ ಎನ್ನುವಂತೆ ಬೆಳೆದರು. ಹೀಗಾಗಿ ಹೀರೋ ಆಗಬೇಕು ಅಂತಾನೇ 'ಉಪಾಧ್ಯಕ್ಷ' ಸಿನಿಮಾ ಮಾಡಲು ಮುಂದಾಗಿದ್ದರು. ಆದರೆ ಚಿಕ್ಕಣ್ಣ ಅವರನ್ನು ಪ್ರತಿಯೊಬ್ಬರು ಅವಮಾನಿಸಲು ಶುರು ಮಾಡಿದ್ದರು...

Chikkanna Starrer Kannada Movie Upadhyaksha Actress Malaika Vasupal Said This About Comedy Actor

ಕಾಮಿಡಿ ಆಕ್ಟರ್ ಚಿಕ್ಕಣ್ಣ ಅಂತಾ ಹೀಯಾಳಿಸಿದ್ರಾ?

ಗಾಂಧಿನಗರ ಅಂದ್ರೆ ಕನ್ನಡ ಸಿನಿಮಾ ರಂಗದ ಹೃದಯಭಾಗ ಅಂತಾ ಕರೆಯುವ ಗಾಂಧಿನಗರ ತುಂಬಾ ಬರೀ ಕಿರಿಕ್ ಮಾಡುವವರೆ ತುಂಬಿದ್ದಾರೆ ಎಂಬ ಆರೋಪ ಇದೆ. ಅದರಲ್ಲೂ ಇದೇ ಗಾಂಧಿನಗರದಲ್ಲಿ ಹೊಸ ಹೀರೋ ಬರ್ತಾನೆ ಅಂದ್ರೆ ಕಾಲು ಎಳೆಯೋದು ಜಾಸ್ತಿ & ಬಾಯಿಗೆ ಬಂದಂತೆ ಮಾತನಾಡುವುದು ಕೂಡ ಜಾಸ್ತಿ. ಅದೇ ರೀತಿ ಕಾಮಿಡಿ ಆಕ್ಟರ್ ಚಿಕ್ಕಣ್ಣ ಅಂತಾ ಹೀಯಾಳಿಸಿದ್ದ ಆರೋಪ ಕೇಳಿ ಬಂದಿದೆ. ಅದ್ರಲ್ಲೂ ಮಲೈಕಾ ವಸುಪಾಲ್ ಕಣ್ಣೀರು ಹಾಕಿದ್ದು ಯಾಕೆ ಗೊತ್ತಾ? ಚಿಕ್ಕಣ್ಣ ಸಿನಿಮಾ ಹೀರೋಯಿನ್ ಬಿಚ್ಚಿಟ್ಟ ಸ್ಫೋಟಕ ಸತ್ಯ ಏನು?

ಚಿಕ್ಕಣ್ಣ ಬಗ್ಗೆ ಹಿಂಗೆಲ್ಲಾ ಹೇಳಿದ್ದರಾ?

ಹೌದು ಚಿಕ್ಕಣ್ಣ ಸಿನಿಮಾದಲ್ಲಿ ಹೀರೋಯಿನ್ ಆಗಿ ಅಭಿನಯ ಮಾಡಿದ್ದ ಮಲೈಕಾ ವಸುಪಾಲ್ ಕಣ್ಣೀರು ಹಾಕಿದ್ದರಂತೆ. ಯಾಕಂದ್ರೆ ಮೊದಲ ಸಿನಿಮಾದಲ್ಲೇ ಚಿಕ್ಕಣ್ಣ ಜೊತೆಯಲ್ಲಿ ಆಕ್ಟಿಂಗ್ ಮಾಡಲು ಒಪ್ಪಿದ್ದಕ್ಕೆ ಖುದ್ದು ಮಲೈಕಾ ವಸುಪಾಲ್ ಕುಟುಂಬದವರು & ಸಂಬಂಧಿಕರು ಈ ಬಗ್ಗೆ ಆಡಿಕೊಂಡಿದ್ದರಂತೆ. ಆಗ, ಕಾಮಿಡಿ ಆಕ್ಟರ್ ಚಿಕ್ಕಣ್ಣ ಜೊತೆಗೆ ಸಿನಿಮಾ ಯಾಕೆ ಬೇಕಿತ್ತು? ಅನ್ನೋ ಕೊಂಕು ಮಾತುಗಳೂ ಬಂದಿದ್ದವಂತೆ. ಇದನ್ನೆಲ್ಲಾ ನೋಡಿ 'ಉಪಾಧ್ಯಕ್ಷ' ಸಿನಿಮಾ ಹೀರೋಯಿನ್ ಮಲೈಕಾ ವಸುಪಾಲ್ ಮನೆಗೆ ಬಂದು ಅತ್ತಿದ್ದರಂತೆ. ಇದನ್ನ ಅವರೇ ಹೇಳಿದ್ದು ವಿಡಿಯೋ ಬಗ್ಗೆ ಪರ & ವಿರೋಧದ ಮಾತುಗಳು ಕೇಳಿ ಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+